ಇಬ್ರಿಯರಿಗೆ 10 : 1 (OCVKN)
ಕ್ರಿಸ್ತ ಯೇಸುವಿನ ಒಂದೇ ಯಜ್ಞವು ಸದಾಕಾಲಕ್ಕೂ ಸಾರ್ಥಕವಾದದ್ದು ಮೋಶೆಯ ನಿಯಮವು ಬರಬೇಕಾಗಿದ್ದ ವಸ್ತುಗಳ ಛಾಯೆಯಾಗಿದೆ ಹೊರತು ಅವುಗಳ ನಿಜಸ್ವರೂಪವಲ್ಲ. ಈ ಕಾರಣದಿಂದ ಅದು ಪ್ರತಿವರ್ಷ ಯಾವಾಗಲೂ ಯಜ್ಞಗಳನ್ನು ಅರ್ಪಿಸುವುದಕ್ಕೆ ಬರುವವರನ್ನು ಮೋಶೆಯ ನಿಯಮವು ಎಂದಿಗೂ ಪರಿಪೂರ್ಣತೆಗೆ ತರಲಾರದು.
ಇಬ್ರಿಯರಿಗೆ 10 : 2 (OCVKN)
ಒಂದು ವೇಳೆ ತಂದಿದ್ದ ಪಕ್ಷದಲ್ಲಿ ಆ ಯಜ್ಞಗಳ ಸಮರ್ಪಣೆಯು ನಿಂತು ಹೋಗುತ್ತಿತ್ತಲ್ಲಾ. ಏಕೆಂದರೆ ಆರಾಧನೆ ಮಾಡುವವರು ಒಂದು ಸಾರಿ ಪಾಪದಿಂದ ಶುದ್ಧೀಕರಣ ಹೊಂದಿದ ಮೇಲೆ ಅವರಿಗೆ ಎಂದಿಗೂ ಪಾಪಗಳ ಮನಸ್ಸಾಕ್ಷಿ ಇರುತ್ತಿರಲಿಲ್ಲ.
ಇಬ್ರಿಯರಿಗೆ 10 : 3 (OCVKN)
ಆ ಯಜ್ಞಗಳು ಪ್ರತಿವರ್ಷವೂ ಪಾಪಗಳ ಜ್ಞಾಪಕವನ್ನು ಉಂಟುಮಾಡುತ್ತಿತ್ತು.
ಇಬ್ರಿಯರಿಗೆ 10 : 4 (OCVKN)
ಏಕೆಂದರೆ ಹೋರಿಗಳ ಮತ್ತು ಹೋತಗಳ ರಕ್ತವು ಪಾಪಗಳನ್ನು ತೆಗೆದುಹಾಕುವುದು ಅಸಾಧ್ಯ.
ಇಬ್ರಿಯರಿಗೆ 10 : 5 (OCVKN)
ಆದ್ದರಿಂದ ಕ್ರಿಸ್ತ ಯೇಸು ಭೂಲೋಕದೊಳಗೆ ಬಂದಾಗ, “ಯಜ್ಞ ಮತ್ತು ಅರ್ಪಣೆಯನ್ನು ನೀವು ಇಷ್ಟಪಡಲಿಲ್ಲ, ಆದರೆ ನನಗೆ ದೇಹವನ್ನು ಸಿದ್ಧಮಾಡಿ ಕೊಟ್ಟಿರುವೆ;
ಇಬ್ರಿಯರಿಗೆ 10 : 6 (OCVKN)
ದಹನಬಲಿಗಳಲ್ಲಿಯೂ ಪಾಪಪರಿಹಾರ ಬಲಿಗಳಲ್ಲಿಯೂ ನೀನು ಸಂತೋಷಪಡುವುದಿಲ್ಲ.
