ಯೆಹೆಜ್ಕೇಲನು 44 : 1 (OCVKN)
ಯಾಜಕತ್ವದ ಪುನಃಸ್ಥಾಪನೆ ಆಮೇಲೆ ಅವನು ನನ್ನನ್ನು ಪೂರ್ವದಿಕ್ಕಿಗೆ ಅಭಿಮುಖವಾದ ಹೊರಗಿನ ಪರಿಶುದ್ಧಸ್ಥಳದ ಬಾಗಿಲಿನ ಮಾರ್ಗವಾಗಿ ಮತ್ತೆ ಬರಮಾಡಿದನು. ಅದು ಮುಚ್ಚಿತ್ತು.
ಯೆಹೆಜ್ಕೇಲನು 44 : 2 (OCVKN)
ಆಮೇಲೆ ಯೆಹೋವ ದೇವರು ನನಗೆ ಹೇಳಿದ್ದೇನೆಂದರೆ: “ಈ ಬಾಗಿಲು ಮುಚ್ಚೇ ಇರಬೇಕು. ಇದು ತೆರೆಯಬಾರದು. ಯಾವ ಮನುಷ್ಯನೂ ಇದರಿಂದ ಪ್ರವೇಶಿಸಬಾರದು. ಏಕೆಂದರೆ ಇಸ್ರಾಯೇಲರ ಯೆಹೋವ ದೇವರು ಇದರಿಂದ ಪ್ರವೇಶಿಸಿದ್ದಾರೆ. ಆದ್ದರಿಂದ ಇದು ಮುಚ್ಚಿರಬೇಕು.
ಯೆಹೆಜ್ಕೇಲನು 44 : 3 (OCVKN)
ಇದು ಪ್ರಭುವಿಗಾಗಿ ಇದೆ; ಪ್ರಭುವು ಅವರೊಳಗೆ ಕುಳಿತುಕೊಂಡು, ಯೆಹೋವ ದೇವರ ಮುಂದೆ ರೊಟ್ಟಿಯನ್ನು ತಿನ್ನಬೇಕು. ಆತನು ಆ ಬಾಗಿಲಿನ ಪಡಸಾಲೆಯ ಮೂಲಕ ಪ್ರವೇಶಿಸಿ ಅದೇ ಮಾರ್ಗವಾಗಿ ಹೊರಗೆ ಹೋಗಬೇಕು.”
ಯೆಹೆಜ್ಕೇಲನು 44 : 4 (OCVKN)
ಯೆಹೆಜ್ಕೇಲನು 44 : 5 (OCVKN)
ಆಮೇಲೆ ಅವನು ನನ್ನನ್ನು ಉತ್ತರದ ಬಾಗಿಲಿನ ಮಾರ್ಗವಾಗಿ ಆಲಯದ ಮುಂದೆ ಕರೆದುಕೊಂಡು ಹೋದನು. ನಾನು ನೋಡಿದೆ ಯೆಹೋವ ದೇವರ ಮಹಿಮೆಯು ಯೆಹೋವ ದೇವರ ಆಲಯವನ್ನು ತುಂಬಿಕೊಂಡಿತು, ನಾನು ಬೋರಲು ಬಿದ್ದೆನು. ಯೆಹೋವ ದೇವರು ನನಗೆ ಹೇಳಿದ್ದೇನೆಂದರೆ, “ಮನುಷ್ಯಪುತ್ರನೇ, ಯೆಹೋವ ದೇವರ ಆಲಯದ ಸಕಲ ನೇಮನಿಷ್ಠೆಗಳ ವಿಷಯವಾಗಿಯೂ ನಿಯಮದ ವಿಷಯವಾಗಿಯೂ ನಾನು ನಿನಗೆ ಹೇಳುವುದನ್ನೆಲ್ಲಾ ನೀನು ಕಿವಿಯಾರೆ ಕೇಳಿ, ಕಣ್ಣಾರೆ ಕಂಡು ಮನದಟ್ಟು ಮಾಡಿಕೋ. ಆಲಯದೊಳಗಿನ ಪ್ರವೇಶವನ್ನೂ ಪರಿಶುದ್ಧಸ್ಥಳದ ಪ್ರತಿಯೊಂದು ಹಾದುಹೋಗುಗಳನ್ನೂ ಗಮನಿಸು.
