ಯೆಹೆಜ್ಕೇಲನು 41 : 1 (OCVKN)
ಆಮೇಲೆ, ಆ ಮನುಷ್ಯನು ನನ್ನನ್ನು ದೇವಾಲಯಕ್ಕೆ ಕರೆತಂದು ಕಂಬಗಳನ್ನು ಎರಡೂ ಕಡೆಯಲ್ಲಿ ಸುಮಾರು 3.2 ಮೀಟರ್ ಎಂದು ಅಳೆದನು. ಇದೇ ಆ ಗುಡಾರದ ಉದ್ದಗಲವಾಗಿತ್ತು.
ಯೆಹೆಜ್ಕೇಲನು 41 : 2 (OCVKN)
ಬಾಗಿಲಿನ ಅಗಲವು ಸುಮಾರು ಐದು ಮೀಟರ್ ಮತ್ತು ಅದರ ಎರಡೂ ಬದಿಗಳಲ್ಲಿ ಗೋಡೆಗಳ ಅಗಲ ಸುಮಾರು ಎರಡೂವರೆ ಮೀಟರ್. ಅವನು ಮುಖ್ಯಸಭಾಂಗಣವನ್ನೂ ಅಳೆದನು. ಅದು ಸುಮಾರು ಇಪ್ಪತ್ತೊಂದು ಮೀಟರ್ ಉದ್ದ ಮತ್ತು ಸುಮಾರು ಹನ್ನೊಂದು ಮೀಟರ್ ಅಗಲವಿತ್ತು.
ಯೆಹೆಜ್ಕೇಲನು 41 : 3 (OCVKN)
ಅನಂತರ ಅವನು ಒಳಗೆ ಹೋಗಿ ಪರಿಶುದ್ಧಸ್ಥಳದ ಪ್ರವೇಶದ್ವಾರದ ಕಂಬಗಳನ್ನು ಅಳೆದನು; ಒಂದೊಂದು ಕಂಬವು ಸುಮಾರು ಒಂದು ಮೀಟರ್ ಅಗಲವಿತ್ತು. ಪ್ರವೇಶದ್ವಾರವು ಸುಮಾರು ಮೂರು ಮೀಟರ್ ಅಗಲವಾಗಿತ್ತು ಮತ್ತು ಅದರ ಎರಡೂ ಬದಿಯ ಗೋಡೆಯು ಸುಮಾರು ನಾಲ್ಕು ಮೀಟರ್ ಅಗಲವಾಗಿತ್ತು.
ಯೆಹೆಜ್ಕೇಲನು 41 : 4 (OCVKN)
ಅವನು ಒಳಗಿನ ಪರಿಶುದ್ಧಸ್ಥಳದ ಉದ್ದವನ್ನು ಅಳೆದನು; ಅದು ಸುಮಾರು ಹತ್ತು ಮೀಟರ್ ಆಗಿತ್ತು; ಅದರ ಅಗಲವು ಮುಖ್ಯ ಸಭಾಂಗಣದ ಕೊನೆಯವರೆಗೂ ಸುಮಾರು ಹತ್ತು ಮೀಟರ್ ಆಗಿತ್ತು. ಅವನು ನನಗೆ, “ಇದು ಅತ್ಯಂತ ಪವಿತ್ರ ಸ್ಥಳವಾಗಿದೆ” ಎಂದು ಹೇಳಿದನು.
ಯೆಹೆಜ್ಕೇಲನು 41 : 5 (OCVKN)
ಅನಂತರ ಅವನು ಆಲಯದ ಗೋಡೆಯನ್ನು ಅಳೆದನು; ಅದು ಸುಮಾರು ಮೂರು ಮೀಟರ್ ದಪ್ಪವಾಗಿತ್ತು, ಮತ್ತು ಆಲಯದ ಸುತ್ತಲಿನ ಕೋಣೆಗಳ ಅಗಲವು ಪ್ರತಿ ಬದಿಯಲ್ಲಿ ಸುಮಾರು ಎರಡು ಮೀಟರ್ ಆಗಿತ್ತು.
ಯೆಹೆಜ್ಕೇಲನು 41 : 6 (OCVKN)
ಆ ಕೊಠಡಿಗಳು ಒಂದರ ಮೇಲೊಂದು ಮೂರು ಅಂತಸ್ತಾಗಿದ್ದವು; ಒಂದೊಂದು ಅಂತಸ್ತಿನಲ್ಲಿ ಮೂವತ್ತು ಮೂವತ್ತು ಕೊಠಡಿಗಳಿದ್ದವು. ಪಕ್ಕದ ಕೋಣೆಗಳಿಗೆ ಆಧಾರವಾಗಿ ದೇವಾಲಯದ ಗೋಡೆಯ ಸುತ್ತಲೂ ಮುಂಚಾಚಿರುವಿಕೆಗಳು ಇದ್ದವು. ಇದರಿಂದಾಗಿ ಪೋಷಕ ಭಾಗಗಳನ್ನು ದೇವಾಲಯದ ಗೋಡೆಯೊಳಗೆ ಸೇರಿಸಲಾಗಿಲ್ಲ.
