ಎಫೆಸದವರಿಗೆ 3 : 1 (OCVKN)
ಪೌಲನು ಯೆಹೂದ್ಯರಲ್ಲದವರ ಅಪೊಸ್ತಲನು
ಎಫೆಸದವರಿಗೆ 3 : 2 (OCVKN)
ಈ ಕಾರಣದಿಂದ ಯೆಹೂದ್ಯರಲ್ಲದವರಾಗಿರುವ ನಿಮ್ಮ ನಿಮಿತ್ತ ಕ್ರಿಸ್ತ ಯೇಸುವಿನ ಸೆರೆಯಾಳಾಗಿರುವ ಪೌಲನೆಂಬ ನಾನು ಹೇಳುವುದೇನೆಂದರೆ: ನಿಮಗೋಸ್ಕರವಾಗಿ ನನಗೆ ಕೊಡಲಾದ ದೇವರ ಕೃಪೆಯ ಕಾರ್ಯಭಾರವನ್ನು ನೀವು ಕೇಳಿದ್ದೀರಿ,
ಎಫೆಸದವರಿಗೆ 3 : 3 (OCVKN)
ಅವರು ರಹಸ್ಯವನ್ನು ಪ್ರಕಟನೆಯಿಂದ ನನಗೆ ತಿಳಿಸಿದರೆಂದು ನಾನು ನಿಮಗೆ ಮೊದಲೇ ಸಂಕ್ಷೇಪವಾಗಿ ಬರೆದಿದ್ದೇನೆ.
ಎಫೆಸದವರಿಗೆ 3 : 4 (OCVKN)
ಅದನ್ನು ನೀವು ಓದಿದರೆ ಕ್ರಿಸ್ತನ ರಹಸ್ಯದ ಕುರಿತಾಗಿ ನನಗಿರುವ ಒಳನೋಟವನ್ನು ನೀವೇ ಅರ್ಥಮಾಡಿಕೊಳ್ಳುವಿರಿ.
ಎಫೆಸದವರಿಗೆ 3 : 5 (OCVKN)
ಈ ರಹಸ್ಯವು ದೇವರ ಪರಿಶುದ್ಧ ಅಪೊಸ್ತಲರಿಗೂ ಪ್ರವಾದಿಗಳಿಗೂ ದೇವರಾತ್ಮರ ಮೂಲಕ ಈಗ ಪ್ರಕಟಿಸಿದಂತೆ, ಬೇರೆ ತಲೆಮಾರುಗಳಲ್ಲಿದ್ದ ಜನರಿಗೆ ತಿಳಿಸಿರಲಿಲ್ಲ.
ಎಫೆಸದವರಿಗೆ 3 : 6 (OCVKN)
ಸುವಾರ್ತೆಯ ಮೂಲಕ ಯೆಹೂದ್ಯರಲ್ಲದವರೂ ಸಹ ಇಸ್ರಾಯೇಲರೊಂದಿಗೆ ವಾರಸುದಾರರೂ ಒಂದೇ ದೇಹದ ಅವಯವಗಳೂ ಕ್ರಿಸ್ತ ಯೇಸುವಿನಲ್ಲಿ ದೇವರ ವಾಗ್ದಾನದ ಸಹಪಾಲುಗಾರರೂ ಆಗಿರಬೇಕೆಂಬುದೇ ಈ ರಹಸ್ಯ.
ಎಫೆಸದವರಿಗೆ 3 : 7 (OCVKN)
ದೇವರ ಶಕ್ತಿಯ ಕ್ರಿಯೆಯಿಂದ ನನಗೆ ಕೊಡಲಾದ ಅವರ ದೇವ ಕೃಪಾದಾನಕ್ಕೆ ಅನುಸಾರವಾಗಿ ನಾನು ಈ ಸುವಾರ್ತೆಗೆ ಸೇವಕನಾದೆನು.
