ಆದಿಕಾಂಡ 31 : 1 (OCVKN)
ಲಾಬಾನನಿಂದ ಯಾಕೋಬನ ಪಲಾಯನ ಲಾಬಾನನ ಮಕ್ಕಳು, “ನಮ್ಮ ತಂದೆಗೆ ಇದ್ದವುಗಳನ್ನೆಲ್ಲಾ ಯಾಕೋಬನು ತೆಗೆದುಕೊಂಡು, ನಮ್ಮ ತಂದೆಗಿದ್ದವುಗಳಿಂದ ಈ ಘನತೆಯನ್ನೆಲ್ಲಾ ಪಡೆದಿದ್ದಾನೆ,” ಎಂದು ಹೇಳುವ ಮಾತುಗಳನ್ನು ಯಾಕೋಬನು ಕೇಳಿದನು.
ಆದಿಕಾಂಡ 31 : 2 (OCVKN)
ಇದಲ್ಲದೆ ಯಾಕೋಬನು ಲಾಬಾನನ ಮುಖವನ್ನು ನೋಡಿದಾಗ, ಅದು ತನ್ನ ಕಡೆಗೆ ಮೊದಲು ಇದ್ದ ಹಾಗೆ ಇರಲಿಲ್ಲ.
ಆದಿಕಾಂಡ 31 : 3 (OCVKN)
ಆದಿಕಾಂಡ 31 : 4 (OCVKN)
ಆಗ ಯೆಹೋವ ದೇವರು ಯಾಕೋಬನಿಗೆ, “ನಿನ್ನ ತಂದೆಗಳ ದೇಶಕ್ಕೂ, ನಿನ್ನ ಬಂಧುಗಳ ಬಳಿಗೂ ಹಿಂದಿರುಗಿ ಹೋಗು. ನಾನು ನಿನ್ನ ಸಂಗಡ ಇರುವೆನು,” ಎಂದರು. ಯಾಕೋಬನು ರಾಹೇಲಳನ್ನೂ, ಲೇಯಳನ್ನೂ ಹೊಲದಲ್ಲಿದ್ದ ತನ್ನ ಮಂದೆಯ ಬಳಿಗೆ ಕರೆಸಿದನು.
ಆದಿಕಾಂಡ 31 : 5 (OCVKN)
ಅವರಿಗೆ, “ನಿಮ್ಮ ತಂದೆಯ ಮುಖವು ಮೊದಲು ನನ್ನ ಕಡೆಗೆ ಇದ್ದ ಹಾಗೆ ಈಗ ಇಲ್ಲದಿರುವುದನ್ನು ನಾನು ನೋಡಿದ್ದೇನೆ. ಆದರೆ ನನ್ನ ತಂದೆಯ ದೇವರು ನನ್ನ ಕಡೆಗೆ ಇದ್ದಾರೆ.
ಆದಿಕಾಂಡ 31 : 6 (OCVKN)
ನಾನು ಪೂರ್ಣಬಲದಿಂದ ನಿಮ್ಮ ತಂದೆಯ ಸೇವೆ ಮಾಡಿದ್ದು ನಿಮಗೆ ತಿಳಿದಿದೆ.
ಆದಿಕಾಂಡ 31 : 7 (OCVKN)
ಆದರೆ ನಿಮ್ಮ ತಂದೆಯು ನನಗೆ ವಂಚನೆಮಾಡಿ, ನನ್ನ ಸಂಬಳವನ್ನು ಹತ್ತು ಸಾರಿ ಬದಲಾಯಿಸಿದನು. ಆದಾಗ್ಯೂ ದೇವರು ಅವನಿಂದ ನನಗೆ ಕೇಡು ಮಾಡಗೊಡಿಸಲಿಲ್ಲ.
ಆದಿಕಾಂಡ 31 : 8 (OCVKN)
ನಿಮ್ಮ ತಂದೆ ನನಗೆ, ‘ಚುಕ್ಕೆಯುಳ್ಳದ್ದು ನಿನಗೆ ಸಂಬಳವಾಗಿರಲಿ,’ ಅಂದಾಗ, ಮಂದೆಯೆಲ್ಲಾ ಚುಕ್ಕೆಯುಳ್ಳದ್ದನ್ನೇ ಈಯಿತು. ಅವನು, ‘ರೇಖೆಯುಳ್ಳದ್ದು ನಿನಗೆ ಸಂಬಳವಾಗಿರಲಿ,’ ಎಂದಾಗ, ಮಂದೆಯೆಲ್ಲಾ ರೇಖೆಯುಳ್ಳದ್ದನ್ನೇ ಈಯಿತು.
