ಎಜ್ರನು 10 : 1 (OCVKN)
ಜನರು ಪಾಪದ ಅರಿಕೆಮಾಡಿದ್ದು ಎಜ್ರನು ಪ್ರಾರ್ಥಿಸಿ ಅರಿಕೆಮಾಡಿ ಅತ್ತು ದೇವರ ಆಲಯದ ಮುಂದೆ ಅಡ್ಡಬಿದ್ದ ತರುವಾಯ ಇಸ್ರಾಯೇಲರಲ್ಲಿ ಸ್ತ್ರೀಯರೂ, ಪುರುಷರೂ, ಮಕ್ಕಳು ಮಹಾಕೂಟವಾಗಿ ಅವನ ಬಳಿಯಲ್ಲಿ ಕೂಡಿಕೊಂಡು ಬಂದರು. ಜನರು ಬಹಳವಾಗಿ ಅತ್ತರು.
ಎಜ್ರನು 10 : 2 (OCVKN)
ಆಗ ಏಲಾಮನ ವಂಶಜರಲ್ಲಿ ಒಬ್ಬನಾದ ಯೆಹೀಯೇಲನ ಮಗನಾದ ಶೆಕನ್ಯನು ಎಜ್ರನಿಗೆ, “ನಾವು ಅನ್ಯದೇಶನಿವಾಸಿಗಳಿಂದ ಹೆಣ್ಣನ್ನು ತೆಗೆದುಕೊಂಡದ್ದರಿಂದ, ನಮ್ಮ ದೇವರಿಗೆ ವಿರೋಧವಾಗಿ ದ್ರೋಹಮಾಡಿದ್ದೇವೆ. ಆದರೂ ಈಗ ಈ ಕಾರ್ಯವನ್ನು ಕುರಿತು ಇಸ್ರಾಯೇಲರಲ್ಲಿ ನಿರೀಕ್ಷೆ ಉಂಟು.
ಎಜ್ರನು 10 : 3 (OCVKN)
ಆದಕಾರಣ ನಮ್ಮ ಒಡೆಯನಾದ ನಿನ್ನ ಯೋಚನೆಯ ಪ್ರಕಾರವಾಗಿಯೂ, ನಮ್ಮ ದೇವರ ಆಜ್ಞೆಗೆ ಭಯಪಡುವವರ ಯೋಚನೆಯ ಪ್ರಕಾರವಾಗಿಯೂ ಆ ಸಮಸ್ತ ಸ್ತ್ರೀಯರನ್ನೂ, ಅವರಿಂದ ಹುಟ್ಟಿದವರನ್ನೂ ಕಳುಹಿಸಿಬಿಡಲು, ಈಗಲೇ ನಮ್ಮ ದೇವರ ಮುಂದೆ ಒಡಂಬಡಿಕೆ ಮಾಡಿಕೊಂಡು, ದೇವರ ನಿಯಮದ ಪ್ರಕಾರ ನಡೆಯೋಣ.
ಎಜ್ರನು 10 : 4 (OCVKN)
ನೀನು ಏಳು, ಏಕೆಂದರೆ ಈ ಕಾರ್ಯ ನಿನಗೆ ಸಂಬಂಧಿಸಿದೆ. ನಾವು ನಿನ್ನ ಸಂಗಡ ನಿಲ್ಲುತ್ತೇವೆ. ಧೈರ್ಯದಿಂದ ಅದನ್ನು ಮಾಡು,” ಎಂದನು.
ಎಜ್ರನು 10 : 5 (OCVKN)
ಆಗ ಎಜ್ರನು ಎದ್ದು, ಮಹಾಯಾಜಕರೂ ಲೇವಿಯರೂ ಸಮಸ್ತ ಇಸ್ರಾಯೇಲರೂ ಈ ಮಾತಿನ ಪ್ರಕಾರವಾಗಿ ಮಾಡಲು, ಅವರು ಆಣೆಯಿಡುವ ಹಾಗೆ ಮಾಡಿದನು. ಅವರು ಆಣೆ ಇಟ್ಟರು.
