ಆದಿಕಾಂಡ 4 : 1 (OCVKN)
ಕಾಯಿನ ಮತ್ತು ಹೇಬೆಲ ಆದಾಮನು ತನ್ನ ಹೆಂಡತಿಯಾದ ಹವ್ವಳನ್ನು ಕೂಡಲು, ಆಕೆಯು ಗರ್ಭಿಣಿಯಾಗಿ, ಕಾಯಿನನನ್ನು ಹೆತ್ತು, “ನಾನು ಯೆಹೋವ ದೇವರ ಅನುಗ್ರಹದಿಂದ ಗಂಡು ಮಗುವನ್ನು ಪಡೆದಿದ್ದೇನೆ,” ಎಂದು ಹೇಳಿದಳು.
ಆದಿಕಾಂಡ 4 : 2 (OCVKN)
ಅನಂತರ ಆಕೆಯು ಅವನ ತಮ್ಮನಾದ ಹೇಬೆಲನನ್ನು ಹೆತ್ತಳು. ಹೇಬೆಲನು ಕುರಿ ಕಾಯುವವನಾದನು ಮತ್ತು ಕಾಯಿನನು ವ್ಯವಸಾಯ ಮಾಡುವವನಾದನು.
ಆದಿಕಾಂಡ 4 : 3 (OCVKN)
ಸ್ವಲ್ಪ ಕಾಲದ ತರುವಾಯ, ಕಾಯಿನನು ಹೊಲದ ಬೆಳೆಯಲ್ಲಿ ಕೆಲವನ್ನು ತಂದು, ಯೆಹೋವ ದೇವರಿಗೆ ಕಾಣಿಕೆಯಾಗಿ ಸಮರ್ಪಿಸಿದನು.
ಆದಿಕಾಂಡ 4 : 4 (OCVKN)
ಹೇಬೆಲನು ಸಹ ತನ್ನ ಹಿಂಡಿನಿಂದ ಚೊಚ್ಚಲ ಕುರಿಗಳನ್ನೂ ಅವುಗಳ ಕೊಬ್ಬನ್ನೂ ತಂದನು. ಯೆಹೋವ ದೇವರು ಹೇಬೆಲನನ್ನೂ ಅವನ ಕಾಣಿಕೆಯನ್ನೂ ಮೆಚ್ಚಿಕೊಂಡರು.
ಆದಿಕಾಂಡ 4 : 5 (OCVKN)
ಆದರೆ ಕಾಯಿನನನ್ನೂ ಅವನ ಕಾಣಿಕೆಯನ್ನೂ ದೇವರು ಮೆಚ್ಚಲಿಲ್ಲ. ಆದ್ದರಿಂದ ಕಾಯಿನನು ಬಹು ಕೋಪಗೊಂಡನು. ಅವನ ಮುಖವು ಬಾಡಿತು.
ಆದಿಕಾಂಡ 4 : 6 (OCVKN)
ಆಗ ಯೆಹೋವ ದೇವರು ಕಾಯಿನನಿಗೆ, “ನೀನು ಕೋಪಗೊಂಡಿದ್ದೇಕೆ? ಏಕೆ ನಿನ್ನ ಮುಖವು ಬಾಡಿದೆ?
ಆದಿಕಾಂಡ 4 : 7 (OCVKN)
ನೀನು ಒಳ್ಳೆಯದನ್ನು ಮಾಡಿದರೆ, ನೀನು ಸ್ವೀಕಾರವಾಗುತ್ತಿದ್ದೆ ಅಲ್ಲವೇ? ನೀನು ಒಳ್ಳೆಯದನ್ನು ಮಾಡದೆ ಹೋದರೆ, ಬಾಗಿಲಲ್ಲಿ ಪಾಪವು ಹೊಂಚಿಕೊಂಡಿರುವುದು ಮತ್ತು ಅದು ನಿನ್ನನ್ನು ನುಂಗಲು ಬಯಸುತ್ತದೆ. ಆದರೂ ನೀನು ಅದರ ಮೇಲೆ ಅಧಿಕಾರ ಮಾಡಬೇಕು,” ಎಂದು ಹೇಳಿದರು.
