ಧರ್ಮೋಪದೇಶಕಾಂಡ 30 : 1 (OCVKN)
ದೇವರ ಕಡೆಗೆ ತಿರುಗಿಕೊಂಡರೆ ಸಮೃದ್ಧಿ ನಾನು ನಿಮ್ಮ ಮುಂದೆ ಇಟ್ಟ ಈ ಎಲ್ಲಾ ಆಶೀರ್ವಾದವೂ, ಶಾಪವೂ, ನಿಮಗೆ ಸಂಭವಿಸಿದಾಗ ನಿಮ್ಮ ದೇವರಾದ ಯೆಹೋವ ದೇವರು ನಿಮ್ಮನ್ನು ಚದರಿಸಿರುವ ಎಲ್ಲಾ ಜನಾಂಗಗಳ ಮಧ್ಯದಲ್ಲಿಯೇ ನೀವು ಇವುಗಳನ್ನು ನೆನಪಿಗೆ ತಂದುಕೊಳ್ಳಬೇಕು.
ಧರ್ಮೋಪದೇಶಕಾಂಡ 30 : 2 (OCVKN)
ನಿಮ್ಮ ದೇವರಾದ ಯೆಹೋವ ದೇವರ ಕಡೆಗೆ ತಿರುಗಿಕೊಂಡು, ನೀವೂ, ನಿಮ್ಮ ಮಕ್ಕಳೂ, ನಾನು ಈ ಹೊತ್ತು ನಿಮಗೆ ಆಜ್ಞಾಪಿಸುವ ಮಾತುಗಳಿಗೆ, ನೀವು ನಿಮ್ಮ ಪೂರ್ಣಹೃದಯದಿಂದಲೂ, ನಿಮ್ಮ ಪೂರ್ಣಪ್ರಾಣದಿಂದಲೂ ದೇವರಿಗೆ ವಿಧೇಯರಾಗಬೇಕು.
ಧರ್ಮೋಪದೇಶಕಾಂಡ 30 : 3 (OCVKN)
ಆಗ ನಿಮ್ಮ ದೇವರಾದ ಯೆಹೋವ ದೇವರು ನಿಮ್ಮನ್ನು ಸೆರೆಯಿಂದ ಬಿಡಿಸಿ, ನಿಮ್ಮ ಮೇಲೆ ಕನಿಕರಿಸಿ, ಅವರು ನಿಮ್ಮನ್ನು ಚದರಿಸಿದ ಎಲ್ಲಾ ಜನಾಂಗಗಳೊಳಗಿಂದ ನಿಮ್ಮನ್ನು ಕೂಡಿಸುವರು.
ಧರ್ಮೋಪದೇಶಕಾಂಡ 30 : 4 (OCVKN)
ನಿಮ್ಮಲ್ಲಿ ಯಾರಾದರೂ ಭೂಮಿಯ ಕಟ್ಟಕಡೆಯವರೆಗೂ ಚದರಿ ಹೋಗಿದ್ದರೂ, ಅಲ್ಲಿಂದ ನಿಮ್ಮ ದೇವರಾದ ಯೆಹೋವ ದೇವರು ಅವರನ್ನು ಸಹ ಕರೆದುತರುವರು.
ಧರ್ಮೋಪದೇಶಕಾಂಡ 30 : 5 (OCVKN)
ಇದಲ್ಲದೆ ನಿಮ್ಮ ದೇವರಾದ ಯೆಹೋವ ದೇವರು ನಿಮ್ಮ ಪಿತೃಗಳು ಸ್ವಾಧೀನ ಮಾಡಿಕೊಂಡ ದೇಶಕ್ಕೆ ನಿಮ್ಮನ್ನು ತರುವರು. ನೀವು ಅದನ್ನು ಸ್ವಾಧೀನಮಾಡಿಕೊಳ್ಳುವಿರಿ. ದೇವರು ನಿಮ್ಮ ಪಿತೃಗಳಿಗಿಂತಲೂ ನಿಮ್ಮನ್ನು ಸಮೃದ್ಧಿಗೊಳಿಸಿ ಹೆಚ್ಚಿಸುವರು.
