ವಿಮೋಚನಕಾಂಡ 40 : 1 (OCVKN)
ಗುಡಾರದ ಪ್ರತಿಷ್ಠಾಪನೆ ಆಗ ಯೆಹೋವ ದೇವರು ಮೋಶೆಯ ಸಂಗಡ ಮಾತನಾಡಿ,
ವಿಮೋಚನಕಾಂಡ 40 : 2 (OCVKN)
“ಮೊದಲನೆಯ ತಿಂಗಳಿನ ಮೊದಲನೆಯ ದಿವಸದಲ್ಲಿ ಸಭೆಯ ಡೇರೆಯನ್ನು ಮತ್ತು ಗುಡಾರವನ್ನು ಎತ್ತಿ ನಿಲ್ಲಿಸು.
ವಿಮೋಚನಕಾಂಡ 40 : 3 (OCVKN)
ಒಡಂಬಡಿಕೆಯ ಮಂಜೂಷವನ್ನು ಅದರಲ್ಲಿ ಇಟ್ಟು, ಅದನ್ನು ನೀನು ಪರದೆಯಿಂದ ಮುಚ್ಚಬೇಕು.
ವಿಮೋಚನಕಾಂಡ 40 : 4 (OCVKN)
ಮೇಜನ್ನು ಒಳಗೆ ತಂದು, ಅದರ ಮೇಲಿಡಬೇಕಾದದ್ದನ್ನು ಸರಿಯಾಗಿ ಇಡಬೇಕು. ದೀಪಸ್ತಂಭವನ್ನು ಒಳಗೆ ತಂದು, ನೀನು ಅದರ ದೀಪಗಳನ್ನು ಅಂಟಿಸಬೇಕು.
ವಿಮೋಚನಕಾಂಡ 40 : 5 (OCVKN)
ನೀನು ಮಾಡಿದ ಚಿನ್ನದ ಧೂಪಪೀಠವನ್ನು ಒಡಂಬಡಿಕೆಯ ಮಂಜೂಷದ ಎದುರಾಗಿ ಇಟ್ಟು, ದೇವದರ್ಶನದ ಗುಡಾರದ ಬಾಗಿಲಿಗೆ ಪರದೆಯನ್ನು ಹಾಕಬೇಕು.
ವಿಮೋಚನಕಾಂಡ 40 : 6 (OCVKN)
“ನೀನು ದಹನಬಲಿಯ ಪೀಠವನ್ನು ಸಭೆಯ ಡೇರೆಯಾದ ಗುಡಾರದ ಬಾಗಿಲಿಗೆ ಎದುರಾಗಿ ಇಡಬೇಕು.
ವಿಮೋಚನಕಾಂಡ 40 : 7 (OCVKN)
ನೀನು ದೇವದರ್ಶನದ ಗುಡಾರಕ್ಕೂ, ಬಲಿಪೀಠಕ್ಕೂ ಮಧ್ಯದಲ್ಲಿ ಗಂಗಾಳವನ್ನಿಟ್ಟು, ಅದರಲ್ಲಿ ನೀರನ್ನು ತುಂಬಿಸಬೇಕು.
ವಿಮೋಚನಕಾಂಡ 40 : 8 (OCVKN)
ಅದರ ಸುತ್ತಲೂ ಆವರಣವನ್ನು ನಿಲ್ಲಿಸಿ, ಆ ಆವರಣದ ಬಾಗಿಲಿನ ಬಳಿಯಲ್ಲಿ ನೀನು ಪರದೆಯನ್ನು ತೂಗು ಹಾಕಬೇಕು.
ವಿಮೋಚನಕಾಂಡ 40 : 9 (OCVKN)
“ನೀನು ಅಭಿಷೇಕ ತೈಲವನ್ನು ತೆಗೆದುಕೊಂಡು ಗುಡಾರವನ್ನೂ, ಅದರಲ್ಲಿರುವ ಎಲ್ಲವುಗಳನ್ನೂ ಅಭಿಷೇಕಿಸಿ, ಅದರಲ್ಲಿರುವ ಎಲ್ಲಾ ಸಾಮಗ್ರಿಗಳನ್ನೂ ಪರಿಶುದ್ಧ ಮಾಡು. ಆಗ ಅದು ಪರಿಶುದ್ಧವಾಗುವುದು.
ವಿಮೋಚನಕಾಂಡ 40 : 10 (OCVKN)
ದಹನಬಲಿಯ ಪೀಠವನ್ನೂ, ಅದರ ಎಲ್ಲಾ ಸಲಕರಣೆಗಳನ್ನೂ ನೀನು ಅಭಿಷೇಕಿಸಿ, ಬಲಿಪೀಠವನ್ನು ಪವಿತ್ರಮಾಡು. ಆಗ ಅದು ಅತಿಪರಿಶುದ್ಧವಾದ ಬಲಿಪೀಠವಾಗುವುದು.