ಎಜ್ರನು 10 : 6 (OCVKN)
ಆಮೇಲೆ ಎಜ್ರನು ಎದ್ದು ದೇವರ ಆಲಯದ ಮುಂಭಾಗದ ಸ್ಥಳವನ್ನು ಬಿಟ್ಟು, ಎಲ್ಯಾಷೀಬನ ಮಗ ಯೆಹೋಹಾನಾನನ ಕೊಠಡಿಗೆ ಹೋಗಿ, ದುಃಖಿಸುತ್ತಾ ಅನ್ನಪಾನಗಳನ್ನು ತೆಗೆದುಕೊಳ್ಳದೆ ರಾತ್ರಿಯನ್ನು ಕಳೆದನು. ಏಕೆಂದರೆ ಸೆರೆಯಿಂದ ಯೆರೂಸಲೇಮಿಗೆ ಬಂದಿದ್ದ ಯೆಹೂದ್ಯರ ಅಪನಂಬಿಗಸ್ತಿಕೆಯ ಬಗ್ಗೆ ತುಂಬಾ ದುಃಖಿತನಾಗಿದ್ದನು.
ಎಜ್ರನು 10 : 7 (OCVKN)
ತರುವಾಯ ಸೆರೆಯಿಂದ ಬಂದವರೆಲ್ಲರೂ ಯೆರೂಸಲೇಮಿಗೆ ಕೂಡಿಬರಬೇಕೆಂದು ಸಮಸ್ತ ಯೆಹೂದ ಮತ್ತು ಯೆರೂಸಲೇಮಿನಲ್ಲಿ ಸಾರಲಾಗಿತ್ತು.
ಎಜ್ರನು 10 : 8 (OCVKN)
ಇದಲ್ಲದೆ ಯಾವನಾದರೂ ಪ್ರಧಾನರ, ಹಿರಿಯರ ನಿರ್ಣಯದ ಪ್ರಕಾರ ಮೂರು ದಿವಸದಲ್ಲಿ ಬಾರದೆ ಇದ್ದರೆ, ಅವನ ಆಸ್ತಿಯೆಲ್ಲಾ ದಂಡವಾಗಿ ತೆಗೆದುಕೊಳ್ಳಲಾಗುವುದೆಂದೂ, ಅವನು ಸೆರೆಯಿಂದ ಬಂದವರ ಕೂಟದಿಂದ ಬಹಿಷ್ಕೃತನಾಗುವನು ಎಂದೂ ಪ್ರಕಟಿಸಿದರು.
ಎಜ್ರನು 10 : 9 (OCVKN)
ಆಗ ಯೆಹೂದ ಮತ್ತು ಬೆನ್ಯಾಮೀನಿನ ಮನುಷ್ಯರೆಲ್ಲರೂ ಮೂರು ದಿವಸಗಳೊಳಗೆ ಯೆರೂಸಲೇಮಿನಲ್ಲಿ ಕೂಡಿದರು. ಅದು ಒಂಬತ್ತನೆಯ ತಿಂಗಳ, ಇಪ್ಪತ್ತನೆಯ ದಿವಸವಾಗಿತ್ತು. ಜನರೆಲ್ಲರು ದೇವರ ಆಲಯದ ಬೀದಿಯಲ್ಲಿ ಆ ಕಾರ್ಯಕ್ಕೋಸ್ಕರವೂ, ಮಳೆಗೋಸ್ಕರವೂ ನಡುಗಿ ಕುಳಿತುಕೊಂಡಿದ್ದರು.
ಎಜ್ರನು 10 : 10 (OCVKN)
ಆಗ ಯಾಜಕನಾದ ಎಜ್ರನು ಎದ್ದು ಅವರಿಗೆ, “ನೀವು ಇಸ್ರಾಯೇಲರ ಅಪರಾಧವನ್ನು ಅಧಿಕವಾಗಿ ಮಾಡಲು, ಅನ್ಯ ಸ್ತ್ರೀಯರನ್ನು ಮದುವೆ ಮಾಡಿಕೊಂಡಿದ್ದರಿಂದ ದ್ರೋಹ ಮಾಡಿದಿರಿ.
ಎಜ್ರನು 10 : 11 (OCVKN)
ಆದ್ದರಿಂದ ನೀವು ನಿಮ್ಮ ಪಿತೃಗಳ ದೇವರಾಗಿರುವ ಯೆಹೋವ ದೇವರ ಮುಂದೆ ನಿಮ್ಮ ಪಾಪಗಳನ್ನು ಅರಿಕೆಮಾಡಿ, ಅವರ ಚಿತ್ತದ ಪ್ರಕಾರಮಾಡಿ, ಈ ದೇಶದ ಜನರಿಂದಲೂ, ಅನ್ಯ ಸ್ತ್ರೀಯರಿಂದಲೂ ನಿಮ್ಮನ್ನು ಪ್ರತ್ಯೇಕಿಸಿಕೊಳ್ಳಿರಿ,” ಎಂದನು.