ಯೆಹೆಜ್ಕೇಲನು 44 : 6 (OCVKN)
ತಿರುಗಿಬೀಳುವ ಇಸ್ರಾಯೇಲನ ಮನೆತನದವರಿಗೆ ನೀನು ಹೇಳಬೇಕಾದದ್ದೇನೆಂದರೆ, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ಇಸ್ರಾಯೇಲಿನ ಮನೆತನದವರೇ, ನೀವು ನಿಮ್ಮ ಎಲ್ಲಾ ಅಸಹ್ಯಗಳನ್ನು ಸಾಕುಮಾಡಿರಿ.
ಯೆಹೆಜ್ಕೇಲನು 44 : 7 (OCVKN)
ಅವುಗಳಲ್ಲಿ ನೀವು ನನ್ನ ರೊಟ್ಟಿಯನ್ನೂ ಕೊಬ್ಬನ್ನೂ ರಕ್ತವನ್ನೂ ಅರ್ಪಿಸುವಾಗ ನಿಮ್ಮ ಎಲ್ಲಾ ಅಸಹ್ಯಗಳಿಗೋಸ್ಕರ ನನ್ನ ಒಡಂಬಡಿಕೆಯನ್ನು ಮೀರುವಂಥ ಹೃದಯದಲ್ಲಿಯೂ ಶರೀರದಲ್ಲಿಯೂ ಸುನ್ನತಿಯಿಲ್ಲದಂಥ ಪರಕೀಯರನ್ನು ನನ್ನ ಪರಿಶುದ್ಧ ಸ್ಥಳಕ್ಕೆ ಕರೆತಂದು ನನ್ನ ಆಲಯವನ್ನು ಅಪವಿತ್ರಪಡಿಸಿದಿರಿ.
ಯೆಹೆಜ್ಕೇಲನು 44 : 8 (OCVKN)
ನೀವು ನನ್ನ ಪರಿಶುದ್ಧ ವಸ್ತುಗಳನ್ನು ಕಾಯಲಿಲ್ಲ, ಬದಲಿಗೆ ಅನ್ಯದೇಶೀಯರನ್ನು ನನ್ನ ಪರಿಶುದ್ಧ ಸ್ಥಳದಲ್ಲಿ ನನ್ನ ವಸ್ತುಗಳ ಮೇಲೆ ಪಾರುಪತ್ಯಗಾರರನ್ನಾಗಿ ನೇಮಿಸಿದಿರಿ.
ಯೆಹೆಜ್ಕೇಲನು 44 : 9 (OCVKN)
ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ಹೃದಯದಲ್ಲಿಯೂ ಶರೀರದಲ್ಲಿಯೂ ಸುನ್ನತಿಯಿಲ್ಲದ ಯಾವೊಬ್ಬ ಪರಕೀಯನೂ ಇಸ್ರಾಯೇಲರೊಳಗಿರುವ ಯಾವೊಬ್ಬ ಅಪರಿಚಿತನೂ ನನ್ನ ಪರಿಶುದ್ಧ ಸ್ಥಳದೊಳಗೆ ಪ್ರವೇಶಿಸಬಾರದು.
ಯೆಹೆಜ್ಕೇಲನು 44 : 10 (OCVKN)
“ ‘ಇಸ್ರಾಯೇಲರು ತಪ್ಪಿಸಿಕೊಂಡು ನನ್ನಿಂದ ಅಗಲಿ, ತಮ್ಮ ವಿಗ್ರಹಗಳ ಕಡೆಗೆ ತಿರುಗಿಕೊಂಡ ವೇಳೆಯಲ್ಲಿ ನನಗೆ ದೂರವಾಗಿ ಹೋದ ಲೇವಿಯರೂ ಸಹ ತಮ್ಮ ಪಾಪಗಳನ್ನು ಹೊರುವರು.
