ಯೆಶಾಯ 34 : 1 (OCVKN)
ರಾಷ್ಟ್ರಗಳ ವಿರುದ್ಧ ತೀರ್ಪು ರಾಷ್ಟ್ರಗಳೇ, ಕೇಳುವುದಕ್ಕೆ ಹತ್ತಿರ ಬನ್ನಿರಿ, ಕಿವಿಗೊಡಿರಿ. ಭೂಮಿಯೂ, ಅದರಲ್ಲಿರುವ ಸಮಸ್ತವೂ; ಲೋಕವೂ, ಅದರ ಎಲ್ಲಾ ಹುಟ್ಟುವಳಿಯೂ ಕೇಳಲಿ.
ಯೆಶಾಯ 34 : 2 (OCVKN)
ಯೆಹೋವ ದೇವರ ಕೋಪವು ಸಕಲ ರಾಷ್ಟ್ರಗಳ ಮೇಲೂ, ಅವುಗಳ ಎಲ್ಲಾ ಸೈನ್ಯಗಳ ಮೇಲೂ ರೋಷಗೊಂಡು, ಅವರನ್ನು ಕೊಲೆಗೆ ಗುರಿಮಾಡಿ, ಸಂಪೂರ್ಣವಾಗಿ ನಾಶಮಾಡಿದ್ದಾನೆ.
ಯೆಶಾಯ 34 : 3 (OCVKN)
ಅವರಲ್ಲಿ ಹತರಾದವರು, ಬೀದಿಪಾಲಾಗುವರು. ಅವರ ಹೆಣಗಳ ದುರ್ವಾಸನೆಯು ಮೇಲಕ್ಕೆ ಏರುವುದು. ಅವರ ರಕ್ತ ಪ್ರವಾಹದಿಂದ ಪರ್ವತಗಳು ತೋಯಿಸುವುದು.
ಯೆಶಾಯ 34 : 4 (OCVKN)
ಆಕಾಶದ ಸೈನ್ಯವೆಲ್ಲಾ ಗತಿಸಿ ಹೋಗುವುದು. ಆಕಾಶಮಂಡಲವು ಸುರುಳಿಯಂತೆ ಸುತ್ತಿಕೊಳ್ಳುವುದು. ದ್ರಾಕ್ಷಿ ಎಲೆ ಒಣಗಿ, ಗಿಡದಿಂದ ಬೀಳುವಂತೆಯೂ, ಅಂಜೂರ ಮರದಿಂದ ಸುಕ್ಕುಗಟ್ಟಿದ ಅಂಜೂರ ಹಣ್ಣುಗಳು ಉದುರುವಂತೆ ತಾರಾಮಂಡಲವೆಲ್ಲಾ ಬಾಡಿ ಬೀಳುವದು.
ಯೆಶಾಯ 34 : 5 (OCVKN)
ನನ್ನ ಖಡ್ಗವು ಪರಲೋಕದಲ್ಲಿ ರೋಷಪಾನ ಮಾಡುವುದು. ಇಗೋ, ಅದು ಎದೋಮಿನ ಮತ್ತು ನಾನು ಶಪಿಸಿದ ಜನರ ಮೇಲೆಯೂ, ನ್ಯಾಯತೀರಿಸುವುದಕ್ಕಾಗಿ ಕೆಳಗೆ ಇಳಿದು ಬರುವುದು.
ಯೆಶಾಯ 34 : 6 (OCVKN)
ಯೆಹೋವ ದೇವರ ಖಡ್ಗವು ರಕ್ತದಲ್ಲಿ ಸ್ನಾನ ಮಾಡಿದೆ. ಅದು ಕುರಿ ಮತ್ತು ಹೋತಗಳ ರಕ್ತದಿಂದಲೂ, ಟಗರುಗಳ ಮೂತ್ರಪಿಂಡದ ಕೊಬ್ಬಿನಿಂದಲೂ ಮುಚ್ಚಲಾಗಿದೆ. ಏಕೆಂದರೆ ಯೆಹೋವ ದೇವರಿಗೆ ಬೊಚ್ರದಲ್ಲಿ ಬಲಿಯು, ಎದೋಮಿನ ದೇಶದಲ್ಲಿ ದೊಡ್ಡ ಕೊಲೆಯು ಉಂಟು.
ಯೆಶಾಯ 34 : 7 (OCVKN)
ಕಾಡುಕೋಣಗಳೂ ಹೋರಿಗೂಳಿಗಳೂ ಈ ಯಜ್ಞಪಶುಗಳೊಂದಿಗೆ ಬೀಳುವುವು; ನಾಡು ರಕ್ತದಿಂದ ತೊಯ್ದಿರುವುದು; ಅಲ್ಲಿನ ಧೂಳು ಕೊಬ್ಬಿನಿಂದ ಜಿಡ್ಡಾಗಿರುವುದು.
ಯೆಶಾಯ 34 : 8 (OCVKN)
ಏಕೆಂದರೆ ಅದು ಯೆಹೋವ ದೇವರು ಮುಯ್ಯಿ ತೀರಿಸುವ ದಿನವಾಗಿದೆ, ಚೀಯೋನಿನ ವ್ಯಾಜ್ಯದಲ್ಲಿ ದಂಡನೆ ವಿಧಿಸತಕ್ಕ ವರುಷವು ಒದಗಿದೆ.
ಯೆಶಾಯ 34 : 9 (OCVKN)
ಎದೋಮಿನ ಪ್ರವಾಹಗಳು ಇಳಿಜಾರಾಗಿ ಮಾರ್ಪಡುವುವು. ಅದರ ಧೂಳು ಗಂಧಕವಾಗುವುದು, ದೇಶವು ಉರಿಯುವ ಡಾಂಬರಿನಂತೆ ಇರುವುದು.