ಆದಿಕಾಂಡ 4 : 8 (OCVKN)
ಆದಿಕಾಂಡ 4 : 9 (OCVKN)
ಅನಂತರ ಕಾಯಿನನು, “ಅಡವಿಗೆ ಹೋಗೋಣ ಬಾ,” ಎಂದು ತನ್ನ ತಮ್ಮನಿಗೆ ಹೇಳಿದನು. ಅವರು ಅಲ್ಲಿ ಬಂದಾಗ ಕಾಯಿನನು ತನ್ನ ತಮ್ಮ ಹೇಬೆಲನ ಮೇಲೆ ದಾಳಿಮಾಡಿ, ಅವನನ್ನು ಕೊಂದುಹಾಕಿದನು.
ಆದಿಕಾಂಡ 4 : 10 (OCVKN)
ಯೆಹೋವ ದೇವರು ಕಾಯಿನನನ್ನು, “ನಿನ್ನ ತಮ್ಮ ಹೇಬೆಲನು ಎಲ್ಲಿ?” ಎಂದು ಕೇಳಲು, ಅವನು, “ನಾನರಿಯೆ. ನಾನು ನನ್ನ ತಮ್ಮನನ್ನು ಕಾಯುವವನೋ?” ಎಂದು ಉತ್ತರಕೊಟ್ಟನು. ಅದಕ್ಕೆ ಯೆಹೋವ ದೇವರು, “ನೀನು ಏನು ಮಾಡಿದೆ? ನಿನ್ನ ತಮ್ಮನ ರಕ್ತವು ಭೂಮಿಯಿಂದ ನನ್ನನ್ನು ಕೂಗುತ್ತಿದೆ.
ಆದಿಕಾಂಡ 4 : 11 (OCVKN)
ನೀನು ಈಗ ಶಾಪಗ್ರಸ್ತನಾಗಿದ್ದಿ. ನೀನು ಸುರಿಸಿದ ನಿನ್ನ ತಮ್ಮನ ರಕ್ತವನ್ನು ಸ್ವೀಕರಿಸಲು ಬಾಯಿತೆರೆದಿರುವ ಭೂಮಿಯಿಂದ ತಿರಸ್ಕಾರವಾಗಿದ್ದಿ.
ಆದಿಕಾಂಡ 4 : 12 (OCVKN)
ನೀನು ಭೂಮಿಯನ್ನು ವ್ಯವಸಾಯ ಮಾಡಿದರೂ ಅದು ಇನ್ನು ಮುಂದೆ ಫಲಿಸುವುದಿಲ್ಲ. ನೀನು ಭೂಲೋಕದಲ್ಲಿ ಅಲೆಮಾರಿಯಾಗಿ ತಿರುಗುವವನು ಆಗಿರುವೆ,” ಎಂದರು.
ಆದಿಕಾಂಡ 4 : 13 (OCVKN)
ಆಗ ಕಾಯಿನನು ಯೆಹೋವ ದೇವರಿಗೆ, “ನನ್ನ ಶಿಕ್ಷೆಯು ತಾಳಲಾರದಷ್ಟು ದೊಡ್ಡದಾಗಿದೆ.
ಆದಿಕಾಂಡ 4 : 14 (OCVKN)
ಇಗೋ, ನೀವು ಈ ದಿನ ನನ್ನನ್ನು ಸ್ವದೇಶದಿಂದ ಓಡಿಸುತ್ತಿದ್ದೀರಲ್ಲಾ! ನಿಮ್ಮ ಸಮ್ಮುಖದಿಂದ ನಾನು ಮರೆಯಾಗಿರಬೇಕಾಯಿತು. ಭೂಮಿಯಲ್ಲಿ ಅಲೆಮಾರಿಯಾಗಿರಬೇಕು. ಇದಲ್ಲದೆ ನನ್ನನ್ನು ಕಂಡವರು ಕೊಲ್ಲುವರು,” ಎಂದನು.