ಧರ್ಮೋಪದೇಶಕಾಂಡ 30 : 6 (OCVKN)
ಆಗ ನೀವು ನಿಮ್ಮ ದೇವರಾದ ಯೆಹೋವ ದೇವರನ್ನು ನಿಮ್ಮ ಪೂರ್ಣಹೃದಯದಿಂದಲೂ, ನಿಮ್ಮ ಪೂರ್ಣಪ್ರಾಣದಿಂದಲೂ ಪ್ರೀತಿಸಿ, ನೀವು ಬದುಕಿ ಬಾಳುವಂತೆ ನಿಮ್ಮ ದೇವರಾದ ಯೆಹೋವ ದೇವರು ನಿಮ್ಮ ಹೃದಯವನ್ನೂ, ನಿಮ್ಮ ಸಂತತಿಯ ಹೃದಯವನ್ನೂ ಪರಿಚ್ಛೇದಿಸುವರು.
ಧರ್ಮೋಪದೇಶಕಾಂಡ 30 : 7 (OCVKN)
ಇದಲ್ಲದೆ ನಿಮ್ಮ ದೇವರಾದ ಯೆಹೋವ ದೇವರು ಆ ಶಾಪಗಳನ್ನೆಲ್ಲಾ ನಿಮ್ಮ ಶತ್ರುಗಳ ಮೇಲೆಯೂ, ನಿಮ್ಮನ್ನು ಹಿಂಸಿಸಿದ ನಿಮ್ಮ ಹಗೆಯವರ ಮೇಲೆಯೂ ಬರಮಾಡುವರು.
ಧರ್ಮೋಪದೇಶಕಾಂಡ 30 : 8 (OCVKN)
ಆದರೆ ನೀವು ಪುನಃ ಯೆಹೋವ ದೇವರ ಮಾತನ್ನು ಕೇಳಿ, ನಾನು ಈ ಹೊತ್ತು ನಿಮಗೆ ಆಜ್ಞಾಪಿಸುವ ಅವರ ಎಲ್ಲಾ ಆಜ್ಞೆಗಳಂತೆ ನಡೆಯುವಿರಿ.
ಧರ್ಮೋಪದೇಶಕಾಂಡ 30 : 9 (OCVKN)
ಇದಲ್ಲದೆ ಯೆಹೋವ ದೇವರು ನಿಮ್ಮನ್ನು ನಿಮ್ಮ ಎಲ್ಲಾ ಕೈಕೆಲಸದಲ್ಲಿಯೂ, ನಿಮ್ಮ ಗರ್ಭದ ಫಲದಲ್ಲಿಯೂ, ನಿಮ್ಮ ಪಶುಗಳ ಫಲದಲ್ಲಿಯೂ, ನಿಮ್ಮ ಭೂಮಿಯ ಫಲದಲ್ಲಿಯೂ ಅತ್ಯಂತ ಅಭಿವೃದ್ಧಿಯನ್ನು ಮಾಡುವರು. ಯೆಹೋವ ದೇವರು ನಿಮ್ಮ ಪಿತೃಗಳಲ್ಲಿ ಸಂತೋಷಿಸಿದ ಹಾಗೆ ನಿಮ್ಮಲ್ಲಿಯೂ ಸಂತೋಷಿಸುವರು.
ಧರ್ಮೋಪದೇಶಕಾಂಡ 30 : 10 (OCVKN)
ಆದರೆ ನೀವು ನಿಮ್ಮ ದೇವರಾದ ಯೆಹೋವ ದೇವರ ಮಾತನ್ನು ಕೇಳಿ, ಈ ನಿಯಮದ ಗ್ರಂಥದಲ್ಲಿ ಬರೆದಿರುವ ಅವರ ಆಜ್ಞಾತೀರ್ಪುಗಳನ್ನು ಕಾಪಾಡಿ, ನಿಮ್ಮ ಪೂರ್ಣಹೃದಯದಿಂದಲೂ, ನಿಮ್ಮ ಪೂರ್ಣಪ್ರಾಣದಿಂದಲೂ ನಿಮ್ಮ ದೇವರಾದ ಯೆಹೋವ ದೇವರ ಕಡೆಗೆ ತಿರುಗಿಕೊಂಡರೆ, ನಿಮ್ಮಲ್ಲಿ ಸಂತೋಷಿಸುವರು.
