ಯೆಹೆಜ್ಕೇಲನು 37 : 1 (OCVKN)
ಒಣಗಿದ ಎಲುಬುಗಳ ಕಣಿವೆ ಯೆಹೋವ ದೇವರ ಕೈ ನನ್ನ ಮೇಲೆ ಇತ್ತು; ಅದು ಆತನ ಆತ್ಮದ ಮೂಲಕ ನನ್ನನ್ನು ಹೊರಗೆ ತಂದು ಪೂರ್ತಿಯಾಗಿ ಎಲುಬುಗಳು ತುಂಬಿರುವ ಕಣಿವೆಯಲ್ಲಿ ಇಳಿಸಿತು.
ಯೆಹೆಜ್ಕೇಲನು 37 : 2 (OCVKN)
ನಾನು ಎಲುಬುಗಳ ಮಧ್ಯೆ ಆ ಕಣಿವೆಯನ್ನು ಬಳಸಿಕೊಂಡು ಬರುವಂತೆ ಮಾಡಿದನು. ತೆರೆದಿರುವ ಆ ಕಣಿವೆಯಲ್ಲಿ ಒಣಗಿ ಹೋದ ಎಲುಬುಗಳು ಲೆಕ್ಕವಿಲ್ಲದಷ್ಟು ಬಿದ್ದಿದ್ದವು.
ಯೆಹೆಜ್ಕೇಲನು 37 : 3 (OCVKN)
ಆತನು ನನಗೆ, “ನರಪುತ್ರನೇ, ಈ ಎಲುಬುಗಳು ಜೀವಿಸುವಂಥವೇ?” ಎಂದಾಗ,
ಯೆಹೆಜ್ಕೇಲನು 37 : 4 (OCVKN)
ನಾನು ಉತ್ತರವಾಗಿ, “ಸಾರ್ವಭೌಮ ಯೆಹೋವ ದೇವರೇ, ನೀವೇ ತಿಳಿದಿರುವಿರಿ,” ಎಂದೆನು. ಅವರು ನನಗೆ ಹೇಳಿದ್ದೇನೆಂದರೆ, “ಈ ಎಲುಬುಗಳ ಮೇಲೆ ಪ್ರವಾದಿಸಿ, ಅವುಗಳಿಗೆ ಹೇಳು: ‘ಒಣಗಿದ ಎಲುಬುಗಳೇ, ನೀವು ಯೆಹೋವ ದೇವರ ವಾಕ್ಯವನ್ನು ಕೇಳಿರಿ,
ಯೆಹೆಜ್ಕೇಲನು 37 : 5 (OCVKN)
ಸಾರ್ವಭೌಮ ಯೆಹೋವ ದೇವರು ಈ ಎಲುಬುಗಳಿಗೆ ಹೀಗೆ ಹೇಳುತ್ತಾರೆ: ಇಗೋ, ನಾನು ನಿಮ್ಮಲ್ಲಿ ಉಸಿರನ್ನು ಬರಮಾಡುತ್ತೇನೆ. ನೀವು ಬದುಕುವಿರಿ;
ಯೆಹೆಜ್ಕೇಲನು 37 : 6 (OCVKN)
ನಾನು ನಿಮ್ಮ ಮೇಲೆ ನರಗಳನ್ನು ಹಬ್ಬಿಸಿ ಮಾಂಸವನ್ನು ತಂದು ಮತ್ತು ಚರ್ಮದಿಂದ ಮುಚ್ಚಿ ನಿಮ್ಮೊಳಗೆ ಉಸಿರನ್ನು ಕೊಟ್ಟು ಬದುಕಿಸುತ್ತೇನೆ ಆಗ ನಾನೇ ಯೆಹೋವ ದೇವರೆಂದು ನೀವು ತಿಳಿಯುವಿರಿ.’ ”
ಯೆಹೆಜ್ಕೇಲನು 37 : 7 (OCVKN)
ಅದರಂತೆ ನಾನು ಆಜ್ಞೆಯನ್ನು ಪಡೆದ ಪ್ರಕಾರ ಪ್ರವಾದಿಸಿದೆನು. ನಾನು ಪ್ರವಾದಿಸುವಾಗ ಅಲ್ಲಿ ಒಂದು ಶಬ್ದವಾಯಿತು. ಅದು ಕದಲುತ್ತಿತ್ತು, ಎಲುಬುಗಳೆಲ್ಲಾ ಒಂದುಗೂಡಿ ಎಲುಬಿಗೆ ಎಲುಬು ಸೇರಿಕೊಂಡಿತು.