ಆದಿಕಾಂಡ 31 : 9 (OCVKN)
ಹೀಗೆ ದೇವರು ನಿಮ್ಮ ತಂದೆಯ ಪಶುಗಳನ್ನು ತೆಗೆದು, ನನಗೆ ಕೊಟ್ಟಿದ್ದಾರೆ.
ಆದಿಕಾಂಡ 31 : 10 (OCVKN)
“ಇದಲ್ಲದೆ ಕುರಿಗಳು ಸಂಗಮ ಮಾಡುವಾಗ, ಸ್ವಪ್ನದಲ್ಲಿ ನಾನು ನನ್ನ ಕಣ್ಣುಗಳನ್ನೆತ್ತಿ ನೋಡಲಾಗಿ, ಕುರಿಗಳ ಮೇಲೆ ಏರುವ ಟಗರುಗಳು ಚುಕ್ಕೆ, ಮಚ್ಚೆ, ರೇಖೆಗಳುಳ್ಳವುಗಳಾಗಿದ್ದವು.
ಆದಿಕಾಂಡ 31 : 11 (OCVKN)
ದೇವದೂತನು ಸ್ವಪ್ನದಲ್ಲಿ ನನಗೆ, ‘ಯಾಕೋಬನೇ’ ಎಂದನು. ಅದಕ್ಕೆ ನಾನು, ‘ಇಲ್ಲಿ ಇದ್ದೇನೆ,’ ಎಂದೆನು.
ಆದಿಕಾಂಡ 31 : 12 (OCVKN)
ಅವನು ನನಗೆ, ‘ನಿನ್ನ ಕಣ್ಣುಗಳನ್ನೆತ್ತಿ ಕುರಿಗಳನ್ನೇರುವ ಎಲ್ಲಾ ಟಗರುಗಳನ್ನು ನೋಡು. ಅವು ಚುಕ್ಕೆ, ಮಚ್ಚೆ, ರೇಖೆಯೂ ಉಳ್ಳವುಗಳಾಗಿವೆ. ಏಕೆಂದರೆ ಲಾಬಾನನು ನಿನಗೆ ಮಾಡಿದ್ದನ್ನೆಲ್ಲಾ ಕಂಡಿದ್ದೇನೆ.
ಆದಿಕಾಂಡ 31 : 13 (OCVKN)
ನೀನು ಸ್ತಂಭವನ್ನು ಅಭಿಷೇಕಿಸಿ, ನನಗೆ ಪ್ರಮಾಣ ಮಾಡಿದ ಬೇತೇಲಿನ ದೇವರು ನಾನೇ. ಈಗ ಎದ್ದು ಈ ದೇಶದಿಂದ ಹೊರಟು, ನಿನ್ನ ಬಂಧುಗಳ ದೇಶಕ್ಕೆ ಹಿಂದಿರುಗಿ ಹೋಗು,’ ಎಂದು ಹೇಳಿದ್ದಾರೆ,” ಎಂದನು.
ಆದಿಕಾಂಡ 31 : 14 (OCVKN)
ಆಗ ರಾಹೇಲಳು, ಲೇಯಳು ಅವನಿಗೆ, “ನಮ್ಮ ತಂದೆಯ ಮನೆಯಲ್ಲಿ ಇನ್ನೇನಾದರೂ ಭಾಗವೂ, ಬಾಧ್ಯತೆಯೂ ಇದೆಯೋ?
ಆದಿಕಾಂಡ 31 : 15 (OCVKN)
ಅವನು ನಮ್ಮನ್ನು ಹೊರಗಿನವರಂತೆ ಎಣಿಸಿದ್ದಾನಲ್ಲಾ. ಅವನು ನಮ್ಮನ್ನು ಮಾರಿ, ನಮ್ಮ ಹಣವನ್ನೂ ನುಂಗೇ ಬಿಟ್ಟನಲ್ಲಾ.