ಇಬ್ರಿಯರಿಗೆ 10 : 7 (OCVKN)
ಆಗ ನಾನು ಹೀಗೆಂದೆನು, ‘ಓ, ದೇವರೇ, ಪವಿತ್ರ ವೇದದ ಸುರುಳಿಯಲ್ಲಿ ನನ್ನನ್ನು ಕುರಿತು ಬರೆದಿರುವಂತೆ ನಾನು ನಿನ್ನ ಚಿತ್ತವನ್ನು ನೆರವೇರಿಸುವುದಕ್ಕೆ ಬಂದಿದ್ದೇನೆ.’ ”* ಕೀರ್ತನೆ 40:6-8
ಇಬ್ರಿಯರಿಗೆ 10 : 8 (OCVKN)
8 ಮೋಶೆಯ ನಿಯಮದ ಪ್ರಕಾರವಾಗಿ ಅರ್ಪಿಸಲಾಗುತ್ತಿದ್ದಂತೆಯೇ, “ಯಜ್ಞವೂ ಅರ್ಪಣೆಯೂ ದಹನಬಲಿಗಳೂ ಪಾಪ ಪರಿಹಾರದ ಬಲಿಯೂ ನಿಮಗೆ ಇಷ್ಟವಾಗಿರಲಿಲ್ಲ. ಅವುಗಳಲ್ಲಿ ನಿಮಗೆ ಸಂತೋಷವಿರಲಿಲ್ಲ,” ಎಂದು ಮೊದಲು ಅವರು ಹೇಳಿ,
ಇಬ್ರಿಯರಿಗೆ 10 : 9 (OCVKN)
ತರುವಾಯ, “ಇಗೋ, ದೇವರೇ, ನಿಮ್ಮ ಚಿತ್ತವನ್ನು ನೆರವೇರಿಸಲು ಬಂದಿದ್ದೇನೆ!” ಎಂದು ಹೇಳಿದ್ದಾರೆ. ಹೀಗೆ ಅವರು ಎರಡನೆಯದನ್ನು ಸ್ಥಾಪಿಸುವುದಕ್ಕಾಗಿ ಮೊದಲನೆಯದನ್ನು ರದ್ದು ಮಾಡಿದ್ದಾರೆ.
ಇಬ್ರಿಯರಿಗೆ 10 : 10 (OCVKN)
ಹೀಗೆ ಒಂದೇ ಸಾರಿ ಎಲ್ಲಾ ಕಾಲಕ್ಕೂ ಕ್ರಿಸ್ತ ಯೇಸು ತಮ್ಮ ದೇಹವನ್ನು ಸಮರ್ಪಿಸಿದ್ದರ ಮೂಲಕ ದೇವರ ಚಿತ್ತವನ್ನು ನೆರವೇರಿಸಿ, ನಮ್ಮನ್ನು ಶುದ್ಧರನ್ನಾಗಿ ಮಾಡಿದ್ದಾರೆ.
ಇಬ್ರಿಯರಿಗೆ 10 : 11 (OCVKN)
ಇದಲ್ಲದೆ ಪ್ರತಿ ಯಾಜಕನು ಅನುದಿನವೂ ಸೇವೆಮಾಡುತ್ತಾ ನಿಂತಿರುವನು. ಆದರೆ ಎಂದಿಗೂ ಪಾಪಗಳನ್ನು ತೆಗೆದುಹಾಕಲಾರದಂಥ ಯಜ್ಞಗಳನ್ನು ಪದೇಪದೇ ಅರ್ಪಿಸುತ್ತಿದ್ದನು.
ಇಬ್ರಿಯರಿಗೆ 10 : 12 (OCVKN)
ಕ್ರಿಸ್ತ ಯೇಸುವು ಪಾಪಗಳಿಗೋಸ್ಕರ ನಿರಂತರವಾದ ಒಂದೇ ಯಜ್ಞವನ್ನು ಅರ್ಪಿಸಿದ ಮೇಲೆ ದೇವರ ಬಲಗಡೆಯಲ್ಲಿ ಕುಳಿತುಕೊಂಡರು.
ಇಬ್ರಿಯರಿಗೆ 10 : 13 (OCVKN)
ಅಂದಿನಿಂದ ತಮ್ಮ ವಿರೋಧಿಗಳನ್ನು ತಮ್ಮ ಪಾದಪೀಠವಾಗಿ ಮಾಡಿಕೊಳ್ಳುವ ತನಕ ಕ್ರಿಸ್ತ ಯೇಸು ಕಾಯುತ್ತಿರುವರು.
ಇಬ್ರಿಯರಿಗೆ 10 : 14 (OCVKN)
ಏಕೆಂದರೆ ಕ್ರಿಸ್ತ ಯೇಸುವು ಒಂದೇ ಬಲಿ ಅರ್ಪಣೆಯಿಂದ ಪವಿತ್ರವಾಗುವವರನ್ನು ನಿರಂತರ ಪರಿಪೂರ್ಣರನ್ನಾಗಿ ಮಾಡಿದ್ದಾರೆ.