ಯೆಹೆಜ್ಕೇಲನು 44 : 11 (OCVKN)
ಆದರೂ ಅವರು ನನ್ನ ಪರಿಶುದ್ಧ ಸ್ಥಳದಲ್ಲಿ ಸೇವಿಸುವವರಾಗಿರುವರು. ಆಲಯದ ಬಾಗಿಲುಗಳ ಮೇಲ್ವಿಚಾರವನ್ನು ಹೊಂದಿ ಆಲಯಕ್ಕೆ ಸೇವೆಮಾಡುವರು. ಅವರು ಜನರಿಗೋಸ್ಕರ ದಹನಬಲಿಯನ್ನೂ ಸಮಾಧಾನ ಬಲಿಯನ್ನೂ ಮಾಡಿ ಅವರಿಗೆ ಸೇವೆ ಮಾಡುವ ಹಾಗೆ ಅವರ ಮುಂದೆ ನಿಲ್ಲುವರು.
ಯೆಹೆಜ್ಕೇಲನು 44 : 12 (OCVKN)
ಆದರೆ ಅವರು ತಮ್ಮ ವಿಗ್ರಹಗಳ ಮುಂದೆ ಜನರಿಗಾಗಿ ಸೇವೆಮಾಡಿ ಇಸ್ರಾಯೇಲಿನ ಮನೆತನದವರಿಗೆ ಪಾಪದ ಆತಂಕವಾದದ್ದರಿಂದ, ನಾನು ಅವರಿಗೆ ವಿರುದ್ಧವಾಗಿ ನನ್ನ ಕೈಯನ್ನು ಚಾಚಿದ್ದೇನೆ. ಅವರು ತಮ್ಮ ಪಾಪವನ್ನು ಹೊರುವರೆಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.
ಯೆಹೆಜ್ಕೇಲನು 44 : 13 (OCVKN)
ಅವರು ಯಾಜಕರಾಗಿ ನನ್ನನ್ನು ಸಮೀಪಿಸದೆ ಮಹಾಪರಿಶುದ್ಧ ಸ್ಥಳದಲ್ಲಿ ನನ್ನ ಪರಿಶುದ್ಧವಾದವುಗಳಲ್ಲಿ ಒಂದನ್ನಾದರೂ ಸಮೀಪಿಸದೆ, ತಮ್ಮ ನಾಚಿಕೆಯನ್ನೂ ತಾವು ಮಾಡಿದ ಅಸಹ್ಯಗಳನ್ನೂ ಹೊರುವರು.
ಯೆಹೆಜ್ಕೇಲನು 44 : 14 (OCVKN)
ಆದರೆ ನಾನು ಅವರನ್ನು ಆಲಯದ ಎಲ್ಲಾ ಸೇವೆಗೋಸ್ಕರವೂ ಅದರಲ್ಲಿ ಮಾಡುವಂತಹ ಎಲ್ಲವುಗಳಿಗೋಸ್ಕರವೂ ಆಲಯದ ಕಾರ್ಯಗಳನ್ನು ನೋಡಿಕೊಳ್ಳುವವರನ್ನಾಗಿ ಮಾಡುವೆನು.
