ಇಬ್ರಿಯರಿಗೆ 12 : 1 (OCVKN)
ಆದಕಾರಣ ಸಾಕ್ಷಿಗಳು ದೊಡ್ಡ ಮೇಘದಂತೆ ನಮ್ಮ ಸುತ್ತಲೂ ಇರುವುದರಿಂದ ಎಲ್ಲಾ ಭಾರವನ್ನೂ ಸುಲಭವಾಗಿ ಮುತ್ತಿಕೊಳ್ಳುವ ಪಾಪವನ್ನೂ ನಾವು ಎಸೆದುಬಿಟ್ಟು,
ಇಬ್ರಿಯರಿಗೆ 12 : 2 (OCVKN)
ನಮ್ಮಲ್ಲಿ ನಂಬಿಕೆಯನ್ನು ಹುಟ್ಟಿಸುವವರೂ ಅದನ್ನು ಪರಿಪೂರ್ಣಗೊಳಿಸುವವರೂ ಆಗಿರುವ ಯೇಸುವಿನ ಮೇಲೆ ದೃಷ್ಟಿಯಿಟ್ಟು, ನಮ್ಮ ಮುಂದೆ ಇಟ್ಟಿರುವ ಓಟವನ್ನು ಸಹನೆಯಿಂದ ಓಡೋಣ. ಯೇಸು ತಮ್ಮ ಮುಂದೆ ಇಟ್ಟಿದ್ದ ಸಂತೋಷಕ್ಕಾಗಿ ಶಿಲುಬೆಯನ್ನು ಸಹಿಸಿಕೊಂಡು ಅವಮಾನವನ್ನು ಅಲಕ್ಷ್ಯಮಾಡಿ, ಈಗ ದೇವರ ಸಿಂಹಾಸನದ ಬಲಗಡೆಯಲ್ಲಿ ಆಸೀನರಾಗಿದ್ದಾರೆ.
ಇಬ್ರಿಯರಿಗೆ 12 : 3 (OCVKN)
ನೀವು ಮನಗುಂದಿದವರಾಗಿ ಬೇಸರಗೊಳ್ಳದಂತೆ ಪಾಪಿಗಳಿಂದ ಎಷ್ಟೋ ವಿರೋಧವನ್ನು ಸಹಿಸಿಕೊಂಡ ಯೇಸುವನ್ನು ಕುರಿತು ನೀವು ಯೋಚಿಸಿರಿ.
ಇಬ್ರಿಯರಿಗೆ 12 : 4 (OCVKN)
ದೇವರು ತಮ್ಮ ಪುತ್ರರನ್ನು ಶಿಕ್ಷಿಸುತ್ತಾರೆ ನೀವು ಪಾಪಕ್ಕೆ ವಿರೋಧವಾಗಿ ಹೋರಾಡುವುದರಲ್ಲಿ, ಇನ್ನೂ ರಕ್ತವನ್ನು ಸುರಿಸುವಷ್ಟು ಅದನ್ನು ಎದುರಿಸಲಿಲ್ಲ.
ಇಬ್ರಿಯರಿಗೆ 12 : 5 (OCVKN)
ಒಬ್ಬ ತಂದೆ ಮಕ್ಕಳಾಗಿರುವ ನಿಮಗೆ ಎಚ್ಚರಿಸಲಾದ ಮಾತನ್ನು ನೀವು ಮರೆತಿದ್ದೀರಿ. ಅದು, “ನನ್ನ ಮಗನೇ, ಕರ್ತದೇವರ ಶಿಕ್ಷೆಯನ್ನು ಹಗುರವಾಗಿ ಎಣಿಸಬೇಡ. ಅವರು ನಿನ್ನನ್ನು ಗದರಿಸುವಾಗ ಬೇಸರಗೊಳ್ಳಬೇಡ.