ಇಬ್ರಿಯರಿಗೆ 10 : 15 (OCVKN)
ಇಬ್ರಿಯರಿಗೆ 10 : 16 (OCVKN)
ಪವಿತ್ರಾತ್ಮ ದೇವರು ಸಹ ನಿಮಗೆ ಸಾಕ್ಷಿ ಕೊಡುವವರಾಗಿ, “ಆ ದಿನಗಳ ತರುವಾಯ, ನಾನು ಅವರ ಸಂಗಡ ಮಾಡಿಕೊಳ್ಳುವ ಒಡಂಬಡಿಕೆಯು ಹೀಗಿರುವುದು: ನಾನು ನನ್ನ ನಿಯಮಗಳನ್ನು ಅವರ ಹೃದಯಗಳಲ್ಲಿ ಇಡುವೆನು. ಅವರ ಮನಸ್ಸಿನಲ್ಲಿ ಅವುಗಳನ್ನು ಬರೆಯುವೆನು, ಎಂದು ಕರ್ತದೇವರು ಹೇಳುತ್ತಾರೆ.” ಯೆರೆ 31:33
ಇಬ್ರಿಯರಿಗೆ 10 : 17 (OCVKN)
17 ತರುವಾಯ ಅವರು, “ನಾನು ಅವರ ಪಾಪಗಳನ್ನೂ ಅಧರ್ಮಗಳನ್ನೂ ಇನ್ನೆಂದಿಗೂ ನನ್ನ ನೆನಪಿಗೆ ತಂದುಕೊಳ್ಳುವುದಿಲ್ಲ!” ಯೆರೆ 31:34 ಎಂದು ಹೇಳುತ್ತಾರೆ.
ಇಬ್ರಿಯರಿಗೆ 10 : 18 (OCVKN)
18 ಆದ್ದರಿಂದ, ಈಗ ಕ್ಷಮಾಪಣೆಯಾದ ಬಳಿಕ ಪಾಪ ಪರಿಹಾರದ ಬಲಿಯ ಅವಶ್ಯಕತೆ ಇಲ್ಲ.
ಇಬ್ರಿಯರಿಗೆ 10 : 19 (OCVKN)
ವಿಶ್ವಾಸದಲ್ಲಿರಲು ಕರೆ ಆದ್ದರಿಂದ ಪ್ರಿಯರೇ, ಯೇಸುವಿನ ರಕ್ತದಿಂದ ಅವರ ದೇಹವೆಂಬ ಪರದೆಯ ಮೂಲಕ ನಮಗೆ ತೆರೆಯಲಾದ
ಇಬ್ರಿಯರಿಗೆ 10 : 20 (OCVKN)
ಹೊಸ ಹಾಗೂ ಸಜೀವವಾದ ಮಾರ್ಗವಿರುವುದರಿಂದ ಅತಿಪರಿಶುದ್ಧವಾದ ಸ್ಥಳವನ್ನು ಪ್ರವೇಶಿಸಲು ಭರವಸೆಯಿದೆ.
ಇಬ್ರಿಯರಿಗೆ 10 : 21 (OCVKN)
ದೇವರ ಮನೆಯ ಮೇಲೆ ಮಹಾಯಾಜಕನು ನಮಗಿರುವುದರಿಂದ
ಇಬ್ರಿಯರಿಗೆ 10 : 22 (OCVKN)
ಆದಕಾರಣ ಅಪರಾಧ ಮನಸ್ಸಾಕ್ಷಿಯೆಂದು ನಮ್ಮ ಮನಸ್ಸು ನಮಗೆ ಸಾಕ್ಷಿಹೇಳದಂತೆ ನಾವು ಹೃದಯವನ್ನು ಪ್ರೋಕ್ಷಿಸಿಕೊಂಡು ದೇಹವನ್ನು ಶುದ್ಧ ನೀರಿನಿಂದ ತೊಳೆದುಕೊಂಡು ಪರಿಪೂರ್ಣವಾದ ನಂಬಿಕೆಯುಳ್ಳವರಾಗಿಯೂ ಯಥಾರ್ಥ ಹೃದಯವುಳ್ಳವರಾಗಿಯೂ ದೇವರ ಸಮೀಪಕ್ಕೆ ಬರೋಣ.
ಇಬ್ರಿಯರಿಗೆ 10 : 23 (OCVKN)
ನಾವು ನಮ್ಮ ನಿರೀಕ್ಷೆಯ ಅರಿಕೆಯನ್ನು ಚಂಚಲರಾಗದೆ ಬಿಗಿಯಾಗಿ ಹಿಡಿಯೋಣ. ಏಕೆಂದರೆ ವಾಗ್ದಾನ ಮಾಡಿದವರು ನಂಬಿಗಸ್ತರು.