ಯೆಶಾಯ 34 : 10 (OCVKN)
ಅದು ರಾತ್ರಿಯಲ್ಲಾದರೂ ಇಲ್ಲವೆ ಹಗಲಿನಲ್ಲಾದರೂ ಆರುವುದಿಲ್ಲ. ಅದರ ಹೊಗೆಯು ನಿರಂತರವಾಗಿ ಏಳುತ್ತಿರುವುದು. ಅದು ತಲತಲಾಂತರಕ್ಕೂ ಹಾಳಾಗಿ ಬಿದ್ದಿರುವುದು, ಅದನ್ನು ಎಂದೆಂದಿಗೂ ಯಾರೂ ಹಾದು ಹೋಗರು.
ಯೆಶಾಯ 34 : 11 (OCVKN)
ಆದರೆ ಬಕಪಕ್ಷಿಯು ಮತ್ತು ಮುಳ್ಳುಹಂದಿಯು ಅದನ್ನು ಆವರಿಸಿಕೊಳ್ಳುವುವು. ಗೂಬೆ ಮತ್ತು ಕಾಗೆಗಳು ಸಹ ಅಲ್ಲಿ ವಾಸಿಸುವುವು. ಗಲಿಬಿಲಿ ಎಂಬ ನೂಲನ್ನು, ಶೂನ್ಯವೆಂಬ ಗಟ್ಟಿ ತೂಕವನ್ನು ಆತನು ಅದರ ಮೇಲೆ ಎಳೆಯುವನು.
ಯೆಶಾಯ 34 : 12 (OCVKN)
ಅವರ ರಾಜ್ಯಕ್ಕೆ ಪ್ರಮುಖರನ್ನು ಕರೆಯುವರು. ಆದರೆ ಅಲ್ಲಿ ಯಾರೂ ಇರುವುದಿಲ್ಲ. ಅವಳ ಪ್ರಭುಗಳು ಇಲ್ಲದಂತಾಗುವರು.
ಯೆಶಾಯ 34 : 13 (OCVKN)
ಅವಳ ಅರಮನೆಗಳಲ್ಲಿ ಮುಳ್ಳುಗಳು ಬೆಳೆಯುವುವು, ಅದರ ಕೋಟೆಗಳಲ್ಲಿ ಮುಳ್ಳುಪೊದೆಗಳು ಇರುವುವು. ಅದು ನರಿಗಳ ನಿವಾಸವೂ, ಗೂಬೆಗಳಿಗೆ ಸ್ಥಾನವೂ ಆಗುವುದು.
ಯೆಶಾಯ 34 : 14 (OCVKN)
ಮರುಭೂಮಿಯ ಕಾಡುಮೃಗಗಳು ತೋಳಗಳೊಂದಿಗೆ ಸಂಧಿಸುವುವು, ಕಾಡುಮೇಕೆಗಳು ಪರಸ್ಪರ ಕರೆಯುತ್ತವೆ. ರಾತ್ರಿ ಮೃಗಗಳು ಸಹ ಅಲ್ಲಿ ಮಲಗುತ್ತವೆ. ತಮಗಾಗಿ ವಿಶ್ರಾಂತಿ ಸ್ಥಳಗಳನ್ನು ಕಂಡುಕೊಳ್ಳುತ್ತವೆ.
ಯೆಶಾಯ 34 : 15 (OCVKN)
ಅಲ್ಲಿ ಗೂಬೆಯು ಗೂಡನ್ನು ಮಾಡಿಕೊಂಡು, ಮೊಟ್ಟೆ ಇಟ್ಟು, ಮರಿ ಮಾಡಿ, ಅವುಗಳನ್ನು ತನ್ನ ರೆಕ್ಕೆಗಳ ನೆರಳಿನಲ್ಲಿ ಕಾಪಾಡುವುದು. ಅಲ್ಲಿಯೂ ಸಹ ಹದ್ದುಗಳು ಪ್ರತಿಯೊಂದೂ ಜೊತೆಜೊತೆಯಾಗಿ ಸೇರಿರುತ್ತವೆ.
ಯೆಶಾಯ 34 : 16 (OCVKN)
ಯೆಹೋವ ದೇವರ ಗ್ರಂಥದಲ್ಲಿ ನೀವು ಹುಡುಕಿ ಓದಿರಿ, ಇವುಗಳಲ್ಲಿ ಒಂದಾದರೂ ತಪ್ಪದು. ಜೊತೆಯಿಲ್ಲದೆ ಒಂದೂ ಇರುವುದಿಲ್ಲ. ಏಕೆಂದರೆ ನನ್ನ ಬಾಯಿಯೇ ಅದನ್ನು ಆಜ್ಞಾಪಿಸಿತು. ಅವರ ಆತ್ಮವೇ ಅವುಗಳನ್ನು ಒಟ್ಟುಗೂಡಿಸಿತು.
ಯೆಶಾಯ 34 : 17 (OCVKN)
ಅವರೇ ಅವುಗಳಿಗೋಸ್ಕರ ಚೀಟು ಹಾಕಿದ್ದಾರೆ. ಅವರ ಕೈಯೇ ಅದನ್ನು ಗೆರೆ ಎಳೆದು, ಅವರಿಗೆ ಹಂಚಿಕೊಟ್ಟಿದೆ. ಅವು ಅದನ್ನು ನಿರಂತರಕ್ಕೂ ವಶಮಾಡಿಕೊಳ್ಳುವುವು. ಅವು ತಲತಲಾಂತರಕ್ಕೂ ಅದರಲ್ಲಿ ವಾಸವಾಗಿರುವುವು.
❮
❯
1
2
3
4
5
6
7
8
9
10
11
12
13
14
15
16
17