ಕೊಲೊಸ್ಸೆಯವರಿಗೆ 4 : 1 (OCVKN)
ಕೊಲೊಸ್ಸೆಯವರಿಗೆ 4 : 2 (OCVKN)
ಯಜಮಾನರೇ, ಪರಲೋಕದಲ್ಲಿ ನಿಮಗೂ ಯಜಮಾನನಿದ್ದಾನೆಂದು ತಿಳಿದು ನಿಮ್ಮ ದಾಸರಿಗೆ ನ್ಯಾಯವಾದದ್ದನ್ನೂ, ಯೋಗ್ಯವಾದದ್ದನ್ನೂ ಕೊಡಿರಿ. ವಿವಿಧ ಸದುಪದೇಶಗಳು ಎಚ್ಚರವಾಗಿದ್ದು ಕೃತಜ್ಞತೆ ಉಳ್ಳವರಾಗಿ ಪ್ರಾರ್ಥನೆಯಲ್ಲಿ ನಿರತರಾಗಿರಿ.
ಕೊಲೊಸ್ಸೆಯವರಿಗೆ 4 : 3 (OCVKN)
ನಾವು ಕ್ರಿಸ್ತ ಯೇಸುವಿನ ರಹಸ್ಯವನ್ನು ಮಾತನಾಡುವಂತೆ ದೇವರು ನಮ್ಮ ಸಂದೇಶಕ್ಕೆ ಬಾಗಿಲನ್ನು ತೆರೆಯುವಂತೆ ನಮಗೋಸ್ಕರವೂ ಪ್ರಾರ್ಥಿಸಿರಿ. ಈ ಸೇವೆಗಾಗಿಯೇ ನಾನು ಸೆರೆಯಲ್ಲಿದ್ದೇನಲ್ಲಾ.
ಕೊಲೊಸ್ಸೆಯವರಿಗೆ 4 : 4 (OCVKN)
ಆದಕಾರಣ ನಾನು ಆ ರಹಸ್ಯವನ್ನು ಮಾಡಬಯಸುವ ರೀತಿಯಲ್ಲಿ ಸ್ಪಷ್ಟವಾಗಿ ಸಾರುವಂತೆಯೂ ಬೇಡಿಕೊಳ್ಳಿರಿ.
ಕೊಲೊಸ್ಸೆಯವರಿಗೆ 4 : 5 (OCVKN)
ಪ್ರತಿಯೊಂದು ಅವಕಾಶವನ್ನೂ ಸದುಪಯೋಗ ಮಾಡಿಕೊಂಡು ಹೊರಗಿನವರೊಂದಿಗೆ ಜಾಣತನದಿಂದ ನಡೆದುಕೊಳ್ಳಿರಿ.
ಕೊಲೊಸ್ಸೆಯವರಿಗೆ 4 : 6 (OCVKN)
ನಿಮ್ಮ ಸಂಭಾಷಣೆ ಯಾವಾಗಲೂ ಪೂರ್ಣ ಕೃಪೆಯುಳ್ಳದ್ದೂ, ಉಪ್ಪಿನಿಂದ ಹದವುಳ್ಳದ್ದೂ ಆಗಿರಲಿ. ಹೀಗೆ ನೀವು ಪ್ರತಿಯೊಬ್ಬರಿಗೂ ಹೇಗೆ ಉತ್ತರಕೊಡಬೇಕು ಎಂಬುದನ್ನು ತಿಳಿದುಕೊಳ್ಳುವಿರಿ.
ಕೊಲೊಸ್ಸೆಯವರಿಗೆ 4 : 7 (OCVKN)
ಅಂತಿಮ ವಂದನೆಗಳು ಪ್ರಿಯ ಸಹೋದರನೂ ನಂಬಿಗಸ್ತ ಸೇವಕನೂ ಮತ್ತು ಕರ್ತ ಯೇಸುವಿನಲ್ಲಿ ಜೊತೆಯ ದಾಸನೂ ಆಗಿರುವ ತುಖಿಕನು ನನ್ನ ವಿಷಯವನ್ನೆಲ್ಲಾ ನಿಮಗೆ ತಿಳಿಸುವನು.
