ಗಲಾತ್ಯದವರಿಗೆ 4 : 1 (OCVKN)
ಆದರೆ ನಾನು ಹೇಳುವುದೇನೆಂದರೆ, ವಾರಸುದಾರನು ತಾನು ಇಡೀ ಆಸ್ತಿಗೆಲ್ಲಾ ಧಣಿಯಾಗಿದ್ದರೂ ಬಾಲಕನಾಗಿರುವ ತನಕ ಅವನಿಗೂ ದಾಸನಿಗೂ ವ್ಯತ್ಯಾಸವಿರುವುದಿಲ್ಲ.
ಗಲಾತ್ಯದವರಿಗೆ 4 : 2 (OCVKN)
ಆದರೆ ಅವನ ತಂದೆಯು ಮುಂಚಿತವಾಗಿ ನೇಮಿಸಿದ ದಿನದವರೆಗೂ ಅವನು ಪೋಷಕರ ಹಾಗೂ ಆಡಳಿತಗಾರರ ಕೈಕೆಳಗಿರುವನು.
ಗಲಾತ್ಯದವರಿಗೆ 4 : 3 (OCVKN)
ಅದರಂತೆಯೇ ನಾವು ಬಾಲಕರಾಗಿದ್ದಾಗ ಲೋಕದ ಮೂಲಪಾಠಗಳಿಗೆ ಗುಲಾಮರಾಗಿದ್ದೆವು.
ಗಲಾತ್ಯದವರಿಗೆ 4 : 4 (OCVKN)
ಆದರೆ ನಿಯಮಿತ ಕಾಲವು ಪರಿಪೂರ್ಣವಾದಾಗ, ದೇವರು ತಮ್ಮ ಮಗನನ್ನು ಸ್ತ್ರೀಯಿಂದ ಹುಟ್ಟಿದವನಾಗಿಯೂ ನಿಯಮಕ್ಕೆ ಒಳಗಾದವನನ್ನಾಗಿಯೂ ಕಳುಹಿಸಿಕೊಟ್ಟರು.
ಗಲಾತ್ಯದವರಿಗೆ 4 : 5 (OCVKN)
ಹೀಗೆ ದೇವರು ನಿಯಮಕ್ಕೆ ಒಳಗಾದ ನಮ್ಮನ್ನು ವಿಮೋಚಿಸಿ, ನಾವು ಪುತ್ರರ ಸ್ಥಾನವನ್ನು ಹೊಂದುವಂತೆ ಮಾಡಿದರು.
ಗಲಾತ್ಯದವರಿಗೆ 4 : 6 (OCVKN)
ನೀವು ದೇವರ ಪುತ್ರರಾಗಿರುವುದರಿಂದ, ದೇವರು ತಮ್ಮ ಪುತ್ರ ಆಗಿರುವವರ ಆತ್ಮನನ್ನು ನಮ್ಮ ಹೃದಯಗಳಲ್ಲಿ ಕಳುಹಿಸಿ, “ಅಪ್ಪಾ ತಂದೆಯೇ!” ಎಂದು ಕರೆಯುವಂತೆ ಮಾಡಿದ್ದಾರೆ.
ಗಲಾತ್ಯದವರಿಗೆ 4 : 7 (OCVKN)
ಹೀಗಿರುವಲ್ಲಿ ಇನ್ನು ನೀನು ದಾಸನಲ್ಲ ಪುತ್ರನಾಗಿದ್ದೀ. ನೀನು ದೇವರ ಮಗು ಎಂದ ಮೇಲೆ ದೇವರ ಮೂಲಕ ವಾರಸುದಾರನೂ ಆಗಿದ್ದೀ.
ಗಲಾತ್ಯದವರಿಗೆ 4 : 8 (OCVKN)
ಗಲಾತ್ಯದವರ ಬಗ್ಗೆ ಪೌಲನ ಚಿಂತೆ ಮುಂಚೆ ನೀವು ದೇವರನ್ನು ಅರಿಯದವರಾಗಿದ್ದಾಗ, ಸ್ವಾಭಾವಿಕವಾಗಿ ದೇವರಲ್ಲದವುಗಳಿಗೆ ನೀವು ಗುಲಾಮರಾಗಿದ್ದೀರಿ.