ಆದಿಕಾಂಡ 31 : 16 (OCVKN)
ಆದ್ದರಿಂದ ದೇವರು ನಮ್ಮ ತಂದೆಯಿಂದ ತೆಗೆದುಕೊಂಡ ಐಶ್ವರ್ಯವೆಲ್ಲಾ ನಮ್ಮದು, ನಮ್ಮ ಮಕ್ಕಳದು. ಹಾಗಾದರೆ ಈಗ ದೇವರು ನಿನಗೆ ಹೇಳಿದ್ದನ್ನೆಲ್ಲಾ ಮಾಡು,” ಎಂದರು.
ಆದಿಕಾಂಡ 31 : 17 (OCVKN)
ಆಗ ಯಾಕೋಬನು ಎದ್ದು ತನ್ನ ಮಕ್ಕಳನ್ನೂ, ತನ್ನ ಹೆಂಡತಿಯರನ್ನೂ ಒಂಟೆಗಳ ಮೇಲೆ ಹತ್ತಿಸಿ,
ಆದಿಕಾಂಡ 31 : 18 (OCVKN)
ತನ್ನ ಎಲ್ಲಾ ಪಶುಗಳನ್ನೂ, ತಾನು ಸಂಪಾದಿಸಿದ ಎಲ್ಲಾ ಸಂಪತ್ತನ್ನೂ, ಪದ್ದನ್ ಅರಾಮಿನಲ್ಲಿ ತಾನು ಸಂಪಾದಿಸಿದ ಪಶುಗಳನ್ನೂ ಕಾನಾನ್ ದೇಶದಲ್ಲಿದ್ದ ತನ್ನ ತಂದೆ ಇಸಾಕನ ಬಳಿಗೆ ತೆಗೆದುಕೊಂಡು ಹೊರಟನು.
ಆದಿಕಾಂಡ 31 : 19 (OCVKN)
ಲಾಬಾನನು ತನ್ನ ಕುರಿಗಳ ಉಣ್ಣೆ ಕತ್ತರಿಸುವುದಕ್ಕೆ ಹೋಗಿದ್ದನು. ಆಗ ರಾಹೇಲಳು ತನ್ನ ತಂದೆಯ ವಿಗ್ರಹಗಳನ್ನು ಕದ್ದುಕೊಂಡಳು.
ಆದಿಕಾಂಡ 31 : 20 (OCVKN)
ಆದರೆ ಯಾಕೋಬನು ತಾನು ಹೋಗುವುದನ್ನು ಅರಾಮ್ಯನಾದ ಲಾಬಾನನಿಗೆ ತಿಳಿಸದೆ ವಂಚಿಸಿ ಓಡಿಹೋದನು.
ಆದಿಕಾಂಡ 31 : 21 (OCVKN)
ಅವನು ತನಗಿದ್ದದ್ದನ್ನೆಲ್ಲಾ ತೆಗೆದುಕೊಂಡು ಓಡಿಹೋದನು. ಅವನು ಎದ್ದು ಗಿಲ್ಯಾದ್ ಪರ್ವತಕ್ಕೆ ಅಭಿಮುಖವಾಗಿ ಯೂಫ್ರೇಟೀಸ್ ನದಿಯನ್ನು ದಾಟಿದನು.
ಆದಿಕಾಂಡ 31 : 22 (OCVKN)
ಲಾಬಾನನು ಯಾಕೋಬನ ಬೆನ್ನಟ್ಟಿ ಬಂದದ್ದು ಯಾಕೋಬನು ಓಡಿಹೋದನೆಂದು ಮೂರನೆಯ ದಿವಸದಲ್ಲಿ ಲಾಬಾನನಿಗೆ ತಿಳಿಯಿತು.
ಆದಿಕಾಂಡ 31 : 23 (OCVKN)
ಆಗ ಅವನು ತನ್ನ ಬಂಧುಗಳನ್ನು ಕರೆದುಕೊಂಡು, ಅವನನ್ನು ಬೆನ್ನಟ್ಟಿ, ಏಳು ದಿನ ಪ್ರಯಾಣಮಾಡಿ, ಗಿಲ್ಯಾದ್ ಪರ್ವತದಲ್ಲಿ ಅವನನ್ನು ಸಂಧಿಸಿದನು.
ಆದಿಕಾಂಡ 31 : 24 (OCVKN)
ಆ ರಾತ್ರಿ ದೇವರು ಸ್ವಪ್ನದಲ್ಲಿ ಅರಾಮಿನವನಾದ ಲಾಬಾನನ ಬಳಿಗೆ ಬಂದು ಅವನಿಗೆ, “ನೀನು ಯಾಕೋಬನ ಸಂಗಡ ಒಳ್ಳೆಯದನ್ನಾಗಲಿ, ಕೆಟ್ಟದ್ದನ್ನಾಗಲಿ ಮಾತನಾಡದಂತೆ ಎಚ್ಚರಿಕೆಯಾಗಿರು,” ಎಂದರು.