ಯೆಹೆಜ್ಕೇಲನು 37 : 8 (OCVKN)
ನಾನು ನೋಡಿದಾಗ, ನರಗಳು ಮತ್ತು ಮಾಂಸವು ಅವುಗಳ ಮೇಲೆ ಬಂದವು. ಅವುಗಳ ಮೇಲೆ ಚರ್ಮವು ಮುಚ್ಚಿಕೊಂಡಿತು. ಆದರೆ ಅವುಗಳಿಗೆ ಉಸಿರೇ ಇರಲಿಲ್ಲ.
ಯೆಹೆಜ್ಕೇಲನು 37 : 9 (OCVKN)
ಆಮೇಲೆ ಆತನು ನನಗೆ ಹೇಳಿದ್ದೇನೆಂದರೆ, “ಉಸಿರಿನ ಕಡೆಗೆ ಪ್ರವಾದಿಸು, ಮನುಷ್ಯಪುತ್ರನೇ, ಆ ಉಸಿರಿಗೆ ಹೇಳು, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ಓ ಉಸಿರೇ, ನಾಲ್ಕು ದಿಕ್ಕುಗಳಿಂದ ಬಂದು ಈ ಹತಶರೀರಗಳು ಬದುಕುವಂತೆ ಅದರ ಮೇಲೆ ಊದು.’ ”
ಯೆಹೆಜ್ಕೇಲನು 37 : 10 (OCVKN)
ನಾನು ಆತನ ಆಜ್ಞೆಯ ಹಾಗೆಯೇ ಪ್ರವಾದಿಸಿದೆನು, ಅವುಗಳಲ್ಲಿ ಉಸಿರು ಬಂತು. ಅವುಗಳಲ್ಲಿ ಪಾದದ ಮೇಲೆ ಅವುಗಳು ನಿಂತವು, ಅತ್ಯಂತ ಮಹಾಸೈನ್ಯವಾದವು.
ಯೆಹೆಜ್ಕೇಲನು 37 : 11 (OCVKN)
ಆಮೇಲೆ ಆತನು ನನಗೆ ಹೇಳಿದ್ದೇನೆಂದರೆ, “ಮನುಷ್ಯಪುತ್ರನೇ, ಈ ಎಲುಬುಗಳು ಸಂಪೂರ್ಣ ಇಸ್ರಾಯೇಲ್ ಮನೆತನಗಳೇ. ಇಗೋ, ‘ನಮ್ಮ ಎಲುಬುಗಳು ಒಣಗಿಹೋದವು. ನಮ್ಮ ನಿರೀಕ್ಷೆಯು ಸಹ ಕಳೆದು ಹೋಗಿದೆ. ಸಂಪೂರ್ಣವಾಗಿ ನಾಶವಾದೆವು ಎಂದು ಅವರು ಹೇಳುವರು.’