ಯೆಹೆಜ್ಕೇಲನು 44 : 15 (OCVKN)
“ ‘ಆದರೆ ಇಸ್ರಾಯೇಲರು ನನ್ನನ್ನು ಬಿಟ್ಟುಹೋದಾಗ ನನ್ನ ಪರಿಶುದ್ಧಸ್ಥಳದ ಕಾಯಿದೆಯನ್ನು ಪಾಲಿಸಿದ ಚಾದೋಕನ ಮಕ್ಕಳಾಗಿರುವ ಲೇವಿಯರಾದ ಯಾಜಕರೂ ಇವರು ನನಗೆ ಸೇವೆಮಾಡುವಂತೆ ನನ್ನ ಸಮೀಪಕ್ಕೆ ಬಂದು, ನನ್ನ ಮುಂದೆ ನಿಂತು, ನನಗೆ ಕೊಬ್ಬನ್ನೂ ರಕ್ತವನ್ನೂ ಅರ್ಪಿಸುವರೆಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.
ಯೆಹೆಜ್ಕೇಲನು 44 : 16 (OCVKN)
ಇವರು ಮಾತ್ರ ನನ್ನ ಪರಿಶುದ್ಧ ಸ್ಥಳವನ್ನು ಪ್ರವೇಶಿಸಿ, ಇವರು ಮಾತ್ರ ನನಗೆ ಸೇವೆ ಮಾಡುವುದಕ್ಕಾಗಿ ನನ್ನ ಮೇಜಿನ ಬಳಿಗೆ ಬರುವರು ಮತ್ತು ನನಗೆ ಕಾವಲುಗಾರರಾಗಿ ಸೇವೆ ಸಲ್ಲಿಸಬೇಕು.
ಯೆಹೆಜ್ಕೇಲನು 44 : 17 (OCVKN)
“ ‘ಅವರು ಒಳಗಿನ ಅಂಗಳಗಳ ಬಾಗಿಲನ್ನು ಪ್ರವೇಶಿಸುವಾಗ ನಾರಿನ ವಸ್ತ್ರಗಳನ್ನು ಧರಿಸಿಕೊಳ್ಳಬೇಕು. ಅವರು ಒಳಗಿನ ಅಂಗಳದ ಬಾಗಿಲುಗಳಲ್ಲಿಯೂ ಒಳಗಡೆಯೂ ಸೇವಿಸುತ್ತಿರುವಾಗ ಅವರ ಮೇಲೆ ಉಣ್ಣೆಯ ಉಡುಪೂ ಇರಕೂಡದು.
ಯೆಹೆಜ್ಕೇಲನು 44 : 18 (OCVKN)
ಅವರ ತಲೆಗಳ ಮೇಲೆ ನಾರಿನ ಮುಂಡಾಸಗಳೂ, ಅವರ ಸೊಂಟಗಳ ಮೇಲೆ ನಾರಿನ ಒಳಉಡುಪುಗಳೂ ಇರಬೇಕು. ಅವರು ಬೆವರು ಬರುವಂಥವುಗಳನ್ನು ಕಟ್ಟಿಕೊಳ್ಳಬಾರದು.
ಯೆಹೆಜ್ಕೇಲನು 44 : 19 (OCVKN)
ಇದಲ್ಲದೆ ಅವರು ಹೊರಗಿನ ಅಂಗಳಕ್ಕೆ ತೀರಾ ಹೊರಗಿನ ಅಂಗಳಕ್ಕೆ ಜನರ ಬಳಿಗೆ ಹೋಗುವಾಗ ತಾವು ಸೇವೆಮಾಡಿದ ತಮ್ಮ ವಸ್ತ್ರಗಳನ್ನು ತೆಗೆದು ಪರಿಶುದ್ಧ ಕೊಠಡಿಗಳಲ್ಲಿ ಇಟ್ಟು ಬೇರೆ ವಸ್ತ್ರಗಳನ್ನು ಧರಿಸಿಕೊಳ್ಳಬೇಕು. ತಮ್ಮ ವಸ್ತ್ರಗಳಿಂದ ಜನರನ್ನು ಪರಿಶುದ್ಧಗೊಳಿಸಬಾರದು.