ಎಜ್ರನು 10 : 12 (OCVKN)
ಆಗ ಸಭೆಯೆಲ್ಲಾ ಉತ್ತರವಾಗಿ ದೊಡ್ಡ ಶಬ್ದದಿಂದ, “ನೀನು ಸರಿಯಾಗಿ ಹೇಳಿದೆ! ನೀನು ಹೇಳಿದ ಪ್ರಕಾರವೇ ನಾವು ಮಾಡಬೇಕು.
ಎಜ್ರನು 10 : 13 (OCVKN)
ಆದರೆ ಜನರು ಅನೇಕರು. ಇದು ಮಳೆಗಾಲವಾಗಿರುವುದರಿಂದ ಹೊರಗೆ ಇರಲಾರೆವು. ಇದಲ್ಲದೆ ಇದು ಒಂದೆರಡು ದಿನಗಳ ಕೆಲಸವಲ್ಲ. ಏಕೆಂದರೆ ಈ ಕಾರ್ಯದಲ್ಲಿ ನಮ್ಮ ಅಪರಾಧವು ದೊಡ್ಡದು.
ಎಜ್ರನು 10 : 14 (OCVKN)
ಆದಕಾರಣ ದಯಮಾಡಿ ಸಭೆಯ ಎಲ್ಲಾದರಲ್ಲಿ ನಮ್ಮ ಪ್ರಧಾನರು ನಿಲ್ಲಲಿ. ಈ ಕಾರ್ಯದ ನಿಮಿತ್ತ ನಮ್ಮ ದೇವರ ಕಠಿಣ ಕೋಪವು ನಮ್ಮನ್ನು ಬಿಟ್ಟು ಹೋಗುವವರೆಗೆ, ನಮ್ಮ ಪಟ್ಟಣಗಳಲ್ಲಿ ಯಹೂದ್ಯರಲ್ಲದ ಸ್ತ್ರೀಯರನ್ನು ತೆಗೆದುಕೊಂಡವರು, ನೇಮಿಸಿದ ಕಾಲದಲ್ಲಿ ಬಂದು, ಅವರ ಸಂಗಡ ಪ್ರತಿ ಪಟ್ಟಣದ ಹಿರಿಯರೂ, ಅದರ ನ್ಯಾಯಾಧಿಪತಿಗಳೂ ಇರಲಿ,” ಎಂದರು.
ಎಜ್ರನು 10 : 15 (OCVKN)
ಆದರೆ ಅಸಾಯೇಲನ ಮಗ ಯೋನಾತಾನ್ ಹಾಗು, ತಿಕ್ವನ ಮಗ ಯಹ್ಜೆಯ ಇದನ್ನು ವಿರೋಧಿಸಿದರು. ಮೆಷುಲ್ಲಾಮನೂ ಲೇವಿಯನಾದ ಶಬ್ಬೆತೈನೂ ಅವರನ್ನು ಬೆಂಬಲಿಸಿದರು.
ಎಜ್ರನು 10 : 16 (OCVKN)
ಸೆರೆಯಿಂದ ಬಂದವರು ಇದೇ ಪ್ರಕಾರ ಮಾಡಿದರು. ಆದ್ದರಿಂದ ಯಾಜಕ ಎಜ್ರನು, ಕುಟುಂಬಗಳ ಮುಖ್ಯಸ್ಥರನ್ನಾಗಿ ಕುಟುಂಬಕ್ಕೆ ಒಬ್ಬೊಬ್ಬರನ್ನು ಆಯ್ದುಕೊಂಡನು. ಅವರನ್ನು ಹೆಸರು ಹಿಡಿದು ನೇಮಿಸಿದನು. ಈ ಕಾರ್ಯವನ್ನು ಶೋಧಿಸಲು ಹತ್ತನೆಯ ತಿಂಗಳ, ಮೊದಲನೆಯ ದಿವಸದಲ್ಲಿ ಕುಳಿತುಕೊಂಡರು.
ಎಜ್ರನು 10 : 17 (OCVKN)
ಅನ್ಯ ಸ್ತ್ರೀಯರನ್ನು ಹೊಂದಿದವರೆಲ್ಲರ ಕಾರ್ಯವನ್ನು ಮೊದಲನೆಯ ತಿಂಗಳ, ಮೊದಲನೆಯ ದಿವಸದಲ್ಲಿ ಮುಗಿಸಿದರು.
