ಧರ್ಮೋಪದೇಶಕಾಂಡ 6 : 1 (OCVKN)
ಯೆಹೋವ ದೇವರನ್ನು ಪ್ರೀತಿಸು ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಬೋಧಿಸಲು ನನಗೆ ನಡೆಸಿದ ಈ ಆಜ್ಞೆಗಳನ್ನೂ, ತೀರ್ಪುಗಳನ್ನೂ, ನಿಯಮಗಳನ್ನೂ ನೀವು ಸ್ವತಂತ್ರಿಸಿಕೊಳ್ಳುವುದಕ್ಕೆ ಹೋಗುವ ದೇಶದಲ್ಲಿ ಅನುಸರಿಸಬೇಕಾದವುಗಳು ಇವೇ.
ಧರ್ಮೋಪದೇಶಕಾಂಡ 6 : 2 (OCVKN)
ನೀವೂ, ನಿಮ್ಮ ಮಕ್ಕಳೂ, ನಿಮ್ಮ ಮೊಮ್ಮಕ್ಕಳೂ ತಮ್ಮ ಜೀವನದ ದಿವಸಗಳಲ್ಲೆಲ್ಲಾ ನಿಮ್ಮ ದೇವರಾದ ಯೆಹೋವ ದೇವರಿಗೆ ಭಯಪಟ್ಟು, ಕೈಗೊಳ್ಳುವ ಹಾಗೆಯೂ, ನಿಮ್ಮ ದಿವಸಗಳು ಬಹಳವಾಗುವ ಹಾಗೆಯೂ ನಾನು ನಿಮಗೆ ಕೊಡುವ ದೇವರ ಎಲ್ಲಾ ತೀರ್ಪುಗಳನ್ನು ಮತ್ತು ಆಜ್ಞೆಗಳನ್ನು ಅನುಸರಿಸಬೇಕು.
ಧರ್ಮೋಪದೇಶಕಾಂಡ 6 : 3 (OCVKN)
ಹೀಗಿರುವುದರಿಂದ ಓ ಇಸ್ರಾಯೇಲರೇ, ನಿಮ್ಮ ಪಿತೃಗಳ ದೇವರಾದ ಯೆಹೋವ ದೇವರು ವಾಗ್ದಾನ ಮಾಡಿದ ಪ್ರಕಾರ ಹಾಲೂ ಜೇನೂ ಹರಿಯುವ ದೇಶದಲ್ಲಿ ನಿಮಗೆ ಒಳ್ಳೆಯದಾಗುವ ಹಾಗೆಯೂ ನೀವು ಬಹಳವಾಗಿ ಹೆಚ್ಚುವ ಹಾಗೆಯೂ ಲಕ್ಷ್ಯವಿಟ್ಟು ಕೇಳಿ ವಿಧೇಯರಾಗಿರಿ.
ಧರ್ಮೋಪದೇಶಕಾಂಡ 6 : 4 (OCVKN)
ಇಸ್ರಾಯೇಲರೇ, ಕೇಳಿರಿ: ದೇವರಾದ ಯೆಹೋವ ನಮ್ಮ ದೇವರು; ಯೆಹೋವ ದೇವರು ಒಬ್ಬರೇ.
ಧರ್ಮೋಪದೇಶಕಾಂಡ 6 : 5 (OCVKN)
ನೀವು ನಿಮ್ಮ ದೇವರಾದ ಯೆಹೋವ ದೇವರನ್ನು ಪೂರ್ಣಹೃದಯದಿಂದಲೂ, ಪೂರ್ಣಪ್ರಾಣದಿಂದಲೂ, ಪೂರ್ಣಶಕ್ತಿಯಿಂದಲೂ ಪ್ರೀತಿಸಬೇಕು.
ಧರ್ಮೋಪದೇಶಕಾಂಡ 6 : 6 (OCVKN)
ನಾನು ಈ ಹೊತ್ತು ನಿಮಗೆ ಆಜ್ಞಾಪಿಸುವ ಈ ಮಾತುಗಳು ನಿಮ್ಮ ಹೃದಯದಲ್ಲಿ ಇರಬೇಕು.