ಎಫೆಸದವರಿಗೆ 3 : 8 (OCVKN)
ನಾನು ಕರ್ತನ ಜನರೆಲ್ಲರಲ್ಲಿಯೂ ಅತ್ಯಲ್ಪನಾಗಿದ್ದೇನೆ. ಹಾಗಿದ್ದರೂ, ನನಗೆ ಈ ಕೃಪೆ ಕೊಡಲಾಯಿತು: ಏಕೆಂದರೆ, ನಾನು ಕ್ರಿಸ್ತನ ಅಪರಿಮಿತವಾದ ಐಶ್ವರ್ಯವನ್ನು ಯೆಹೂದ್ಯರಲ್ಲದವರಿಗೆ ಸಾರುವಂತೆಯೂ
ಎಫೆಸದವರಿಗೆ 3 : 9 (OCVKN)
ಸಮಸ್ತವನ್ನೂ ಸೃಷ್ಟಿಸಿದ ದೇವರಲ್ಲಿ ಲೋಕಾದಿಯಿಂದ ಮರೆಯಾಗಿದ್ದ ಕಾರ್ಯಭಾರದ ರಹಸ್ಯವು ಏನೆಂಬುದನ್ನು ಎಲ್ಲರಿಗೂ ಸ್ಪಷ್ಟಪಡಿಸುವುದಕ್ಕಾಗಿಯೂ ಆಗಿರುತ್ತದೆ.
ಎಫೆಸದವರಿಗೆ 3 : 10 (OCVKN)
ಬಹು ಪ್ರಕಾರದ ದೇವರ ಜ್ಞಾನವು ಪರಲೋಕದಲ್ಲಿ ರಾಜತ್ವಗಳಿಗೂ ಅಧಿಕಾರಗಳಿಗೂ ಈಗ ಸಭೆಯ ಮೂಲಕ ಗೊತ್ತಾಗಬೇಕೆಂಬುದೇ ದೇವರ ಉದ್ದೇಶ.
ಎಫೆಸದವರಿಗೆ 3 : 11 (OCVKN)
ಹೀಗೆ ದೇವರು ತಮ್ಮ ನಿತ್ಯ ಉದ್ದೇಶದ ಪ್ರಕಾರ ಇದನ್ನು ನಮ್ಮ ಕರ್ತ ಆಗಿರುವ ಕ್ರಿಸ್ತ ಯೇಸುವಿನಲ್ಲಿ ನೆರವೇರಿಸಿದರು.
ಎಫೆಸದವರಿಗೆ 3 : 12 (OCVKN)
ಕ್ರಿಸ್ತನಲ್ಲಿಯೂ ಕ್ರಿಸ್ತನ ಮೇಲೆ ನಂಬಿಕೆಯನ್ನಿಡುವುದರ ಮೂಲಕವೂ ನಾವು ಸ್ವಾತಂತ್ರ್ಯದಿಂದಲೂ ಭರವಸೆಯಿಂದಲೂ ದೇವರನ್ನು ಸಮೀಪಿಸಲು ಈಗ ಸಾಧ್ಯ.
ಎಫೆಸದವರಿಗೆ 3 : 13 (OCVKN)
ಆದ್ದರಿಂದ, ನಿಮಗಾಗಿ ನನಗುಂಟಾದ ಸಂಕಟಗಳು ನಿಮಗೆ ಮಹಿಮೆಯಾಗಿರುವುದರಿಂದ, ನೀವು ಧೈರ್ಯಗೆಡಬಾರದೆಂದು ನಾನು ನಿಮ್ಮನ್ನು ಕೇಳಿಕೊಳ್ಳುತ್ತೇನೆ.