ಯೆಹೆಜ್ಕೇಲನು 37 : 12 (OCVKN)
ಆದ್ದರಿಂದ ನೀನು ಪ್ರವಾದಿಸಿ ಅವರಿಗೆ ಹೇಳು, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ, ನನ್ನ ಜನರೇ, ನಾನು ನಿಮ್ಮ ಸಮಾಧಿಗಳನ್ನು ತೆರೆಯುವೆನು ಮತ್ತು ಸಮಾಧಿಗಳಿಂದ ನೀವು ಹೊರಗೆ ಬರುವಂತೆ ಮಾಡುವೆನು. ಇಸ್ರಾಯೇಲ್ ದೇಶಕ್ಕೆ ನಿಮ್ಮನ್ನು ತರುವೆನು.
ಯೆಹೆಜ್ಕೇಲನು 37 : 13 (OCVKN)
ನನ್ನ ಜನರೇ, ಯಾವಾಗ ನಾನು ನಿಮ್ಮ ಸಮಾಧಿಗಳನ್ನು ತೆರೆದು ಹೊರಗೆ ಬರಮಾಡುವೆನೋ ಆಗ ನಾನೇ ಯೆಹೋವ ದೇವರೆಂದು ನೀವು ತಿಳಿದುಕೊಳ್ಳುವಿರಿ.
ಯೆಹೆಜ್ಕೇಲನು 37 : 14 (OCVKN)
ನನ್ನ ಆತ್ಮವನ್ನು ನಿಮ್ಮೊಳಗೆ ಇಟ್ಟಾಗ ನೀವು ಬದುಕುವಿರಿ ಮತ್ತು ನಾನು ನಿಮ್ಮನ್ನು ನಿಮ್ಮ ಸ್ವಂತ ದೇಶದಲ್ಲಿರಿಸುವೆನು; ಆಗ ಯೆಹೋವ ದೇವರಾದ ನಾನೇ ಇದನ್ನು ನುಡಿದು ನೆರವೇರಿಸಿದ್ದೇನೆ ಎಂದು ನೀವು ತಿಳಿಯುವಿರಿ, ಎಂದು ಯೆಹೋವ ದೇವರು ಹೇಳುತ್ತಾರೆ.’ ”
ಯೆಹೆಜ್ಕೇಲನು 37 : 15 (OCVKN)
ಒಬ್ಬನೇ ಅರಸ ಒಂದೇ ರಾಷ್ಟ್ರ ಯೆಹೋವ ದೇವರ ವಾಕ್ಯವು ನನಗೆ ಬಂದಿತು,
ಯೆಹೆಜ್ಕೇಲನು 37 : 16 (OCVKN)
“ಮನುಷ್ಯಪುತ್ರನೇ, ನೀನು ಒಂದು ಕೋಲನ್ನು ತೆಗೆದುಕೊಂಡು ಅದರ ಮೇಲೆ, ‘ಯೆಹೂದನದು ಮತ್ತು ಅವನ ಜೊತೆಗಾರರಾದ ಇಸ್ರಾಯೇಲಿನ ಮಕ್ಕಳದು,’ ಎಂದು ಬರೆದಿಡು. ಆಮೇಲೆ ಮತ್ತೊಂದು ಕೋಲನ್ನು ತೆಗೆದುಕೊಂಡು ಅದರ ಮೇಲೆ, ‘ಎಫ್ರಾಯೀಮಿನ ಕೋಲು ಯೋಸೇಫನಿಗೂ ಅವನ ಜೊತೆಗಾರರಾದ ಇಸ್ರಾಯೇಲನ ಮನೆತನದವರೆಲ್ಲರಿಗೂ ಇರುವ ಕೋಲು,’ ಎಂದು ಬರೆದಿಡು.
ಯೆಹೆಜ್ಕೇಲನು 37 : 17 (OCVKN)
ಆ ಎರಡನ್ನು ಒಂದೇ ಕೋಲಾಗುವ ಹಾಗೆ ಜೋಡಿಸು. ಅವು ಒಂದಾಗಿ ನಿನ್ನ ಕೈಯಲ್ಲಿರುವುವು.