ಆದಿಕಾಂಡ 4 : 15 (OCVKN)
ಆದ್ದರಿಂದ ಯೆಹೋವ ದೇವರು ಅವನಿಗೆ, “ಹಾಗಲ್ಲ, ಕಾಯಿನನನ್ನು ಕೊಲ್ಲುವವನ ಮೇಲೆ ಏಳರಷ್ಟು ಪ್ರತೀಕಾರವಿರುವುದು,” ಎಂದು ಹೇಳಿದರು. ಕಾಯಿನನನ್ನು ಕಂಡವರು ಕೊಲ್ಲದ ಹಾಗೆ ಯೆಹೋವ ದೇವರು ಅವನ ಮೇಲೆ ಒಂದು ಗುರುತನ್ನು ಇಟ್ಟರು.
ಆದಿಕಾಂಡ 4 : 16 (OCVKN)
ಆಗ ಕಾಯಿನನು ಯೆಹೋವ ದೇವರ ಸನ್ನಿಧಿಯಿಂದ ಹೊರಟುಹೋಗಿ, ಏದೆನ್ ಸೀಮೆಗೆ ಪೂರ್ವದಲ್ಲಿದ್ದ ನೋದು* ಹೀಬ್ರೂ ಭಾಷೆಯಲ್ಲಿ ನೋದು ಎಂದರೆ ಅಲೆದಾಟ; ನೋಡಿರಿ ವಾಕ್ಯ 12 ಎಂಬ ದೇಶದಲ್ಲಿ ವಾಸಿಸಿದನು.
ಆದಿಕಾಂಡ 4 : 17 (OCVKN)
ಕಾಯಿನನು ತನ್ನ ಹೆಂಡತಿಯನ್ನು ಕೂಡಲು, ಅವಳು ಗರ್ಭಿಣಿಯಾಗಿ ಹನೋಕನನ್ನು ಪಡೆದಳು. ಇದಲ್ಲದೆ ಕಾಯಿನನು ಒಂದು ಊರನ್ನು ಕಟ್ಟಿ, ಅದಕ್ಕೆ ಹನೋಕ್ ಎಂದು ತನ್ನ ಮಗನ ಹೆಸರನ್ನಿಟ್ಟನು.
ಆದಿಕಾಂಡ 4 : 18 (OCVKN)
ಹನೋಕನಿಂದ ಈರಾದನು ಹುಟ್ಟಿದನು. ಈರಾದನಿಂದ ಮೆಹೂಯಾಯೇಲನು ಹುಟ್ಟಿದನು. ಮೆಹೂಯಾಯೇಲನಿಂದ ಮೆತೂಷಾಯೇಲನು ಹುಟ್ಟಿದನು. ಮೆತೂಷಾಯೇಲನಿಂದ ಲೆಮೆಕನು ಹುಟ್ಟಿದನು.
ಆದಿಕಾಂಡ 4 : 19 (OCVKN)
ಲೆಮೆಕನು ಇಬ್ಬರು ಸ್ತ್ರೀಯರನ್ನು ಮದುವೆಯಾದನು. ಒಬ್ಬಳ ಹೆಸರು ಆದಾ ಮತ್ತೊಬ್ಬಳ ಹೆಸರು ಚಿಲ್ಲಾ.
ಆದಿಕಾಂಡ 4 : 20 (OCVKN)
ಆದಾಳು ಯಾಬಾಲನನ್ನು ಹೆತ್ತಳು. ಪಶುಗಳನ್ನು ಸಾಕುತ್ತಾ, ಗುಡಾರಗಳಲ್ಲಿ ವಾಸಿಸುವವರೆಲ್ಲರ ಮೂಲಪುರುಷನು ಇವನೇ.