ಇಬ್ರಿಯರಿಗೆ 12 : 6 (OCVKN)
ಏಕೆಂದರೆ, ಕರ್ತದೇವರು ಯಾರನ್ನು ಪ್ರೀತಿಸುತ್ತಾರೋ ಅವರನ್ನು ಶಿಕ್ಷಿಸುತ್ತಾರೆ. ತಾವು ಸ್ವೀಕರಿಸುವ ಪ್ರತಿಯೊಬ್ಬ ಮಗನನ್ನು ಹೊಡೆಯುತ್ತಾರೆ!”* ಜ್ಞಾನೋಕ್ತಿ 3:11,12 ಎಂಬುದಾಗಿದೆ.
ಇಬ್ರಿಯರಿಗೆ 12 : 7 (OCVKN)
ಶಿಸ್ತಿಗಾಗಿ ಕಷ್ಟವನ್ನು ನೀವು ಸಹಿಸಿಕೊಳ್ಳಬೇಕು. ದೇವರು ನಿಮ್ಮನ್ನು ಮಕ್ಕಳೆಂದು ನಡೆಸಿಕೊಳ್ಳುತ್ತಾರೆ. ಏಕೆಂದರೆ ತಂದೆಯಿಂದ ಶಿಸ್ತುಹೊಂದದ ಮಕ್ಕಳೆಲ್ಲಿ?
ಇಬ್ರಿಯರಿಗೆ 12 : 8 (OCVKN)
ನೀವು ಶಿಕ್ಷೆ ಹೊಂದುವವರೆಲ್ಲರೊಂದಿಗೆ ಪಾಲುಗಾರರಾಗಿರದಿದ್ದರೆ, ನೀವು ಅಕ್ರಮವಾಗಿ ಹುಟ್ಟಿದ ಮಕ್ಕಳೇ ಹೊರತು ನಿಜ ಮಕ್ಕಳಲ್ಲ.
ಇಬ್ರಿಯರಿಗೆ 12 : 9 (OCVKN)
ಇದು ಮಾತ್ರವಲ್ಲದೆ, ನಮ್ಮನ್ನು ಶಿಕ್ಷಿಸಿದ ಇಹಲೋಕದ ಶಾರೀರಿಕ ತಂದೆಗಳನ್ನು ನಾವು ಸನ್ಮಾನಿಸಿದೆವಷ್ಟೆ. ಆತ್ಮಗಳಿಗೆ ತಂದೆಯಾದ ದೇವರಿಗೆ ನಾವು ಇನ್ನೂ ಎಷ್ಟೋ ಹೆಚ್ಚಾಗಿ ಅಧೀನರಾಗಿ ಜೀವಿಸಬೇಕಲ್ಲವೇ?
ಇಬ್ರಿಯರಿಗೆ 12 : 10 (OCVKN)
ನಮ್ಮ ತಂದೆಯಾದವರು ತಮಗೆ ಒಳ್ಳೆಯದೆಂದು ತಿಳಿದಾಗ, ಸ್ವಲ್ಪಕಾಲ ನಮ್ಮನ್ನು ಶಿಕ್ಷಿಸಿದರು. ಆದರೆ ದೇವರು ತಮ್ಮ ಪವಿತ್ರತೆಯಲ್ಲಿ ನಾವು ಪಾಲುಗಾರರಾಗಬೇಕೆಂದು ನಮ್ಮ ಒಳ್ಳೆಯದಕ್ಕಾಗಿಯೇ ಶಿಕ್ಷಿಸುತ್ತಾರೆ.
ಇಬ್ರಿಯರಿಗೆ 12 : 11 (OCVKN)
ಯಾವ ಶಿಕ್ಷೆಯಾದರೂ ಆ ಸಮಯಕ್ಕೆ ಸಂತೋಷಕರವಾಗಿ ತೋಚದೆ, ದುಃಖಕರವಾಗಿ ತೋಚುತ್ತದೆ. ತರುವಾಯ, ಅದು ಶಿಕ್ಷೆ ಹೊಂದಿದವರಿಗೆ ಸಮಾಧಾನವುಳ್ಳ ನೀತಿಯ ಫಲವನ್ನು ಕೊಡುತ್ತದೆ.