ಎಜ್ರನು 10 : 18 (OCVKN)
ಅಂತರ ವಿವಾಹದಿಂದ ಅಪರಾಧಿಗಳಾದವರು ಯಾಜಕರ ವಂಶಜರಲ್ಲಿ ಅನ್ಯ ಸ್ತ್ರೀಯರನ್ನು ಮದುವೆ ಮಾಡಿಕೊಂಡವರು ಯಾರೆಂದರೆ: ಯೋಚಾದಾಕನ ಮಗ ಯೇಷೂವನು ಮತ್ತು ಅವನ ಸಹೋದರರಲ್ಲಿ: ಮಾಸೇಯನು, ಎಲೀಯೆಜೆರನು, ಯಾರೀಬನು, ಗೆದಲ್ಯನು.
ಎಜ್ರನು 10 : 19 (OCVKN)
ಇವರು ತಮ್ಮ ಹೆಂಡತಿಯರನ್ನು ಹೊರಡಿಸಿಬಿಡುವೆವೆಂದು ಪ್ರತಿಜ್ಞೆ ಮಾಡಿ, ತಾವು ಅಪರಾಧಸ್ಥರಾದ್ದರಿಂದ ಅಪರಾಧ ಕಳೆಯುವುದಕ್ಕೆ ಮಂದೆಯಿಂದ ತಂದ ಒಂದು ಟಗರನ್ನು ಅರ್ಪಿಸಿದರು.
ಎಜ್ರನು 10 : 20 (OCVKN)
ಇಮ್ಮೇರನ ವಂಶಜರಲ್ಲಿ: ಹನಾನೀ, ಜೆಬದ್ಯ.
ಎಜ್ರನು 10 : 21 (OCVKN)
ಹಾರಿಮನ ವಂಶಜರಲ್ಲಿ: ಮಾಸೇಯ, ಎಲೀಯ, ಶೆಮಾಯ, ಯೆಹೀಯೇಲ್, ಉಜ್ಜೀಯ.
ಎಜ್ರನು 10 : 22 (OCVKN)
ಪಷ್ಹೂರನ ವಂಶಜರಲ್ಲಿ: ಎಲ್ಯೋವೇನೈ, ಮಾಸೇಯ, ಇಷ್ಮಾಯೇಲ್, ನೆತನೆಯೇಲ್, ಯೋಜಾಬಾದ್ ಮತ್ತು ಎಲ್ಲಾಸ.
ಎಜ್ರನು 10 : 23 (OCVKN)
ಲೇವಿಯರಲ್ಲಿ ಯೋಜಾಬಾದ್, ಶಿಮ್ಮೀ, ಕೆಲೀಟನೆಂಬ ಕೇಲಾಯ, ಪೆತಹ್ಯ, ಯೆಹೂದ, ಎಲೀಯೆಜೆರ್.
ಎಜ್ರನು 10 : 24 (OCVKN)
ಹಾಡುಗಾರರಲ್ಲಿ: ಎಲ್ಯಾಷೀಬ್. ದ್ವಾರಪಾಲಕರಲ್ಲಿ: ಶಲ್ಲೂಮ್, ಟೆಲೆಮ್, ಊರಿ.
ಎಜ್ರನು 10 : 25 (OCVKN)
ಇಸ್ರಾಯೇಲರಲ್ಲಿ: ಪರೋಷನ ವಂಶಜರಲ್ಲಿ: ರಮ್ಯಾಹ, ಇಜ್ಜೀಯ, ಮಲ್ಕೀಯ, ಮಿಯಾಮಿನ್, ಎಲಿಯಾಜರ್, ಮಲ್ಕೀಯ, ಬೆನಾಯ.
ಎಜ್ರನು 10 : 26 (OCVKN)
ಏಲಾಮನ ವಂಶಜರಲ್ಲಿ: ಮತ್ತನ್ಯ, ಜೆಕರ್ಯ, ಯೆಹೀಯೇಲ್, ಅಬ್ದೀ, ಯೆರೀಮೋತ್, ಎಲೀಯ.
ಎಜ್ರನು 10 : 27 (OCVKN)
ಜತ್ತೂ ವಂಶಜರಲ್ಲಿ: ಎಲ್ಯೋವೇನೈ, ಎಲ್ಯಾಷೀಬ್, ಮತ್ತನ್ಯ, ಯೆರೀಮೋತ್, ಜಾಬಾದ್ ಮತ್ತು ಅಜೀಜಾ.
ಎಜ್ರನು 10 : 28 (OCVKN)
ಬೇಬೈನ ವಂಶಜರಲ್ಲಿ: ಯೆಹೋಹಾನಾನ್, ಹನನ್ಯ, ಜಬ್ಬೈ, ಅತ್ಲೈ.
