ಯೆಶಾಯ 41 : 1 (OCVKN)
ಇಸ್ರಾಯೇಲಿನ ಸಹಾಯಕನು ದ್ವೀಪಗಳೇ, ನನ್ನ ಮುಂದೆ ಮೌನದಿಂದಿರಿ. ರಾಷ್ಟ್ರಗಳು ತಮ್ಮ ಬಲವನ್ನು ನವೀಕರಿಸಲಿ! ಅವರು ನನ್ನ ಸಮೀಪಕ್ಕೆ ಬಂದು ಮಾತನಾಡಲಿ. ನ್ಯಾಯಸ್ಥಾನಕ್ಕೆ ಸಮೀಪಕ್ಕೆ ಒಟ್ಟಾಗಿ ಬರೋಣ.
ಯೆಶಾಯ 41 : 2 (OCVKN)
ಪೂರ್ವದಿಂದ ನೀತಿವಂತನನ್ನು ಎಬ್ಬಿಸಿ, ಅವನನ್ನು ತನ್ನ ಪಾದಸನ್ನಿಧಿಗೆ ಕರೆದು, ರಾಷ್ಟ್ರಗಳನ್ನು ಅವನ ಮುಂದೆ ಕೊಟ್ಟುಬಿಟ್ಟು, ಅವನನ್ನು ರಾಜರ ಮೇಲೆ ಆಳುವುದಕ್ಕೆ ಮಾಡಿದವನು ಯಾರು? ಅವನ ಖಡ್ಗವನ್ನು ಧೂಳನ್ನಾಗಿಯೂ, ಅವನ ಬಿಲ್ಲನ್ನು ಹಾರಿಹೋಗುವ ಹೊಟ್ಟಿನಂತೆಯೂ ಅವರನ್ನು ಕೊಟ್ಟನು.
ಯೆಶಾಯ 41 : 3 (OCVKN)
ತಾನು ಎಂದೂ ಹೆಜ್ಜೆ ಇಡದ ಮಾರ್ಗದಲ್ಲಿ ಸುರಕ್ಷಿತವಾಗಿ ಆತನು ಅವರನ್ನು ಹಿಂದಟ್ಟುತ್ತಾ ಹೋದನು.
ಯೆಶಾಯ 41 : 4 (OCVKN)
ಇದನ್ನೆಲ್ಲಾ ನಡೆಯಿಸಿ ನೆರವೇರಿಸಿದವನೂ ಆದಿಯಿಂದ ತಲತಲಾಂತರಗಳನ್ನು ಬರಮಾಡಿದವನು ಯಾರು? ಯೆಹೋವ ಎಂಬ ನಾನೇ ಮೊದಲನೆಯವನು, ಅಂತ್ಯಕಾಲದಲ್ಲಿ ಸಂಗಡಿಗನು ಆಗಿರುವಾತನೇ ನಾನು.
ಯೆಶಾಯ 41 : 5 (OCVKN)
ದ್ವೀಪಗಳೆಲ್ಲವೂ ಕಂಡು ಬೆರಗಾದವು. ಭೂಮಿಯ ಕಟ್ಟಕಡೆಯು ನಡುಗಿತು. ಅವರು ಸಮೀಪಕ್ಕೆ ಬಂದರು.
ಯೆಶಾಯ 41 : 6 (OCVKN)
ಪ್ರತಿಯೊಬ್ಬನು ತನ್ನ ನೆರೆಯವನಿಗೆ ಸಹಾಯ ಮಾಡಲಿ. ಪ್ರತಿಯೊಬ್ಬನು ತನ್ನ ಸಹೋದರನಿಗೆ, “ಧೈರ್ಯವಾಗಿರಿ!” ಎಂದು ಹೇಳಲಿ.
ಯೆಶಾಯ 41 : 7 (OCVKN)
ಹಾಗೆಯೇ ಶಿಲ್ಪಿಯು ಅಕ್ಕಸಾಲಿಗನನ್ನು ಪ್ರೋತ್ಸಾಹಗೊಳಿಸಿದನು. ಸುತ್ತಿಗೆಯಿಂದ ಸಮಮಾಡುವವನು ಅಡಿಗಲ್ಲಿನ ಮೇಲೆ ತಟ್ಟುವವನನ್ನು ಉತ್ತೇಜಿಸಿದನು. ಬೆಸುಗೆ “ಚೆನ್ನಾಗಿದೆ” ಎಂದು ಹೇಳಿ, ಅದು ಕದಲದ ಹಾಗೆ ಮೊಳೆಗಳಿಂದ ಜಡಿದರು.