ಆದಿಕಾಂಡ 31 : 25 (OCVKN)
ತರುವಾಯ ಲಾಬಾನನು ಯಾಕೋಬನನ್ನು ಸಂಧಿಸಿದಾಗ, ಯಾಕೋಬನು ಗಿಲ್ಯಾದ್ ಪರ್ವತದಲ್ಲಿ ತನ್ನ ಗುಡಾರವನ್ನು ಹಾಕಿಕೊಂಡಿದ್ದನು. ಲಾಬಾನನು ಸಹ ಅಲ್ಲಿಯೇ ಗುಡಾರವನ್ನು ಹಾಕಿಸಿದ್ದನು.
ಆದಿಕಾಂಡ 31 : 26 (OCVKN)
ಲಾಬಾನನು ಯಾಕೋಬನಿಗೆ, “ನೀನು ಏನು ಮಾಡಿದೆ? ನನಗೆ ತಿಳಿಸದೆ ಮೋಸಮಾಡಿದ್ದೀಯೆ ಮತ್ತು ನನ್ನ ಪುತ್ರಿಯರನ್ನು ಯುದ್ಧದಲ್ಲಿ ಸೆರೆಹಿಡಿದವರ ಹಾಗೆ ತೆಗೆದುಕೊಂಡು ಹೋದೆಯಲ್ಲಾ.
ಆದಿಕಾಂಡ 31 : 27 (OCVKN)
ಯಾಕೆ ನೀನು ಗುಪ್ತವಾಗಿ ಕಳ್ಳತನದಿಂದ ಓಡಿ ಹೋದೆ? ಏಕೆ ಮೋಸಮಾಡಿದೆ? ನನಗೆ ತಿಳಿಸಿದ್ದರೆ ಸಂತೋಷದಿಂದ ಹಾಡು, ತಾಳ, ವೀಣೆಗಳ ಸಂಗೀತದೊಂದಿಗೆ ನಿನ್ನನ್ನು ಕಳುಹಿಸುತ್ತಿದ್ದೆನು.
ಆದಿಕಾಂಡ 31 : 28 (OCVKN)
ಆದರೆ ನೀನು ನನ್ನ ಮೊಮ್ಮಕ್ಕಳಿಗೂ, ನನ್ನ ಹೆಣ್ಣು ಮಕ್ಕಳಿಗೂ ಮುದ್ದು ಕೊಡುವುದಕ್ಕೂ ಬಿಡಲಿಲ್ಲ. ನೀನು ಮಾಡಿದ್ದು ಬುದ್ಧಿಹೀನ ಕೆಲಸವೇ ಸರಿ.
ಆದಿಕಾಂಡ 31 : 29 (OCVKN)
ನಿನಗೆ ಕೇಡು ಮಾಡುವುದಕ್ಕೆ ನನ್ನ ಕೈಯಲ್ಲಿ ಸಾಮರ್ಥ್ಯ ಇದೆ. ಆದರೆ ನಿನ್ನ ತಂದೆಯ ದೇವರು ನಿನ್ನೆ ರಾತ್ರಿ ನನ್ನ ಸಂಗಡ ಮಾತನಾಡಿ, ‘ನೀನು ಯಾಕೋಬನ ಸಂಗಡ ಒಳ್ಳೆಯದನ್ನಾಗಲಿ, ಕೆಟ್ಟದ್ದನ್ನಾಗಲಿ ಹೇಳದಂತೆ ಎಚ್ಚರವಾಗಿರು,’ ಎಂದು ಹೇಳಿದರು.
ಆದಿಕಾಂಡ 31 : 30 (OCVKN)
ಈಗ ನೀನು ನಿನ್ನ ತಂದೆಯ ಮನೆಯನ್ನು ಬಹಳವಾಗಿ ಹಾರೈಸಿದ್ದರಿಂದ ಹೋಗಬೇಕಾಯಿತು. ಆದರೆ ನೀನು ನನ್ನ ದೇವರುಗಳನ್ನು ಕದ್ದದ್ದು ಯಾಕೆ?” ಎಂದನು.
