ವಿಮೋಚನಕಾಂಡ 7 : 1 (OCVKN)
ಆಗ ಯೆಹೋವ ದೇವರು ಮೋಶೆಗೆ, “ಇಗೋ, ನಿನ್ನನ್ನು ಫರೋಹನಿಗೆ ದೇವರಂತೆ ಮಾಡಿದ್ದೇನೆ. ನಿನ್ನ ಸಹೋದರನಾದ ಆರೋನನು ನಿನ್ನ ಪ್ರವಾದಿಯಾಗಿರುವನು.
ವಿಮೋಚನಕಾಂಡ 7 : 2 (OCVKN)
ನಾನು ನಿನಗೆ ಆಜ್ಞಾಪಿಸುವುದನ್ನೆಲ್ಲಾ ನೀನು ಮಾತನಾಡಬೇಕು. ಇಸ್ರಾಯೇಲರನ್ನು ತನ್ನ ದೇಶದೊಳಗಿಂದ ಕಳುಹಿಸಿಬಿಡುವ ಹಾಗೆ ನಿನ್ನ ಸಹೋದರನಾದ ಆರೋನನು ಫರೋಹನ ಸಂಗಡ ಮಾತನಾಡಬೇಕು.
ವಿಮೋಚನಕಾಂಡ 7 : 3 (OCVKN)
ಆದರೆ ನಾನು ಫರೋಹನ ಹೃದಯವನ್ನು ಕಠಿಣಪಡಿಸಿ, ನನ್ನ ಸೂಚಕಕಾರ್ಯಗಳನ್ನೂ, ನನ್ನ ಅದ್ಭುತಕಾರ್ಯಗಳನ್ನೂ ಈಜಿಪ್ಟ್ ದೇಶದಲ್ಲಿ ಹೆಚ್ಚಿಸುವೆನು.
ವಿಮೋಚನಕಾಂಡ 7 : 4 (OCVKN)
ಆದರೆ ಫರೋಹನು ನಿಮ್ಮ ಮಾತನ್ನು ಕೇಳುವುದಿಲ್ಲ. ಆದರೆ ನನ್ನ ಕೈಯನ್ನು ಈಜಿಪ್ಟಿನ ಮೇಲೆ ಇಟ್ಟು, ದೊಡ್ಡ ನ್ಯಾಯ ತೀರ್ಪುಗಳಿಂದ ನನ್ನ ಜನರಾದ ಇಸ್ರಾಯೇಲರನ್ನೂ, ಅವರ ಸೈನ್ಯಗಳನ್ನೂ ಈಜಿಪ್ಟ್ ದೇಶದೊಳಗಿಂದ ಹೊರಗೆ ಬರಮಾಡುವೆನು.
ವಿಮೋಚನಕಾಂಡ 7 : 5 (OCVKN)
ನಾನು ಈಜಿಪ್ಟಿನ ಮೇಲೆ ನನ್ನ ಕೈಯನ್ನಿಟ್ಟು, ಅವರೊಳಗಿಂದ ಇಸ್ರಾಯೇಲರನ್ನು ಹೊರಗೆ ಬರಮಾಡಿದಾಗ, ನಾನು ಯೆಹೋವ ದೇವರೆಂದು ಈಜಿಪ್ಟಿನವರಿಗೆ ತಿಳಿದುಬರುವುದು,” ಎಂದು ಹೇಳಿದರು.
ವಿಮೋಚನಕಾಂಡ 7 : 6 (OCVKN)
ಮೋಶೆಯೂ ಆರೋನನೂ ಯೆಹೋವ ದೇವರು ತಮಗೆ ಆಜ್ಞಾಪಿಸಿದ ಪ್ರಕಾರವೇ ಮಾಡಿದರು.
ವಿಮೋಚನಕಾಂಡ 7 : 7 (OCVKN)
ಅವರು ಫರೋಹನ ಮುಂದೆ ಮಾತನಾಡುವಾಗ ಮೋಶೆಯು ಎಂಬತ್ತು ವರ್ಷದವನೂ ಆರೋನನು ಎಂಬತ್ತಮೂರು ವರ್ಷದವನೂ ಆಗಿದ್ದನು.