ಯೆಶಾಯ 41 : 8 (OCVKN)
“ಆದರೆ ನನ್ನ ಸೇವಕನಾದ ಇಸ್ರಾಯೇಲೇ, ನಾನು ಆಯ್ದುಕೊಂಡ ಯಾಕೋಬೇ, ನನ್ನ ಸ್ನೇಹಿತನಾದ ಅಬ್ರಹಾಮನ ಸಂತತಿಯೇ,
ಯೆಶಾಯ 41 : 9 (OCVKN)
ನಿನ್ನನ್ನು ಭೂಮಿಯ ಕಟ್ಟಕಡೆಗಳಿಂದ ಆರಿಸಿಕೊಂಡು, ಅದರ ದೂರದ ಕೊನೆಯಿಂದ ಕರೆದು, ‘ನೀನು ನನ್ನ ಸೇವಕನು,’ ನಿನ್ನನ್ನು ನಾನು ಆಯ್ದುಕೊಂಡಿದ್ದೇನೆ. ನಿನ್ನನ್ನು ತಳ್ಳಿಬಿಡುವುದಿಲ್ಲ.
ಯೆಶಾಯ 41 : 10 (OCVKN)
ನೀನಂತೂ ಹೆದರಬೇಡ, ಏಕೆಂದರೆ ನಾನೇ ನಿನ್ನ ದೇವರು, ನಾನು ನಿನ್ನನ್ನು ಬಲಪಡಿಸುತ್ತೇನೆ. ನಾನು ನಿನಗೆ ಸಹಾಯ ಮಾಡುತ್ತೇನೆ. ನನ್ನ ನೀತಿಯ ಬಲಗೈಯಿಂದ ನಿನ್ನನ್ನು ಎತ್ತಿಹಿಡಿಯುತ್ತೇನೆ.
ಯೆಶಾಯ 41 : 11 (OCVKN)
“ನಿನಗೆ ವಿರೋಧವಾಗಿ ಉರಿಗೊಂಡವರೆಲ್ಲರೂ ಅವಮಾನ ಹೊಂದಿ, ಆಶಾಭಂಗಪಡುವರು. ನಿನ್ನ ಸಂಗಡ ವ್ಯಾಜ್ಯವಾಡಿದವರು ನಾಶವಾಗಿ ಇಲ್ಲದೆ ಹೋಗುವರು.
ಯೆಶಾಯ 41 : 12 (OCVKN)
ನಿನ್ನೊಡನೆ ಹೋರಾಡಿದವರನ್ನು ಹುಡುಕಿದವರೂ ಅವರು ನಿನಗೆ ಕಾಣಿಸರು. ನಿನ್ನ ಸಂಗಡ ಯುದ್ಧ ಮಾಡಿದವರು ಇಲ್ಲದೆ ಹೋಗಿ ನಿರ್ನಾಮವಾಗುವರು.
ಯೆಶಾಯ 41 : 13 (OCVKN)
ನೀನಂತೂ ಹೆದರಬೇಡ; ಏಕೆಂದರೆ ಯೆಹೋವ ದೇವರಾದ ನಾನೇ ನಿನಗೆ ಸಹಾಯ ಮಾಡುತ್ತೇನೆ, ನಿನ್ನ ದೇವರಾಗಿರುವ ನಾನೇ ನಿನ್ನ ಕೈಹಿಡಿಯುತ್ತೇನಲ್ಲಾ!
ಯೆಶಾಯ 41 : 14 (OCVKN)
ಹುಳುವಿನಂತಿರುವ ಯಾಕೋಬೇ, ಪುಟ್ಟ ಇಸ್ರಾಯೇಲೇ, ಭಯಪಡಬೇಡ. ನಾನೇ ನಿನಗೆ ಸಹಾಯ ಮಾಡುತ್ತೇನೆ,” ಎಂದು ಯೆಹೋವ ದೇವರು ಹೇಳುತ್ತಾರೆ. ನಿನ್ನ ವಿಮೋಚಕನೂ ಇಸ್ರಾಯೇಲಿನ ಪರಿಶುದ್ಧನೂ ಹೇಳುತ್ತಾರಲ್ಲಾ!
ಯೆಶಾಯ 41 : 15 (OCVKN)
ಇಗೋ, ನಿನ್ನನ್ನು ಹದವಾದ, ಹೊಸ ಮೊನೆಹಲ್ಲಿನ ಹಂತೀಕುಂಟೆಯನ್ನಾಗಿ ಮಾಡುವೆನು. ನೀನು ಬೆಟ್ಟಗಳನ್ನು ಹೊಕ್ಕು, ಪುಡಿಪುಡಿಮಾಡಿ, ಗುಡ್ಡಗಳನ್ನು ಹೊಟ್ಟಿನಂತೆ ಮಾಡುವೆ.
