ಎಫೆಸದವರಿಗೆ 6 : 1 (OCVKN)
ಮಕ್ಕಳೇ, ನೀವು ಕರ್ತನಲ್ಲಿ ನಿಮ್ಮ ತಂದೆತಾಯಿಗಳಿಗೆ ವಿಧೇಯರಾಗಿರಿ, ಇದು ಸೂಕ್ತವಾದದ್ದು.
ಎಫೆಸದವರಿಗೆ 6 : 2 (OCVKN)
“ನಿನ್ನ ತಂದೆತಾಯಿಗಳನ್ನು ಸನ್ಮಾನಿಸಬೇಕು,” ಎಂಬುದು ವಾಗ್ದಾನ ಸಹಿತವಾದ ಮೊದಲನೆಯ ಆಜ್ಞೆಯಾಗಿದೆ.
ಎಫೆಸದವರಿಗೆ 6 : 3 (OCVKN)
“ಸನ್ಮಾನಿಸಿದರೆ ನಿನಗೆ ಶುಭವಾಗುವುದು. ನೀನು ಭೂಮಿಯ ಮೇಲೆ ಬಹುಕಾಲ ಬದುಕುವೆ.”* ಧರ್ಮೋ 5:16
ಎಫೆಸದವರಿಗೆ 6 : 4 (OCVKN)
ಎಫೆಸದವರಿಗೆ 6 : 5 (OCVKN)
ತಂದೆಗಳೇ, ನಿಮ್ಮ ಮಕ್ಕಳನ್ನು ಸಿಟ್ಟಿಗೆಬ್ಬಿಸಬೇಡಿರಿ; ಕರ್ತನ ಶಿಸ್ತಿನಲ್ಲಿಯೂ ಉಪದೇಶದಲ್ಲಿಯೂ ಮಕ್ಕಳನ್ನು ಬೆಳೆಸಿರಿ. ಸೇವಕರೇ, ಭಯಭಕ್ತಿಯಿಂದಲೂ ಸರಳ ಹೃದಯದಿಂದ ಕ್ರಿಸ್ತನಿಗೆ ವಿಧೇಯರಾಗುವ ಪ್ರಕಾರ ಲೌಕಿಕವಾಗಿ ನಿಮ್ಮ ಯಜಮಾನನಾಗಿರುವವರಿಗೆ ವಿಧೇಯರಾಗಿರಿ.
ಎಫೆಸದವರಿಗೆ 6 : 6 (OCVKN)
ಯಜಮಾನರನ್ನು ಮೆಚ್ಚಿಸುವವರಂತೆ ಕಣ್ಣಿಗೆ ಕಾಣುವಾಗ ಮಾತ್ರ ಅವರಿಗೆ ಸೇವೆಮಾಡದೆ, ಕ್ರಿಸ್ತನ ದಾಸರಿಗೆ ತಕ್ಕಂತೆ ಮನಃಪೂರ್ವಕವಾಗಿ ದೇವರ ಚಿತ್ತವನ್ನು ನೆರವೇರಿಸಿರಿ.
ಎಫೆಸದವರಿಗೆ 6 : 7 (OCVKN)
ನೀವು ಮನುಷ್ಯರಿಗೋಸ್ಕರವಲ್ಲ, ಕರ್ತನಿಗೋಸ್ಕರವೇ ಸೇವೆ ಮಾಡುವಂತೆ, ಪೂರ್ಣಮನಸ್ಸಿನಿಂದ ಸೇವೆಮಾಡಿರಿ.
ಎಫೆಸದವರಿಗೆ 6 : 8 (OCVKN)
ದಾಸನಾಗಲಿ, ಸ್ವತಂತ್ರನಾಗಲಿ ತಾನು ಯಾವ ಸತ್ಕಾರ್ಯವನ್ನು ಮಾಡುತ್ತಾನೋ ಅದರ ಪ್ರತಿಫಲವನ್ನು ಕರ್ತ ಯೇಸುವಿನಿಂದ ಹೊಂದುವನೆಂದು ನೀವು ತಿಳಿದಿದ್ದೀರಿ.