ಧರ್ಮೋಪದೇಶಕಾಂಡ 30 : 11 (OCVKN)
ಜೀವವೂ ಮತ್ತು ಮರಣವೂ ನಿಶ್ಚಯವಾಗಿ ನಾನು ಈ ಹೊತ್ತು ನಿಮಗೆ ಆಜ್ಞಾಪಿಸುವ ಈ ಆಜ್ಞೆಯು ನಿಮಗೆ ಕಠಿಣವಾದದ್ದಲ್ಲ; ದೂರವಾದದ್ದೂ ಅಲ್ಲ.
ಧರ್ಮೋಪದೇಶಕಾಂಡ 30 : 12 (OCVKN)
“ನಾವು ಅದನ್ನು ಕೈಗೊಳ್ಳುವಂತೆ ನಮಗೋಸ್ಕರ ಯಾರು ಆಕಾಶಕ್ಕೆ ಏರಿಹೋಗಿ, ಅದನ್ನು ತೆಗೆದುಕೊಂಡು ಬಂದು ನಮಗೆ ತಿಳಿಸುವರು?” ಎಂದು ನೀವು ಕೇಳುವಂತೆ, ಆ ವಾಕ್ಯವು ಆಕಾಶದಲ್ಲಿ ಇರುವಂಥದ್ದೂ ಅಲ್ಲ.
ಧರ್ಮೋಪದೇಶಕಾಂಡ 30 : 13 (OCVKN)
“ನಾವು ಅದನ್ನು ಕೈಗೊಳ್ಳುವಂತೆ ನಮಗೋಸ್ಕರ ಯಾರು ಸಮುದ್ರವನ್ನು ದಾಟಿ, ನಮಗೆ ತೆಗೆದುಕೊಂಡು ಬಂದು ಅದನ್ನು ತಿಳಿಸುವರು?” ಎಂದು ನೀವು ಕೇಳುವಂತೆ, ಆ ವಾಕ್ಯವು ಸಮುದ್ರದ ಆಚೆಯಲ್ಲಿ ಇರುವಂಥದ್ದೂ ಅಲ್ಲ.
ಧರ್ಮೋಪದೇಶಕಾಂಡ 30 : 14 (OCVKN)
ಆ ವಾಕ್ಯವು ನಿಮಗೆ ಬಹಳ ಸಮೀಪವಾಗಿದೆ. ಅದನ್ನು ಕೈಗೊಳ್ಳುವ ಹಾಗೆ ವಾಕ್ಯವು ನಿಮ್ಮ ಬಾಯಿಯಲ್ಲಿಯೂ ಹೃದಯದಲ್ಲಿಯೂ ಇದೆ.
ಧರ್ಮೋಪದೇಶಕಾಂಡ 30 : 15 (OCVKN)
ನೋಡಿರಿ, ನಾನು ಈ ಹೊತ್ತು ಜೀವ ಸಮೃದ್ಧಿಯನ್ನೂ, ಮರಣ ನಾಶನವನ್ನೂ ನಿಮ್ಮ ಮುಂದೆ ಇಟ್ಟಿದ್ದೇನೆ.
ಧರ್ಮೋಪದೇಶಕಾಂಡ 30 : 16 (OCVKN)
ನೀವು ನಿಮ್ಮ ದೇವರಾದ ಯೆಹೋವ ದೇವರನ್ನು ಪ್ರೀತಿಸಿ, ಅವರ ಮಾರ್ಗಗಳಲ್ಲಿ ನಡೆದುಕೊಂಡು, ಅವರ ಆಜ್ಞಾತೀರ್ಪುಗಳನ್ನೂ, ಅನುಸರಿಸಬೇಕೆಂದು ಈ ಹೊತ್ತು ನಿಮಗೆ ಆಜ್ಞಾಪಿಸಿದ್ದೇನೆ. ಹಾಗೆ ಮಾಡಿದರೆ, ನೀವು ಬದುಕಿ ಹೆಚ್ಚುವಿರಿ. ನಿಮ್ಮ ದೇವರಾದ ಯೆಹೋವ ದೇವರು ನೀವು ಸ್ವಾಧೀನಮಾಡಿಕೊಳ್ಳುವುದಕ್ಕೆ ಹೋಗುವ ದೇಶದಲ್ಲಿ ನಿಮ್ಮನ್ನು ಆಶೀರ್ವದಿಸುವರು.