ಯೆಹೆಜ್ಕೇಲನು 37 : 18 (OCVKN)
“ ‘ಇದರ ಅರ್ಥವೇನೆಂದು ನೀನು ನಮಗೆ ಹೇಳುವುದಿಲ್ಲವೋ?’ ಎಂದು ನಿನ್ನ ದೇಶದ ಜನರು ನಿನ್ನನ್ನು ಪ್ರಶ್ನಿಸುವಾಗ,
ಯೆಹೆಜ್ಕೇಲನು 37 : 19 (OCVKN)
ನೀನು ಅವರಿಗೆ, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ನಾನು ಎಫ್ರಾಯೀಮಿನ ಕೈಯಲ್ಲಿರುವ ಯೋಸೇಫನ ಕೋಲನ್ನೂ ಅವನ ಜೊತೆಗಾರರಾದ ಇಸ್ರಾಯೇಲರ ಗೋತ್ರಗಳನ್ನೂ ತೆಗೆದುಕೊಂಡು ಅವನ ಸಂಗಡ ಅಂದರೆ ಯೆಹೂದನ ಕೋಲಿನ ಸಂಗಡ ಸೇರಿಸಿ ಅವುಗಳನ್ನು ಒಂದೇ ಕೋಲನ್ನಾಗಿ ಮಾಡುವೆನು. ಅವರು ನನ್ನ ಕೈಯಲ್ಲಿ ಒಂದಾಗುವರು,’ ಎಂದು ಹೇಳು.
ಯೆಹೆಜ್ಕೇಲನು 37 : 20 (OCVKN)
ನೀನು ಬರೆದ ಆ ಕೋಲುಗಳು ಅವರ ಕಣ್ಣುಗಳ ಮುಂದೆ ನಿನ್ನ ಕೈಯಲ್ಲಿ ಹಿಡಿದು ಅವರಿಗೆ ಹೇಳು:
ಯೆಹೆಜ್ಕೇಲನು 37 : 21 (OCVKN)
‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ, ನಾನು ಇಸ್ರಾಯೇಲರನ್ನು ಅವರು ಹೋಗಿರುವ ಕಡೆಯಿಂದ ಒಂದುಗೂಡಿಸಿ ಅವರ ಸ್ವಂತ ದೇಶಕ್ಕೆ ತರುವೆನು.
ಯೆಹೆಜ್ಕೇಲನು 37 : 22 (OCVKN)
ನಾನು ಅವರನ್ನು ಇಸ್ರಾಯೇಲ್ ಪರ್ವತಗಳಿರುವ ದೇಶದಲ್ಲಿ ಒಂದೇ ಜನಾಂಗವನ್ನಾಗಿ ಮಾಡುತ್ತೇನೆ. ಅವರೆಲ್ಲರಿಗೂ ಒಬ್ಬನೇ ಅರಸನಾಗಿರುವನು. ಇನ್ನು ಮೇಲೆ ಅವರು ಎರಡು ಜನಾಂಗದವರಾಗಿಯೂ, ಭಿನ್ನರಾಜ್ಯದವರಾಗಿಯೂ ಇರುವುದಿಲ್ಲ.
ಯೆಹೆಜ್ಕೇಲನು 37 : 23 (OCVKN)
ಅವರು ಇನ್ನು ತಮ್ಮ ವಿಗ್ರಹಗಳಿಂದಲೂ ತಮ್ಮ ಅಸಹ್ಯ ವಸ್ತುಗಳಿಂದಲೂ ತಮ್ಮ ಅಕ್ರಮಗಳಿಂದಲೂ ಅಶುದ್ಧವಾಗುವುದಿಲ್ಲ. ಅವರ ಎಲ್ಲಾ ಪಾಪದ ಹಿಂಜಾರುವಿಕೆಯಿಂದಲೂ ನಾನು ಅವರನ್ನು ರಕ್ಷಿಸಿ, ಅವರನ್ನು ಶುದ್ಧಮಾಡುವೆನು. ಹೀಗೆ ಅವರು ನನ್ನ ಜನರಾಗಿರುವರು ನಾನು ಅವರಿಗೆ ದೇವರಾಗಿರುವೆನು.