ವಿಮೋಚನಕಾಂಡ 7 : 8 (OCVKN)
ಆರೋನನ ಕೋಲು ಸರ್ಪವಾದದ್ದು ಆಗ ಯೆಹೋವ ದೇವರು ಮಾತನಾಡಿ ಮೋಶೆಗೂ ಆರೋನನಿಗೂ,
ವಿಮೋಚನಕಾಂಡ 7 : 9 (OCVKN)
“ಫರೋಹನು ನಿಮಗೆ, ‘ನೀವು ಒಂದು ಅದ್ಭುತಕಾರ್ಯವನ್ನು ತೋರಿಸಿರಿ,’ ಎಂದಾಗ ನೀನು ಆರೋನನಿಗೆ, ‘ನಿನ್ನ ಕೋಲನ್ನು ತೆಗೆದುಕೊಂಡು ಫರೋಹನ ಮುಂದೆ ಬಿಸಾಡು,’ ಎಂದು ಹೇಳು, ಆಗ ಅದು ಸರ್ಪವಾಗುವುದು,” ಎಂದು ಹೇಳಿದರು.
ವಿಮೋಚನಕಾಂಡ 7 : 10 (OCVKN)
ಆಗ ಮೋಶೆಯೂ ಆರೋನನೂ ಫರೋಹನ ಬಳಿಗೆ ಹೋಗಿ ಯೆಹೋವ ದೇವರು ತಮಗೆ ಆಜ್ಞಾಪಿಸಿದಂತೆಯೇ ಮಾಡಿದರು. ಆರೋನನು ತನ್ನ ಕೋಲನ್ನು ಫರೋಹ ಮತ್ತು ಅವನ ಸೇವಕರ ಮುಂದೆಯೂ ಬಿಸಾಡಿದಾಗ, ಅದು ಸರ್ಪವಾಯಿತು.
ವಿಮೋಚನಕಾಂಡ 7 : 11 (OCVKN)
ಫರೋಹನು ಜ್ಞಾನಿಗಳನ್ನೂ, ಮಂತ್ರವಾದಿಗಳನ್ನೂ ಕರೆಸಿದನು. ಆಗ ಈಜಿಪ್ಟಿನ ಮಂತ್ರಗಾರರೂ ಸಹ ತಮ್ಮ ಮಾಟಗಳಿಂದ ಹಾಗೆಯೇ ಮಾಡಿದರು.
ವಿಮೋಚನಕಾಂಡ 7 : 12 (OCVKN)
ಅವರು ತಮ್ಮ ತಮ್ಮ ಕೋಲುಗಳನ್ನು ಬಿಸಾಡಿದಾಗ, ಅವು ಸರ್ಪಗಳಾದವು. ಆದರೆ ಆರೋನನ ಕೋಲು ಅವರ ಕೋಲುಗಳನ್ನು ನುಂಗಿಬಿಟ್ಟಿತು.
ವಿಮೋಚನಕಾಂಡ 7 : 13 (OCVKN)
ಯೆಹೋವ ದೇವರು ಹೇಳಿದಂತೆಯೇ ಫರೋಹನ ಹೃದಯವು ಕಠಿಣವಾಯಿತು. ಅವನು ಅವರ ಮಾತನ್ನು ಕೇಳಲಿಲ್ಲ.
ವಿಮೋಚನಕಾಂಡ 7 : 14 (OCVKN)
ರಕ್ತದ ಉಪದ್ರವ ಆಗ ಯೆಹೋವ ದೇವರು ಮೋಶೆಗೆ, “ಫರೋಹನ ಹೃದಯವು ಕಠಿಣವಾಯಿತು. ಅವನು ಜನರನ್ನು ಕಳುಹಿಸಿಬಿಡುವುದಕ್ಕೆ ನಿರಾಕರಿಸುತ್ತಿದ್ದಾನೆ.