ವಿಮೋಚನಕಾಂಡ 40 : 11 (OCVKN)
ಗಂಗಾಳವನ್ನೂ, ಅದರ ಕಾಲುಗಳನ್ನೂ ನೀನು ಅಭಿಷೇಕಿಸಿ, ಅದನ್ನು ಪ್ರತಿಷ್ಠಾಪನೆ ಮಾಡಬೇಕು.
ವಿಮೋಚನಕಾಂಡ 40 : 12 (OCVKN)
“ಆರೋನನನ್ನೂ, ಅವನ ಮಕ್ಕಳನ್ನೂ ದೇವದರ್ಶನದ ಗುಡಾರದ ಬಾಗಿಲಿನ ಬಳಿಗೆ ಬರಮಾಡಿ, ಅವರನ್ನು ನೀರಿನಿಂದ ಸ್ನಾನ ಮಾಡಿಸಬೇಕು.
ವಿಮೋಚನಕಾಂಡ 40 : 13 (OCVKN)
ಆರೋನನು ನನಗೆ ಯಾಜಕ ಸೇವೆ ಮಾಡುವ ಹಾಗೆ ಅವನಿಗೆ ಪರಿಶುದ್ಧ ವಸ್ತ್ರಗಳನ್ನು ತೊಡಿಸಿ, ಅವನನ್ನು ಅಭಿಷೇಕಿಸಿ, ಅವನನ್ನು ಶುದ್ಧಮಾಡಬೇಕು.
ವಿಮೋಚನಕಾಂಡ 40 : 14 (OCVKN)
ಅವನ ಪುತ್ರರನ್ನು ನೀನು ಬರಮಾಡಿಕೊಂಡು, ಅವರಿಗೆ ಅಂಗಿಗಳನ್ನು ತೊಡಿಸಿ,
ವಿಮೋಚನಕಾಂಡ 40 : 15 (OCVKN)
ಅವರ ತಂದೆಯನ್ನು ಅಭಿಷೇಕಿಸಿದ ಪ್ರಕಾರ, ಅವರು ನನಗೆ ಯಾಜಕ ಸೇವೆಯನ್ನು ಮಾಡುವ ಹಾಗೆ ಅವರನ್ನೂ ನೀನು ಅಭಿಷೇಕಿಸು. ಅವರ ಈ ಅಭಿಷೇಕದಿಂದ ಅವರ ಸಂತತಿಗಳಲ್ಲಿ ನಿತ್ಯವಾದ ಯಾಜಕತ್ವವಾಗಿರುವುದು,” ಎಂದು ಹೇಳಿದರು.
ವಿಮೋಚನಕಾಂಡ 40 : 16 (OCVKN)
ಮೋಶೆಯು ಯೆಹೋವ ದೇವರು ತನಗೆ ಆಜ್ಞಾಪಿಸಿದ ಪ್ರಕಾರವೇ ಅವನು ಎಲ್ಲವನ್ನು ಮಾಡಿದನು.
ವಿಮೋಚನಕಾಂಡ 40 : 17 (OCVKN)
ಎರಡನೆಯ ವರ್ಷದ ಮೊದಲನೆಯ ತಿಂಗಳಿನ ಮೊದಲನೆಯ ದಿವಸದಲ್ಲಿ ಗುಡಾರವು ಎದ್ದುನಿಂತಿತು.
ವಿಮೋಚನಕಾಂಡ 40 : 18 (OCVKN)
ಆಗ ಮೋಶೆಯು ಗುಡಾರವನ್ನು ನಿಲ್ಲಿಸಿ, ಅದರ ಕಾಲುಗಳನ್ನು ಬಿಗಿದು, ಅದರ ಚೌಕಟ್ಟುಗಳನ್ನು ಇರಿಸಿ, ಅಗುಳಿಗಳನ್ನು ಹಾಕಿ, ಅದರ ಸ್ತಂಭಗಳನ್ನು ನಿಲ್ಲಿಸಿದನು.
ವಿಮೋಚನಕಾಂಡ 40 : 19 (OCVKN)
ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ ಹಾಗೆ ಗುಡಾರದ ಮೇಲೆ ಡೇರೆಯನ್ನು ಹರಡಿಸಿ, ಡೇರೆಯ ಹೊದಿಕೆಯನ್ನು ಅದರ ಮೇಲೆ ಹಾಕಿದನು.