ಧರ್ಮೋಪದೇಶಕಾಂಡ 6 : 7 (OCVKN)
ಅವುಗಳನ್ನು ನಿಮ್ಮ ಮಕ್ಕಳಿಗೆ ಅಭ್ಯಾಸ ಮಾಡಿಸಿ, ನಿಮ್ಮ ಮನೆಯಲ್ಲಿ ಕೂತಿರುವಾಗಲೂ ಮಾರ್ಗದಲ್ಲಿ ನಡೆಯುವಾಗಲೂ ಮಲಗುವಾಗಲೂ ಏಳುವಾಗಲೂ ಅವುಗಳ ವಿಷಯವಾಗಿ ಮಾತನಾಡಬೇಕು.
ಧರ್ಮೋಪದೇಶಕಾಂಡ 6 : 8 (OCVKN)
ಅವುಗಳನ್ನು ಗುರುತಾಗಿ ನಿಮ್ಮ ಕೈಗಳಿಗೆ ಕಟ್ಟಿಕೊಳ್ಳಬೇಕು. ಅವುಗಳನ್ನು ನಿಮ್ಮ ಹಣೆಗೂ ಕಟ್ಟಿಕೊಳ್ಳಬೇಕು.
ಧರ್ಮೋಪದೇಶಕಾಂಡ 6 : 9 (OCVKN)
ಅವುಗಳನ್ನು ನಿಮ್ಮ ಮನೆಯ ನಿಲುವು ಪಟ್ಟಿಗಳ ಮೇಲೆಯೂ ನಿಮ್ಮ ಬಾಗಿಲುಗಳ ಮೇಲೆಯೂ ಬರೆಯಬೇಕು.
ಧರ್ಮೋಪದೇಶಕಾಂಡ 6 : 10 (OCVKN)
ಇದಲ್ಲದೆ ನಿಮ್ಮ ದೇವರಾದ ಯೆಹೋವ ದೇವರು ನಿಮ್ಮ ಪಿತೃಗಳಾದ ಅಬ್ರಹಾಮ, ಇಸಾಕ, ಯಾಕೋಬರಿಗೆ ಪ್ರಮಾಣ ಮಾಡಿದ ದೇಶದಲ್ಲಿ ನಿಮ್ಮನ್ನು ಸೇರಿಸಿ, ನೀವು ಕಟ್ಟಿದ ದೊಡ್ಡದಾದ ಒಳ್ಳೆಯ ಪಟ್ಟಣಗಳನ್ನೂ,
ಧರ್ಮೋಪದೇಶಕಾಂಡ 6 : 11 (OCVKN)
ನೀವು ಕೂಡಿಸದ ಉತ್ತಮ ವಸ್ತುಗಳಿಂದ ತುಂಬಿದ ಮನೆಗಳನ್ನೂ, ನೀವು ಅಗೆಯದಿರುವ ಬಾವಿಗಳನ್ನೂ, ನೀವು ನೆಡದ ದ್ರಾಕ್ಷಿತೋಟಗಳನ್ನೂ, ಓಲಿವ್ ತೋಟಗಳನ್ನೂ ನಿಮಗೆ ಕೊಡಲಾಗಿ, ನೀವು ತಿಂದು ತೃಪ್ತರಾಗಿರುವಿರಿ.
ಧರ್ಮೋಪದೇಶಕಾಂಡ 6 : 12 (OCVKN)
ಈಜಿಪ್ಟ್ ದೇಶದ ದಾಸತ್ವದ ಮನೆಯೊಳಗಿಂದ ನಿಮ್ಮನ್ನು ಹೊರಗೆ ಬರಮಾಡಿದ ಯೆಹೋವ ದೇವರನ್ನು ಮರೆಯದ ಹಾಗೆ ನೋಡಿಕೊಳ್ಳಿರಿ.
