ಯೆಹೆಜ್ಕೇಲನು 15 : 1 (OCVKN)
ಯೆರೂಸಲೇಮು, ಪ್ರಯೋಜನವಿಲ್ಲದ ದ್ರಾಕ್ಷಾಲತೆ ಯೆಹೋವ ದೇವರ ವಾಕ್ಯವು ನನಗೆ ಬಂದಿತು,
ಯೆಹೆಜ್ಕೇಲನು 15 : 2 (OCVKN)
“ಮನುಷ್ಯಪುತ್ರನೇ, ದ್ರಾಕ್ಷಿ ಗಿಡವು ಅಡವಿಯಲ್ಲಿರುವ ಮರಗಳ ಕೊಂಬೆಗಳಿಗಿಂತಲೂ ಹೆಚ್ಚೇನು?
ಯೆಹೆಜ್ಕೇಲನು 15 : 3 (OCVKN)
ಇದರಿಂದ ಕಟ್ಟಿಗೆಯನ್ನು ತೆಗೆದುಕೊಂಡು ಯಾವ ಕೆಲಸವನ್ನಾದರೂ ಮಾಡುವರೋ ಅಥವಾ ಅದರ ಮೇಲೆ ಯಾವನನ್ನಾದರೂ ನೇತುಹಾಕುವುದಕ್ಕೆ ಅದರಿಂದ ಗೂಟವನ್ನು ಮಾಡಿಕೊಳ್ಳುವರೋ?
ಯೆಹೆಜ್ಕೇಲನು 15 : 4 (OCVKN)
ಇದನ್ನು ಬೆಂಕಿಗೆ ಸೌದೆಯಾಗಿ ಹಾಕುತ್ತಾರೆ. ಬೆಂಕಿಯು ಅದರ ಎರಡು ಕೊನೆಗಳನ್ನು ತಿಂದುಬಿಡುತ್ತದೆ. ಅದರ ಮಧ್ಯ ಭಾಗವು ಸುಟ್ಟು ಹೋಗುತ್ತದೆ. ಇದೇನಾದರೂ ಕೆಲಸಕ್ಕೆ ಬರುವುದೋ?
ಯೆಹೆಜ್ಕೇಲನು 15 : 5 (OCVKN)
ಇದು ಸಂಪೂರ್ಣವಾಗಿದ್ದಾಗಲೇ ಕೆಲಸಕ್ಕೆ ಬರಲಿಲ್ಲ, ಎಂದ ಮೇಲೆ ಬೆಂಕಿಯು ಅದನ್ನು ತಿಂದು ಸುಟ್ಟುಹೋದ ಮೇಲೆ ಯಾವ ಕೆಲಸಕ್ಕೆ ಬಂದೀತು?”
ಯೆಹೆಜ್ಕೇಲನು 15 : 6 (OCVKN)
“ಆದ್ದರಿಂದ ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ವನವೃಕ್ಷಗಳಲ್ಲಿ ದ್ರಾಕ್ಷಿಗಿಡಗಳನ್ನು ನಾನು ಹೇಗೆ ಬೆಂಕಿಗೆ ಸೌದೆಯಾಗಿ ಮಾಡಿರುವೆನೋ ಹಾಗೆಯೇ ನಾನು ಯೆರೂಸಲೇಮಿನ ನಿವಾಸಿಗಳನ್ನೂ ವಿನಾಶಕ್ಕೆ ಗುರಿಮಾಡಿದ್ದೇನೆ.
ಯೆಹೆಜ್ಕೇಲನು 15 : 7 (OCVKN)
ನನ್ನ ಮುಖವನ್ನು ಅವರಿಗೆ ವಿರೋಧವಾಗಿ ತಿರುಗಿಸುತ್ತೇನೆ. ಅವರು ಬೆಂಕಿಯೊಳಗಿಂದ ಹೊರಗೆ ಬಂದು ತಪ್ಪಿಸಿಕೊಂಡರೂ, ಮತ್ತೊಂದು ಬೆಂಕಿಯು ಅವರನ್ನು ದಹಿಸಿಬಿಡುವುದು. ನಾನು ನನ್ನ ಮುಖವನ್ನು ಅವರಿಗೆ ವಿರೋಧವಾಗಿ ಇಡುವಾಗ, ನಾನೇ ಯೆಹೋವ ದೇವರೆಂದು ನೀವು ತಿಳಿದುಕೊಳ್ಳುವಿರಿ.
ಯೆಹೆಜ್ಕೇಲನು 15 : 8 (OCVKN)
ಅವರು ದ್ರೋಹ ಮಾಡಿದ್ದರಿಂದ ನಾನು ಆ ದೇಶವನ್ನು ಹಾಳುಮಾಡುವೆನು, ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.”

1 2 3 4 5 6 7 8