ಹೋಶೇ 8 : 1 (OCVKN)
ಇಸ್ರಾಯೇಲ್ ಸುಂಟರಗಾಳಿಯನ್ನು ಕೊಯ್ಲು ಮಾಡುವುದು “ನಿನ್ನ ಬಾಯಿಗೆ ತುತೂರಿಯನ್ನು ಇಟ್ಟುಕೋ. ಅವರು ನನ್ನ ಒಡಂಬಡಿಕೆಯನ್ನು ಮೀರಿ, ನನ್ನ ನ್ಯಾಯ ಪ್ರಮಾಣಕ್ಕೆ ವಿರುದ್ಧವಾಗಿ ಅಪರಾಧ ಮಾಡಿದ್ದರಿಂದ ಶತ್ರುಗಳು ಹದ್ದಿನ ಹಾಗೆ ಯೆಹೋವ ದೇವರ ಆಲಯದ ಮೇಲೆ ಬರುವರು.
ಹೋಶೇ 8 : 2 (OCVKN)
ಇಸ್ರಾಯೇಲಿನವರು, ‘ನನ್ನ ದೇವರೇ, ನಾವು ನಿಮ್ಮನ್ನು ತಿಳಿದಿದ್ದೇವೆ,’ ಎಂದು ನನಗೆ ಕೂಗುತ್ತಿದ್ದಾರೆ.
ಹೋಶೇ 8 : 3 (OCVKN)
ಆದರೆ ಇಸ್ರಾಯೇಲು ಒಳ್ಳೆಯ ಸಂಗತಿಯನ್ನು ತಳ್ಳಿಬಿಟ್ಟಿದೆ. ಒಬ್ಬ ಶತ್ರುವು ಅವನನ್ನು ಹಿಂದಟ್ಟುವನು.
ಹೋಶೇ 8 : 4 (OCVKN)
ಅವರು ಅರಸರನ್ನು ನೇಮಿಸಿದ್ದಾರೆ. ಆದರೆ ನನ್ನಿಂದಲ್ಲ. ಅವರು ನನ್ನ ಅನುಮತಿಯಿಲ್ಲದೆ ರಾಜಕುಮಾರರನ್ನು ಆಯ್ಕೆ ಮಾಡಿದ್ದಾರೆ. ಅವರು ತಾವು ನಾಶವಾಗುವಂತೆ ತಮ್ಮ ಬೆಳ್ಳಿಯಿಂದಲೂ, ತಮ್ಮ ಬಂಗಾರದಿಂದಲೂ ತಮಗೆ ವಿಗ್ರಹಗಳನ್ನು ಮಾಡಿಕೊಂಡಿದ್ದಾರೆ.
ಹೋಶೇ 8 : 5 (OCVKN)
ಸಮಾರ್ಯವೇ, ನಿನ್ನ ಬಸವ ವಿಗ್ರಹವನ್ನು ಬಿಸಾಡಿಬಿಡು. ನನ್ನ ಕೋಪವು ಅವರ ಮೇಲೆ ಉರಿಯುತ್ತದೆ. ಅವರು ಎಷ್ಟು ಕಾಲ ಶುದ್ಧತೆಗೆ ಅಸಮರ್ಥರಾಗಿರುತ್ತಾರೆ?
ಹೋಶೇ 8 : 6 (OCVKN)
ಅವರು ಇಸ್ರಾಯೇಲಿನಿಂದ ಬಂದವರು. ಕಮ್ಮಾರನು ಈ ಬಸವ ವಿಗ್ರಹವನ್ನು ಮಾಡಿದನು. ಅದು ದೇವರಲ್ಲ, ಆದರೆ ಸಮಾರ್ಯದ ಬಸವನನ್ನು ಚೂರುಚೂರಾಗುವುದು.
ಹೋಶೇ 8 : 7 (OCVKN)
“ಅವರು ಗಾಳಿಯನ್ನು ಬಿತ್ತಿದ್ದಾರೆ. ಬಿರುಗಾಳಿಯನ್ನು ಕೊಯ್ಯುತ್ತಾರೆ. ಇಸ್ರಾಯೇಲರ ಪೈರು ತೆನೆಗೆ ಬಾರದು. ಮೊಳಕೆಯು ಆಹಾರವನ್ನು ಕೊಡುವುದಿಲ್ಲ. ಒಂದು ವೇಳೆ ಅದು ಕೊಟ್ಟರೂ ವಿದೇಶಿಯರು ಅದನ್ನು ನುಂಗುತ್ತಾರೆ.