ಆದಿಕಾಂಡ 31 : 31 (OCVKN)
ಅದಕ್ಕೆ ಯಾಕೋಬನು ಉತ್ತರವಾಗಿ ಲಾಬಾನನಿಗೆ, “ನೀನು ನಿನ್ನ ಪುತ್ರಿಯರನ್ನು ನನ್ನಿಂದ ಬಲಾತ್ಕಾರದಿಂದ ಹಿಂದಕ್ಕೆ ತೆಗೆದುಕೊಳ್ಳುವೆ ಎಂದು ಭಯಪಟ್ಟೆನು.
ಆದಿಕಾಂಡ 31 : 32 (OCVKN)
ಆದರೆ ಯಾರ ಬಳಿಯಲ್ಲಿ ನಿನ್ನ ದೇವರುಗಳು ಸಿಕ್ಕುವುವೋ ಅವರು ಸಾಯಲಿ. ನನ್ನ ಬಳಿಯಲ್ಲಿ ನಿನ್ನದೇನಾದರೂ ಇದ್ದರೆ, ನಮ್ಮ ಬಂಧುಗಳ ಮುಂದೆ ವಿಚಾರಿಸಿ ಅದನ್ನು ತೆಗೆದುಕೋ,” ಎಂದನು. ಆದರೆ ರಾಹೇಲಳು ಅವುಗಳನ್ನು ಕದ್ದುಕೊಂಡದ್ದು ಯಾಕೋಬನಿಗೆ ತಿಳಿದಿರಲಿಲ್ಲ.
ಆದಿಕಾಂಡ 31 : 33 (OCVKN)
ಆಗ ಲಾಬಾನನು ಯಾಕೋಬನ ಗುಡಾರದಲ್ಲಿಯೂ, ಲೇಯಳ ಗುಡಾರದಲ್ಲಿಯೂ, ಆ ಇಬ್ಬರು ದಾಸಿಯರ ಗುಡಾರಗಳಲ್ಲಿಯೂ ಹೋಗಿ ಹುಡುಕಿದರೂ, ಅವುಗಳನ್ನು ಕಾಣಲಿಲ್ಲ. ಲೇಯಳ ಗುಡಾರದಿಂದ ಹೊರಟು ರಾಹೇಲಳ ಗುಡಾರದೊಳಗೆ ಹೋದನು.
ಆದಿಕಾಂಡ 31 : 34 (OCVKN)
ಆದರೆ ರಾಹೇಲಳು ವಿಗ್ರಹಗಳನ್ನು ತೆಗೆದುಕೊಂಡು ಒಂಟೆಯ ಸಾಮಗ್ರಿಯಲ್ಲಿಟ್ಟು, ಅದರ ಮೇಲೆ ಕುಳಿತುಕೊಂಡಳು. ಲಾಬಾನನು ಗುಡಾರವನ್ನೆಲ್ಲಾ ಹುಡುಕಿದರೂ, ಅವನು ಅವುಗಳನ್ನು ಕಾಣಲಿಲ್ಲ.
ಆದಿಕಾಂಡ 31 : 35 (OCVKN)
ಆದಿಕಾಂಡ 31 : 36 (OCVKN)
ರಾಹೇಲಳು ತನ್ನ ತಂದೆಗೆ, “ಅಪ್ಪಾ, ನಾನು ನಿನ್ನ ಮುಂದೆ ಎದ್ದು ನಿಂತುಕೊಳ್ಳದೇ ಇರುವುದರಿಂದ, ನನ್ನ ಮೇಲೆ ಕೋಪಬಾರದೆ ಇರಲಿ. ಏಕೆಂದರೆ ನಾನು ಮುಟ್ಟಾಗಿದ್ದೇನೆ,” ಎಂದಳು. ಅವನು ಹುಡುಕಿ ಆ ವಿಗ್ರಹಗಳನ್ನು ಕಂಡುಕೊಳ್ಳದೆ ಹೋದನು. ಆಗ ಯಾಕೋಬನು ಕೋಪಗೊಂಡು ಲಾಬಾನನೊಂದಿಗೆ ವಾದಿಸಿದನು. ಯಾಕೋಬನು ಉತ್ತರವಾಗಿ ಲಾಬಾನನಿಗೆ, “ನೀನು ನನ್ನನ್ನು ಬೆನ್ನಟ್ಟಿ ಬರುವುದಕ್ಕೆ ನನ್ನ ಅಪರಾಧವೇನು?” ನನ್ನ ಪಾಪವೇನು?