ವಿಮೋಚನಕಾಂಡ 7 : 15 (OCVKN)
ಬೆಳಿಗ್ಗೆ ಫರೋಹನ ಬಳಿಗೆ ಹೋಗು. ಅವನು ಹೊರಗೆ ನದಿಯ ಬಳಿಗೆ ಹೋಗುವನು. ಆಗ ನೈಲ್ ನದಿ ತೀರದಲ್ಲಿ ಅವನೆದುರಿಗೆ ನಿಂತುಕೊಂಡು, ಸರ್ಪವಾಗಿ ಮಾಡಿದ ಕೋಲನ್ನು ನಿನ್ನ ಕೈಯಲ್ಲಿ ಹಿಡಿದುಕೊಂಡಿರು.
ವಿಮೋಚನಕಾಂಡ 7 : 16 (OCVKN)
ಅವನಿಗೆ ನೀನು, ‘ಹಿಬ್ರಿಯರ ದೇವರಾದ ಯೆಹೋವ ದೇವರು ನನ್ನನ್ನು ನಿನ್ನ ಬಳಿಗೆ ಕಳುಹಿಸಿದ್ದಾರೆ. ಮರುಭೂಮಿಯಲ್ಲಿ ನನಗೆ ಆರಾಧನೆ ಮಾಡುವ ಹಾಗೆ ನನ್ನ ಜನರನ್ನು ಕಳುಹಿಸು, ಎಂದು ಅವರು ಹೇಳಿದ್ದಾರೆ. ಆದರೆ ಇಗೋ, ಇಂದಿನವರೆಗೂ ನೀನು ಕೇಳಲಿಲ್ಲ.
ವಿಮೋಚನಕಾಂಡ 7 : 17 (OCVKN)
ಆದುದರಿಂದ ಯೆಹೋವ ದೇವರು ಮತ್ತೆ ನಿನಗೆ ಹೇಳುವುದೇನೆಂದರೆ: ನಾನೇ ಯೆಹೋವ ದೇವರೆಂದು ನೀನು ಇದರಿಂದ ತಿಳಿದುಕೊಳ್ಳುವೆ. ನನ್ನ ಕೈಯಲ್ಲಿರುವ ಕೋಲಿನಿಂದ, ನೈಲ್ ನದಿಯಲ್ಲಿರುವ ನೀರನ್ನು ಹೊಡೆಯುವೆನು, ಆಗ ಅದು ರಕ್ತವಾಗುವುದು.
ವಿಮೋಚನಕಾಂಡ 7 : 18 (OCVKN)
ನದಿಯಲ್ಲಿರುವ ಮೀನುಗಳು ಸಾಯುವುವು. ನೈಲ್ ನದಿಯು ಹೊಲಸಾಗಿ ನಾರುವುದು. ಈಜಿಪ್ಟಿನವರು ನದಿಯ ನೀರನ್ನು ಕುಡಿಯುವುದಕ್ಕೆ ಅಸಹ್ಯಪಡುವರು,’ ಎಂದು ಹೇಳು,” ಎಂದರು.
