ಆದಿಕಾಂಡ 39 : 1 (OCVKN)
ಯೋಸೇಫ ಮತ್ತು ಪೋಟೀಫರನ ಹೆಂಡತಿ
ಆದಿಕಾಂಡ 39 : 2 (OCVKN)
ಯೋಸೇಫನನ್ನು ಕರೆದುಕೊಂಡುಹೋದ ಇಷ್ಮಾಯೇಲರು ಈಜಿಪ್ಟಿಗೆ ಸೇರಿದಾಗ ಅವನನ್ನು ಈಜಿಪ್ಟಿನ ಪೋಟೀಫರ್ ಎಂಬವನಿಗೆ ಮಾರಿಬಿಟ್ಟರು. ಪೋಟೀಫರನು ಫರೋಹನ ಉದ್ಯೋಗಸ್ಥನೂ ಮೈಗಾವಲಿನ ದಳಪತಿಯೂ ಆಗಿದ್ದನು. ಯೆಹೋವ ದೇವರು ಯೋಸೇಫನ ಸಂಗಡ ಇದ್ದುದರಿಂದ, ಅವನು ಏಳಿಗೆಯಾಗಿ ಈಜಿಪ್ಟಿನವನಾದ ತನ್ನ ಯಜಮಾನನ ಮನೆಯಲ್ಲಿ ಇದ್ದನು.
ಆದಿಕಾಂಡ 39 : 3 (OCVKN)
ಯೆಹೋವ ದೇವರು ಅವನ ಸಂಗಡ ಇದ್ದಾನೆಂದೂ ಅವನು ಮಾಡಿದ್ದನ್ನೆಲ್ಲಾ ಯೆಹೋವ ದೇವರು ಅವನ ಕೈಯಿಂದ ಅಭಿವೃದ್ಧಿಮಾಡಿದನೆಂದೂ ಅವನ ಯಜಮಾನನಿಗೆ ತಿಳಿಯಿತು.
ಆದಿಕಾಂಡ 39 : 4 (OCVKN)
ಆದ್ದರಿಂದ ಯೋಸೇಫನು ಪೋಟೀಫರನ ದೃಷ್ಟಿಯಲ್ಲಿ ದಯೆಹೊಂದಿ ಅವನ ಸೇವೆ ಮಾಡಿದನು. ಪೋಟೀಫರನು ಅವನನ್ನು ತನ್ನ ಮನೆಯ ಮೇಲೆ ಮೇಲ್ವಿಚಾರಕನನ್ನಾಗಿ ಮಾಡಿ, ತನಗಿದ್ದದ್ದನ್ನೆಲ್ಲಾ ಅವನ ಕೈಗೆ ಒಪ್ಪಿಸಿದನು.
ಆದಿಕಾಂಡ 39 : 5 (OCVKN)
ಅವನನ್ನು ಮನೆಯಲ್ಲಿಯೂ, ತನಗಿದ್ದ ಎಲ್ಲದರ ಮೇಲೆಯೂ ಮೇಲ್ವಿಚಾರಕನನ್ನಾಗಿ ಮಾಡಿದಂದಿನಿಂದ ಯೆಹೋವ ದೇವರು ಆ ಈಜಿಪ್ಟಿನವನ ಮನೆಯನ್ನು ಯೋಸೇಫನಿಗಾಗಿ ಆಶೀರ್ವದಿಸಿದರು. ಮನೆಯಲ್ಲಿಯೂ ಹೊಲದಲ್ಲಿಯೂ ಅವನಿಗಿದ್ದ ಎಲ್ಲದರ ಮೇಲೆಯೂ ಯೆಹೋವ ದೇವರ ಆಶೀರ್ವಾದವಿತ್ತು.
ಆದಿಕಾಂಡ 39 : 6 (OCVKN)
ಹೀಗಿರುವುದರಿಂದ ಅವನು ತನಗಿದ್ದದ್ದನ್ನೆಲ್ಲಾ ಯೋಸೇಫನಿಗೆ ಒಪ್ಪಿಸಿ, ತನ್ನ ಊಟದ ವಿಷಯದಲ್ಲಿ ಹೊರತು ಬೇರೆ ಯಾವುದರ ವಿಷಯದಲ್ಲಿಯೂ ಚಿಂತಿಸದೆ ಇದ್ದನು. ಯೋಸೇಫನು ಸುರೂಪಿಯೂ ಸುಂದರನೂ ಆಗಿದ್ದನು.
ಆದಿಕಾಂಡ 39 : 7 (OCVKN)
ಸ್ವಲ್ಪ ಸಮಯದ ನಂತರ ಯೋಸೇಫನ ಯಜಮಾನನ ಹೆಂಡತಿಯು ಅವನ ಮೇಲೆ ಕಣ್ಣು ಹಾಕಿ, “ನನ್ನ ಸಂಗಡ ಮಲಗು,” ಎಂದಳು.