ಆದಿಕಾಂಡ 31 : 37 (OCVKN)
ನೀನು ನನ್ನ ಸಲಕರಣೆಗಳನ್ನೆಲ್ಲಾ ಹುಡುಕಿದ ಮೇಲೆ ನಿನ್ನ ಮನೆಯ ಯಾವ ವಸ್ತುಗಳನ್ನು ಕಂಡುಕೊಂಡೆ? ನನಗೂ, ನಿನಗೂ ಬಂಧುಗಳಾಗಿರುವವರ ಮುಂದೆ ಅದನ್ನು ಇಲ್ಲಿ ಇಡು. ಅವರೇ ನಮ್ಮಿಬ್ಬರ ಮಧ್ಯೆ ನ್ಯಾಯತೀರಿಸಲಿ.
ಆದಿಕಾಂಡ 31 : 38 (OCVKN)
“ಈ ಇಪ್ಪತ್ತು ವರ್ಷ ನಾನು ನಿನ್ನ ಸಂಗಡ ಇದ್ದೆನು. ನಿನ್ನ ಕುರಿಗಳೂ, ಮೇಕೆಗಳೂ ಮರಿ ಹಾಕಲಿಲ್ಲ. ನಿನ್ನ ಕುರಿ ಹೋತಗಳನ್ನು ನಾನು ತಿನ್ನಲಿಲ್ಲ.
ಆದಿಕಾಂಡ 31 : 39 (OCVKN)
ಮೃಗಗಳಿಂದ ಘಾಯವಾದವುಗಳನ್ನು ನಿನ್ನ ಬಳಿಗೆ ತಾರದೆ, ಅವುಗಳ ನಷ್ಟವನ್ನು ನಾನೇ ಹೊತ್ತೆನು. ಹಗಲಲ್ಲಿ ಕದ್ದದ್ದನ್ನೂ, ರಾತ್ರಿಯಲ್ಲಿ ಕದ್ದದ್ದನ್ನೂ ನನ್ನಿಂದಲೇ ತೆಗೆದುಕೊಂಡೆ.
ಆದಿಕಾಂಡ 31 : 40 (OCVKN)
ನನ್ನ ಸ್ಥಿತಿ ಹೀಗೆ ಇತ್ತು: ಹಗಲಲ್ಲಿ ಬಿಸಿಲಿನಿಂದಲೂ ಇರುಳಲ್ಲಿ ಚಳಿಯಿಂದಲೂ ಬಾಧೆಪಟ್ಟೆನು. ನನ್ನ ಕಣ್ಣುಗಳಿಗೆ ನಿದ್ರೆ ತಪ್ಪಿಹೋಯಿತು.
ಆದಿಕಾಂಡ 31 : 41 (OCVKN)
ನಿನ್ನ ಇಬ್ಬರು ಪುತ್ರಿಯರಿಗಾಗಿ ಹದಿನಾಲ್ಕು ವರ್ಷ, ನಿನ್ನ ಮಂದೆಗಳಿಗೋಸ್ಕರ ಆರು ವರ್ಷ, ಈ ಪ್ರಕಾರ ಇಪ್ಪತ್ತು ವರ್ಷ ನಿನ್ನ ಮನೆಯಲ್ಲಿದ್ದು, ನಿನ್ನ ಸೇವೆ ಮಾಡಿದೆನು. ಆದರೆ ನೀನು ನನ್ನ ಸಂಬಳವನ್ನು ಹತ್ತು ಸಾರಿ ಬದಲಾಯಿಸಿದೆ.
ಆದಿಕಾಂಡ 31 : 42 (OCVKN)
ನನ್ನ ತಂದೆ ದೇವರೂ, ಅಬ್ರಹಾಮನ ದೇವರೂ, ಇಸಾಕನ ಭಯವೂ ನನ್ನೊಂದಿಗೆ ಇಲ್ಲದೆ ಹೋಗಿದ್ದರೆ, ನಿಶ್ಚಯವಾಗಿ ನೀನು ನನ್ನನ್ನು ಬರಿಗೈಯಿಂದ ಕಳುಹಿಸುತ್ತಿದ್ದೆ. ನನ್ನ ಬಾಧೆಯನ್ನೂ, ನನ್ನ ಕಷ್ಟವನ್ನೂ ದೇವರು ಕಂಡು, ನಿನ್ನೆ ರಾತ್ರಿ ನಿನ್ನನ್ನು ಗದರಿಸಿದ್ದಾರೆ,” ಎಂದನು.