ಯೆಶಾಯ 41 : 16 (OCVKN)
ನೀನು ಅವುಗಳನ್ನು ತೂರಲು, ಗಾಳಿಯು ಅವುಗಳನ್ನು ಬಡಿದುಕೊಂಡು ಹೋಗುವುದು. ಬಿರುಗಾಳಿಯು ಚೆಲ್ಲಾಪಿಲ್ಲಿ ಮಾಡುವುದು. ನೀನಂತೂ ಯೆಹೋವ ದೇವರಲ್ಲಿ ಸಂತೋಷಿಸಿ, ಇಸ್ರಾಯೇಲಿನ ಪರಿಶುದ್ಧರಲ್ಲಿ ಮಹಿಮೆ ಹೊಂದುವೆ.
ಯೆಶಾಯ 41 : 17 (OCVKN)
ಬಡವರೂ ದರಿದ್ರರೂ ನೀರನ್ನು ಹುಡುಕಿ ಕಾಣದೇ, ಬಾಯಾರಿಕೆಯಿಂದ ನಾಲಿಗೆ ಒಣಗಿದಾಗ, ಯೆಹೋವನಾದ ನಾನೇ ಅವರಿಗೆ ಉತ್ತರಕೊಡುವೆನು. ಇಸ್ರಾಯೇಲ್ ದೇವರಾಗಿರುವ ನಾನು ಅವರನ್ನು ಕೈಬಿಡೆನು.
ಯೆಶಾಯ 41 : 18 (OCVKN)
ಎತ್ತರವಾದ ಸ್ಥಳಗಳಲ್ಲಿ ನದಿಗಳನ್ನು ತಗ್ಗುಗಳ ಮಧ್ಯದಲ್ಲಿ ಬುಗ್ಗೆಗಳನ್ನು ಹೊರಡಿಸಿ, ಮರುಭೂಮಿಯನ್ನು ನೀರಿನ ಕೆರೆಯನ್ನಾಗಿಯೂ, ಒಣನೆಲವನ್ನು ನೀರಿನ ಒರತೆಗಳನ್ನಾಗಿಯೂ ಮಾಡುವೆನು.
ಯೆಶಾಯ 41 : 19 (OCVKN)
ಮರುಭೂಮಿಯಲ್ಲಿ ದೇವದಾರು, ಜಾಲೀಮರ, ಸುಗಂಧ, ಓಲಿವ್ ಮರಗಳನ್ನು ನಾನು ನೆಡುವೆನು. ಮರುಭೂಮಿಯಲ್ಲಿ ತುರಾಯಿ, ತಪಸಿ, ತಿಲಕ ವೃಕ್ಷಗಳನ್ನು ಒಟ್ಟಿಗೆ ಬೆಳೆಯಿಸುವೆನು.
ಯೆಶಾಯ 41 : 20 (OCVKN)
ಆಗ ಯೆಹೋವ ದೇವರ ಹಸ್ತವು ಇದನ್ನು ಮಾಡಿದೆ ಎಂದೂ, ಇಸ್ರಾಯೇಲಿನ ಪರಿಶುದ್ಧನು ಇದನ್ನು ಸೃಷ್ಟಿಸಿದನು ಎಂದೂ ಅವರು ಕಂಡು ತಿಳಿದು, ಮನಸ್ಸಿಗೆ ಗ್ರಹಿಸಿಕೊಳ್ಳುವರು.
ಯೆಶಾಯ 41 : 21 (OCVKN)
“ನಿಮ್ಮ ವ್ಯಾಜ್ಯವನ್ನು ತನ್ನಿರಿ” ಎಂದು ಯೆಹೋವ ದೇವರು ಹೇಳುತ್ತಾರೆ. “ನಿಮ್ಮ ಬಲವಾದ ನ್ಯಾಯಗಳನ್ನು ತನ್ನಿರಿ,” ಎಂದು ಯಾಕೋಬ್ಯರ ಅರಸನು ಹೇಳುತ್ತಾನೆ.
ಯೆಶಾಯ 41 : 22 (OCVKN)
“ವಿಗ್ರಹಗಳೇ, ಮುಂದೆ ಏನಾಗಲಿದೆ ಎಂದು ನಮಗೆ ಹೇಳಿ. ಹಿಂದಿನವುಗಳನ್ನು ನಾವು ಮನಸ್ಸಿಗೆ ತಂದುಕೊಂಡು, ಅವುಗಳ ಪರಿಣಾಮವನ್ನು ಇಲ್ಲವೆ ಮುಂದಿನವುಗಳನ್ನು ತಿಳಿಸಿದರೆ ಗ್ರಹಿಸುವೆವು.
