ಧರ್ಮೋಪದೇಶಕಾಂಡ 27 : 1 (OCVKN)
ಏಬಾಲ್ ಬೆಟ್ಟದ ಮೇಲೆ ಬಲಿಪೀಠ ಮೋಶೆ ಮತ್ತು ಇಸ್ರಾಯೇಲಿನ ಹಿರಿಯರು ಜನರಿಗೆ, “ನಾವು ಈ ಹೊತ್ತು ನಿಮಗೆ ಆಜ್ಞಾಪಿಸುವ ಆಜ್ಞೆಗಳನ್ನೆಲ್ಲಾ ನೀವು ಅನುಸರಿಸಬೇಕು.
ಧರ್ಮೋಪದೇಶಕಾಂಡ 27 : 2 (OCVKN)
ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಕೊಡುವ ದೇಶಕ್ಕೆ ನೀವು ಯೊರ್ದನನ್ನು ದಾಟಿ ಪ್ರವೇಶಿಸುವಾಗ, ದೊಡ್ಡ ಕಲ್ಲುಗಳನ್ನು ನಿಲ್ಲಿಸಿ, ಅವುಗಳಿಗೆ ಗಿಲಾವು ಮಾಡಿಸಿ,
ಧರ್ಮೋಪದೇಶಕಾಂಡ 27 : 3 (OCVKN)
ನಿಮ್ಮ ಪಿತೃಗಳ ದೇವರಾದ ಯೆಹೋವ ದೇವರು ನಿಮಗೆ ವಾಗ್ದಾನ ಮಾಡಿದ ಪ್ರಕಾರ ಅಂದರೆ, ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಕೊಡುವ ಹಾಲೂ ಜೇನೂ ಹರಿಯುವಂಥ ದೇಶವನ್ನು ನೀವು ಪ್ರವೇಶಿಸುವಂತೆ ಯೊರ್ದನ್ ನದಿಯನ್ನು ದಾಟುವಾಗ, ಅವುಗಳ ಮೇಲೆ ಈ ನಿಯಮದ ವಾಕ್ಯಗಳನ್ನೆಲ್ಲಾ ಆ ಕಲ್ಲಿನ ಮೇಲೆ ಬರೆಯಬೇಕು.
ಧರ್ಮೋಪದೇಶಕಾಂಡ 27 : 4 (OCVKN)
ನೀವು ಯೊರ್ದನನ್ನು ದಾಟಿದ ಮೇಲೆ, ನಾನು ಈ ಹೊತ್ತು ನಿಮಗೆ ಆಜ್ಞಾಪಿಸುವ ಕಲ್ಲುಗಳನ್ನು ಏಬಾಲ್ ಬೆಟ್ಟದಲ್ಲಿ ನಿಲ್ಲಿಸಿ, ಅವುಗಳಿಗೆ ಗಿಲಾವು ಮಾಡಿಸಬೇಕು.
ಧರ್ಮೋಪದೇಶಕಾಂಡ 27 : 5 (OCVKN)
ಅಲ್ಲಿ ನಿಮ್ಮ ದೇವರಾದ ಯೆಹೋವ ದೇವರಿಗೆ ಬಲಿಪೀಠವನ್ನು ಕಟ್ಟಬೇಕು. ಕಬ್ಬಿಣದ ಉಪಕರಣವನ್ನು ನೀವು ಕಲ್ಲುಗಳ ಮೇಲೆ ಉಪಯೋಗಿಸಬಾರದು.
ಧರ್ಮೋಪದೇಶಕಾಂಡ 27 : 6 (OCVKN)
ನಿಮ್ಮ ದೇವರಾದ ಯೆಹೋವ ದೇವರ ಬಲಿಪೀಠವನ್ನು ಹುಟ್ಟುಕಲ್ಲುಗಳಿಂದಲೇ ಕಟ್ಟಬೇಕು. ನೀವು ಅದರ ಮೇಲೆ ನಿಮ್ಮ ದೇವರಾದ ಯೆಹೋವ ದೇವರಿಗೆ ದಹನಬಲಿಗಳನ್ನು ಅರ್ಪಿಸಬೇಕು.