ಯೆಹೆಜ್ಕೇಲನು 37 : 24 (OCVKN)
“ ‘ನನ್ನ ಸೇವಕನಾದ ದಾವೀದನು ಅವರ ಮೇಲೆ ಅರಸನಾಗಿರುವನು. ಅವರೆಲ್ಲರಿಗೂ ಒಬ್ಬನೇ ಕುರುಬನಿರುವನು; ನನ್ನ ನ್ಯಾಯಗಳನ್ನು ಅನುಸರಿಸಿ, ನನ್ನ ನಿಯಮಗಳನ್ನು ಪಾಲಿಸುವಂತೆ ಮಾಡುವೆನು.
ಯೆಹೆಜ್ಕೇಲನು 37 : 25 (OCVKN)
ನನ್ನ ಸೇವಕನಾದ ಯಾಕೋಬನಿಗೆ ನಾನು ಕೊಟ್ಟ ದೇಶದಲ್ಲಿ ನಿಮ್ಮ ಪಿತೃಗಳು ವಾಸಮಾಡಿದ ಆ ದೇಶದಲ್ಲಿಯೂ ಅವರೂ ಅವರ ಮಕ್ಕಳೂ ಮತ್ತು ಅವರ ಮೊಮ್ಮಕ್ಕಳೂ ಎಂದೆಂದಿಗೂ ಅಲ್ಲಿಯೇ ವಾಸಮಾಡುವರು; ನನ್ನ ಸೇವಕನಾದ ದಾವೀದನು ಎಂದೆಂದಿಗೂ ಅವರಿಗೆ ರಾಜಕುಮಾರನಾಗಿರುವನು.
ಯೆಹೆಜ್ಕೇಲನು 37 : 26 (OCVKN)
ಇದಾದ ಮೇಲೆ ನಾನು ಅವರೊಂದಿಗೆ ಸಮಾಧಾನದ ಒಡಂಬಡಿಕೆಯನ್ನು ಮಾಡಿಕೊಳ್ಳುವೆನು. ಇದು ಅವರೊಂದಿಗೆ ನಿತ್ಯವಾದ ಒಡಂಬಡಿಕೆಯಾಗಿರುವುದು. ನಾನು ಅವರನ್ನು ನೆಲೆಗೊಳಿಸಿ ವೃದ್ಧಿಗೊಳಿಸುವೆನು. ನನ್ನ ಪರಿಶುದ್ಧ ಸ್ಥಳವನ್ನು ಎಂದೆಂದಿಗೂ ಅವರ ಮಧ್ಯದಲ್ಲಿಡುವೆನು.
ಯೆಹೆಜ್ಕೇಲನು 37 : 27 (OCVKN)
ನನ್ನ ಗುಡಾರವು ಸಹ ಅವರೊಂದಿಗಿರುವುದು. ನಾನು ಅವರ ದೇವರಾಗಿರುವೆನು ಮತ್ತು ಅವರು ನನ್ನ ಜನರಾಗಿರುವರು.
ಯೆಹೆಜ್ಕೇಲನು 37 : 28 (OCVKN)
ನನ್ನ ಪರಿಶುದ್ಧ ಸ್ಥಳವು ಎಂದೆಂದಿಗೂ ಅವರ ಮಧ್ಯದೊಳಗಿರುವಾಗ, ಯೆಹೋವ ದೇವರಾದ ನಾನೇ ಇಸ್ರಾಯೇಲರನ್ನು ಪರಿಶುದ್ಧಗೊಳಿಸಿದೆನೆಂದು ಎಲ್ಲಾ ದೇಶದ ಜನಾಂಗಗಳು ಸಹ ತಿಳಿದುಕೊಳ್ಳುವರು.’ ”
❮
❯