ಎಫೆಸದವರಿಗೆ 3 : 14 (OCVKN)
ಎಫೆಸದವರಿಗಾಗಿ ಪ್ರಾರ್ಥನೆ (14-15)ಈ ಕಾರಣದಿಂದ, ಪರಲೋಕ ಭೂಲೋಕದಲ್ಲಿರುವ ಪ್ರತಿ ಕುಟುಂಬವೂ ಹೆಸರು ಪಡೆದಿರಲು ಕಾರಣವಾಗಿರುವ ತಂದೆಯ ಮುಂದೆ ನಾನು ಮೊಣಕಾಲೂರುತ್ತೇನೆ:
ಎಫೆಸದವರಿಗೆ 3 : 15 (OCVKN)
ಎಫೆಸದವರಿಗೆ 3 : 16 (OCVKN)
ದೇವರು ತಮ್ಮ ಮಹಿಮೆಯ ಐಶ್ವರ್ಯಕ್ಕನುಸಾರವಾಗಿ ತಮ್ಮ ಆತ್ಮನ ಮೂಲಕ ನಿಮ್ಮನ್ನು ಆಂತರ್ಯದಲ್ಲಿ ಶಕ್ತಿಯಿಂದ ಬಲಪಡಿಸಲಿ ಎಂದು ಪ್ರಾರ್ಥಿಸುತ್ತೇನೆ.
ಎಫೆಸದವರಿಗೆ 3 : 17 (OCVKN)
ನಂಬಿಕೆಯ ಮೂಲಕ ಕ್ರಿಸ್ತನು ನಿಮ್ಮ ಹೃದಯಗಳಲ್ಲಿ ವಾಸಿಸಲಿ. ನೀವು ಪ್ರೀತಿಯಲ್ಲಿ ಬೇರೂರಿ ನೆಲೆಗೊಂಡು ನಿಂತು
ಎಫೆಸದವರಿಗೆ 3 : 18 (OCVKN)
ದೇವರ ಪರಿಶುದ್ಧರೆಲ್ಲರೊಂದಿಗೆ ಅದರ ಅಗಲ, ಉದ್ದ, ಆಳ ಮತ್ತು ಎತ್ತರವನ್ನು ಪೂರ್ಣವಾಗಿ ಕ್ರಿಸ್ತನ ಪ್ರೀತಿಯನ್ನು ಅರಿಯುವುದಕ್ಕೆ ಶಕ್ತರಾಗಲಿ.
ಎಫೆಸದವರಿಗೆ 3 : 19 (OCVKN)
ಮತ್ತು ತಿಳುವಳಿಕೆಗೆ ಅಪಾರವಾದ ಕ್ರಿಸ್ತನ ಪ್ರೀತಿಯನ್ನು ನೀವು ತಿಳಿದುಕೊಂಡು ದೇವರ ಸರ್ವಸಂಪೂರ್ಣತೆಯಿಂದ ತುಂಬಿದವರಾಗಲಿ ಎಂದು ಅವರನ್ನು ಬೇಡಿಕೊಳ್ಳುತ್ತೇನೆ.
ಎಫೆಸದವರಿಗೆ 3 : 20 (OCVKN)
ನಮ್ಮಲ್ಲಿ ಕಾರ್ಯಸಾಧಿಸುವ ತಮ್ಮ ಶಕ್ತಿಯ ಪ್ರಕಾರ ನಾವು ಬೇಡುವುದಕ್ಕಿಂತಲೂ ಯೋಚಿಸುವುದಕ್ಕಿಂತಲೂ ಅತ್ಯಧಿಕವಾಗಿಯೇ ಎಲ್ಲವನ್ನೂ ಮಾಡಲು ಶಕ್ತರಾದ ದೇವರಿಗೆ
ಎಫೆಸದವರಿಗೆ 3 : 21 (OCVKN)
ಸಭೆಯಲ್ಲಿ ಕ್ರಿಸ್ತ ಯೇಸುವಿನ ಮೂಲಕ ತಲತಲಾಂತರಕ್ಕೂ ಯುಗಯುಗಾಂತರಕ್ಕೂ ಮಹಿಮೆ ಉಂಟಾಗಲಿ. ಆಮೆನ್.

1 2 3 4 5 6 7 8 9 10 11 12 13 14 15 16 17 18 19 20 21