ಧರ್ಮೋಪದೇಶಕಾಂಡ 30 : 17 (OCVKN)
ಆದರೆ ನಿಮ್ಮ ಹೃದಯವು ತಿರುಗಿಬಿದ್ದು ನೀವು ಮಾತು ಕೇಳದೆ ಹೋದರೆ ಇಲ್ಲವೆ ಬೇರೆ ದೇವರುಗಳ ಕಡೆಗೆ ಸೆಳೆದವರಾಗಿ ಅಡ್ಡಬಿದ್ದು, ಅವುಗಳಿಗೆ ಸೇವೆ ಮಾಡಿದರೆ,
ಧರ್ಮೋಪದೇಶಕಾಂಡ 30 : 18 (OCVKN)
ನೀವು ಸ್ವಾಧೀನಮಾಡಿಕೊಳ್ಳುವುದಕ್ಕೆ ಯೊರ್ದನನ್ನು ದಾಟಿ ಹೋಗುವ ದೇಶದಲ್ಲಿ ಬಹುಕಾಲ ಬಾಳದೆ, ನಾಶವಾಗಿಹೋಗುವಿರಿ ಎಂದು ಈ ಹೊತ್ತು ನಿಮಗೆ ಖಂಡಿತವಾಗಿ ತಿಳಿಸುತ್ತೇನೆ.
ಧರ್ಮೋಪದೇಶಕಾಂಡ 30 : 19 (OCVKN)
ನಾನು ಜೀವ ಮರಣವನ್ನೂ, ಆಶೀರ್ವಾದ ಶಾಪವನ್ನೂ ನಿಮ್ಮ ಮುಂದೆ ಇಟ್ಟಿದ್ದೇನೆಂಬುದಕ್ಕೆ ಆಕಾಶವನ್ನೂ, ಭೂಮಿಯನ್ನೂ ಈ ಹೊತ್ತು ನಿಮ್ಮ ಮೇಲೆ ಸಾಕ್ಷಿಗಳಾಗಿ ಕರೆಯುತ್ತೇನೆ. ಆದುದರಿಂದ ನೀವೂ, ನಿಮ್ಮ ಸಂತತಿಯೂ, ಬದುಕಿ ಬಾಳುವಂತೆ ಜೀವವನ್ನೇ ಆಯ್ದುಕೊಳ್ಳಿರಿ.
ಧರ್ಮೋಪದೇಶಕಾಂಡ 30 : 20 (OCVKN)
ನಿಮ್ಮ ದೇವರಾದ ಯೆಹೋವ ದೇವರನ್ನು ಪ್ರೀತಿಸಿ, ಅವರ ಮಾತನ್ನು ಕೇಳಿ, ಅವರನ್ನೇ ಹೊಂದಿಕೊಂಡಿರಿ. ಯೆಹೋವ ದೇವರು ನಿಮ್ಮ ಪಿತೃಗಳಾದ ಅಬ್ರಹಾಮನಿಗೂ, ಇಸಾಕನಿಗೂ, ಯಾಕೋಬನಿಗೂ ಕೊಡುತ್ತೇನೆಂದು ಪ್ರಮಾಣ ಮಾಡಿದ ಭೂಮಿಯಲ್ಲಿ ನೀವು ಬಹುಕಾಲ ವಾಸಮಾಡುವಿರಿ.
❮
❯
1
2
3
4
5
6
7
8
9
10
11
12
13
14
15
16
17
18
19
20