ಯೆಹೆಜ್ಕೇಲನು 44 : 20 (OCVKN)
“ ‘ಅವರು ತಮ್ಮ ತಲೆಗಳನ್ನು ಬೋಳಿಸಿಕೊಳ್ಳದೆ ಉದ್ದಕೂದಲನ್ನು ಬೆಳೆಸದೆ ತಮ್ಮ ತಲೆ ಕೂದಲುಗಳನ್ನು ಕತ್ತರಿಸಬೇಕು.
ಯೆಹೆಜ್ಕೇಲನು 44 : 21 (OCVKN)
ಯಾವ ಯಾಜಕನೇ ಆಗಲಿ, ಒಳಗಿನ ಅಂಗಳದಲ್ಲಿ ಪ್ರವೇಶಿಸುವಾಗ ದ್ರಾಕ್ಷಾರಸವನ್ನು ಕುಡಿಯಬಾರದು.
ಯೆಹೆಜ್ಕೇಲನು 44 : 22 (OCVKN)
ಯಾಜಕರು ವಿಧವೆಯನ್ನಾಗಲಿ ಗಂಡನಿಂದ ಬಿಡಲಾದವಳನ್ನಾಗಲಿ ಮದುವೆಯಾಗಬಾರದು; ಆದರೆ ಇಸ್ರಾಯೇಲ್ ಸಂತಾನದ ಕನ್ಯೆಯನ್ನಾಗಲಿ, ಯಾಜಕನ ವಿಧವೆಯನ್ನಾಗಲಿ ಮದುವೆಮಾಡಿಕೊಳ್ಳಲಿ.
ಯೆಹೆಜ್ಕೇಲನು 44 : 23 (OCVKN)
ಅವರು ನನ್ನ ಜನರಿಗೆ ಪರಿಶುದ್ಧವಾದದ್ದಕ್ಕೂ ಅಪವಿತ್ರವಾದದ್ದಕ್ಕೂ ಇರುವ ವ್ಯತ್ಯಾಸವನ್ನು ಬೋಧಿಸಿ, ಅವರಿಗೆ ಶುದ್ಧಾಶುದ್ಧ ವ್ಯತ್ಯಾಸವನ್ನೂ ವಿವರಿಸಬೇಕು.
ಯೆಹೆಜ್ಕೇಲನು 44 : 24 (OCVKN)
ಯೆಹೆಜ್ಕೇಲನು 44 : 25 (OCVKN)
“ ‘ವ್ಯಾಜ್ಯವಾಗುವಾಗ ಅದನ್ನು ತೀರಿಸಲು ಯಾಜಕರು ನನ್ನ ನ್ಯಾಯಾನುಸಾರವಾಗಿ ನ್ಯಾಯಾಧಿಪತಿಗಳಾಗಿ ನ್ಯಾಯತೀರಿಸಲಿ. ಅವರು ನನ್ನ ತೀರ್ಪುಗಳನ್ನೂ, ನನ್ನ ನಿಯಮಗಳನ್ನೂ ನಾನು ನೇಮಿಸಿದ ಹಬ್ಬಗಳಲ್ಲಿಯೂ ನನ್ನ ಸಬ್ಬತ್ ದಿನಗಳಲ್ಲಿಯೂ ಪರಿಶುದ್ಧವಾಗಿ ಪಾಲಿಸಬೇಕು. “ ‘ಯಾಜಕರು ಸತ್ತ ಮನುಷ್ಯರ ಬಳಿಗೆ ಬಂದು ಅಶುದ್ಧರಾಗಬಾರದು. ಆದರೆ ತಂದೆತಾಯಿ, ಮಗ, ಮಗಳು, ಸಹೋದರ, ಗಂಡನಿಲ್ಲದ ಸಹೋದರಿ, ಇವರಿಗೋಸ್ಕರ ಅವರು ಅಶುದ್ಧರಾಗಬಹುದು.