ಇಬ್ರಿಯರಿಗೆ 10 : 24 (OCVKN)
ನಾವು ಒಬ್ಬರನ್ನೊಬ್ಬರು ಪ್ರೀತಿಸುವುದಕ್ಕಾಗಿಯೂ ಸತ್ಕಾರ್ಯ ಮಾಡುವುದಕ್ಕಾಗಿಯೂ ಹೇಗೆ ಒಬ್ಬರನ್ನೊಬ್ಬರು ಪ್ರೋತ್ಸಾಹಿಸಬೇಕೆಂದು ಯೋಚಿಸೋಣ.
ಇಬ್ರಿಯರಿಗೆ 10 : 25 (OCVKN)
ಸಭೆಯಾಗಿ ಸೇರುವುದನ್ನು ಕೆಲವರಿಗೆ ರೂಢಿಯಾಗಿ ಬಿಟ್ಟಂತೆ, ನಾವು ಹಾಗೆ ಮಾಡದಿರೋಣ. ಕರ್ತ ಯೇಸುವಿನ ಪ್ರತ್ಯಕ್ಷತೆಯ ದಿನವು ಸಮೀಪಿಸುತ್ತಾ ಬರುತ್ತದೆ ಎಂದು ನೀವು ತಿಳಿದಿರುವುದರಿಂದ ಒಬ್ಬರನ್ನೊಬ್ಬರು ಪ್ರೋತ್ಸಾಹಗೊಳಿಸುವುದನ್ನು ಇನ್ನೂ ಹೆಚ್ಚಾಗಿ ಮಾಡಿರಿ.
ಇಬ್ರಿಯರಿಗೆ 10 : 26 (OCVKN)
ಏಕೆಂದರೆ, ನಾವು ಸತ್ಯದ ಅರಿವನ್ನು ಹೊಂದಿದ ಮೇಲೆ ಬೇಕೆಂದು ಪಾಪ ಮಾಡುತ್ತಾ ಇದ್ದರೆ, ಪಾಪಗಳಿಗಾಗಿ ಇನ್ನಾವ ಯಜ್ಞವೂ ಉಳಿದಿರುವುದಿಲ್ಲ.
ಇಬ್ರಿಯರಿಗೆ 10 : 27 (OCVKN)
ಆದರೆ ಖಂಡಿತವಾಗಿ ಎದುರು ನೋಡತಕ್ಕ ಭಯಂಕರವಾದ ನ್ಯಾಯತೀರ್ಪು ವಿರೋಧಿಗಳನ್ನು ದಹಿಸುವ ಕೋಪಾಗ್ನಿಯೂ ಇರುವುವು.
ಇಬ್ರಿಯರಿಗೆ 10 : 28 (OCVKN)
ಮೋಶೆಯ ನಿಯಮವನ್ನು ಅಸಡ್ಡೆ ಮಾಡಿದವನಿಗೆ ಇಬ್ಬರು ಇಲ್ಲವೆ ಮೂವರು ಸಾಕ್ಷಿಗಳಿಂದ ಕರುಣೆಯಿಲ್ಲದೆ ಮರಣದಂಡನೆಯಾಗುತ್ತಿತ್ತು.
ಇಬ್ರಿಯರಿಗೆ 10 : 29 (OCVKN)
ಯಾವನು ದೇವಪುತ್ರರನ್ನೇ ತುಳಿದು ತನ್ನನ್ನು ಶುದ್ಧೀಕರಿಸಿದ ಒಡಂಬಡಿಕೆಯ ರಕ್ತವನ್ನು ಅಶುದ್ಧವೆಂದೆಣಿಸಿ ಕೃಪೆಯ ಪವಿತ್ರಾತ್ಮ ದೇವರನ್ನು ತಿರಸ್ಕಾರ ಮಾಡಿದ್ದಾನೋ, ಅವನು ಇನ್ನೂ ಎಷ್ಟೋ ಕ್ರೂರವಾದ ದಂಡನೆಗೆ ಪಾತ್ರನಾಗುವನೆಂಬುದನ್ನು ಯೋಚಿಸಿರಿ.
ಇಬ್ರಿಯರಿಗೆ 10 : 30 (OCVKN)
ಏಕೆಂದರೆ, “ಮುಯ್ಯಿ ತೀರಿಸುವುದು ನನಗೆ ಸಂಬಂಧಪಟ್ಟದ್ದು, ನಾನೇ ಪ್ರತಿಫಲವನ್ನು ಕೊಡುವೆನು,”§ ಧರ್ಮೋ 32:35 ಎಂದು ಹೇಳಿದ ಕರ್ತದೇವರನ್ನು ನಾವು ಬಲ್ಲೆವು. ಇದಲ್ಲದೆ, “ಕರ್ತದೇವರು ತಮ್ಮ ಜನರಿಗೆ ನ್ಯಾಯತೀರಿಸುವರು,” * ಧರ್ಮೋ 32:36; ಕೀರ್ತನೆ 135:14 ಎಂದೂ ಹೇಳಲಾಗಿದೆ.