ಯೆಹೆಜ್ಕೇಲನು 41 : 7 (OCVKN)
ಸುತ್ತಣ ಅಂತಸ್ತುಗಳು ಮೇಲೆ ಮೇಲೆ ಹೋದ ಹಾಗೆ ಆಯಾ ಕೊಠಡಿಗಳ ಅಗಲವು ಹೆಚ್ಚುತ್ತಾ ಬಂದಿತು. ಅವು ಮನೆಯನ್ನು ಸುತ್ತಿಕೊಂಡು ಮೇಲೆ ಮೇಲೆ ಹೋದ ಹಾಗೆಲ್ಲಾ ಅದನ್ನು ಬಿಗಿಯಾಗಿ ಹಿಡಿದುಕೊಂಡಂತೆ ಇದ್ದವು; ಹೀಗೆ ಮೇಲಿನ ಅಂತಸ್ತುಗಳು ಮನೆಯ ಕಡೆಗೆ ಅಗಲವಾಗುತ್ತಾ ಬಂದವು; ಕೆಳಗಿನ ಅಂತಸ್ತಿನಿಂದ ಮಧ್ಯದ ಅಂತಸ್ತಿನ ಮಾರ್ಗವಾಗಿ ಮೇಲಿನ ಅಂತಸ್ತಿಗೆ ಹತ್ತುತ್ತಿದ್ದವು.
ಯೆಹೆಜ್ಕೇಲನು 41 : 8 (OCVKN)
ಆಲಯದ ಸುತ್ತಮುತ್ತಲೂ ಒಂದು ಜಗಲಿಯನ್ನು ನಾನು ನೋಡಿದೆನು. ಅದು ಪಕ್ಕದ ಕೊಠಡಿಗಳಿಗೆ ತಳಹದಿಯಾಗಿ ನೆಲಮಟ್ಟದಿಂದ ಸುಮಾರು ಆರು ಮೊಳದ ಅಳತೆಯ ಕೋಲಿನಷ್ಟು ಎತ್ತರವಾಗಿತ್ತು.
ಯೆಹೆಜ್ಕೇಲನು 41 : 9 (OCVKN)
ಹೊರಗಡೆಯಲ್ಲಿ ಪಕ್ಕದ ಕೊಠಡಿಗಳಿಗಾದ ಗೋಡೆಯ ದಪ್ಪವು ಐದು ಮೊಳ ಮತ್ತು ಉಳಿದದ್ದು ಒಳಗಿನ ಕಡೆಯ ಕೊಠಡಿಗಳ ಸ್ಥಳವಾಗಿತ್ತು.
ಯೆಹೆಜ್ಕೇಲನು 41 : 10 (OCVKN)
ಕೊಠಡಿಗಳ ನಡುವೆ ಆಲಯದ ಸುತ್ತಲೂ ಪ್ರತಿಯೊಂದು ಕಡೆಗೂ ಇಪ್ಪತ್ತು ಮೊಳ ಅಗಲವಿತ್ತು;
ಯೆಹೆಜ್ಕೇಲನು 41 : 11 (OCVKN)
ಪಕ್ಕದ ಕೊಠಡಿಗಳ ಬಾಗಿಲುಗಳು ತೆರೆದ ಸ್ಥಳದ ಕಡೆಗೆ ಇದ್ದವು. ಉತ್ತರದ ಕಡೆಗೆ ಒಂದು ಬಾಗಿಲೂ ದಕ್ಷಿಣದ ಕಡೆಗೆ ಮತ್ತೊಂದು ಬಾಗಿಲೂ ಇತ್ತು; ತೆರೆದ ಸ್ಥಳದ ಅಗಲವು ಸುತ್ತಲೂ ಐದು ಮೊಳವಾಗಿತ್ತು.