ಆದಿಕಾಂಡ 31 : 43 (OCVKN)
ಲಾಬಾನನು ಅದಕ್ಕೆ ಉತ್ತರವಾಗಿ ಯಾಕೋಬನಿಗೆ, “ಈ ಪುತ್ರಿಯರು ನನ್ನ ಪುತ್ರಿಯರೇ, ಈ ಮಕ್ಕಳು ನನ್ನ ಮಕ್ಕಳೇ, ಈ ಮಂದೆಯು ನನ್ನ ಮಂದೆಯೇ, ಅಂತು ನೀನು ಕಾಣುವುದೆಲ್ಲಾ ನನ್ನದೇ. ಹಾಗಾದರೆ ನನ್ನ ಪುತ್ರಿಯರಿಗಾಗಲಿ, ಅವರು ಹೆತ್ತ ಮಕ್ಕಳಿಗಾಗಲಿ ನಾನು ಈ ಹೊತ್ತು ಏನು ಮಾಡಲಿ?
ಆದಿಕಾಂಡ 31 : 44 (OCVKN)
ಆದ್ದರಿಂದ ನೀನು ಇಲ್ಲಿ ಬಾ, ನಾನೂ ನೀನೂ ಒಡಂಬಡಿಕೆಯನ್ನು ಮಾಡೋಣ, ಅದು ನನಗೂ ನಿನಗೂ ಮಧ್ಯದಲ್ಲಿ ಸಾಕ್ಷಿಯಾಗಿರಲಿ,” ಎಂದನು.
ಆದಿಕಾಂಡ 31 : 45 (OCVKN)
ಆಗ ಯಾಕೋಬನು ಒಂದು ಕಲ್ಲನ್ನು ತೆಗೆದುಕೊಂಡು ಸ್ತಂಭವಾಗಿ ನಿಲ್ಲಿಸಿದನು.
ಆದಿಕಾಂಡ 31 : 46 (OCVKN)
ಯಾಕೋಬನು ತನ್ನ ಕಡೆಯವರಿಗೆ, “ಕಲ್ಲುಗಳನ್ನು ಕೂಡಿಸಿರಿ,” ಎಂದನು. ಅವರು ಕಲ್ಲುಗಳನ್ನು ತೆಗೆದುಕೊಂಡು ಒಂದು ಕುಪ್ಪೆ ಮಾಡಿದರು. ಅವರು ಆ ಕುಪ್ಪೆಯ ಬಳಿಯಲ್ಲಿ ಕುಳಿತುಕೊಂಡು ಊಟಮಾಡಿದರು.
ಆದಿಕಾಂಡ 31 : 47 (OCVKN)
ಆ ಕುಪ್ಪೆಗೆ ಲಾಬಾನನು ಯಗರಸಾಹದೂತ ಎಂದು ಹೆಸರಿಟ್ಟನು. ಯಾಕೋಬನು ಗಲೇದ್* ಒಂದು ಅರಮೀಯ ಭಾಷೆಯಲ್ಲಿ ಯಗರಸಾಹದೂತ ಇನ್ನೊಂದು ಗ್ರೀಕ್ ಭಾಷೆಯಲ್ಲಿ ಗಲೇದ್ ಎರಡರದೂ ಅರ್ಥ ಸಾಕ್ಷಿಯ ಕುಪ್ಪೆ ಎಂದು ಹೆಸರಿಟ್ಟನು.
ಆದಿಕಾಂಡ 31 : 48 (OCVKN)
ಆಗ ಲಾಬಾನನು, “ಈ ಕುಪ್ಪೆಯು ಈ ಹೊತ್ತು ನಿನಗೂ ನನಗೂ ಸಾಕ್ಷಿಯಾಗಿದೆ,” ಎಂದನು. ಆದ್ದರಿಂದ ಅದಕ್ಕೆ ಗಲೇದ್ ಎಂದೂ,
ಆದಿಕಾಂಡ 31 : 49 (OCVKN)
ಮಿಚ್ಪಾ ಮಿಚ್ಪಾ ಅಂದರೆ ಕಾವಲು ಗೋಪುರ ಎಂದೂ ಹೆಸರಾಯಿತು. ಏಕೆಂದರೆ, “ನನಗೂ ನಿನಗೂ ಮಧ್ಯದಲ್ಲಿ ನಾವು ಒಬ್ಬರಿಗೊಬ್ಬರು ಅಗಲಿರುವಾಗ ಯೆಹೋವ ದೇವರು ನಮ್ಮನ್ನು ನೋಡಿಕೊಳ್ಳುತ್ತಾ ಇರಲಿ.