ಹೋಶೇ 8 : 8 (OCVKN)
ಇಸ್ರಾಯೇಲನ್ನು ಕಬಳಿಸಲಾಗಿದೆ. ಅವರು ಜನಾಂಗಗಳಲ್ಲಿ ಬೇಡವಾದ ಪಾತ್ರೆಯ ಹಾಗೆ ಇದ್ದಾರೆ.
ಹೋಶೇ 8 : 9 (OCVKN)
ಅವರು ಒಂಟಿಯಾದ ಕಾಡುಕತ್ತೆಯ ಹಾಗೆ ಅಸ್ಸೀರಿಯಗೆ ಹೋಗಿದ್ದಾರೆ. ಎಫ್ರಾಯೀಮು ಪ್ರೇಮಿಗಳಿಗೆ ತನ್ನನ್ನು ಮಾರಿಕೊಂಡಿದೆ.
ಹೋಶೇ 8 : 10 (OCVKN)
ಎಫ್ರಾಯೀಮು ಜನಾಂಗಗಳಿಗೆ ತಮ್ಮನ್ನು ಮಾರಿಕೊಂಡಿದ್ದರೂ ಅವರನ್ನು ನಾನು ಈಗ ಒಟ್ಟುಗೂಡಿಸುವೆನು. ಅವರು ಪ್ರಬಲ ಅರಸನ ಹಿಂಸೆಯಿಂದಾಗಿ ಕಷ್ಟಪಡುವರು.
ಹೋಶೇ 8 : 11 (OCVKN)
“ಎಫ್ರಾಯೀಮು ಪಾಪ ಪರಿಹಾರಕ್ಕಾಗಿ ಅನೇಕ ಬಲಿಪೀಠಗಳನ್ನು ಕಟ್ಟಿದ್ದರೂ, ಈ ಬಲಿಪೀಠಗಳೇ ಅವರ ಪಾಪಕ್ಕೆ ಕಾರಣವಾಗಿವೆ.
ಹೋಶೇ 8 : 12 (OCVKN)
ನಾನು ನನ್ನ ನಿಯಮದ ಅನೇಕ ಸಂಗತಿಗಳನ್ನು ಅವನಿಗೆ ಬರೆದಿದ್ದೇನೆ. ಆದರೆ ಅವನು ಅವುಗಳನ್ನು ಅನ್ಯವಾದವುಗಳೆಂದು ಪರಿಗಣಿಸಿದನು.
ಹೋಶೇ 8 : 13 (OCVKN)
ಅವರು ಯಜ್ಞದ ಮಾಂಸವನ್ನು ಬಲಿಯಾಗಿ ಅರ್ಪಿಸಿ, ನನ್ನ ಕಾಣಿಕೆಗಳಿಂದ ಬಲಿಗಳನ್ನು ತಿನ್ನುತ್ತಾರೆ. ಆದರೆ ಯೆಹೋವ ದೇವರು ಅವುಗಳಿಗೆ ಮೆಚ್ಚುವುದಿಲ್ಲ. ಈಗ ಅವರ ಅಕ್ರಮಗಳನ್ನು ಜ್ಞಾಪಕಮಾಡಿಕೊಂಡು, ಅವರ ಪಾಪಗಳನ್ನು ಶಿಕ್ಷಿಸಿದರು. ಅವರು ಈಜಿಪ್ಟಿಗೆ ಹಿಂದಿರುಗುವರು.
ಹೋಶೇ 8 : 14 (OCVKN)
ಇಸ್ರಾಯೇಲರು ತಮ್ಮ ಸೃಷ್ಟಿಕರ್ತನನ್ನು ಮರೆತುಬಿಟ್ಟು, ಅರಮನೆಗಳನ್ನು ಕಟ್ಟುತ್ತಾರೆ. ಯೆಹೂದವು ಸಹ ಕೋಟೆಯುಳ್ಳ ಪಟ್ಟಣಗಳನ್ನು ಹೆಚ್ಚುಮಾಡಿಕೊಂಡಿದೆ. ಆದರೆ ನಾನು ಅದರ ಪಟ್ಟಣಗಳ ಮೇಲೆ ಬೆಂಕಿಯನ್ನು ಕಳುಹಿಸುವೆನು. ಅದು ಅವರ ಕೋಟೆಗಳನ್ನು ನುಂಗಿಬಿಡುವುದು.”
❮
❯
1
2
3
4
5
6
7
8
9
10
11
12
13
14