ಧರ್ಮೋಪದೇಶಕಾಂಡ 27 : 7 (OCVKN)
ಅಲ್ಲಿ ದಹನಬಲಿಗಳನ್ನೂ ಸಮಾಧಾನ ಬಲಿಗಳನ್ನೂ ಸಮರ್ಪಿಸಿ, ಸಹಭೋಜನ ಮಾಡಿ, ನಿಮ್ಮ ದೇವರಾದ ಯೆಹೋವ ದೇವರ ಸನ್ನಿಧಿಯಲ್ಲಿ ಸಂಭ್ರಮದಿಂದಿರಬೇಕು.
ಧರ್ಮೋಪದೇಶಕಾಂಡ 27 : 8 (OCVKN)
ನೀವು ಆ ಕಲ್ಲುಗಳ ಮೇಲೆ ಈ ನಿಯಮದ ವಾಕ್ಯಗಳನ್ನೆಲ್ಲಾ ಬಹುಸ್ಪಷ್ಟವಾಗಿ ಬರೆಸಬೇಕು,” ಎಂದು ಆಜ್ಞಾಪಿಸಿದರು.
ಧರ್ಮೋಪದೇಶಕಾಂಡ 27 : 9 (OCVKN)
ಏಬಾಲ್ ಬೆಟ್ಟದಿಂದ ಬಂದ ಶಾಪಗಳು ಆಗ ಮೋಶೆಯೂ ಯಾಜಕರಾದ ಲೇವಿಯರೂ ಸಮಸ್ತ ಇಸ್ರಾಯೇಲಿನ ಸಂಗಡ ಮಾತನಾಡಿ, “ಇಸ್ರಾಯೇಲರೇ, ಶಾಂತರಾಗಿದ್ದು ಕೇಳಿರಿ. ನೀವು ಈ ಹೊತ್ತು ನಿಮ್ಮ ದೇವರಾದ ಯೆಹೋವ ದೇವರ ಜನಾಂಗವಾಗಿದ್ದೀರಿ.
ಧರ್ಮೋಪದೇಶಕಾಂಡ 27 : 10 (OCVKN)
ಹೀಗಿರುವುದರಿಂದ ನಿಮ್ಮ ದೇವರಾದ ಯೆಹೋವ ದೇವರ ಮಾತಿಗೆ ವಿಧೇಯರಾಗಿ, ನಾನು ಈ ಹೊತ್ತು ನಿಮಗೆ ಆಜ್ಞಾಪಿಸುವ ಅವರ ಆಜ್ಞೆಗಳನ್ನೂ ತೀರ್ಪುಗಳನ್ನೂ ಅನುಸರಿಸಬೇಕು,” ಎಂದು ಹೇಳಿದನು.
ಧರ್ಮೋಪದೇಶಕಾಂಡ 27 : 11 (OCVKN)
ಧರ್ಮೋಪದೇಶಕಾಂಡ 27 : 12 (OCVKN)
ಇದಲ್ಲದೆ ಮೋಶೆ ಅದೇ ದಿನದಲ್ಲಿ ಜನರಿಗೆ ಆಜ್ಞಾಪಿಸಿದ್ದೇನೆಂದರೆ: “ನೀವು ಯೊರ್ದನನ್ನು ದಾಟಿದ ಮೇಲೆ ಜನರನ್ನು ಆಶೀರ್ವದಿಸುವುದಕ್ಕೆ ಗೆರಿಜೀಮ್ ಬೆಟ್ಟದಲ್ಲಿ ನಿಲ್ಲತಕ್ಕವರು ಸಿಮೆಯೋನ್, ಲೇವಿ, ಯೆಹೂದ, ಇಸ್ಸಾಕಾರ್, ಯೋಸೇಫ, ಬೆನ್ಯಾಮೀನ್ ಮುಂತಾದವರು;
ಧರ್ಮೋಪದೇಶಕಾಂಡ 27 : 13 (OCVKN)
ಶಪಿಸುವುದಕ್ಕೆ ಏಬಾಲ್ ಬೆಟ್ಟದಲ್ಲಿ ನಿಲ್ಲತಕ್ಕವರು ಯಾರೆಂದರೆ ರೂಬೇನ್, ಗಾದ್, ಆಶೇರ್, ಜೆಬುಲೂನ್, ದಾನ್, ನಫ್ತಾಲಿ,” ಎಂದು ಆಜ್ಞಾಪಿಸಿ ಹೇಳಿದನು.