ಗಲಾತ್ಯದವರಿಗೆ 4 : 9 (OCVKN)
ಈಗಲಾದರೋ ನೀವು ದೇವರನ್ನು ಅರಿತುಕೊಂಡಿದ್ದೀರಿ. ನಿಜವಾಗಿ ಹೇಳಬೇಕಾದರೆ, ದೇವರು ನಿಮ್ಮನ್ನು ಅರಿತುಕೊಂಡಿದ್ದಾರೆ. ಹೀಗಿರಲಾಗಿ ನೀವು ಬಲಹೀನವಾದ ದರಿದ್ರ ಮೂಲಪಾಠಗಳಿಗೆ ಪುನಃ ಗುಲಾಮರಾಗಬೇಕೆಂದು ಅಪೇಕ್ಷಿಸಿ, ಅವುಗಳಿಗೆ ನೀವು ತಿರುಗಿಕೊಳ್ಳುವುದು ಹೇಗೆ?
ಗಲಾತ್ಯದವರಿಗೆ 4 : 10 (OCVKN)
ನೀವು ದಿನಗಳನ್ನೂ ಮಾಸಗಳನ್ನೂ ಕಾಲಗಳನ್ನೂ ಸಂವತ್ಸರಗಳನ್ನೂ ಆಚರಿಸುತ್ತೀರಿ.
ಗಲಾತ್ಯದವರಿಗೆ 4 : 11 (OCVKN)
ನಾವು ನಿಮ್ಮ ಮಧ್ಯದಲ್ಲಿ ಪ್ರಯಾಸಪಟ್ಟದ್ದು ವ್ಯರ್ಥವಾಯಿತೇನೋ ಎಂದು ನಿಮ್ಮ ವಿಷಯದಲ್ಲಿ ನಾನು ಭಯಪಡುತ್ತೇನೆ.
ಗಲಾತ್ಯದವರಿಗೆ 4 : 12 (OCVKN)
ಪ್ರಿಯರೇ, ನಾನು ನಿಮ್ಮ ಹಾಗೆ ಆದ್ದರಿಂದ ನೀವು ನನ್ನ ಹಾಗೆ ಆಗಬೇಕೆಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ. ನೀವು ನನಗೆ ಯಾವ ಕೇಡನ್ನೂ ಮಾಡಲಿಲ್ಲ.
ಗಲಾತ್ಯದವರಿಗೆ 4 : 13 (OCVKN)
ನಾನು ಮುಂಚೆ ನಿಮಗೆ ಸುವಾರ್ತೆ ಸಾರಿದ್ದು, ನನ್ನ ಶರೀರದ ಬಲಹೀನತೆಯಿಂದ ಎಂದು ನೀವು ಬಲ್ಲಿರಿ.
ಗಲಾತ್ಯದವರಿಗೆ 4 : 14 (OCVKN)
ನನ್ನ ದೇಹಸ್ಥಿತಿ ನಿಮಗೆ ಬೇಸರಗೊಳಿಸುವುದಾಗಿದ್ದರೂ ನೀವು ನನ್ನನ್ನು ಹೀನೈಸಲಿಲ್ಲ, ತಿರಸ್ಕರಿಸಲಿಲ್ಲ. ಆದರೆ ನನ್ನನ್ನು ದೇವದೂತನಂತೆಯೂ ಕ್ರಿಸ್ತ ಯೇಸುವಿನಂತೆಯೂ ಸೇರಿಸಿಕೊಂಡಿರಿ.
ಗಲಾತ್ಯದವರಿಗೆ 4 : 15 (OCVKN)
ನೀವು ಕೋರಿದ ಆ ಶುಭವೆಲ್ಲಿ? ಸಾಧ್ಯವಾಗಿದ್ದರೆ ನಿಮ್ಮ ಕಣ್ಣುಗಳನ್ನೇ ಕಿತ್ತು ನನಗೆ ಕೊಡುತ್ತಿದ್ದಿರಿ ಎಂದು ನಿಮ್ಮ ವಿಷಯವಾಗಿ ನಾನು ಸಾಕ್ಷಿಕೊಡುತ್ತೇನೆ.
ಗಲಾತ್ಯದವರಿಗೆ 4 : 16 (OCVKN)
ಹೀಗಿರಲಾಗಿ ಸತ್ಯವನ್ನು ಹೇಳಿದ್ದರಿಂದ ನಾನು ನಿಮಗೆ ಶತ್ರುವಾಗಿಬಿಟ್ಟೆನೋ?