ಧರ್ಮೋಪದೇಶಕಾಂಡ 6 : 13 (OCVKN)
ನಿಮ್ಮ ದೇವರಾದ ಯೆಹೋವ ದೇವರಿಗೆ ನೀವು ಭಯಪಡಬೇಕು. ಅವರಿಗೆ ಮಾತ್ರವೇ ಸೇವೆ ಸಲ್ಲಿಸಬೇಕು ಮತ್ತು ಅವರ ಹೆಸರಿನಲ್ಲಿ ಆಣೆಯಿಟ್ಟುಕೊಳ್ಳಬೇಕು.
ಧರ್ಮೋಪದೇಶಕಾಂಡ 6 : 14 (OCVKN)
ನಿಮ್ಮ ಸುತ್ತಲಿರುವ ಜನರ ದೇವರುಗಳಾಗಿರುವ ಬೇರೆ ದೇವರುಗಳನ್ನು ನೀವು ಹಿಂಬಾಲಿಸಬೇಡಿರಿ.
ಧರ್ಮೋಪದೇಶಕಾಂಡ 6 : 15 (OCVKN)
ಏಕೆಂದರೆ ನಿಮ್ಮ ಮಧ್ಯದಲ್ಲಿರುವ ನಿಮ್ಮ ಯೆಹೋವ ದೇವರು ತಮಗೆ ಸಲ್ಲಬೇಕಾದ ಗೌರವವನ್ನು ಮತ್ತೊಬ್ಬರಿಗೆ ಸಲ್ಲಗೊಡಿಸದ ಸ್ವಾಮ್ಯಾಸಕ್ತರಾದ ದೇವರು. ನಿಮ್ಮ ದೇವರ ಕೋಪವು ನಿಮ್ಮ ಮೇಲೆ ಉರಿಯಲು, ಅವರು ನಿಮ್ಮನ್ನು ಭೂಮಿಯ ಮೇಲಿನಿಂದ ತೆಗೆದುಹಾಕುವರು.
ಧರ್ಮೋಪದೇಶಕಾಂಡ 6 : 16 (OCVKN)
ನೀವು ಮಸ್ಸದಲ್ಲಿ ಪರೀಕ್ಷಿಸಿದ ಹಾಗೆ ನಿಮ್ಮ ದೇವರಾದ ಯೆಹೋವ ದೇವರನ್ನು ಪರೀಕ್ಷಿಸಬಾರದು.
ಧರ್ಮೋಪದೇಶಕಾಂಡ 6 : 17 (OCVKN)
ನಿಮ್ಮ ದೇವರಾದ ಯೆಹೋವ ದೇವರ ಆಜ್ಞೆಗಳನ್ನೂ, ಅವರು ನಿಮಗೆ ನೀಡಿದ ಷರತ್ತುಗಳನ್ನೂ, ಅವರ ತೀರ್ಪುಗಳನ್ನೂ ಎಚ್ಚರಿಕೆಯಿಂದ ಕೈಗೊಳ್ಳಬೇಕು.
ಧರ್ಮೋಪದೇಶಕಾಂಡ 6 : 18 (OCVKN)
ನಿಮಗೆ ಒಳ್ಳೆಯದಾಗುವಂತೆಯೂ ಯೆಹೋವ ದೇವರು ನಿಮ್ಮ ಪಿತೃಗಳಿಗೆ ಪ್ರಮಾಣ ಮಾಡಿದ ಆ ಒಳ್ಳೆಯ ದೇಶವನ್ನು ನೀವು ಪ್ರವೇಶಿಸಿ ಸ್ವತಂತ್ರಿಸಿಕೊಳ್ಳುವಂತೆಯೂ ಯೆಹೋವ ದೇವರ ದೃಷ್ಟಿಯಲ್ಲಿ ಸರಿಯಾದದ್ದನ್ನೂ, ಒಳ್ಳೆಯದನ್ನೂ ಮಾಡಿರಿ.
ಧರ್ಮೋಪದೇಶಕಾಂಡ 6 : 19 (OCVKN)
ಆಗ ಯೆಹೋವ ದೇವರು ತಾವು ಹೇಳಿದಂತೆ ನಿಮ್ಮ ಎಲ್ಲಾ ಶತ್ರುಗಳನ್ನು ನಿಮ್ಮ ಮುಂದೆಯೇ ಓಡಿಸಿಬಿಡುವರು.