ಧರ್ಮೋಪದೇಶಕಾಂಡ 27 : 14 (OCVKN)
ಧರ್ಮೋಪದೇಶಕಾಂಡ 27 : 15 (OCVKN)
ಲೇವಿಯರು ಇಸ್ರಾಯೇಲ್ ಜನರೆಲ್ಲರಿಗೆ ಗಟ್ಟಿಯಾದ ಧ್ವನಿಯಿಂದ, “ಯೆಹೋವ ದೇವರಿಗೆ ಅಸಹ್ಯವಾಗಿರುವ ವಿಗ್ರಹವನ್ನಾಗಲಿ, ಎರಕ ಹೊಯ್ದದ್ದನ್ನಾಗಲಿ ಮಾಡಿಕೊಂಡು, ಶಿಲ್ಪಿಯ ಕೈಯಿಂದ ಮಾಡಿಸಿ, ಗುಪ್ತವಾಗಿ ನಿಲ್ಲಿಸಿಕೊಂಡವನು ಶಾಪಗ್ರಸ್ತನು,” ಎಂದು ಹೇಳಿದಾಗ, ಎಲ್ಲಾ ಜನರು, “ಆಮೆನ್,” ಎಂದು ಹೇಳಬೇಕು.
ಧರ್ಮೋಪದೇಶಕಾಂಡ 27 : 16 (OCVKN)
ಅವರು, “ತನ್ನ ತಂದೆಯನ್ನಾಗಲಿ, ತಾಯಿಯನ್ನಾಗಲಿ ಅವಮಾನಪಡಿಸಿದವನು ಶಾಪಗ್ರಸ್ತನು,” ಎಂದು ಹೇಳಿದಾಗ, ಎಲ್ಲಾ ಜನರು, “ಆಮೆನ್,” ಎಂದು ಹೇಳಬೇಕು.
ಧರ್ಮೋಪದೇಶಕಾಂಡ 27 : 17 (OCVKN)
ಅವರು, “ತನ್ನ ನೆರೆಯವನ ಗಡಿ ಮೇರೆಯನ್ನು ಸರಿಸಿದವನು ಶಾಪಗ್ರಸ್ತನು,” ಎಂದು ಹೇಳಿದಾಗ, ಎಲ್ಲಾ ಜನರು, “ಆಮೆನ್,” ಎಂದು ಹೇಳಬೇಕು.
ಧರ್ಮೋಪದೇಶಕಾಂಡ 27 : 18 (OCVKN)
ಅವರು, “ಕಣ್ಣು ಕಾಣದವನನ್ನು ದಾರಿತಪ್ಪಿಸಿದವನು ಶಾಪಗ್ರಸ್ತನು,” ಎಂದು ಹೇಳಿದಾಗ, ಎಲ್ಲಾ ಜನರು, “ಆಮೆನ್,” ಎಂದು ಹೇಳಬೇಕು.
ಧರ್ಮೋಪದೇಶಕಾಂಡ 27 : 19 (OCVKN)
ಅವರು, “ಪರವಾಸಿಗೂ, ದಿಕ್ಕಿಲ್ಲದವನಿಗೂ, ವಿಧವೆಗೂ ನ್ಯಾಯಬಿಟ್ಟು ತೀರ್ಪು ಹೇಳಿದವನು ಶಾಪಗ್ರಸ್ತನು,” ಎಂದು ಹೇಳಿದಾಗ, ಎಲ್ಲಾ ಜನರು, “ಆಮೆನ್,” ಎಂದು ಹೇಳಬೇಕು.