ವಿಮೋಚನಕಾಂಡ 7 : 19 (OCVKN)
ವಿಮೋಚನಕಾಂಡ 7 : 20 (OCVKN)
ಅನಂತರ ಯೆಹೋವ ದೇವರು ಮೋಶೆಗೆ, “ನೀನು ಆರೋನನಿಗೆ, ‘ನಿನ್ನ ಕೋಲನ್ನು ತೆಗೆದುಕೊಂಡು ಈಜಿಪ್ಟಿನ ನೀರಿನ ಮೇಲೆಯೂ ಅದರ ನದಿಗಳ ಮೇಲೆಯೂ ಕೊಳಗಳ ಮೇಲೆಯೂ ಅದರ ಕಾಲುವೆ ಮೇಲೆಯೂ ಅದರ ಕೆರೆಗಳ ಮೇಲೆಯೂ ಕೈಚಾಚು,’ ಎಂದು ಹೇಳು. ಆಗ ಅವು ರಕ್ತವಾಗುವುವು. ಈಜಿಪ್ಟ್ ದೇಶದಲ್ಲಿ ನೀರಿರುವ ಮರದ ತೊಟ್ಟಿಗಳಲ್ಲಾಗಲೀ, ಕಲ್ಲಿನ ಪಾತ್ರೆಗಳಲ್ಲಾಗಲೀ ರಕ್ತವಿರುವುದು,” ಎಂದು ಹೇಳಿದರು. ಮೋಶೆಯೂ ಆರೋನನೂ ಯೆಹೋವ ದೇವರು ತಮಗೆ ಆಜ್ಞಾಪಿಸಿದಂತೆಯೇ ಮಾಡಿದರು. ಅವನು ಕೋಲನ್ನು ಎತ್ತಿ, ನೈಲ್ ನದಿಯಲ್ಲಿರುವ ನೀರನ್ನು ಫರೋಹನ ಮುಂದೆಯೂ, ಅವನ ಸೇವಕರ ಮುಂದೆಯೂ ಹೊಡೆದನು. ಆಗ ನದಿಯಲ್ಲಿದ್ದ ನೀರೆಲ್ಲಾ ರಕ್ತವಾಯಿತು.
ವಿಮೋಚನಕಾಂಡ 7 : 21 (OCVKN)
ನದಿಯಲ್ಲಿದ್ದ ಮೀನುಗಳು ಸತ್ತವು, ನದಿಯು ದುರ್ವಾಸನೆಗೊಂಡಿತು. ಈಜಿಪ್ಟಿನವರು ನೈಲ್ ನದಿಯ ನೀರನ್ನು ಕುಡಿಯಲಾರದೆ ಹೋದರು. ಆಗ ಈಜಿಪ್ಟ್ ದೇಶದಲ್ಲೆಲ್ಲಾ ರಕ್ತವಿತ್ತು.
ವಿಮೋಚನಕಾಂಡ 7 : 22 (OCVKN)
ಆದರೆ ಈಜಿಪ್ಟಿನ ಮಂತ್ರಗಾರರು ತಮ್ಮ ಮಾಟಗಳಿಂದ ಹಾಗೆಯೇ ಮಾಡಿದ್ದರಿಂದ ಫರೋಹನ ಹೃದಯವು ಕಠಿಣವಾಯಿತು. ಯೆಹೋವ ದೇವರು ಹೇಳಿದಂತೆಯೇ ಅವನು ಅವರ ಮಾತನ್ನು ಕೇಳಲಿಲ್ಲ.
ವಿಮೋಚನಕಾಂಡ 7 : 23 (OCVKN)
ಫರೋಹನು ತಿರುಗಿಕೊಂಡು ತನ್ನ ಅರಮನೆಗೆ ಹಿಂದಿರುಗಿದನು. ಅವನು ಈ ಅದ್ಭುತಕ್ಕೂ ಗಮನಕೊಡಲಿಲ್ಲ.
ವಿಮೋಚನಕಾಂಡ 7 : 24 (OCVKN)
ಆದರೆ ಈಜಿಪ್ಟಿನವರೆಲ್ಲರೂ ನದಿಯ ನೀರನ್ನು ಕುಡಿಯಲಾರದೆ, ಕುಡಿಯುವ ನೀರಿಗಾಗಿ ನೈಲ್ ನದಿಯ ಸುತ್ತಲೂ ಅಗೆದರು.
ವಿಮೋಚನಕಾಂಡ 7 : 25 (OCVKN)
ಕಪ್ಪೆಗಳ ಉಪದ್ರವ ಯೆಹೋವ ದೇವರು ನೈಲ್ ನದಿಯನ್ನು ರಕ್ತವನ್ನಾಗಿ ಮಾಡಿ ಏಳು ದಿನಗಳು ಕಳೆದವು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25