ಯೆಶಾಯ 33 : 1 (OCVKN)
ನಿರಾಶೆ ಹಾಗೂ ಸಹಾಯ ಹಾಳು ಮಾಡುತ್ತಿರುವವನೇ, ನಿನಗೆ ಕಷ್ಟ! ನಿನ್ನನ್ನು ಯಾರೂ ಸೂರೆಮಾಡದಿದ್ದರೂ ನೀನು ಸೂರೆಮಾಡುತ್ತಿರುವೆ; ನಿನ್ನನ್ನು ಯಾರೂ ವಂಚಿಸದಿದ್ದರೂ ನೀನು ವಂಚನೆ ಮಾಡುತ್ತಿರುವೆ. ಇದಕ್ಕೆಲ್ಲ ಅಂತ್ಯವಿದೆ. ಈಗ ಹಾಳು ಮಾಡುತ್ತಿರುವ ನೀನು, ಆಗ ನೀನೇ ಹಾಳಾಗುವೆ. ಈಗ ವಂಚನೆ ಮಾಡುತ್ತಿರುವ ನೀನೇ ವಂಚಿತನಾಗುವೆ.
ಯೆಶಾಯ 33 : 2 (OCVKN)
ಯೆಹೋವ ದೇವರೇ, ನಮ್ಮ ಕಡೆಗೆ ಕೃಪೆ ತೋರಿಸಿರಿ. ನಿನಗೋಸ್ಕರ ನಾವು ಕಾದಿದ್ದೇವೆ. ಪ್ರತಿ ಮುಂಜಾನೆ ನಮಗೆ ಭುಜಬಲವಾಗಿಯೂ, ಇಕ್ಕಟ್ಟಿನ ಕಾಲದಲ್ಲಿ ನಮ್ಮ ರಕ್ಷಣೆಯಾಗಿಯೂ ಇರು.
ಯೆಶಾಯ 33 : 3 (OCVKN)
ನಿಮ್ಮ ಸೈನ್ಯದ ಕೋಲಾಹಲದ ಶಬ್ದಕ್ಕೆ ಜನರು ಓಡಿಹೋಗುತ್ತಾರೆ, ನೀವು ಏಳುವಾಗ ರಾಜ್ಯಗಳು ಚದರಿ ಹೋಗುತ್ತವೆ.
ಯೆಶಾಯ 33 : 4 (OCVKN)
ನಿಮ್ಮ ಕೊಳ್ಳೆಯನ್ನು ಇತರರು ಮಿಡತೆಗಳಂತೆ ಕೊಳ್ಳೆಮಾಡುವರು, ಮಿಡತೆಗಳು ಓಡಾಡುವ ಹಾಗೆ ಮನುಷ್ಯರು ಅದರ ಮೇಲೆ ಓಡಾಡುವರು.
ಯೆಶಾಯ 33 : 5 (OCVKN)
ಯೆಹೋವ ದೇವರು ಉನ್ನತೋನ್ನತನಾಗಿದ್ದಾನೆ. ಏಕೆಂದರೆ ಆತನು ಮೇಲಿನ ಲೋಕದಲ್ಲಿ ವಾಸಿಸುತ್ತಾನೆ. ಚೀಯೋನನ್ನು ನೀತಿ ಮತ್ತು ನ್ಯಾಯಗಳಿಂದ ತುಂಬಿಸಿದ್ದಾನೆ.
ಯೆಶಾಯ 33 : 6 (OCVKN)
ಅವರು ನಿಮ್ಮ ಸಮಯಕ್ಕೆ ಖಚಿತವಾದ ಆಧಾರವಾಗುತ್ತಾರೆ. ರಕ್ಷಣೆ ಜ್ಞಾನ ತಿಳುವಳಿಕೆಗಳ ನಿಕ್ಷೇಪವಾಗಿಯೂ ಇರುವನು. ಯೆಹೋವ ದೇವರ ಭಯವೇ ಅವನ ಬೊಕ್ಕಸವಾಗಿರುವುದು.
ಯೆಶಾಯ 33 : 7 (OCVKN)
ಅವರ ಪರಾಕ್ರಮಶಾಲಿಗಳು ಹೊರಗೆ ಕೂಗುತ್ತಾರೆ; ಸಮಾಧಾನದ ರಾಯಭಾರಿಗಳು ಘೋರವಾಗಿ ಅಳುತ್ತಿದ್ದಾರೆ.
ಯೆಶಾಯ 33 : 8 (OCVKN)
ರಾಜ ಮಾರ್ಗಗಳು ಹಾಳಾಗಿವೆ. ಹಾದಿಯಲ್ಲಿ ಹೋಗುವವರು ನಿಂತು ಹೋದರು. ಅವನು ಒಪ್ಪಂದವನ್ನು ಮೀರಿದ್ದಾನೆ. ಪಟ್ಟಣಗಳನ್ನು* ಪಟ್ಟಣಗಳನ್ನು ಕೆಲವು ಪ್ರತಿಗಳಲ್ಲಿ ಸಾಕ್ಷಿಗಳು ತಿರಸ್ಕಾರ ಮಾಡಿ, ಯಾವ ಮನುಷ್ಯನನ್ನು ಗಣನೆಗೆ ತಾರನು.