ಇಬ್ರಿಯರಿಗೆ 10 : 31 (OCVKN)
ಸಜೀವ ದೇವರ ಕೈಯಲ್ಲಿ ಬೀಳುವುದು ಭಯಂಕರವಾದದ್ದು.
ಇಬ್ರಿಯರಿಗೆ 10 : 32 (OCVKN)
ಆದರೆ ನೀವು ಬೆಳಕನ್ನು ಹೊಂದಿದ ಮೇಲೆ ಬಾಧೆಗಳ ಬಹು ಹೋರಾಟವನ್ನು ಸಹಿಸಿಕೊಂಡ ಹಿಂದಿನ ದಿನಗಳನ್ನು ನೆನಪುಮಾಡಿಕೊಳ್ಳಿರಿ.
ಇಬ್ರಿಯರಿಗೆ 10 : 33 (OCVKN)
ಕೆಲವು ಸಾರಿ ನೀವು ನಿಂದೆಗಳನ್ನೂ ಉಪದ್ರವಗಳನ್ನೂ ಅನುಭವಿಸಿ ಬಹಿರಂಗ ಹಾಸ್ಯಕ್ಕೆ ಗುರಿಯಾದಿರಿ. ಕೆಲವು ಸಾರಿ ಅಂಥವುಗಳನ್ನು ಅನುಭವಿಸುವವರ ಭಾಗಿಗಳಾದಿರಿ.
ಇಬ್ರಿಯರಿಗೆ 10 : 34 (OCVKN)
ನೀವು ಸೆರೆಯವರಿಗೆ ಅನುತಾಪ ತೋರಿಸಿ, ನಿಮಗೋಸ್ಕರವಾಗಿ ಸ್ಥಿರವಾದ ಉತ್ತಮ ಆಸ್ತಿಯಿದೆ ಎಂದು ತಿಳಿದು, ನಿಮ್ಮ ಆಸ್ತಿ ಸುಲಿಗೆಯಾದಾಗ ಸಂತೋಷವಾಗಿ ಬಿಟ್ಟುಕೊಟ್ಟಿದ್ದೀರಿ.
ಇಬ್ರಿಯರಿಗೆ 10 : 35 (OCVKN)
ಮಹಾ ಪ್ರತಿಫಲ ನಿಮಗಿರುವುದರಿಂದ ನಿಮ್ಮ ಧೈರ್ಯವನ್ನು ಕಳೆದುಕೊಳ್ಳಬೇಡಿರಿ.
ಇಬ್ರಿಯರಿಗೆ 10 : 36 (OCVKN)
ನೀವು ದೇವರ ಚಿತ್ತವನ್ನು ನೆರವೇರಿಸಿದ ಮೇಲೆ ಅವರು ಮಾಡಿದ ವಾಗ್ದಾನವನ್ನು ಹೊಂದುವಂತೆ ನಿಮಗೆ ತಾಳ್ಮೆಯು ಅವಶ್ಯವಾಗಿದೆ:
ಇಬ್ರಿಯರಿಗೆ 10 : 37 (OCVKN)
ಏಕೆಂದರೆ, “ಇನ್ನು ಸ್ವಲ್ಪ ಸಮಯದಲ್ಲಿಯೇ, ಬರಲಿರುವ ಒಬ್ಬರು ಬಂದೇ ಬರುವರು. ಅವರು ತಡಮಾಡುವುದಿಲ್ಲ.” ಯೆಶಾಯ 26:20; ಹಬ 2:3
ಇಬ್ರಿಯರಿಗೆ 10 : 38 (OCVKN)
38 ಆದರೆ, “ನನ್ನ ನೀತಿವಂತನು ನಂಬಿಕೆಯಿಂದಲೇ ಬದುಕುವನು, ಅವನು ಹಿಂಜರಿದರೆ, ಅವನಲ್ಲಿ ನನಗೆ ಸಂತೋಷವಿರುವುದಿಲ್ಲ.” ಹಬ 2:4
ಇಬ್ರಿಯರಿಗೆ 10 : 39 (OCVKN)
39 ನಾವಾದರೋ ಹಿಂಜರಿದು ನಾಶವಾಗುವವರಲ್ಲ, ನಂಬುವವರಾಗಿ ಆ ರಕ್ಷಣೆಯನ್ನು ಹೊಂದುವವರಾಗಿದ್ದೇವೆ.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35 36 37 38 39