ಯೆಶಾಯ 41 : 23 (OCVKN)
ನೀವು ದೇವರುಗಳೆಂದು ತಿಳಿದುಕೊಳ್ಳುವಂತೆ ಮುಂದೆ ಬರುವವುಗಳನ್ನು ನಮಗೆ ತಿಳಿಸಿರಿ. ಹೌದು, ನಾವು ಗಾಬರಿಯಿಂದ ಭಯಪಡುವ ಹಾಗೆ ಒಳ್ಳೆಯದನ್ನಾಗಲಿ, ಕೆಟ್ಟದ್ದನ್ನಾಗಲಿ ಮಾಡಿರಿ.
ಯೆಶಾಯ 41 : 24 (OCVKN)
ನೀವು ಶೂನ್ಯವೇ, ನಿಮ್ಮ ಕಾರ್ಯವು ವ್ಯರ್ಥವೇ. ನಿಮ್ಮನ್ನು ಆರಿಸಿಕೊಂಡವನು ಅಸಹ್ಯನೇ.
ಯೆಶಾಯ 41 : 25 (OCVKN)
“ಉತ್ತರ ದಿಕ್ಕಿನಿಂದ ಒಬ್ಬನನ್ನು ನಾನು ಎಬ್ಬಿಸಿದ್ದೇ. ಸೂರ್ಯೋದಯದ ಕಡೆಯಿಂದ ಅವನು ನನ್ನ ಹೆಸರನ್ನು ಸ್ಮರಿಸುವನು. ಅವನು ಜೇಡಿ ಮಣ್ಣಿನಂತೆಯೂ, ಕುಂಬಾರನು ಮಣ್ಣನ್ನು ತುಳಿಯುವಂತೆಯೂ ಅಧಿಕಾರಸ್ಥರ ಮೇಲೆ ಅವನು ಬರುವನು.
ಯೆಶಾಯ 41 : 26 (OCVKN)
ಆತನು ನೀತಿವಂತನೆಂದು ನಾನು ತಿಳಿಯುವಂತೆ ಮತ್ತು ಹೇಳುವಂತೆ, ಆದಿಯಲ್ಲಿ ಯಾರು ಅದನ್ನು ತಿಳಿಸಿದ್ದಾರೆ? ಹೌದು, ಯಾರೂ ತೋರಿಸುವವನಿಲ್ಲ, ತಿಳಿಸುವವನು ಒಬ್ಬನೂ ಇಲ್ಲ. ನಿಮ್ಮ ಮಾತುಗಳು ಯಾರ ಕಿವಿಗೂ ಬೀಳುವುದಿಲ್ಲ.
ಯೆಶಾಯ 41 : 27 (OCVKN)
ನಾನು ಮೊದಲನೆಯವನಾಗಿ ಚೀಯೋನಿಗೆ, ‘ಇಗೋ, ಅವರನ್ನು ನೋಡು’ ಎಂದು ಹೇಳಿ, ಶುಭಸಮಾಚಾರ ತರತಕ್ಕವನನ್ನು ಯೆರೂಸಲೇಮಿಗೆ ಅನುಗ್ರಹಿಸುವೆನು.
ಯೆಶಾಯ 41 : 28 (OCVKN)
ನಾನು ನೋಡಿದಾಗ, ಅಲ್ಲಿ ಯಾರೂ ಇಲ್ಲ. ನಾನು ಅವರನ್ನು ಕೇಳುವ ಪ್ರಶ್ನೆಗೆ, ಅವರಲ್ಲಿ ಒಂದು ಮಾತನ್ನು ಉತ್ತರಿಸುವ ಸಲಹೆಗಾರನು ಇಲ್ಲವೇ ಇಲ್ಲ.
ಯೆಶಾಯ 41 : 29 (OCVKN)
ಇಗೋ, ಅವರೆಲ್ಲಾ ವ್ಯರ್ಥವೇ, ಅವರ ಕಾರ್ಯಗಳು ಶೂನ್ಯವೇ. ಅವರ ಕೆತ್ತಿದ ವಿಗ್ರಹಗಳು ಗಾಳಿ ಮತ್ತು ಗಲಿಬಿಲಿಯೇ.”
❮
❯
1
2
3
4
5
6
7
8
9
10
11
12
13
14
15
16
17
18
19
20
21
22
23
24
25
26
27
28
29