ಯೆಹೆಜ್ಕೇಲನು 44 : 26 (OCVKN)
ಅವನು ಶುದ್ಧನಾದ ಮೇಲೆ ಅವನಿಗೆ ಏಳು ದಿವಸಗಳನ್ನು ಪ್ರತ್ಯೇಕಿಸಬೇಕು.
ಯೆಹೆಜ್ಕೇಲನು 44 : 27 (OCVKN)
ಅವನು ಪರಿಶುದ್ಧ ಸ್ಥಳದಲ್ಲಿ ಸೇವೆಮಾಡುವುದಕ್ಕೋಸ್ಕರ ಒಳಗಿನ ಅಂಗಳದ ಪರಿಶುದ್ಧ ಸ್ಥಳಕ್ಕೆ ಬರುವ ದಿನದಲ್ಲಿ ತನ್ನ ಪಾಪ ಪರಿಹಾರಕ ಬಲಿಯನ್ನು ಅರ್ಪಿಸಬೇಕೆಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.
ಯೆಹೆಜ್ಕೇಲನು 44 : 28 (OCVKN)
“ ‘ಅದು ಅವರಿಗೆ ಬಾಧ್ಯತೆಯಾಗಿರುವುದು; ನಾನೇ ಅವರಿಗೆ ಬಾಧ್ಯನಾಗಿರುವೆನು. ನೀವು ಇಸ್ರಾಯೇಲಿನಲ್ಲಿ ಅವರಿಗೆ ಸ್ವಾಸ್ತ್ಯವನ್ನು ಕೊಡಬಾರದು. ಏಕೆಂದರೆ ನಾನೇ ಅವರಿಗೆ ಸ್ವಾಸ್ತ್ಯವಾಗಿರುವೆನು.
ಯೆಹೆಜ್ಕೇಲನು 44 : 29 (OCVKN)
ಧಾನ್ಯ ಸಮರ್ಪಣೆಯನ್ನು ದೋಷಪರಿಹಾರ ಬಲಿಯನ್ನೂ ಪ್ರಾಯಶ್ಚಿತ್ತ ಬಲಿಯನ್ನೂ ಅವರು ತಿನ್ನಬೇಕು. ಇಸ್ರಾಯೇಲಿನಲ್ಲಿ ಯೆಹೋವ ದೇವರಿಗೆ ಪ್ರತಿಷ್ಠೆ ಮಾಡಿದ್ದೆಲ್ಲವೂ ಅವರಿಗೆ ಸಲ್ಲಬೇಕು.
ಯೆಹೆಜ್ಕೇಲನು 44 : 30 (OCVKN)
ಇದಲ್ಲದೆ ಎಲ್ಲಾ ಪ್ರಥಮ ಫಲಗಳಲ್ಲಿ ಉತ್ಕೃಷ್ಟವಾದದ್ದೂ ನೀವು ನನಗೆ ಪ್ರತ್ಯೇಕಿಸಿ ಸಮರ್ಪಿಸಿದ ಎಲ್ಲಾ ಪದಾರ್ಥಗಳು ಯಾಜಕನದ್ದಾಗಬೇಕು. ನಿಮ್ಮ ಮನೆಯು ಆಶೀರ್ವಾದಕ್ಕೆ ನೆಲೆಯಾಗುವಂತೆ ನೀವು ಮೊದಲನೆಯ ಹಿಟ್ಟನ್ನು ನೀವು ಯಾಜಕರಿಗೆ ಕೊಡತಕ್ಕದ್ದು.
ಯೆಹೆಜ್ಕೇಲನು 44 : 31 (OCVKN)
ಯಾಜಕರು ತಾನಾಗಿ ಸತ್ತುಬಿದ್ದ ಅಥವಾ ಕಾಡುಮೃಗದಿಂದ ಕೊಲ್ಲಲಾದ ಪಕ್ಷಿಯನ್ನಾಗಲಿ, ಪ್ರಾಣಿಯನ್ನಾಗಲಿ ತಿನ್ನಬಾರದು.
❮
❯