ಎಫೆಸದವರಿಗೆ 6 : 9 (OCVKN)
ಎಫೆಸದವರಿಗೆ 6 : 10 (OCVKN)
ಯಜಮಾನರೇ, ನೀವು ಸಹ ನಿಮ್ಮ ಸೇವಕರೊಡನೆ ಅದೇ ರೀತಿಯಾಗಿ ನಡೆದುಕೊಳ್ಳಿರಿ. ಪರಲೋಕದಲ್ಲಿ ನಿಮಗೆ ಯಜಮಾನನಿದ್ದಾನೆಂತಲೂ ಆತನಲ್ಲಿ ಪಕ್ಷಪಾತವಿಲ್ಲವೆಂತಲೂ ತಿಳಿದು ಅವರನ್ನು ಬೆದರಿಸುವುದನ್ನು ಬಿಟ್ಟುಬಿಡಿರಿ. ದೇವರು ಕೊಡುವ ಸರ್ವಾಯುಧಗಳು ಕೊನೆಯದಾಗಿ, ಕರ್ತನಲ್ಲಿಯೂ ಅವರ ಪರಾಕ್ರಮ ಶಕ್ತಿಯಲ್ಲಿಯೂ ಬಲಗೊಳ್ಳಿರಿ.
ಎಫೆಸದವರಿಗೆ 6 : 11 (OCVKN)
ನೀವು ಪಿಶಾಚನ ತಂತ್ರಗಳನ್ನು ಎದುರಿಸಿ ನಿಲ್ಲುವುದಕ್ಕೆ ಶಕ್ತರಾಗುವಂತೆ ದೇವರ ಸರ್ವಾಯುಧಗಳನ್ನು ಧರಿಸಿಕೊಳ್ಳಿರಿ.
ಎಫೆಸದವರಿಗೆ 6 : 12 (OCVKN)
ಏಕೆಂದರೆ, ನಾವು ಹೋರಾಡುವುದು ನರಮಾನವರೊಂದಿಗಲ್ಲ, ರಾಜತ್ವಗಳ ಮೇಲೆಯೂ ಅಧಿಕಾರಿಗಳ ಮೇಲೆಯೂ ಈ ಲೋಕದ ಅಂಧಕಾರದ ಅಧಿಪತಿಗಳ ಮೇಲೆಯೂ ಆಕಾಶಮಂಡಲದಲ್ಲಿರುವ ದುರಾತ್ಮಗಳ ಸೇನೆಗಳ ಮೇಲೆಯೂ ಆಗಿದೆ.
ಎಫೆಸದವರಿಗೆ 6 : 13 (OCVKN)
ಆದುದರಿಂದ ವೈರಿಯು ದಾಳಿಮಾಡುವ ದಿನವು ಬರುವಾಗ ನೀವು ಅವನನ್ನು ಎದುರಿಸಿ ನಿಲ್ಲುವಂತೆಯು, ಎಲ್ಲವನ್ನು ಜಯಿಸಿ ಮುಗಿಸಿದ ಮೇಲೆ ನಿಲ್ಲಲು ಶಕ್ತರಾಗುವಂತೆ, ದೇವರ ಸರ್ವಾಯುಧಗಳನ್ನು ಧರಿಸಿಕೊಳ್ಳಿರಿ.
ಎಫೆಸದವರಿಗೆ 6 : 14 (OCVKN)
ಸತ್ಯವೆಂಬ ನಡುಕಟ್ಟನ್ನು ಕಟ್ಟಿಕೊಂಡು, ನೀತಿಯೆಂಬ ಕವಚವನ್ನು ಧರಿಸಿಕೊಳ್ಳಿರಿ.
ಎಫೆಸದವರಿಗೆ 6 : 15 (OCVKN)
ಸಮಾಧಾನದ ಸುವಾರ್ತೆಯ ಸಿದ್ಧತೆಯೆಂಬ ಪಾದರಕ್ಷೆಗಳನ್ನು ಮೆಟ್ಟಿಕೊಂಡು ನಿಲ್ಲಿರಿ.
ಎಫೆಸದವರಿಗೆ 6 : 16 (OCVKN)
ಇವೆಲ್ಲವುಗಳೊಂದಿಗೆ ವಿಶ್ವಾಸವೆಂಬ ಗುರಾಣಿಯನ್ನು ಹಿಡಿದುಕೊಳ್ಳಿರಿ. ಈ ಗುರಾಣಿಯಿಂದಲೇ, ನೀವು ಕೆಡುಕನ ಅಗ್ನಿಬಾಣಗಳನ್ನೆಲ್ಲಾ ನಂದಿಸುವುದಕ್ಕೆ ಶಕ್ತರಾಗುವಿರಿ.
ಎಫೆಸದವರಿಗೆ 6 : 17 (OCVKN)
ಇದಲ್ಲದೆ ರಕ್ಷಣೆಯೆಂಬ ಶಿರಸ್ತ್ರಾಣವನ್ನು ಧರಿಸಿಕೊಳ್ಳಿರಿ. ದೇವರ ವಾಕ್ಯವೆಂಬ ಪವಿತ್ರಾತ್ಮರ ಖಡ್ಗವನ್ನು ಎತ್ತಿ ಹಿಡಿಯಿರಿ.