ವಿಮೋಚನಕಾಂಡ 40 : 20 (OCVKN)
ಅವನು ಆಜ್ಞಾಶಾಸನಗಳನ್ನು ತೆಗೆದುಕೊಂಡು ಮಂಜೂಷದ ಪೆಟ್ಟಿಗೆಯಲ್ಲಿಟ್ಟು, ಮಂಜೂಷಕ್ಕೆ ಕೋಲುಗಳನ್ನು ಸೇರಿಸಿ, ಮಂಜೂಷದ ಮೇಲೆ ಕರುಣಾಸನವನ್ನು ಇಟ್ಟನು.
ವಿಮೋಚನಕಾಂಡ 40 : 21 (OCVKN)
ಅವನು ಮಂಜೂಷವನ್ನು ಗುಡಾರಕ್ಕೆ ತಂದು, ಮರೆಮಾಡುವ ಪರದೆಯನ್ನಿರಿಸಿ, ಒಡಂಬಡಿಕೆಯ ಮಂಜೂಷವನ್ನು ಮರೆಮಾಡಿದನು. ಯೆಹೋವ ದೇವರು ಆಜ್ಞಾಪಿಸಿದ ಹಾಗೆಯೇ ಮೋಶೆಯು ಮಾಡಿದನು.
ವಿಮೋಚನಕಾಂಡ 40 : 22 (OCVKN)
ಅನಂತರ ಮೋಶೆ ದೇವದರ್ಶನದ ಗುಡಾರದ ಉತ್ತರ ಭಾಗದಲ್ಲಿ, ಪರದೆಯ ಹೊರಗೆ ಮೇಜನ್ನು ಇಟ್ಟನು.
ವಿಮೋಚನಕಾಂಡ 40 : 23 (OCVKN)
ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ ಹಾಗೆ ಅದರ ಮೇಲೆ ರೊಟ್ಟಿಯನ್ನು ಯೆಹೋವ ದೇವರ ಸನ್ನಿಧಿಯಲ್ಲಿ ಕ್ರಮವಾಗಿ ಇಟ್ಟನು.
ವಿಮೋಚನಕಾಂಡ 40 : 24 (OCVKN)
ದೇವದರ್ಶನದ ಗುಡಾರದಲ್ಲಿ ಮೇಜಿಗೆ ಎದುರಾಗಿ ಗುಡಾರದ ದಕ್ಷಿಣ ಭಾಗದಲ್ಲಿ ದೀಪಸ್ತಂಭವನ್ನು ಇಟ್ಟನು.
ವಿಮೋಚನಕಾಂಡ 40 : 25 (OCVKN)
ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ ಹಾಗೆ ಯೆಹೋವ ದೇವರ ಸನ್ನಿಧಿಯಲ್ಲಿ ದೀಪಗಳನ್ನು ಇರಿಸಿದನು.
ವಿಮೋಚನಕಾಂಡ 40 : 26 (OCVKN)
ಚಿನ್ನದ ಧೂಪವೇದಿಯನ್ನು ದೇವದರ್ಶನದ ಗುಡಾರದಲ್ಲಿ ಪರದೆಯ ಮುಂದೆ ಇಟ್ಟನು.
ವಿಮೋಚನಕಾಂಡ 40 : 27 (OCVKN)
ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ ಹಾಗೆ ಅದರ ಮೇಲೆ ಪರಿಮಳ ಧೂಪವನ್ನು ಸುಟ್ಟನು.
ವಿಮೋಚನಕಾಂಡ 40 : 28 (OCVKN)
ಗುಡಾರದ ಬಾಗಿಲಿನ ಪರದೆಯನ್ನು ತೂಗುಹಾಕಿದನು.
ವಿಮೋಚನಕಾಂಡ 40 : 29 (OCVKN)
ದೇವದರ್ಶನದ ಗುಡಾರದ ಬಳಿಯಲ್ಲಿ ದಹನಬಲಿಯ ಪೀಠವನ್ನು ಇಟ್ಟನು. ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ ಹಾಗೆ ದೇವದರ್ಶನದ ಗುಡಾರದ ಬಾಗಿಲಿನ ಮುಂದೆ ಬಲಿಪೀಠ ಇಟ್ಟು ಅದರ ಮೇಲೆ ದಹನಬಲಿ ಮತ್ತು ಧಾನ್ಯ ಸಮರ್ಪಣೆಯನ್ನೂ ಅರ್ಪಿಸಿದನು.
ವಿಮೋಚನಕಾಂಡ 40 : 30 (OCVKN)
ದೇವದರ್ಶನದ ಗುಡಾರಕ್ಕೂ, ಬಲಿಪೀಠಕ್ಕೂ ಮಧ್ಯ ಗಂಗಾಳವನ್ನು ಇಟ್ಟು, ಅದರಲ್ಲಿ ತೊಳೆಯುವುದಕ್ಕೆ ನೀರನ್ನು ತುಂಬಿಸಿದನು.
