ಎಫೆಸದವರಿಗೆ 2 : 1 (OCVKN)
ಕ್ರಿಸ್ತನಲ್ಲಿ ಜೀವಂತವಾಗಿರುವುದು ನೀವು ನಿಮ್ಮ ಅಪರಾಧಗಳ ಮತ್ತು ಪಾಪಗಳ ದೆಸೆಯಿಂದ ಹಿಂದೊಮ್ಮೆ ಸತ್ತವರಾಗಿದ್ದೀರಿ.
ಎಫೆಸದವರಿಗೆ 2 : 2 (OCVKN)
ನೀವು, ಹಿಂದೆ ಇಹಲೋಕದ ಮಾರ್ಗಕ್ಕೆ ಅನುಸಾರವಾಗಿ ನಡೆದುಕೊಂಡು, ವಾಯುಮಂಡಲದ ಅಧಿಪತಿಯ ಆತ್ಮನಿಗನುಸಾರವಾಗಿದ್ದೀರಿ. ಆ ದುರಾತ್ಮವು ಈಗ ಅವಿಧೇಯತೆಯ ಮಕ್ಕಳಲ್ಲಿ ಕಾರ್ಯಮಾಡುತ್ತಿದೆ.
ಎಫೆಸದವರಿಗೆ 2 : 3 (OCVKN)
ಹಿಂದೊಮ್ಮೆ ನಾವೆಲ್ಲರೂ ಅವರೊಂದಿಗೆ ನಮ್ಮ ದೇಹದ ಆಶೆಗಳ ಪ್ರಕಾರ ಜೀವಿಸುತ್ತಿದ್ದಾಗ ಮನಸ್ಸಿನ ಹಾಗೂ ಶರೀರದ ಆಶೆಗಳನ್ನು ನೆರವೇರಿಸುತ್ತಾ ನಡೆದು, ಉಳಿದವರಂತೆ ಸ್ವಾಭಾವಿಕವಾಗಿ ದೇವರ ಕೋಪಕ್ಕೆ ಗುರಿಯಾದವರಾಗಿದ್ದೆವು.
ಎಫೆಸದವರಿಗೆ 2 : 4 (OCVKN)
ಆದರೆ ಕರುಣೆಯಲ್ಲಿ ಐಶ್ವರ್ಯವಂತರಾದ ದೇವರು ನಮ್ಮನ್ನು ಅಪಾರವಾಗಿ ಪ್ರೀತಿಸಿದರು.
ಎಫೆಸದವರಿಗೆ 2 : 5 (OCVKN)
ಹೇಗೆದಂರೆ, ಅಪರಾಧಗಳಲ್ಲಿ ಸತ್ತವರಾಗಿದ್ದರೂ ನಮ್ಮನ್ನು ಕ್ರಿಸ್ತನೊಂದಿಗೆ ಬದುಕಿಸಿದರು. ಹೀಗೆ ನೀವು ದೇವರ ಕೃಪೆಯಿಂದಲೇ ರಕ್ಷಣೆ ಹೊಂದಿದ್ದೀರಿ.
ಎಫೆಸದವರಿಗೆ 2 : 6 (OCVKN)
ಕ್ರಿಸ್ತ ಯೇಸುವಿನೊಂದಿಗೆ ದೇವರು ನಮ್ಮನ್ನು ಎಬ್ಬಿಸಿ ಪರಲೋಕದ ಉನ್ನತ ಸ್ಥಳಗಳಲ್ಲಿ ಕ್ರಿಸ್ತನೊಂದಿಗೇ ನಮ್ಮನ್ನು ಕೂತುಕೊಳ್ಳುವಂತೆ ಮಾಡಿದ್ದಾರೆ.
ಎಫೆಸದವರಿಗೆ 2 : 7 (OCVKN)
ಮುಂದಣ ಯುಗಗಳಲ್ಲಿ ಕ್ರಿಸ್ತ ಯೇಸುವಿನ ದಯೆಯ ಮೂಲಕ ದೇವರು ತಮ್ಮ ಮಿತಿಯಿಲ್ಲದ ಕೃಪೆಯನ್ನು ನಮಗೆ ತೋರಿಸಬೇಕೆಂದಿದ್ದಾರೆ.
ಎಫೆಸದವರಿಗೆ 2 : 8 (OCVKN)
ನಂಬಿಕೆಯ ಮೂಲಕ ಕೃಪೆಯಿಂದಲೇ ನೀವು ರಕ್ಷಣೆ ಹೊಂದಿದ್ದೀರಿ. ಈ ರಕ್ಷಣೆಯು ನಿಮ್ಮಿಂದ ಉಂಟಾದದ್ದಲ್ಲ, ಇದು ದೇವರ ದಾನವೇ.