ಇಬ್ರಿಯರಿಗೆ 12 : 12 (OCVKN)
ಆದ್ದರಿಂದ, ಜೋತು ಬಿದ್ದ ಕೈಗಳನ್ನೂ ಬಲಹೀನವಾದ ಮೊಣಕಾಲುಗಳನ್ನೂ ಬಲಪಡಿಸಿರಿ.
ಇಬ್ರಿಯರಿಗೆ 12 : 13 (OCVKN)
“ನಿಮ್ಮ ಪಾದಗಳಿಗೆ ನೇರವಾದ ದಾರಿಯನ್ನು ಮಾಡಿರಿ.”† ಜ್ಞಾನೋಕ್ತಿ 4:26 ಹೀಗೆ ಮಾಡಿದರೆ ಕುಂಟ ಕಾಲು ಉಳುಕಿಹೋಗದೆ ವಾಸಿಯಾಗುವುದು.
ಇಬ್ರಿಯರಿಗೆ 12 : 14 (OCVKN)
ದೇವರನ್ನು ತಿರಸ್ಕರಿಸುವುದರ ವಿರುದ್ಧ ಎಚ್ಚರಿಕೆ ಎಲ್ಲರ ಸಂಗಡ ಸಮಾಧಾನದಿಂದ ಜೀವಿಸಲು ಮತ್ತು ಪವಿತ್ರರಾಗಿರಲು ಸರ್ವಪ್ರಯತ್ನ ಮಾಡಿರಿ. ಪರಿಶುದ್ಧತೆಯಿಲ್ಲದೆ ಯಾರೂ ದೇವರನ್ನು ಕಾಣುವುದಿಲ್ಲ.
ಇಬ್ರಿಯರಿಗೆ 12 : 15 (OCVKN)
ನಿಮ್ಮಲ್ಲಿ ಯಾರೂ ದೇವರ ಕೃಪೆಗೆ ತಪ್ಪಿಹೋಗದಂತೆಯೂ ಯಾವ ವಿಷವುಳ್ಳ ಬೇರೂ ನಿಮ್ಮಲ್ಲಿ ಚಿಗುರಿ ಅಸಮಾಧಾನವನ್ನು ಹುಟ್ಟಿಸಿ ಅದರಿಂದ ಅನೇಕರು ಮಲಿನರಾಗದಂತೆಯೂ
ಇಬ್ರಿಯರಿಗೆ 12 : 16 (OCVKN)
ಯಾವ ಕಾಮುಕರಾಗಲಿ, ಏಸಾವನಂಥ ಪ್ರಾಪಂಚಿಕರಾಗಲಿ ನಿಮ್ಮಲ್ಲಿ ಇರದಂತೆಯೂ ಜಾಗ್ರತೆಯಿಂದ ನೋಡಿಕೊಳ್ಳಿರಿ. ಅವನು ಒಂದು ತುತ್ತು ಅನ್ನಕ್ಕಾಗಿ ತನ್ನ ಚೊಚ್ಚಲುತನದ ಹಕ್ಕನ್ನು ಮಾರಿಬಿಟ್ಟನು.
ಇಬ್ರಿಯರಿಗೆ 12 : 17 (OCVKN)
ತರುವಾಯ ಅವನು ಆಶೀರ್ವಾದವನ್ನು ಬಾಧ್ಯವಾಗಿ ಹೊಂದಬೇಕೆಂದು ಬಯಸಿ, ಕಣ್ಣೀರನ್ನು ಸುರಿಸುತ್ತಾ ಬೇಡಿಕೊಂಡರೂ ಪಶ್ಚಾತ್ತಾಪಕ್ಕೆ ಮಾರ್ಗವಿಲ್ಲದೆ ನಿರಾಕರಿಸಲಾದವನೆಂದು ನೀವು ಬಲ್ಲಿರಿ.