ವಿಮೋಚನಕಾಂಡ 40 : 31 (OCVKN)
ಮೋಶೆಯೂ, ಆರೋನನೂ, ಅವನ ಪುತ್ರರೂ ಅದರಲ್ಲಿ ಕೈಕಾಲುಗಳನ್ನು ತೊಳೆದುಕೊಂಡರು.
ವಿಮೋಚನಕಾಂಡ 40 : 32 (OCVKN)
ಅವರು ದೇವದರ್ಶನದ ಗುಡಾರದ ಒಳಗೆ ಸೇರುವ ಸಮಯದಲ್ಲಿಯೂ, ಬಲಿಪೀಠದ ಸಮೀಪಕ್ಕೆ ಬರುವ ಸಮಯದಲ್ಲಿಯೂ ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ ಹಾಗೆಯೇ ಅವರು ಸ್ನಾನ ಮಾಡಿದರು.
ವಿಮೋಚನಕಾಂಡ 40 : 33 (OCVKN)
ವಿಮೋಚನಕಾಂಡ 40 : 34 (OCVKN)
ಮೋಶೆಯು ಗುಡಾರಕ್ಕೂ, ಬಲಿಪೀಠಕ್ಕೂ ಸುತ್ತಲೂ ಅಂಗಳವನ್ನು ನಿಲ್ಲಿಸಿ, ಅಂಗಳದ ಬಾಗಿಲಿನ ಪರದೆಯನ್ನು ತೂಗುಹಾಕಿದನು. ಈ ಪ್ರಕಾರ ಮೋಶೆಯು ಆ ಕೆಲಸವನ್ನು ತೀರಿಸಿದನು. ಯೆಹೋವ ದೇವರ ಮಹಿಮೆ ಆಗ ಮೇಘವು ದೇವದರ್ಶನದ ಗುಡಾರವನ್ನು ಮುಚ್ಚಿಕೊಂಡು, ಯೆಹೋವ ದೇವರ ಮಹಿಮೆಯು ದೇವದರ್ಶನದ ಗುಡಾರವನ್ನು ತುಂಬಿಕೊಂಡಿತು.
ವಿಮೋಚನಕಾಂಡ 40 : 35 (OCVKN)
ದೇವದರ್ಶನದ ಗುಡಾರದ ಮೇಲೆ ಮೇಘವು ನೆಲೆಯಾಗಿದ್ದದರಿಂದಲೂ, ಯೆಹೋವ ದೇವರು ಮಹಿಮೆಯು ದೇವದರ್ಶನದ ಗುಡಾರವನ್ನು ತುಂಬಿದ್ದರಿಂದಲೂ, ಮೋಶೆಯು ಒಳಗೆ ಪ್ರವೇಶಿಸಲಾರದೆ ಇದ್ದನು.
ವಿಮೋಚನಕಾಂಡ 40 : 36 (OCVKN)
ಮೇಘವು ಗುಡಾರವನ್ನು ಬಿಟ್ಟು ಮೇಲಕ್ಕೆ ಹೋದಾಗ, ಇಸ್ರಾಯೇಲರು ತಮ್ಮ ಪ್ರಯಾಣಕ್ಕಾಗಿ ಮುಂದೆ ಹೊರಡುತ್ತಿದ್ದರು.
ವಿಮೋಚನಕಾಂಡ 40 : 37 (OCVKN)
ಆದರೆ ಮೇಘವು ಮೇಲಕ್ಕೆ ಎತ್ತದೇ ಇರುವಾಗ ಅದು ಎತ್ತುವ ದಿವಸದವರೆಗೆ ಅವರು ಪ್ರಯಾಣ ಮಾಡಲಿಲ್ಲ.
ವಿಮೋಚನಕಾಂಡ 40 : 38 (OCVKN)
ಏಕೆಂದರೆ ಇಸ್ರಾಯೇಲರ ಎಲ್ಲಾ ಪ್ರಯಾಣಗಳಲ್ಲಿ ಅವರ ಕಣ್ಣುಗಳ ಮುಂದೆ ಹಗಲಿನಲ್ಲಿ ಯೆಹೋವ ದೇವರ ಮೇಘವು ಗುಡಾರದ ಮೇಲೆ ಇತ್ತು. ರಾತ್ರಿಯಲ್ಲಿ ಮೇಘದೊಳಗೆ ಅಗ್ನಿಯು ಪ್ರಕಾಶಿಸುತ್ತಿತ್ತು.
❮
❯