ಎಫೆಸದವರಿಗೆ 2 : 9 (OCVKN)
ಯಾರಾದರೂ ಹೆಮ್ಮೆ ಪಡುವಂತೆ ಈ ರಕ್ಷಣೆಯು ಪುಣ್ಯಕ್ರಿಯೆಗಳಿಂದ ಉಂಟಾದದ್ದೂ ಅಲ್ಲ.
ಎಫೆಸದವರಿಗೆ 2 : 10 (OCVKN)
ನಾವು ಕ್ರಿಸ್ತ ಯೇಸುವಿನಲ್ಲಿ ಸತ್ಕ್ರಿಯೆಗಳನ್ನು ಮಾಡುವುದಕ್ಕಾಗಿಯೇ ಸೃಷ್ಟಿಸಲಾದ ದೇವರ ಕಲಾಕೃತಿಯಾಗಿದ್ದೇವೆ. ಸತ್ಕ್ರಿಯೆಗಳನ್ನು ಮಾಡುತ್ತಾ ಬಾಳಬೇಕೆಂದು ದೇವರು ನಮ್ಮನ್ನು ಮುಂಚಿತವಾಗಿ ನೇಮಿಸಿದ್ದಾರೆ.
ಎಫೆಸದವರಿಗೆ 2 : 11 (OCVKN)
ಕ್ರಿಸ್ತನಲ್ಲಿ ಒಂದಾಗಿರುವುದು ಆದಕಾರಣ ಸುನ್ನತಿಮಾಡಿಸಿಕೊಂಡಿದ್ದೇವೆ ಎಂದು ತಮ್ಮ ಬಗ್ಗೆ ಹೇಳಿಕೊಂಡವರು, ಹುಟ್ಟಿದಂದಿನಿಂದ ಯೆಹೂದ್ಯರಲ್ಲದವರಾದ ನಿಮಗೆ ಸುನ್ನತಿಮಾಡಿಸಿಕೊಳ್ಳದವರು ಎಂದು ಹೇಳಿದ್ದನು ನೆನಪುಮಾಡಿಕೊಳ್ಳಿ. ಈ ಸುನ್ನತಿಯು ಮನುಷ್ಯರಿಂದಾದದ್ದಷ್ಟೇ.
ಎಫೆಸದವರಿಗೆ 2 : 12 (OCVKN)
ಇದಲ್ಲದೆ ನೀವು ಆಗ ಕ್ರಿಸ್ತನಿಲ್ಲದವರೂ ಇಸ್ರಾಯೇಲಿನ ಪೌರತ್ವದಿಂದ ಪ್ರತ್ಯೇಕಿಸಲಾದವರೂ ಒಡಂಬಡಿಕೆಯ ವಾಗ್ದಾನಕ್ಕೆ ವಿದೇಶಿಯವರೂ ಲೋಕದಲ್ಲಿ ದೇವರೊಂದಿಗೆ ಯಾವ ಸಂಬಂಧವಿಲ್ಲದೆ ನಿರೀಕ್ಷೆಯಿಲ್ಲದವರೂ ಆಗಿದ್ದೀರೆಂದು ಜ್ಞಾಪಕಮಾಡಿಕೊಳ್ಳಿರಿ.
ಎಫೆಸದವರಿಗೆ 2 : 13 (OCVKN)
ಮೊದಲು ಕ್ರಿಸ್ತ ಯೇಸುವಿಗೆ ದೂರವಾಗಿದ್ದ ನೀವು ಈಗ ಕ್ರಿಸ್ತನ ರಕ್ತದ* ಅಥವಾ ಶಿಲುಬೆಯ ಮರಣದಿಂದ ಮೂಲಕ ಹತ್ತಿರವಾಗಿದ್ದೀರಿ.
ಎಫೆಸದವರಿಗೆ 2 : 14 (OCVKN)
ಕ್ರಿಸ್ತ ಯೇಸು ತಾವೇ ನಮ್ಮ ಸಮಾಧಾನವಾಗಿದ್ದು, ಎರಡು ಗುಂಪಿನವರನ್ನು ಒಂದು ಮಾಡಿ, ಅಗಲಿಸಿದ ವೈರತ್ವದ ಅಡ್ಡಗೋಡೆಯನ್ನು ತಮ್ಮ ಶರೀರದ ಮೂಲಕ ಕೆಡವಿಹಾಕಿದರು.