ಆದಿಕಾಂಡ 4 : 21 (OCVKN)
ಇವನ ತಮ್ಮನ ಹೆಸರು ಯೂಬಾಲನು. ಇವನು ಕಿನ್ನರಿ ಕೊಳಲುಗಳನ್ನು ನುಡಿಸುವವರ ಮೂಲಪುರುಷನು.
ಆದಿಕಾಂಡ 4 : 22 (OCVKN)
ಚಿಲ್ಲಾ ತೂಬಲ್ ಕಾಯಿನನನ್ನು ಪಡೆದಳು. ಅವನು ಕಂಚು ಮತ್ತು ಕಬ್ಬಿಣದ ಆಯುಧಗಳನ್ನು ಮಾಡುವವನಾಗಿದ್ದನು. ಅಥವಾ ಎಲ್ಲಾ ಕುಲುಮೆ ಕೆಲಸದವರೆಲ್ಲರಿಗೆ ಶಿಕ್ಷಣ ಕೊಡುವವನಾಗಿದ್ದನು ತೂಬಲ್ ಕಾಯಿನನ ತಂಗಿಯ ಹೆಸರು ನಯಮಾ.
ಆದಿಕಾಂಡ 4 : 23 (OCVKN)
ಲೆಮೆಕನು ತನ್ನ ಹೆಂಡತಿಯರಿಗೆ ಹೀಗೆಂದನು: “ಆದಾ, ಚಿಲ್ಲಾ, ನನ್ನ ಮಾತನ್ನು ಕೇಳಿರಿ. ಲೆಮೆಕನ ಹೆಂಡತಿಯರೇ, ನಾನು ಹೇಳುವುದನ್ನು ಗಮನಿಸಿರಿ. ನನಗೆ ಗಾಯಮಾಡಿದ ಒಬ್ಬ ಮನುಷ್ಯನನ್ನು ಕೊಂದೆನು. ನನ್ನನ್ನು ಹೊಡೆದ ಯುವಕನನ್ನು ಹತ ಮಾಡಿದೆನು.
ಆದಿಕಾಂಡ 4 : 24 (OCVKN)
ಕಾಯಿನನನ್ನು ಕೊಂದವನಿಗೆ ಏಳರಷ್ಟು ಪ್ರತೀಕಾರವಾದರೆ, ಲೆಮೆಕನನ್ನು ಹೊಡೆಯುವವನಿಗೆ, ಎಪ್ಪತ್ತೇಳರಷ್ಟಾಗುವುದು.”
ಆದಿಕಾಂಡ 4 : 25 (OCVKN)
ಆದಾಮನು ತಿರುಗಿ ತನ್ನ ಹೆಂಡತಿಯನ್ನು ಕೂಡಲು, ಆಕೆ ಗಂಡು ಮಗುವನ್ನು ಹೆತ್ತು, “ಕಾಯಿನನು ಕೊಂದುಹಾಕಿದ ಹೇಬೆಲನಿಗೆ ಬದಲಾಗಿ, ದೇವರು ನನಗೆ ಬೇರೆ ಸಂತಾನವನ್ನು ನೇಮಿಸಿದನು,” ಎಂದು ಆ ಮಗುವಿಗೆ, ಸೇತ್ ಸೇತ್ ಬಹುಶಃ ಇದರ ಅರ್ಥ ಮಂಜೂರು ಎಂದು ಹೆಸರಿಟ್ಟಳು.
ಆದಿಕಾಂಡ 4 : 26 (OCVKN)
ಸೇತನಿಗೆ ಒಬ್ಬ ಮಗನು ಹುಟ್ಟಿದನು. ಅವನಿಗೆ ಎನೋಷ್ ಎಂದು ಹೆಸರಿಟ್ಟನು. ಆ ಕಾಲದಲ್ಲಿ ಜನರು, ಯೆಹೋವ ಎಂಬ ಹೆಸರನ್ನು ಆರಾಧಿಸುವುದಕ್ಕೆ ಪ್ರಾರಂಭಿಸಿದರು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26