ಎಜ್ರನು 10 : 29 (OCVKN)
ಬಾನೀ ವಂಶಜರಲ್ಲಿ: ಮೆಷುಲ್ಲಾಮ್, ಮಲ್ಲೂಕ್, ಅದಾಯ, ಯಾಷೂಬ್, ಶೆಯಾಲ್ ಮತ್ತು ರಾಮೋತ್.
ಎಜ್ರನು 10 : 30 (OCVKN)
ಪಹತ್ ಮೋವಾಬಿನ ವಂಶಜರಲ್ಲಿ: ಅದ್ನ, ಕೆಲಾಲ್, ಬೆನಾಯ, ಮಾಸೇಯ, ಮತ್ತನ್ಯ, ಬೆಚಲಯೇಲ್, ಬಿನ್ನೂಯ್, ಮನಸ್ಸೆ.
ಎಜ್ರನು 10 : 31 (OCVKN)
ಹಾರಿಮನ ವಂಶಜರಲ್ಲಿ: ಎಲೀಯೆಜೆರ್, ಇಷೀಯ, ಮಲ್ಕೀಯ, ಶೆಮಾಯ, ಸಿಮೆಯೋನ್,
ಎಜ್ರನು 10 : 32 (OCVKN)
ಬೆನ್ಯಾಮೀನ್, ಮಲ್ಲೂಕ್, ಶೆಮರ್ಯ.
ಎಜ್ರನು 10 : 33 (OCVKN)
ಹಾಷುಮ್ ವಂಶಜರಲ್ಲಿ: ಮತ್ತೆನೈ, ಮತ್ತತ್ತ, ಜಾಬಾದ್, ಎಲೀಫೆಲೆಟ್, ಯೆರೇಮೈ, ಮನಸ್ಸೆ, ಶಿಮ್ಮೀ.
ಎಜ್ರನು 10 : 34 (OCVKN)
ಬಾನೀ ವಂಶಜರಲ್ಲಿ: ಮಾದೈ, ಅಮ್ರಾಮ್, ಉಯೇಲ್,
ಎಜ್ರನು 10 : 35 (OCVKN)
ಬೆನಾಯ, ಬೇದೆಯ, ಕೆಲೂಹಿ.
ಎಜ್ರನು 10 : 36 (OCVKN)
ವನ್ಯಾಹ, ಮೆರೇಮೋತ್, ಎಲ್ಯಾಷೀಬ್,
ಎಜ್ರನು 10 : 37 (OCVKN)
ಮತ್ತನ್ಯ, ಮತ್ತೆನೈ, ಯಾಸೈ.
ಎಜ್ರನು 10 : 38 (OCVKN)
ಬಾನೀ, ಬಿನ್ನೂಯ್ ವಂಶಜರಲ್ಲಿ: ಶಿಮ್ಮೀ,
ಎಜ್ರನು 10 : 39 (OCVKN)
ಶೆಲೆಮ್ಯ, ನಾತಾನ್, ಅದಾಯ,
ಎಜ್ರನು 10 : 40 (OCVKN)
ಮಕ್ನದೆಬೈ, ಶಾಷೈ, ಶಾರೈ,
ಎಜ್ರನು 10 : 41 (OCVKN)
ಅಜರಯೇಲ್, ಶೆಲೆಮ್ಯ, ಶೆಮರ್ಯ,
ಎಜ್ರನು 10 : 42 (OCVKN)
ಶಲ್ಲೂಮ್, ಅಮರ್ಯ, ಯೋಸೇಫ್.
ಎಜ್ರನು 10 : 43 (OCVKN)
ನೆಬೋ ವಂಶಜರಲ್ಲಿ: ಯೆಹಿಯೇಲ್, ಮತ್ತಿತ್ಯ, ಜಾಬಾದ್, ಜೆಬೀನ, ಯದ್ದೈ, ಯೋಯೇಲ್ ಮತ್ತು ಬೆನಾಯ.
ಎಜ್ರನು 10 : 44 (OCVKN)
ಇವರೆಲ್ಲರು ಅನ್ಯ ಸ್ತ್ರೀಯರನ್ನು ಮದುವೆಯಾಗಿದ್ದರು. ಇವರಲ್ಲಿ ಕೆಲವರಿಗೆ ಈ ಹೆಂಡತಿಯರಿಂದ ಮಕ್ಕಳಾಗಿದ್ದರು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35 36 37 38 39 40 41 42 43 44