ಯೆಶಾಯ 33 : 9 (OCVKN)
ದೇಶವು ಪ್ರಲಾಪಿಸಿ ಕುಗ್ಗುತ್ತದೆ. ಲೆಬನೋನು ನಾಚಿಕೆಪಟ್ಟು ಕಡಿದು ಬೀಳುವುದು. ಶಾರೋನ್ ಬೆಂಗಾಡಾಗಿದೆ. ಬಾಷಾನ್ ಮತ್ತು ಕರ್ಮೆಲ್ ಎಲೆಗಳನ್ನು ಉದುರಿಸಿಬಿಟ್ಟಿವೆ.
ಯೆಶಾಯ 33 : 10 (OCVKN)
ಯೆಹೋವ ದೇವರು ಹೀಗೆನ್ನುತ್ತಾರೆ, “ನಾನು ಈಗ ಏಳುವೆನು. ಈಗಲೇ ನನ್ನನ್ನು ಉನ್ನತಪಡಿಸಿಕೊಳ್ಳುವೆನು. ಈಗ ಉನ್ನತೋನ್ನತನಾಗುವೆನು.
ಯೆಶಾಯ 33 : 11 (OCVKN)
ನೀವು ಒಣಹುಲ್ಲನ್ನು ಗರ್ಭಧರಿಸಿ, ಪೈರಿನ ಮೋಟನ್ನು ಹೆರುವಿರಿ. ನಿಮ್ಮ ಶ್ವಾಸವು ನಿಮ್ಮನ್ನೇ ನುಂಗುವ ಜ್ವಾಲೆಯಾಗುವುದು.
ಯೆಶಾಯ 33 : 12 (OCVKN)
ಜನಾಂಗಗಳು ಸುಟ್ಟ ಸುಣ್ಣದ ಹಾಗಿರುವುವು. ಕತ್ತರಿಸಿದ ಮುಳ್ಳುಕೊಂಪೆಗೆ ಬೆಂಕಿ ಹಚ್ಚಿದಂತಾಗುವುದು.”
ಯೆಶಾಯ 33 : 13 (OCVKN)
ದೂರದಲ್ಲಿರುವವರೇ, ನಾನು ಮಾಡಿದ್ದನ್ನು ಕೇಳಿರಿ. ಸಮೀಪದಲ್ಲಿರುವವರೇ, ನನ್ನ ಪರಾಕ್ರಮವನ್ನು ತಿಳಿದುಕೊಳ್ಳಿರಿ.
ಯೆಶಾಯ 33 : 14 (OCVKN)
ಚೀಯೋನಿನಲ್ಲಿರುವ ಪಾಪಿಗಳು ಹೆದರುತ್ತಾರೆ. ಭಯದಿಂದ ಕಪಟಿಗಳು ಆಶ್ಚರ್ಯಕ್ಕೊಳಗಾಗಿ ಹೀಗೆ ಎಂದುಕೊಳ್ಳುವರು, “ನಮ್ಮಲ್ಲಿ ಯಾರು ನುಂಗುವ ಅಗ್ನಿಯ ಸಂಗಡ ವಾಸಿಸಬಲ್ಲರು? ನಮ್ಮಲ್ಲಿ ಯಾರು ಸದಾ ಉರಿಯುವ ಜ್ವಾಲೆಗಳೊಡನೆ ವಾಸಿಸಬಲ್ಲರು?”
ಯೆಶಾಯ 33 : 15 (OCVKN)
ನೀತಿಯಲ್ಲಿ ನಡೆದು, ಯಥಾರ್ಥವಾಗಿ ನುಡಿದು, ದೋಚಿಕೊಂಡ ಲಾಭ ಬೇಡವೆಂದು ಲಂಚ ಮುಟ್ಟದಂತೆ ಕೈಚಾಚಿದೆ. ಕೊಲೆಯ ಮಾತಿಗೆ ಕಿವಿಗೊಡದೆ, ಕೆಟ್ಟದ್ದನ್ನು ಕಾಣದಂತೆ ಕಣ್ಣು ಮುಚ್ಚಿಕೊಳ್ಳುವವರೇ ಉನ್ನತ ಸ್ಥಳದಲ್ಲಿ ವಾಸಿಸುವರು.
ಯೆಶಾಯ 33 : 16 (OCVKN)
ಬಂಡೆಗಳ ಕೋಟೆಗಳು ಅವನಿಗೆ ಆಶ್ರಯವಾಗಿರುವುವು. ರೊಟ್ಟಿಯು ಅವನಿಗೆ ಒದಗುವುದು. ನೀರು ತಪ್ಪುವುದಿಲ್ಲ.
ಯೆಶಾಯ 33 : 17 (OCVKN)
ರಾಜನ ಸೌಂದರ್ಯವನ್ನು ನಿನ್ನ ಕಣ್ಣುಗಳು ನೋಡುವುವು. ಅತಿವಿಸ್ತಾರವಾದ ದೇಶವನ್ನು ಕಣ್ಣು ತುಂಬಾ ನೋಡುವಿರಿ.