ಗಲಾತ್ಯದವರಿಗೆ 4 : 17 (OCVKN)
ಅವರು ನಿಮ್ಮನ್ನು ಆಕರ್ಷಿಸಲು ಆಸಕ್ತರಾಗಿದ್ದಾರೆ. ಆದರೆ ಒಳ್ಳೆಯ ಅಭಿಪ್ರಾಯದಿಂದ ಅಲ್ಲ. ನೀವು ಅವರ ವಿಷಯದಲ್ಲಿ ಆಸಕ್ತರಾಗಬೇಕೆಂದು ಅವರು ನಿಮ್ಮನ್ನು ನಮ್ಮಿಂದ ಪ್ರತ್ಯೇಕಿಸುವುದಕ್ಕೆ ಅಪೇಕ್ಷಿಸುತ್ತಾರೆ.
ಗಲಾತ್ಯದವರಿಗೆ 4 : 18 (OCVKN)
ನಾನು ನಿಮ್ಮ ಸಂಗಡ ಇರುವಾಗ ಮಾತ್ರವಲ್ಲದೆ ಯಾವಾಗಲೂ ಉತ್ತಮ ಕಾರ್ಯಗಳಲ್ಲಿ ನೀವು ಆಸಕ್ತರಾಗಿರುವುದು ಒಳ್ಳೆಯದು.
ಗಲಾತ್ಯದವರಿಗೆ 4 : 19 (OCVKN)
ನನ್ನ ಮಕ್ಕಳೇ, ಕ್ರಿಸ್ತ ಯೇಸುವು ನಿಮ್ಮಲ್ಲಿ ರೂಪುಗೊಳ್ಳುವ ತನಕ ನಾನು ನಿಮಗಾಗಿ ಪುನಃ ಪ್ರಸವವೇದನೆ ಪಡುತ್ತೇನೆ.
ಗಲಾತ್ಯದವರಿಗೆ 4 : 20 (OCVKN)
ನಾನು ಈಗ ನಿಮ್ಮ ಜೊತೆಯಲ್ಲಿದ್ದು ನನ್ನ ಸ್ವರವನ್ನು ಬದಲಾಯಿಸಬೇಕೆಂದು ಅಪೇಕ್ಷಿಸುತ್ತೇನೆ, ಏಕೆಂದರೆ, ನಾನು ನಿಮ್ಮ ವಿಷಯದಲ್ಲಿ ಚಿಂತಿಸುವವನಾಗಿದ್ದೇನೆ.
ಗಲಾತ್ಯದವರಿಗೆ 4 : 21 (OCVKN)
ಹಾಗರ್ ಮತ್ತು ಸಾರಳು ಮೋಶೆಯ ನಿಯಮದ ಕೆಳಗಿರಲು ಬಯಸುವವರೇ, ನಿಯಮವು ಏನು ಹೇಳುತ್ತದೆಯೆಂದು ನೀವು ಸ್ಪಷ್ಟವಾಗಿ ಅರ್ಥಮಾಡಿಕೊಂಡಿದ್ದೀರಾ? ನನಗೆ ಹೇಳಿರಿ.
ಗಲಾತ್ಯದವರಿಗೆ 4 : 22 (OCVKN)
ಏಕೆಂದರೆ ದಾಸಿಯಿಂದ ಒಬ್ಬನು, ಧರ್ಮಪತ್ನಿಯಿಂದ ಒಬ್ಬನು ಹೀಗೆ ಅಬ್ರಹಾಮನಿಗೆ ಇಬ್ಬರು ಪುತ್ರರಿದ್ದರೆಂದು ಪವಿತ್ರ ವೇದದಲ್ಲಿ ಬರೆದಿದೆ.
ಗಲಾತ್ಯದವರಿಗೆ 4 : 23 (OCVKN)
ದಾಸಿಯ ಮಗನು ಶಾರೀರಿಕವಾಗಿ ಹುಟ್ಟಿದವನು. ಆದರೆ ಧರ್ಮಪತ್ನಿಯ ಮಗನಾದರೋ ದೇವರ ವಾಗ್ದಾನದ ಮೂಲಕ ಹುಟ್ಟಿದನು.