ಇಬ್ರಿಯರಿಗೆ 12 : 18 (OCVKN)
ಭಯದ ಪರ್ವತವೂ ಆನಂದದ ಪರ್ವತವೂ ನೀವು ಮುಟ್ಟಬಹುದಾದ ಮತ್ತು ಬೆಂಕಿಹತ್ತಿದಂಥ ಬೆಟ್ಟಕ್ಕೂ ಮಬ್ಬಿಗೂ ಕತ್ತಲೆಗೂ ಬಿರುಗಾಳಿಗೂ
ಇಬ್ರಿಯರಿಗೆ 12 : 19 (OCVKN)
ತುತೂರಿಯ ಧ್ವನಿಗೂ ಮಾತುಗಳ ಶಬ್ದಕ್ಕೂ ಬಂದವರಲ್ಲ. ಆ ಶಬ್ದವನ್ನು ಕೇಳಿದವರು, ತಮಗೆ ಇನ್ನು ಒಂದು ಮಾತನ್ನಾದರೂ ಹೇಳಬಾರದೆಂದು ಬೇಡಿಕೊಂಡರು.
ಇಬ್ರಿಯರಿಗೆ 12 : 20 (OCVKN)
ಏಕೆಂದರೆ, “ಯಾವ ಮೃಗವಾದರೂ ಬೆಟ್ಟವನ್ನು ಮುಟ್ಟಿದರೆ, ಅದನ್ನು ಕಲ್ಲೆಸೆದು ಕೊಲ್ಲಬೇಕು, ಇಲ್ಲವೆ ಈಟಿಯಿಂದ ತಿವಿಯಬೇಕು,”‡ ವಿಮೋ 19:12,13 ಎಂದು ಆಜ್ಞಾಪಿಸಿದ್ದನ್ನು ಅವರು ತಾಳಲಾರದೆ ಹೋದರು.
ಇಬ್ರಿಯರಿಗೆ 12 : 21 (OCVKN)
ಇದಲ್ಲದೆ ಆ ದೃಶ್ಯವು ಎಷ್ಟೋ ಭಯಂಕರವಾದದ್ದರಿಂದ ಮೋಶೆಯು, “ನಾನು ಭಯದಿಂದಲೂ ನಡುಕದಿಂದಲೂ ತುಂಬಿದವನಾಗಿದ್ದೇನೆ!”§ ಧರ್ಮೋ 9:19 ಎಂದು ಹೇಳಿದನು.
ಇಬ್ರಿಯರಿಗೆ 12 : 22 (OCVKN)
ಆದರೆ ನೀವು ಚೀಯೋನ್ ಪರ್ವತಕ್ಕೂ ಜೀವವುಳ್ಳ ದೇವರ ಪಟ್ಟಣವಾಗಿರುವ ಪರಲೋಕದ ಯೆರೂಸಲೇಮಿಗೂ ಆನಂದಭರಿತ ಅಸಂಖ್ಯಾತ ದೇವದೂತಗಣಗಳ ಬಳಿಗೂ
ಇಬ್ರಿಯರಿಗೆ 12 : 23 (OCVKN)
ಪರಲೋಕದಲ್ಲಿ ಹೆಸರು ದಾಖಲಾಗಿರುವ ಮಂಡಳಿಗೂ ಚೊಚ್ಚಲ ಮಕ್ಕಳ ಸಭೆಗೂ ಎಲ್ಲರಿಗೂ ನ್ಯಾಯಾಧಿಪತಿಯಾಗಿರುವ ದೇವರ ಬಳಿಗೂ ಪರಿಪೂರ್ಣವಾಗಿರುವ ನೀತಿವಂತರ ಆತ್ಮಗಳ ಬಳಿಗೂ
ಇಬ್ರಿಯರಿಗೆ 12 : 24 (OCVKN)
ಹೊಸ ಒಡಂಬಡಿಕೆಗೆ ಮಧ್ಯಸ್ಥರಾಗಿರುವ ಯೇಸುವಿನ ಬಳಿಗೂ ಹೇಬೆಲನ ರಕ್ತಕ್ಕಿಂತ ಉತ್ತಮವಾಗಿ ಮಾತನಾಡುವ, ಪ್ರೋಕ್ಷಿಸಿದ ರಕ್ತದ ಬಳಿಗೂ ಬಂದಿದ್ದೀರಿ.