ಯೆಶಾಯ 33 : 18 (OCVKN)
ಆಗ ನೀವು ಹಿಂದಿನ ಭಯಂಕರವಾದ ವಿಷಯಗಳನ್ನು ಮನಸ್ಸಿಗೆ ತಂದುಕೊಳ್ಳುತ್ತಾ, “ಕಪ್ಪವನ್ನು ಲೆಕ್ಕಿಸಿದವನು ಎಲ್ಲಿ? ತೂಕ ಮಾಡಿದವನು ಎಲ್ಲಿ? ಗೋಪುರಗಳನ್ನು ಎಣಿಸಿದವನು ಎಲ್ಲಿ?” ಎಂದುಕೊಳ್ಳುವಿರಿ.
ಯೆಶಾಯ 33 : 19 (OCVKN)
ನೀನು ತಿಳಿಯಲಾಗದ ಹಾಗೆ ಕಠಿಣ ಭಾಷೆಯೂ, ಗ್ರಹಿಸಲಾಗದ ಹಾಗೆ ಅಪರೂಪವಾದ ಮಾತನ್ನು ಆಡಿದ ಜನರನ್ನೂ ಇನ್ನು ಮುಂದೆ ನೀನು ನೋಡುವುದಿಲ್ಲ.
ಯೆಶಾಯ 33 : 20 (OCVKN)
ನಮ್ಮ ಹಬ್ಬಗಳು ನಡೆಯುವ ಚೀಯೋನ್ ಪಟ್ಟಣವನ್ನು ದೃಷ್ಟಿಸಿರಿ. ಯೆರೂಸಲೇಮು ನೆಮ್ಮದಿಯ ನಿವಾಸವಾಗಿಯೂ, ಗೂಟಕೀಳದ ಹಗ್ಗಹರಿಯದ ಒಂದೇ ಕಡೆ ಇರುವ ಗುಡಾರವಾಗಿಯೂ ಇರುವುದನ್ನು ನೀವು ಕಣ್ಣಾರೆ ಕಾಣುವಿರಿ.
ಯೆಶಾಯ 33 : 21 (OCVKN)
ಅಲ್ಲಿ ಯೆಹೋವ ದೇವರು ನಮ್ಮ ಬಲಶಾಲಿಯಾಗಿರುತ್ತಾರೆ. ನದಿಸರೋವರಗಳಂತೆ ನಮ್ಮನ್ನು ಸುತ್ತುವರಿಯುವರು. ಹುಟ್ಟುಗೋಲಿನ ದೋಣಿಯಾಗಲಿ, ದೊಡ್ಡದಾದ ಹಡಗಾಗಲಿ ಅದನ್ನು ದಾಟುವುದಿಲ್ಲ.
ಯೆಶಾಯ 33 : 22 (OCVKN)
ಏಕೆಂದರೆ ಯೆಹೋವ ದೇವರು ನಮ್ಮ ನ್ಯಾಯಾಧಿಪತಿಯಾಗಿದ್ದಾರೆ. ಯೆಹೋವ ದೇವರು ನಮಗೆ ಆಜ್ಞೆಕೊಡುವವರು. ಯೆಹೋವ ದೇವರೇ, ನಮ್ಮ ರಾಜ. ಯೆಹೋವ ದೇವರೇ ನಮ್ಮನ್ನು ರಕ್ಷಿಸುವವರು.
ಯೆಶಾಯ 33 : 23 (OCVKN)
ನಿನ್ನ ಹಗ್ಗಗಳು ಸಡಲಿ, ಸ್ತಂಭದ ಪಾದವನ್ನು ಸ್ಥಿರಪಡಿಸಿಕೊಳ್ಳಲಾರದೆ ಹೋದವು. ಪಠವನ್ನು ಮುದುರದಂತೆ ಹಿಡಿದಿರಲಿಕ್ಕೂ ಆಗಲಿಲ್ಲ. ಆಗ ದೊಡ್ಡ ಸೂರೆಯು ಕೊಳ್ಳೆಯಾಗಿ ಹಂಚುವುದಕ್ಕೆ ಆಸ್ಪದವಾಯಿತು. ಕುಂಟರೂ ಸುಲಿಗೆ ಮಾಡಿದರು.
ಯೆಶಾಯ 33 : 24 (OCVKN)
ಚೀಯೋನಿನ ಯಾವ ನಿವಾಸಿಯೂ, “ನಾನು ಅಸ್ವಸ್ಥನಾಗಿದ್ದೇನೆ,” ಎಂದು ಹೇಳನು. ಅದರಲ್ಲಿ ವಾಸವಾಗಿರುವ ಜನರ ಪಾಪವು ಕ್ಷಮಿಸಲಾಗುವುದು.

1 2 3 4 5 6 7 8 9 10 11 12 13 14 15 16 17 18 19 20 21 22 23 24