ಕೊಲೊಸ್ಸೆಯವರಿಗೆ 4 : 8 (OCVKN)
ನೀವು ನಮ್ಮ ಪರಿಸ್ಥಿತಿಗಳನ್ನು ತಿಳಿದುಕೊಳ್ಳುವಂತೆಯೂ, ಅವನು ನಿಮ್ಮ ಹೃದಯಗಳನ್ನು ಉತ್ತೇಜಿಸುವಂತೆಯೂ ಅವನನ್ನು ನಿಮ್ಮ ಬಳಿಗೆ ಕಳುಹಿಸಿದ್ದೇನೆ.
ಕೊಲೊಸ್ಸೆಯವರಿಗೆ 4 : 9 (OCVKN)
ನಿಮ್ಮಲ್ಲಿ ಒಬ್ಬನಾಗಿರುವ ನಂಬಿಗಸ್ತನೂ, ಪ್ರಿಯ ಸಹೋದರನೂ ಆದ ಓನೇಸಿಮನ ಜೊತೆಯಲ್ಲಿ ಅವನನ್ನು ನಾನು ಕಳುಹಿಸಿದ್ದೇನೆ. ಅವರು ಇಲ್ಲಿ ನಡೆಯುವ ವಿಷಯಗಳನ್ನೆಲ್ಲಾ ನಿಮಗೆ ತಿಳಿಸುವರು.
ಕೊಲೊಸ್ಸೆಯವರಿಗೆ 4 : 10 (OCVKN)
ಕೊಲೊಸ್ಸೆಯವರಿಗೆ 4 : 11 (OCVKN)
ನನ್ನ ಜೊತೆ ಸೆರೆಯಾಳಾದ ಅರಿಸ್ತಾರ್ಕ, ಬಾರ್ನಬನ ಸಹೋದರಿಯ ಮಗನಾದ ಮಾರ್ಕನು ನಿಮಗೆ ವಂದನೆ ಹೇಳುತ್ತಾರೆ. ಮಾರ್ಕನ ವಿಷಯದಲ್ಲಿ ನೀವು ಮಾರ್ಗದರ್ಶನ ಹೊಂದಿದ್ದೀರಲ್ಲಾ, ಅವನು ನಿಮ್ಮ ಬಳಿಗೆ ಬಂದರೆ ಅವನನ್ನು ಸೇರಿಸಿಕೊಳ್ಳಿರಿ.
ಕೊಲೊಸ್ಸೆಯವರಿಗೆ 4 : 12 (OCVKN)
ಯೂಸ್ತನೆನಿಸಿಕೊಳ್ಳುವ ಯೇಸುವೂ ನಿಮ್ಮನ್ನು ವಂದಿಸುತ್ತಾನೆ. ದೇವರ ರಾಜ್ಯಕ್ಕಾಗಿ ನನ್ನ ಜೊತೆ ಕೆಲಸದವರಾಗಿದ್ದವರಲ್ಲಿ ಇವರು ಮಾತ್ರವೇ ಯೆಹೂದ್ಯರು. ಇವರು ನನಗೆ ತುಂಬಾ ಆದರಣೆಯಾಗಿದ್ದರು. ನಿಮ್ಮಲ್ಲಿ ಒಬ್ಬನೂ ಕ್ರಿಸ್ತ ಯೇಸುವಿನ ದಾಸನೂ ಆಗಿರುವ ಎಪಫ್ರನು ನಿಮಗೆ ವಂದನೆ ಹೇಳುತ್ತಾನೆ. ನೀವು ದೇವರ ಚಿತ್ತದ ಬಗ್ಗೆ ಪರಿಪಕ್ವರಾಗಿ, ಪೂರ್ಣ ನಿಶ್ಚಯವುಳ್ಳವರಾಗಿ ನಿಂತು, ಎಲ್ಲಾ ವಿಷಯಗಳಲ್ಲಿ ನಿಮಗೋಸ್ಕರ ಆಸಕ್ತಿಯಿಂದ ಪ್ರಾರ್ಥನೆಗಳಲ್ಲಿ ಯಾವಾಗಲೂ ಹೋರಾಡುತ್ತಾನೆ.