ಆದಿಕಾಂಡ 39 : 8 (OCVKN)
ಆದರೆ ಅವನು ಅದಕ್ಕೆ ಒಪ್ಪದೆ, ತನ್ನ ಯಜಮಾನನ ಹೆಂಡತಿಗೆ, “ನನ್ನ ಯಜಮಾನನು ತನ್ನ ಮನೆಯಲ್ಲಿರುವ ಯಾವುದರ ಬಗ್ಗೆಯೂ ಚಿಂತಿಸದೆ, ತನಗಿದ್ದದ್ದನ್ನೆಲ್ಲಾ ನನಗೆ ಒಪ್ಪಿಸಿದ್ದಾನೆ.
ಆದಿಕಾಂಡ 39 : 9 (OCVKN)
ಈ ಮನೆಯಲ್ಲಿ ನನಗಿಂತ ದೊಡ್ಡವನಾರೂ ಇಲ್ಲ. ನೀನು ಅವನ ಹೆಂಡತಿಯಾಗಿರುವುದರಿಂದ, ನಿನ್ನನ್ನು ಹೊರತುಪಡಿಸಿ ನನಗೆ ಮತ್ತೇನೂ ಮರೆಮಾಡಲಿಲ್ಲ. ಹಾಗಿರುವಲ್ಲಿ ನಾನು ಈ ಮಹಾ ದುಷ್ಕೃತ್ಯ ಮಾಡಿ, ದೇವರಿಗೆ ವಿರೋಧವಾಗಿ ಪಾಪ ಮಾಡುವುದು ಹೇಗೆ?” ಎಂದನು.
ಆದಿಕಾಂಡ 39 : 10 (OCVKN)
ಅವಳು ಪ್ರತಿದಿನ ಯೋಸೇಫನ ಸಂಗಡ ಮಾತನಾಡಿದರೂ, ಅವನು ಅವಳ ಕೂಡ ಮಲಗುವುದಕ್ಕಾಗಲಿ, ಅವಳ ಹತ್ತಿರ ಇರುವುದಕ್ಕಾಗಲಿ ಒಪ್ಪಲಿಲ್ಲ.
ಆದಿಕಾಂಡ 39 : 11 (OCVKN)
ಹೀಗಿರುವಲ್ಲಿ ಒಂದು ದಿನ ಅವನು ತನ್ನ ಕೆಲಸ ಮಾಡುವುದಕ್ಕೆ ಮನೆಯನ್ನು ಪ್ರವೇಶಿಸಿದಾಗ, ಮನೆಯ ಸೇವಕರಲ್ಲಿ ಒಬ್ಬರೂ ಇರಲಿಲ್ಲ.
ಆದಿಕಾಂಡ 39 : 12 (OCVKN)
ಆಗ ಆಕೆಯು ಅವನ ಬಟ್ಟೆಯನ್ನು ಹಿಡಿದುಕೊಂಡು, “ನನ್ನ ಸಂಗಡ ಮಲಗು,” ಎಂದಳು. ಆದರೆ ಅವನು ತನ್ನ ವಸ್ತ್ರವನ್ನು ಅವಳ ಕೈಯಲ್ಲಿ ಬಿಟ್ಟು ಹೊರಗೆ ಓಡಿಹೋದನು.
ಆದಿಕಾಂಡ 39 : 13 (OCVKN)
ಅವನು ತನ್ನ ವಸ್ತ್ರವನ್ನು ತನ್ನ ಕೈಯಲ್ಲಿ ಬಿಟ್ಟು ಬಿಟ್ಟಿದ್ದನ್ನೂ, ಹೊರಗೆ ಓಡಿ ಹೋದದ್ದನ್ನೂ ಅವಳು ಕಂಡು,
ಆದಿಕಾಂಡ 39 : 14 (OCVKN)
ತನ್ನ ಮನೆಯ ಸೇವಕರನ್ನು ಕರೆದು ಅವರಿಗೆ, “ನೋಡಿರಿ, ನಮ್ಮನ್ನು ಅವಮಾನ ಮಾಡುವುದಕ್ಕೆ ಈ ಹಿಬ್ರಿಯನು ನಮ್ಮಲ್ಲಿಗೆ ಬಂದಿದ್ದಾನೆ. ಅವನು ನನ್ನ ಮೇಲೆ ಅತ್ಯಾಚಾರಮಾಡುವುದಕ್ಕೆ ನನ್ನ ಹತ್ತಿರ ಬಂದನು. ಆಗ ನಾನು ಗಟ್ಟಿಯಾಗಿ ಕೂಗಿದೆನು.