ಯೆಹೆಜ್ಕೇಲನು 41 : 12 (OCVKN)
ಯೆಹೆಜ್ಕೇಲನು 41 : 13 (OCVKN)
ಈಗ ಪ್ರತ್ಯೇಕಿಸಿದ ಸ್ಥಳಕ್ಕೆ ಎದುರಾಗಿ ಪಶ್ಚಿಮದ ಕಡೆಗಿದ್ದ ಕಟ್ಟಡವು ಎಪ್ಪತ್ತು ಮೊಳ ಅಗಲವಾಗಿತ್ತು; ಕಟ್ಟಡದ ಗೋಡೆಯು ಸುತ್ತಲೂ ಐದು ಮೊಳ ದಪ್ಪವಾಗಿತ್ತು. ಅದರ ಉದ್ದವು ತೊಂಬತ್ತು ಮೊಳವಾಗಿತ್ತು. ಹೀಗೆ ಅವನು ಆಲಯವನ್ನು ನೂರು ಮೊಳ ಉದ್ದವೆಂದೂ; ಪ್ರತ್ಯೇಕಿಸಿದ ಸ್ಥಳವನ್ನೂ ಮತ್ತು ಕಟ್ಟಡವನ್ನೂ ಗೋಡೆಗಳ ಸಹಿತವಾಗಿ ನೂರು ಮೊಳ ಉದ್ದವೆಂದೂ ಅಳೆದನು;
ಯೆಹೆಜ್ಕೇಲನು 41 : 14 (OCVKN)
ಇದಲ್ಲದೆ ಆಲಯದ ಮುಂಭಾಗವು ಪೂರ್ವದ ಕಡೆಗೆ ಇದ್ದ ಪ್ರತ್ಯೇಕ ಸ್ಥಳಗಳು ನೂರು ಮೊಳ ಅಗಲವಾಗಿದ್ದವು.
ಯೆಹೆಜ್ಕೇಲನು 41 : 15 (OCVKN)
ಪ್ರತ್ಯೇಕ ಸ್ಥಳಕ್ಕೆ ಎದುರಾಗಿಯೂ ಹಿಂದೆಯೂ ಇದ್ದಂಥ ಕಟ್ಟಡವನ್ನು ಅಂದರೆ ಶಾಲೆಗಳನ್ನೂ ಆ ಕಡೆ ಮತ್ತು ಈ ಕಡೆ ನೂರು ಮೊಳವೆಂದೂ ಅಳೆದನು. ಮುಖ್ಯ ಸಭಾಂಗಣ, ಗರ್ಭಗೃಹ ಮತ್ತು ಅಂಗಳದ ಮುಂಭಾಗದಲ್ಲಿ ದ್ವಾರಮಂಟಪ,
ಯೆಹೆಜ್ಕೇಲನು 41 : 16 (OCVKN)
ಹಾಗೆಯೇ ಗರ್ಭಗೃಹ, ಪ್ರಾಕಾರದಲ್ಲಿನ ದ್ವಾರಮಂಟಪಗಳು, ಹೊಸ್ತಿಲುಗಳು ಮತ್ತು ಇಕ್ಕಟ್ಟಾದ ಕಿಟಕಿಗಳನ್ನೂ ಮತ್ತು ಅದರ ಸುತ್ತಲೂ ಇದ್ದಂತಹ ಮೂರು ಅಂತಸ್ತುಗಳಲ್ಲಿ ಬಾಗಿಲಿಗೆ ಎದುರಾಗಿ ಸುತ್ತಲೂ ಮರದಿಂದ ಹೊದಿಕೆಯಾಗಿದ್ದವು. ನೆಲ, ಕಿಟಕಿಯವರೆಗಿನ ಗೋಡೆ ಮತ್ತು ಕಿಟಕಿಗಳನ್ನು ಮುಚ್ಚಲಾಯಿತು.
ಯೆಹೆಜ್ಕೇಲನು 41 : 17 (OCVKN)
ಬಾಗಿಲಿನ ಮೇಲಕ್ಕೂ ಒಳಗಿನ ಆಲಯದವರೆಗೂ ಮತ್ತು ಹೊರಗೂ ಸುತ್ತಲೂ ಇದ್ದ ಗೋಡೆ, ಹೀಗೆ ಒಳಗೂ ಹೊರಗೂ ಎಲ್ಲವನ್ನೂ ಅಳೆದನು.
ಯೆಹೆಜ್ಕೇಲನು 41 : 18 (OCVKN)
ಅದು ಕೆರೂಬಿಗಳು ಮತ್ತು ಖರ್ಜೂರದ ಮರಗಳ ಚಿತ್ರಗಳಿಂದ ಕೂಡಿತ್ತು. ಕೆರೂಬಿ ಮತ್ತು ಕೆರೂಬಿಗಳ ಮಧ್ಯೆ ಖರ್ಜೂರದ ಮರವಿತ್ತು ಮತ್ತು ಪ್ರತಿಯೊಂದು ಕೆರೂಬಿಗೂ ಎರಡೆರಡು ಮುಖಗಳು ಇದ್ದವು.