ಎಫೆಸದವರಿಗೆ 6 : 18 (OCVKN)
ನೀವು ಪವಿತ್ರಾತ್ಮ ದೇವರಲ್ಲಿ ಎಲ್ಲಾ ಸಮಯಗಳಲ್ಲಿಯೂ ಸಕಲ ವಿಧವಾದ ಪ್ರಾರ್ಥನೆಯಿಂದಲೂ ವಿಜ್ಞಾಪನೆಯಿಂದಲೂ ಪ್ರಾರ್ಥಿಸಿರಿ. ಇದರಲ್ಲಿ ಪೂರ್ಣ ಸ್ಥಿರಚಿತ್ತರಾಗಿದ್ದು ಕರ್ತನ ಜನರೆಲ್ಲರಿಗಾಗಿ ಪ್ರಾರ್ಥನೆ ಮಾಡುತ್ತಾ ಎಚ್ಚರವಾಗಿರಿ.
ಎಫೆಸದವರಿಗೆ 6 : 19 (OCVKN)
ನಾನು ಬಾಯಿ ತೆರೆಯುವಾಗ ಸುವಾರ್ತೆಯ ರಹಸ್ಯವನ್ನು ಧೈರ್ಯವಾಗಿ ತಿಳಿಯಪಡಿಸುವುದಕ್ಕೆ ಮಾತನ್ನು ನನಗೆ ದಯಪಾಲಿಸಬೇಕೆಂದು ಪ್ರಾರ್ಥಿಸಿರಿ.
ಎಫೆಸದವರಿಗೆ 6 : 20 (OCVKN)
ಏಕೆಂದರೆ ಆ ಸುವಾರ್ತೆಗಾಗಿಯೇ ಸೆರೆಯಲ್ಲಿರುವ ರಾಯಭಾರಿಯಾದ ನಾನು ಅದನ್ನು ಸಾರುವುದರಲ್ಲಿ ಧೈರ್ಯವಾಗಿ ಮಾತನಾಡುವ ಹಂಗಿನಲ್ಲಿದ್ದೇನೆ.
ಎಫೆಸದವರಿಗೆ 6 : 21 (OCVKN)
ಅಂತಿಮ ವಂದನೆಗಳು ನನ್ನ ವಿಷಯವಾಗಿಯೂ ನಾನು ಮಾಡುತ್ತಿರುವುದರ ವಿಷಯವಾಗಿಯೂ ಪ್ರಿಯ ಸಹೋದರನೂ ಕರ್ತನಲ್ಲಿ ನಂಬಿಗಸ್ತನಾದ ಸೇವಕನೂ ಆಗಿರುವ ತುಖಿಕನು ನಿಮಗೆ ಎಲ್ಲವನ್ನೂ ತಿಳಿಸುವನು.
ಎಫೆಸದವರಿಗೆ 6 : 22 (OCVKN)
ನೀವು ನಮ್ಮ ಸಮಾಚಾರವನ್ನು ತಿಳಿದುಕೊಳ್ಳುವಂತೆಯೂ ಅವನು ನಿಮ್ಮ ಹೃದಯಗಳನ್ನು ಉತ್ತೇಜಿಸುವಂತೆಯೂ ಅವನನ್ನು ನಿಮ್ಮ ಬಳಿಗೆ ಕಳುಹಿಸಿದ್ದೇನೆ.
ಎಫೆಸದವರಿಗೆ 6 : 23 (OCVKN)
ತಂದೆಯಾದ ದೇವರಿಂದಲೂ ಕರ್ತ ಆಗಿರುವ ಯೇಸು ಕ್ರಿಸ್ತರಿಂದಲೂ ಶಾಂತಿಯೂ ಮತ್ತು ನಂಬಿಕೆಯಿಂದ ಕೂಡಿದ ಪ್ರೀತಿಯೂ ಸಹೋದರರಿಗೆ ಇರಲಿ.
ಎಫೆಸದವರಿಗೆ 6 : 24 (OCVKN)
ನಮ್ಮ ಕರ್ತ ಆಗಿರುವ ಯೇಸು ಕ್ರಿಸ್ತರನ್ನು ಅಳಿದು ಹೋಗದ ಪ್ರೀತಿಯಿಂದ ಪ್ರೀತಿಸುವವರೆಲ್ಲರ ಮೇಲೆ ಕೃಪೆಯಿರಲಿ.

1 2 3 4 5 6 7 8 9 10 11 12 13 14 15 16 17 18 19 20 21 22 23 24