ಧರ್ಮೋಪದೇಶಕಾಂಡ 27 : 20 (OCVKN)
ಅವರು, “ಮಲತಾಯಿಯ ಸಂಗಡ ಅನೈತಿಕವಾಗಿ ನಡೆದು ತನ್ನ ತಂದೆಯ ಹಾಸಿಗೆಯನ್ನು ಅವಮಾನಪಡಿಸಿದವನು ಶಾಪಗ್ರಸ್ತನು,” ಎಂದು ಹೇಳಿದಾಗ, ಎಲ್ಲಾ ಜನರು, “ಆಮೆನ್,” ಎಂದು ಹೇಳಬೇಕು.
ಧರ್ಮೋಪದೇಶಕಾಂಡ 27 : 21 (OCVKN)
ಅವರು, “ಪಶುಸಂಗಮ ಮಾಡಿದವನು ಶಾಪಗ್ರಸ್ತನು,” ಎಂದು ಹೇಳಿದಾಗ, ಎಲ್ಲಾ ಜನರು, “ಆಮೆನ್,” ಎಂದು ಹೇಳಬೇಕು.
ಧರ್ಮೋಪದೇಶಕಾಂಡ 27 : 22 (OCVKN)
ಅವರು, “ತನ್ನ ತಂದೆಯ ಮಗಳ ಸಂಗಡವಾಗಲಿ, ತಾಯಿಯ ಮಗಳ ಸಂಗಡವಾಗಲಿ ಅನೈತಿಕವಾಗಿ ನಡೆದುಕೊಂಡವನು ಶಾಪಗ್ರಸ್ತನು,” ಎಂದು ಹೇಳಿದಾಗ, ಎಲ್ಲಾ ಜನರು, “ಆಮೆನ್,” ಎಂದು ಹೇಳಬೇಕು.
ಧರ್ಮೋಪದೇಶಕಾಂಡ 27 : 23 (OCVKN)
ಅವರು, “ತನ್ನ ಅತ್ತೆಯ ಸಂಗಡ ಅನೈತಿಕವಾಗಿ ನಡೆದುಕೊಂಡವನು ಶಾಪಗ್ರಸ್ತನು,” ಎಂದು ಹೇಳಿದಾಗ, ಎಲ್ಲಾ ಜನರು, “ಆಮೆನ್,” ಎಂದು ಹೇಳಬೇಕು.
ಧರ್ಮೋಪದೇಶಕಾಂಡ 27 : 24 (OCVKN)
ಅವರು, “ತನ್ನ ನೆರೆಯವನನ್ನು ರಹಸ್ಯವಾಗಿ ಕೊಲೆಮಾಡಿದವನು ಶಾಪಗ್ರಸ್ತನು,” ಎಂದು ಹೇಳಿದಾಗ, ಎಲ್ಲಾ ಜನರು, “ಆಮೆನ್,” ಎಂದು ಹೇಳಬೇಕು.
ಧರ್ಮೋಪದೇಶಕಾಂಡ 27 : 25 (OCVKN)
ಅವರು, “ನಿರಪರಾಧಿಯನ್ನು ಕೊಲ್ಲಲು ಲಂಚ ತೆಗೆದುಕೊಂಡವನು ಶಾಪಗ್ರಸ್ತನು,” ಎಂದು ಹೇಳಿದಾಗ, ಎಲ್ಲಾ ಜನರು, “ಆಮೆನ್,” ಎಂದು ಹೇಳಬೇಕು.
ಧರ್ಮೋಪದೇಶಕಾಂಡ 27 : 26 (OCVKN)
ಅವರು, “ದೇವರ ನಿಯಮದ ಈ ಮಾತುಗಳನ್ನು ಸನ್ಮಾನಿಸಿ ಕೈಗೊಳ್ಳದೆ ಇರುವವನು ಶಾಪಗ್ರಸ್ತನು,” ಎಂದು ಹೇಳಿದಾಗ, ಎಲ್ಲಾ ಜನರು, “ಆಮೆನ್,” ಎಂದು ಹೇಳಬೇಕು.
❮
❯