ಗಲಾತ್ಯದವರಿಗೆ 4 : 24 (OCVKN)
ಈ ಸಂಗತಿಗಳು ಉಪಮಾನವಾಗಿವೆ. ಹೇಗೆಂದರೆ, ಇವರು ಎರಡು ಒಡಂಬಡಿಕೆಗಳೇ. ಒಂದು ಒಡಂಬಡಿಕೆ ಸೀನಾಯಿ ಪರ್ವತದಿಂದ ಉಂಟಾಗಿ ದಾಸತ್ವದಲ್ಲಿರಬೇಕಾದ ಮಕ್ಕಳನ್ನು ಹೆರುವಂಥದು. ಅದೇ ಹಾಗರ್.
ಗಲಾತ್ಯದವರಿಗೆ 4 : 25 (OCVKN)
ಹಾಗರ್ ಅರೇಬಿಯಾದಲ್ಲಿರುವ ಸೀನಾಯಿ ಪರ್ವತ. ಅದು ಈಗಿನ ಯೆರೂಸಲೇಮಿಗೆ ಸರಿಹೊಂದುತ್ತಾಳೆ. ಏಕೆಂದರೆ ಆಕೆಯು ಈಗಲೂ ತನ್ನ ಮಕ್ಕಳ ಸಹಿತ ದಾಸ್ಯದಲ್ಲಿದ್ದಾಳೆ.
ಗಲಾತ್ಯದವರಿಗೆ 4 : 26 (OCVKN)
ಆದರೆ ಸ್ವರ್ಗೀಯ ಯೆರೂಸಲೇಮ್ ಸ್ವತಂತ್ರಳು. ಈಕೆಯೇ ನಮ್ಮ ತಾಯಿ.
ಗಲಾತ್ಯದವರಿಗೆ 4 : 27 (OCVKN)
ಏಕೆಂದರೆ, “ಬಂಜೆಯೇ, ಹೆರದವಳೇ, ಆನಂದಿಸು. ಪ್ರಸವವೇದನೆ ಪಡದವಳೇ, ಸ್ವರವೆತ್ತಿ ಹರ್ಷದಿಂದ ಸ್ವರವೆತ್ತಿ ಕೂಗು; ಗಂಡನುಳ್ಳವಳಿಗಿಂತ ಗಂಡ ಬಿಟ್ಟವಳಿಗೆ ಎಷ್ಟೋ ಹೆಚ್ಚು ಮಕ್ಕಳಿದ್ದಾರೆ,”* ಯೆಶಾಯ 54:1 ಎಂದು ಪವಿತ್ರ ವೇದದಲ್ಲಿ ಬರೆದಿದೆ.
ಗಲಾತ್ಯದವರಿಗೆ 4 : 28 (OCVKN)
ಪ್ರಿಯರೇ, ನಾವು ಇಸಾಕನಂತೆ ವಾಗ್ದಾನದ ಮಕ್ಕಳಾಗಿದ್ದೇವೆ.
ಗಲಾತ್ಯದವರಿಗೆ 4 : 29 (OCVKN)
ಆದರೆ ಆಗ ಶರೀರಕ್ಕನುಸಾರವಾಗಿ ಹುಟ್ಟಿದವನು ಆತ್ಮಕ್ಕನುಸಾರವಾಗಿ ಹುಟ್ಟಿದವನನ್ನು ಹಿಂಸೆಪಡಿಸಿದಂತೆಯೇ, ಈಗಲೂ ನಡೆಯುತ್ತದೆ.
ಗಲಾತ್ಯದವರಿಗೆ 4 : 30 (OCVKN)
ಆದರೆ ಪವಿತ್ರ ವೇದವು ಏನು ಹೇಳುತ್ತದೆ? “ದಾಸಿಯನ್ನೂ, ಅವಳ ಮಗನನ್ನೂ ಹೊರಗೆ ಹಾಕು. ಏಕೆಂದರೆ ದಾಸಿಯ ಮಗನು ಧರ್ಮಪತ್ನಿಯ ಮಗನೊಂದಿಗೆ ಎಂದಿಗೂ ವಾರಸುದಾರನಾಗಬಾರದು.”† ಆದಿ 21:10 ಎಂದಲ್ಲವೇ?
ಗಲಾತ್ಯದವರಿಗೆ 4 : 31 (OCVKN)
ಹೀಗಿರುವಲ್ಲಿ ಪ್ರಿಯರೇ, ನಾವು ದಾಸಿಯ ಮಕ್ಕಳಲ್ಲ, ಧರ್ಮಪತ್ನಿಯ ಮಕ್ಕಳೇ ಆಗಿದ್ದೇವೆ.
❮
❯