ಇಬ್ರಿಯರಿಗೆ 12 : 25 (OCVKN)
ಮಾತನಾಡುವ ದೇವರನ್ನು ನೀವು ಅಸಡ್ಡೆ ಮಾಡದಂತೆ ನೋಡಿಕೊಳ್ಳಿರಿ. ಏಕೆಂದರೆ ಭೂಮಿಯ ಮೇಲೆ ಎಚ್ಚರಿಸಿದವರನ್ನು ಅಸಡ್ಡೆ ಮಾಡಿದ್ದಕ್ಕೆ ಅವರು ತಪ್ಪಿಸಿಕೊಳ್ಳದಿದ್ದರೆ, ಪರಲೋಕದಿಂದ ಎಚ್ಚರಿಸುವ ದೇವರಿಂದ ನಾವು ತೊಲಗಿ ಹೋದರೆ, ಹೇಗೆ ತಾನೆ ದಂಡನೆಯಿಂದ ನಾವು ತಪ್ಪಿಸಿಕೊಳ್ಳಬಲ್ಲೆವು?
ಇಬ್ರಿಯರಿಗೆ 12 : 26 (OCVKN)
ಆ ಕಾಲದಲ್ಲಿ ದೇವರ ಧ್ವನಿಯು ಭೂಮಿಯನ್ನು ಕದಲಿಸಿತು. ಈಗಲಾದರೋ, “ಇನ್ನೊಂದು ಸಾರಿ ನಾನು ಭೂಮಿಯನ್ನು ಮಾತ್ರವಲ್ಲದೆ ಪರಲೋಕವನ್ನೂ ಕದಲಿಸುತ್ತೇನೆ!”* ಹಗ್ಗಾ 2:6 ಎಂದು ದೇವರು ವಾಗ್ದಾನಮಾಡಿದ್ದಾರೆ.
ಇಬ್ರಿಯರಿಗೆ 12 : 27 (OCVKN)
“ಇನ್ನೂ ಒಂದು ಸಾರಿ,” ಎಂಬ ಮಾತು ನಿರ್ಮಿತವಾಗಿರುವ ಕದಲುವ ವಸ್ತುಗಳು ತೆಗೆದುಹಾಕಲಾಗುವುದು ಎಂದೂ ಕದಲಿಸದೆ ಇರುವ ವಸ್ತುಗಳು ಸ್ಥಿರವಾಗಿರುವುದು ಎಂಬುದನ್ನು ಸೂಚಿಸುತ್ತದೆ.
ಇಬ್ರಿಯರಿಗೆ 12 : 28 (OCVKN)
ಆದಕಾರಣ ಯಾರೂ ಕದಲಿಸಲಾರದ ರಾಜ್ಯವನ್ನು, ಸ್ವೀಕರಿಸುವವರಾಗಿದ್ದುದರಿಂದ ನಾವು ಕೃತಜ್ಞತೆಯಿಂದ ಇರೋಣ. ನಾವು ದೇವರಿಗೆ ಭಯಭಕ್ತಿಯಿಂದ ಕೂಡಿದ ಮೆಚ್ಚಿಕೆಯುಳ್ಳ ಸೇವೆಯನ್ನು ಸಲ್ಲಿಸುವಂತೆ ಕೃತಜ್ಞತೆಯನ್ನು ತೋರಿಸುವವರಾಗಿರೋಣ.
ಇಬ್ರಿಯರಿಗೆ 12 : 29 (OCVKN)
ಏಕೆಂದರೆ ನಮ್ಮ, “ದೇವರು ದಹಿಸುವ ಅಗ್ನಿಯಾಗಿದ್ದಾರೆ.”† ಧರ್ಮೋ 4:24
❮
❯