ಕೊಲೊಸ್ಸೆಯವರಿಗೆ 4 : 13 (OCVKN)
ನಿಮಗಾಗಿಯೂ ಲವೊದಿಕೀಯ ಹಾಗೂ ಹಿರಿಯಾಪೊಲಿಯ ಜನರಿಗಾಗಿಯೂ ಅವನು ಬಹಳ ಪ್ರಯಾಸಪಡುತ್ತಿದ್ದಾನೆಂದು ಎಪಫ್ರನ ವಿಷಯವಾಗಿ ನಾನು ಸಾಕ್ಷಿ ಹೇಳುತ್ತೇನೆ.
ಕೊಲೊಸ್ಸೆಯವರಿಗೆ 4 : 14 (OCVKN)
ಕೊಲೊಸ್ಸೆಯವರಿಗೆ 4 : 15 (OCVKN)
ಪ್ರಿಯ ವೈದ್ಯನಾದ ಲೂಕನು ಮತ್ತು ದೇಮನು ನಿಮಗೆ ವಂದನೆ ಹೇಳುತ್ತಾರೆ. ಲವೊದಿಕೀಯದಲ್ಲಿರುವ ಸಹೋದರರಿಗೂ ನುಂಫಳಿಗೂ ಆಕೆಯ ಮನೆಯಲ್ಲಿರುವ ಸಭೆಗೂ ವಂದನೆಗಳನ್ನು ಹೇಳಿರಿ.
ಕೊಲೊಸ್ಸೆಯವರಿಗೆ 4 : 16 (OCVKN)
ಈ ಪತ್ರವನ್ನು ನಿಮ್ಮ ಮಧ್ಯದಲ್ಲಿ ಓದಿದ ತರುವಾಯ ಲವೊದಿಕೀಯದವರ ಸಭೆಯಲ್ಲಿಯೂ ಓದಿ ಹೇಳುವ ವ್ಯವಸ್ಥೆಮಾಡಿರಿ. ಹಾಗೆಯೇ ಲವೊದಿಕೀಯದಿಂದ ಬರುವ ಪತ್ರವನ್ನು ನೀವೂ ಓದಿಕೊಳ್ಳಿರಿ.
ಕೊಲೊಸ್ಸೆಯವರಿಗೆ 4 : 17 (OCVKN)
ಅರ್ಖಿಪ್ಪನಿಗೆ, “ನೀನು ಕರ್ತ ಯೇಸುವಿನಿಂದ ಹೊಂದಿರುವ ಸೇವೆಯನ್ನು ನೆರವೇರಿಸುವುದಕ್ಕೆ ಎಚ್ಚರವಾಗಿರಬೇಕು!” ಎಂದು ಹೇಳಿರಿ.
ಕೊಲೊಸ್ಸೆಯವರಿಗೆ 4 : 18 (OCVKN)
ಇದು ಪೌಲನಾದ ನಾನೇ ನನ್ನ ಕೈಯಿಂದ ಬರೆದ ವಂದನೆ. ನಾನು ಸೆರೆಯಲ್ಲಿದ್ದೇನೆಂಬುದನ್ನು ಜ್ಞಾಪಕಮಾಡಿಕೊಳ್ಳಿರಿ. ಕೃಪೆಯು ನಿಮ್ಮೊಂದಿಗಿರಲಿ.

1 2 3 4 5 6 7 8 9 10 11 12 13 14 15 16 17 18