ಯೆಹೆಜ್ಕೇಲನು 41 : 19 (OCVKN)
ಹೀಗೆ ಈ ಕಡೆ ಖರ್ಜೂರದ ಮರದ ಎದುರಿಗೆ ಮನುಷ್ಯನ ಮುಖವು, ಆ ಕಡೆ ಖರ್ಜೂರದ ಮರದ ಎದುರಿಗೆ ಪ್ರಾಯದ ಸಿಂಹದ ಮುಖವೂ ಇತ್ತು; ಹೀಗೆ ಆಲಯದ ತುಂಬಾ ಮತ್ತು ಸುತ್ತಮುತ್ತಲೂ ಚಿತ್ರಮಯವಾಗಿತ್ತು.
ಯೆಹೆಜ್ಕೇಲನು 41 : 20 (OCVKN)
ನೆಲವು ಮೊದಲುಗೊಂಡು ಬಾಗಿಲಿನ ಮೇಲಿನವರೆಗೂ ದೇವಾಲಯದ ಗೋಡೆಯಲ್ಲಿಯೂ ಕೆರೂಬಿಗಳು ಮತ್ತು ಖರ್ಜೂರದ ಮರಗಳು ಚಿತ್ರಮಯವಾಗಿದ್ದವು.
ಯೆಹೆಜ್ಕೇಲನು 41 : 21 (OCVKN)
ಮುಖ್ಯ ಸಭಾಂಗಣದ ಕಂಬಗಳು ಚಚ್ಚೌಕವಾಗಿದ್ದವು. ಮಹಾಪರಿಶುದ್ಧ ಸ್ಥಳವೂ ಸಹ ಹಾಗೆಯೇ ಇತ್ತು.
ಯೆಹೆಜ್ಕೇಲನು 41 : 22 (OCVKN)
ಸುಮಾರು ಒಂದೂವರೆ ಮೀಟರ್ ಎತ್ತರ ಮತ್ತು ಸುಮಾರು ಒಂದು ಮೀಟರ್ ಉದ್ದ ಮತ್ತು ಅಗಲವಿರುವ ಮರದ ಬಲಿಪೀಠವಿತ್ತು. ಅದರ ಮೂಲೆಗಳು, ಅದರ ತಳ ಮತ್ತು ಅದರ ಬದಿಗಳು ಮರದಿಂದ ಆಗಿದ್ದವು. ಆ ಮನುಷ್ಯನು ನನಗೆ, “ಇದು ಯೆಹೋವ ದೇವರ ಮುಂದೆ ಇರುವ ಮೇಜು” ಎಂದು ಹೇಳಿದನು.
ಯೆಹೆಜ್ಕೇಲನು 41 : 23 (OCVKN)
ದೇವಾಲಯಕ್ಕೂ ಮಹಾಪರಿಶುದ್ಧ ಸ್ಥಳಕ್ಕೂ ಎರಡು ಬಾಗಿಲುಗಳಿದ್ದವು.
ಯೆಹೆಜ್ಕೇಲನು 41 : 24 (OCVKN)
ಆ ಎರಡು ಬಾಗಿಲುಗಳಿಗೆ ಎರಡು ಕದಗಳಿದ್ದವು, ಆ ಸುತ್ತಿಕೊಳ್ಳುವ ಕದಗಳು ಒಂದು ಬಾಗಿಲಿಗೆ ಎರಡು, ಇನ್ನೊಂದು ಬಾಗಿಲಿಗೆ ಎರಡು ಇದ್ದವು.
ಯೆಹೆಜ್ಕೇಲನು 41 : 25 (OCVKN)
ಆಲಯದ ಬಾಗಿಲುಗಳ ಮೇಲೆ ಕೆರೂಬಿಗಳೂ ಖರ್ಜೂರದ ಮರಗಳೂ ಗೋಡೆಗಳ ಮೇಲೆ ಚಿತ್ರಿತವಾಗುವ ಹಾಗೆಯೇ ಚಿತ್ರಿತವಾಗಿದ್ದವು. ದ್ವಾರಾಂಗಣದ ಮುಂದೆ ಹೊರಗಡೆಯಲ್ಲಿ ದಪ್ಪವಾದ ಹಲಗೆಗಳಿದ್ದವು.
ಯೆಹೆಜ್ಕೇಲನು 41 : 26 (OCVKN)
ಇದಲ್ಲದೆ, ಈ ಕಡೆಯೂ ಆ ಕಡೆಯೂ ದ್ವಾರಾಂಗಣದ ಪಕ್ಕಕ್ಕೂ ಆಲಯದ ಪಕ್ಕದ ಕೊಠಡಿಗಳಿಗೂ ಇಕ್ಕಟ್ಟಾದ ಕಿಟಕಿಗಳೂ ಇದ್ದವು; ದಪ್ಪದ ಹಲಗೆಗಳೂ ಸಹ ಇದ್ದವು.
❮
❯