ಆದಿಕಾಂಡ 31 : 50 (OCVKN)
ನೀನು ನನ್ನ ಪುತ್ರಿಯರನ್ನು ಉಪದ್ರವಪಡಿಸಿದರೆ, ಇಲ್ಲವೆ ನನ್ನ ಮಕ್ಕಳ ಹೊರತಾಗಿ ಬೇರೆ ಹೆಂಡತಿಯರನ್ನು ನೀನು ಪಡೆದರೆ, ಯಾವ ಮನುಷ್ಯನೂ ವಿಚಾರಿಸಲು ಇಲ್ಲದಿದ್ದರೂ ನನಗೂ ನಿನಗೂ ನಡುವೆ ದೇವರೇ ಈ ಒಪ್ಪಂದಕ್ಕೆ ಸಾಕ್ಷಿ,” ಎಂದನು.
ಆದಿಕಾಂಡ 31 : 51 (OCVKN)
ಲಾಬಾನನು ಯಾಕೋಬನಿಗೆ, “ನಿನಗೂ ನನಗೂ ಮಧ್ಯೆ ನಾನು ಹಾಕಿಸಿರುವ ಈ ಕುಪ್ಪೆಯನ್ನು ನೋಡು, ಈ ಸ್ತಂಭವನ್ನು ನೋಡು,
ಆದಿಕಾಂಡ 31 : 52 (OCVKN)
ನಾನು ಈ ಕುಪ್ಪೆಯನ್ನು ದಾಟಿ ನಿನ್ನ ಹತ್ತಿರ ಬರುವುದಿಲ್ಲ; ನೀನು ಈ ಕುಪ್ಪೆಯನ್ನು ಮತ್ತು ಸ್ತಂಭವನ್ನು ಕೇಡಿಗಾಗಿ ದಾಟುವುದಿಲ್ಲವೆಂಬುದಕ್ಕೆ ಈ ಕುಪ್ಪೆಯೂ ಈ ಸ್ತಂಭವೂ ಸಾಕ್ಷಿಯಾಗಿವೆ.
ಆದಿಕಾಂಡ 31 : 53 (OCVKN)
ಅಬ್ರಹಾಮನ ದೇವರು, ನಾಹೋರನ ದೇವರು, ಅವರ ತಂದೆಯ ದೇವರು ನಮ್ಮ ಮಧ್ಯದಲ್ಲಿ ನ್ಯಾಯತೀರಿಸಲಿ,” ಎಂದನು. ಆಗ ಯಾಕೋಬನು ತನ್ನ ತಂದೆ ಇಸಾಕನ ಭಯದ ಮೇಲೆ ಪ್ರಮಾಣ ಮಾಡಿದನು.
ಆದಿಕಾಂಡ 31 : 54 (OCVKN)
ಯಾಕೋಬನು ಆ ಬೆಟ್ಟದಲ್ಲಿ ಬಲಿಯನ್ನು ಅರ್ಪಿಸಿ, ಭೋಜನ ಮಾಡುವುದಕ್ಕೆ ತನ್ನ ಬಂಧುಗಳನ್ನು ಕರೆಕಳುಹಿಸಿದನು. ಅವರು ಭೋಜನ ಮಾಡಿ ಬೆಟ್ಟದಲ್ಲಿಯೇ ರಾತ್ರಿ ಇಳಿದುಕೊಂಡರು.
ಆದಿಕಾಂಡ 31 : 55 (OCVKN)
ಮುಂಜಾನೆ ಲಾಬಾನನು ಎದ್ದು ತನ್ನ ಪುತ್ರ ಪುತ್ರಿಯರಿಗೆ ಮುದ್ದಿಟ್ಟು ಅವರನ್ನು ಆಶೀರ್ವದಿಸಿದನು. ಲಾಬಾನನು ಹೊರಟು ತನ್ನ ಸ್ಥಳಕ್ಕೆ ಹಿಂದಿರುಗಿ ಹೋದನು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35 36 37 38 39 40 41 42 43 44 45 46 47 48 49 50 51 52 53 54 55