ಆದಿಕಾಂಡ 39 : 15 (OCVKN)
ನಾನು ಜೋರಾಗಿ ಕೂಗಿದ್ದನ್ನು ಅವನು ಕೇಳಿ, ತನ್ನ ವಸ್ತ್ರವನ್ನು ನನ್ನ ಬಳಿಯಲ್ಲೇ ಬಿಟ್ಟು ಹೊರಗೆ ಓಡಿಹೋದನು,” ಎಂದಳು.
ಆದಿಕಾಂಡ 39 : 16 (OCVKN)
ತನ್ನ ಯಜಮಾನನು ಹೊರಗಿನಿಂದ ಬರುವವರೆಗೆ, ಆಕೆಯು ಅವನ ವಸ್ತ್ರವನ್ನು ತನ್ನ ಬಳಿಯಲ್ಲಿಯೇ ಇಟ್ಟುಕೊಂಡಳು.
ಆದಿಕಾಂಡ 39 : 17 (OCVKN)
ಅವನು ಬಂದಾಗ ಅವನಿಗೂ ಅದರಂತೆಯೇ ಹೇಳುತ್ತಾ, “ನೀನು ನಮ್ಮ ಬಳಿಗೆ ತಂದ ಹಿಬ್ರಿಯ ಸೇವಕನು ನನ್ನನ್ನು ಅವಮಾನ ಮಾಡುವುದಕ್ಕೆ ನನ್ನ ಬಳಿಗೆ ಬಂದನು.
ಆದಿಕಾಂಡ 39 : 18 (OCVKN)
ಆದರೆ ನಾನು ಜೋರಾಗಿ ಕೂಗಿಕೊಂಡಾಗ, ಅವನು ತನ್ನ ವಸ್ತ್ರವನ್ನು ನನ್ನ ಬಳಿಯಲ್ಲಿ ಬಿಟ್ಟು ಹೊರಗೆ ಓಡಿಹೋದನು,” ಎಂದಳು.
ಆದಿಕಾಂಡ 39 : 19 (OCVKN)
“ನಿನ್ನ ಸೇವಕನು ನನಗೆ ಹೀಗೆ ಮಾಡಿದ,” ಎಂದು ತನ್ನ ಹೆಂಡತಿ ಹೇಳಿದ್ದನ್ನು ಯಜಮಾನನು ಕೇಳಿ, ಅವನ ಕೋಪವೇರಿತು.
ಆದಿಕಾಂಡ 39 : 20 (OCVKN)
ಆಗ ಯೋಸೇಫನ ಯಜಮಾನನು ಅವನನ್ನು ಹಿಡಿದುಕೊಂಡು, ರಾಜನ ಕೈದಿಗಳನ್ನಿಡುವ ಸೆರೆಮನೆಯಲ್ಲಿ ಹಾಕಿದನು. ಯೋಸೇಫನು ಆ ಸೆರೆಮನೆಯಲ್ಲಿದ್ದನು.
ಆದಿಕಾಂಡ 39 : 21 (OCVKN)
ಆದರೆ ಯೆಹೋವ ದೇವರು ಯೋಸೇಫನ ಸಂಗಡ ಇದ್ದು, ಅವನ ಮೇಲೆ ಕರುಣೆಯಿಟ್ಟು, ಸೆರೆಮನೆಯ ಯಜಮಾನನು ಅವನ ಮೇಲೆ ದಯೆ ತೋರಿಸುವಂತೆ ಮಾಡಿದರು.
ಆದಿಕಾಂಡ 39 : 22 (OCVKN)
ಆದ್ದರಿಂದ ಸೆರೆಯ ಯಜಮಾನನು ಸೆರೆಮನೆಯಲ್ಲಿ ಬಂಧಿಸಿದ ಕೈದಿಗಳನ್ನೆಲ್ಲಾ ಯೋಸೇಫನಿಗೆ ಒಪ್ಪಿಸಿದನು. ಅಲ್ಲಿ ಮಾಡಬೇಕಾದದ್ದನ್ನೆಲ್ಲಾ ಯೋಸೇಫನೇ ಮಾಡಿಸಿದನು.
ಆದಿಕಾಂಡ 39 : 23 (OCVKN)
ಯೆಹೋವ ದೇವರು ಅವನ ಸಂಗಡ ಇದ್ದುದರಿಂದಲೂ ಅವನು ಮಾಡುವುದನ್ನು ಯೆಹೋವ ದೇವರು ಅಭಿವೃದ್ಧಿಮಾಡಿದ್ದರಿಂದಲೂ ಸೆರೆಯ ಯಜಮಾನನು ಅವನ ಕೈಗೆ ಒಪ್ಪಿಸಿದ ಯಾವುದಕ್ಕೂ ಚಿಂತೆ ಮಾಡದೆ ಇದ್ದನು.
❮
❯
1
2
3
4
5
6
7
8
9
10
11
12
13
14
15
16
17
18
19
20
21
22
23