ಧರ್ಮೋಪದೇಶಕಾಂಡ 6 : 20 (OCVKN)
ಮುಂದಿನ ಕಾಲದಲ್ಲಿ ನಿಮ್ಮ ಮಕ್ಕಳು ನಿಮ್ಮನ್ನು, “ನಮ್ಮ ದೇವರಾದ ಯೆಹೋವ ದೇವರು ಆಜ್ಞಾಪಿಸಿದ ಈ ಷರತ್ತುಗಳ, ತೀರ್ಪುಗಳ ಹಾಗು ನಿಯಮಗಳ ಅರ್ಥ ಏನು?” ಎಂದು ನಿಮ್ಮನ್ನು ಕೇಳುವರು.
ಧರ್ಮೋಪದೇಶಕಾಂಡ 6 : 21 (OCVKN)
ಆಗ ನೀವು ಅವರಿಗೆ, “ನಾವು ಈಜಿಪ್ಟ್ ದೇಶದಲ್ಲಿ ಫರೋಹನನಿಗೆ ದಾಸರಾಗಿದ್ದೆವು. ಯೆಹೋವ ದೇವರು ಬಲವಾದ ಕೈಯಿಂದ ನಮ್ಮನ್ನು ಈಜಿಪ್ಟಿನೊಳಗಿಂದ ಹೊರಗೆ ಬರಮಾಡಿದರು.
ಧರ್ಮೋಪದೇಶಕಾಂಡ 6 : 22 (OCVKN)
ಯೆಹೋವ ದೇವರು ನಮ್ಮ ಕಣ್ಣ ಮುಂದೆಯೇ ಈಜಿಪ್ಟಿನ ಮೇಲೆಯೂ, ಫರೋಹನ ಮೇಲೆಯೂ, ಅವನ ಎಲ್ಲಾ ಮನೆಯ ಮೇಲೆಯೂ ಭಯಂಕರವಾದ ದೊಡ್ಡ ಗುರುತುಗಳನ್ನೂ, ಅದ್ಭುತಗಳನ್ನೂ ಕಳುಹಿಸಿದರು.
ಧರ್ಮೋಪದೇಶಕಾಂಡ 6 : 23 (OCVKN)
ಆದರೆ ದೇವರು ನಮ್ಮ ಪಿತೃಗಳಿಗೆ ಪ್ರಮಾಣ ಮಾಡಿದ ದೇಶವನ್ನು ನಮಗೆ ಕೊಡುವಂತೆಯೂ ನಾವು ಅದರಲ್ಲಿ ಪ್ರವೇಶ ಮಾಡುವಂತೆಯೂ ನಮ್ಮನ್ನು ಈಜಿಪ್ಟಿನಿಂದ ಬರಮಾಡಿದರು.
ಧರ್ಮೋಪದೇಶಕಾಂಡ 6 : 24 (OCVKN)
ನಮಗೆ ಎಂದೆಂದಿಗೂ ಒಳ್ಳೆಯದಾಗುವಂತೆಯೂ, ಇಂದಿನಂತೆ ನಾವು ಬದುಕುವಂತೆಯೂ, ನಾವು ಈ ನಿಯಮಗಳನ್ನೆಲ್ಲಾ ಕೈಗೊಂಡು ನಮ್ಮ ಯೆಹೋವ ದೇವರಿಗೆ ಭಯಪಡಬೇಕೆಂದು ಅವರು ನಮಗೆ ಆಜ್ಞಾಪಿಸಿದ್ದಾರೆ.
ಧರ್ಮೋಪದೇಶಕಾಂಡ 6 : 25 (OCVKN)
ಅವರು ನಮಗೆ ಆಜ್ಞಾಪಿಸಿದಂತೆ ನಮ್ಮ ದೇವರಾದ ಯೆಹೋವ ದೇವರ ಮುಂದೆ ಈ ಎಲ್ಲಾ ಆಜ್ಞೆಯನ್ನು ಕೈಗೊಂಡು ನಡೆದರೆ, ಅದು ನಮಗೆ ನೀತಿಯಾಗಿರುವುದು,” ಎಂದು ಹೇಳಬೇಕು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25