ಎಫೆಸದವರಿಗೆ 2 : 15 (OCVKN)
ಹೀಗೆ ಕ್ರಿಸ್ತ ಯೇಸು ತಮ್ಮ ದೇಹವನ್ನು ಶಿಲುಬೆಯಲ್ಲಿ ಸಮರ್ಪಿಸಿದ್ದರಿಂದ ನಿಯಮದ ಆಜ್ಞೆಗಳುಳ್ಳ ಶಾಸನಗಳನ್ನು ರದ್ದುಗೊಳಿಸಿದರು. ಈ ರೀತಿಯಾಗಿ ಇವೆರಡೂ ಗುಂಪಿನವರಿಂದ ಒಬ್ಬ ನೂತನ ಮಾನವತ್ವವನ್ನು ತಮ್ಮಲ್ಲಿ ಸೃಷ್ಟಿಸಿ ಸಮಾಧಾನವನ್ನು ಉಂಟುಮಾಡಿದರು.
ಎಫೆಸದವರಿಗೆ 2 : 16 (OCVKN)
ಶಿಲುಬೆಯ ಮರಣದ ಮೂಲಕ ಇವೆರಡೂ ಗುಂಪಿನವರಿಂದ ಒಂದೇ ದೇಹದವರನ್ನಾಗಿ ಮಾಡಿ ದೇವರೊಂದಿಗೆ ಸಂಧಾನಪಡಿಸಿ, ಇದ್ದ ವೈರತ್ವವನ್ನು ಇಲ್ಲದಂತೆ ಮಾಡಿದರು.
ಎಫೆಸದವರಿಗೆ 2 : 17 (OCVKN)
ಇದಲ್ಲದೆ ಕ್ರಿಸ್ತ ಯೇಸುವು ಬಂದು ದೂರವಾಗಿದ್ದ ನಿಮಗೂ ಸಮೀಪವಾಗಿದ್ದ ನಮಗೂ ಸಮಾಧಾನವನ್ನು ಸಾರಿದರು.
ಎಫೆಸದವರಿಗೆ 2 : 18 (OCVKN)
ಏಕೆಂದರೆ ಕ್ರಿಸ್ತ ಯೇಸುವಿನ ಮೂಲಕ ನಾವೂ ನೀವೂ ಪವಿತ್ರಾತ್ಮ ದೇವರಿಂದ ತಂದೆಯ ಬಳಿಗೆ ಪ್ರವೇಶಿಸುವುದಕ್ಕೆ ಮಾರ್ಗವಾಯಿತು.
ಎಫೆಸದವರಿಗೆ 2 : 19 (OCVKN)
ಹೀಗಿರಲಾಗಿ, ನೀವು ಇನ್ನು ಮೇಲೆ ಪರಕೀಯರೂ ಪರದೇಶದವರೂ ಆಗಿರದೆ ದೇವಜನರೊಂದಿಗೆ ಜೊತೆ ನಾಗರಿಕರೂ ದೇವರ ಮನೆಯವರೂ ಆಗಿದ್ದೀರಿ.
ಎಫೆಸದವರಿಗೆ 2 : 20 (OCVKN)
ಕ್ರಿಸ್ತ ಯೇಸು ಎಂಬ ಮುಖ್ಯ ಮೂಲೆಗಲ್ಲಿನೊಂದಿಗೆ ಅಪೊಸ್ತಲರು ಹಾಗೂ ಪ್ರವಾದಿಗಳೆಂಬ ಅಸ್ತಿವಾರದ ಮೇಲೆ ನೀವು ಕಟ್ಟಲಾಗಿದ್ದೀರಿ.
ಎಫೆಸದವರಿಗೆ 2 : 21 (OCVKN)
ಕ್ರಿಸ್ತನಲ್ಲಿ ಕಟ್ಟಡವೆಲ್ಲವೂ ಒಂದಾಗಿ ವೃದ್ಧಿಯಾಗುತ್ತಾ ಕರ್ತನಲ್ಲಿ ಪರಿಶುದ್ಧ ದೇವಾಲಯವಾಗುತ್ತದೆ.
ಎಫೆಸದವರಿಗೆ 2 : 22 (OCVKN)
ನೀವೂ ಸಹ ಆತ್ಮನ ಮೂಲಕ ಕ್ರಿಸ್ತನಲ್ಲಿ ದೇವರಿಗೆ ನಿವಾಸಸ್ಥಾನವಾಗುವಂತೆ ಒಟ್ಟಾಗಿ ನಿರ್ಮಿತರಾಗುತ್ತಿದ್ದೀರಿ.

1 2 3 4 5 6 7 8 9 10 11 12 13 14 15 16 17 18 19 20 21 22