ಅಪೊಸ್ತಲರ ಕೃತ್ಯಗ 19 : 1 (OCVKN)
ಎಫೆಸದಲ್ಲಿ ಪೌಲನು ಅಪೊಲ್ಲೋಸನು ಕೊರಿಂಥದಲ್ಲಿ ಇದ್ದಾಗಲೇ, ಕಾಲ್ನಡಿಗೆಯಾಗಿ ಪೌಲನು ಪ್ರಯಾಣಮಾಡಿ ಎಫೆಸ ಪಟ್ಟಣಕ್ಕೆ ಬಂದನು. ಅಲ್ಲಿ ಕೆಲವು ಶಿಷ್ಯರನ್ನು ಕಂಡು,
ಅಪೊಸ್ತಲರ ಕೃತ್ಯಗ 19 : 2 (OCVKN)
“ನೀವು ವಿಶ್ವಾಸವನ್ನಿಟ್ಟಾಗ ಪವಿತ್ರಾತ್ಮರನ್ನು ಪಡೆದುಕೊಂಡಿರೋ?” ಎಂದು ಪ್ರಶ್ನೆ ಮಾಡಿದನು.
ಅಪೊಸ್ತಲರ ಕೃತ್ಯಗ 19 : 3 (OCVKN)
ಅದಕ್ಕೆ ಅವರು, “ಇಲ್ಲ, ಪವಿತ್ರಾತ್ಮ ಇದ್ದಾರೆಂಬುದನ್ನು ನಾವು ಕೇಳಿಯೇ ಇಲ್ಲ,” ಎಂದರು.
ಅಪೊಸ್ತಲರ ಕೃತ್ಯಗ 19 : 4 (OCVKN)
“ಹಾಗಾದರೆ ನೀವು ಯಾವ ದೀಕ್ಷಾಸ್ನಾನವನ್ನು ಪಡೆದುಕೊಂಡಿದ್ದೀರಿ?” ಎಂದು ಪೌಲನು ಕೇಳಿದಾಗ ಅವರು, “ಯೋಹಾನನ ದೀಕ್ಷಾಸ್ನಾನವನ್ನು,” ಎಂದರು. ಅದಕ್ಕೆ ಪೌಲನು, “ಯೋಹಾನನ ದೀಕ್ಷಾಸ್ನಾನವು ಪಶ್ಚಾತ್ತಾಪದ ದೀಕ್ಷಾಸ್ನಾನವಾಗಿತ್ತು. ತನ್ನ ನಂತರ ಬರಲಿರುವ ಯೇಸುವಿನಲ್ಲಿ ವಿಶ್ವಾಸವನ್ನಿಡಬೇಕೆಂದು ಯೋಹಾನನು ಜನರಿಗೆ ಹೇಳಿದನು,” ಎಂದನು.
ಅಪೊಸ್ತಲರ ಕೃತ್ಯಗ 19 : 5 (OCVKN)
ಇದನ್ನು ಕೇಳಿದ ನಂತರ ಅವರು ಕರ್ತ ಯೇಸುವಿನ ಹೆಸರಿನಲ್ಲಿ ದೀಕ್ಷಾಸ್ನಾನ ಪಡೆದುಕೊಂಡರು.
ಅಪೊಸ್ತಲರ ಕೃತ್ಯಗ 19 : 6 (OCVKN)
ಪೌಲನು ಅವರ ಮೇಲೆ ತನ್ನ ಕೈಗಳನ್ನಿಡಲು, ಅವರ ಮೇಲೆ ಪವಿತ್ರಾತ್ಮ ಬಂದರು. ಆಗ ಅವರು ಅನ್ಯಭಾಷೆಗಳಲ್ಲಿ ಮಾತನಾಡಿದರು ಹಾಗೂ ಪ್ರವಾದಿಸಿದರು.
ಅಪೊಸ್ತಲರ ಕೃತ್ಯಗ 19 : 7 (OCVKN)
ಅವರು ಸುಮಾರು ಹನ್ನೆರಡು ಜನ ಪುರುಷರಿದ್ದರು.
ಅಪೊಸ್ತಲರ ಕೃತ್ಯಗ 19 : 8 (OCVKN)
ಪೌಲನು ಸಭಾಮಂದಿರದೊಳಗೆ ಪ್ರವೇಶಿಸಿದನು. ಅಲ್ಲಿ ಮೂರು ತಿಂಗಳುಗಳ ಕಾಲ, ಧೈರ್ಯವಾಗಿ ಬೋಧನೆ ಮಾಡಿದನು. ದೇವರ ರಾಜ್ಯದ ಬಗ್ಗೆ ಅವರೊಡನೆ ಮನವೊಲಿಸುವಂತೆ ಚರ್ಚಿಸಿದನು.
ಅಪೊಸ್ತಲರ ಕೃತ್ಯಗ 19 : 9 (OCVKN)
ಆದರೆ ಅವರಲ್ಲಿ ಕೆಲವರು ಕಠಿಣ ಹೃದಯದವರಾಗಿ; ಒಡಂಬಡದೆ ಈ ಮಾರ್ಗವನ್ನು ಬಹಿರಂಗವಾಗಿ ದೂಷಿಸಿದರು. ಆದ್ದರಿಂದ ಪೌಲನು ಅವರನ್ನು ಬಿಟ್ಟು, ಶಿಷ್ಯರನ್ನು ತನ್ನೊಂದಿಗೆ ಕರೆದುಕೊಂಡು ಹೋಗಿ, ಅನುದಿನವೂ ತುರನ್ನನ ತರ್ಕಶಾಲೆಯಲ್ಲಿ ಅವರೊಂದಿಗೆ ಚರ್ಚಿಸುತ್ತಾ ಬಂದನು.
ಅಪೊಸ್ತಲರ ಕೃತ್ಯಗ 19 : 10 (OCVKN)
ಇದು ಎರಡು ವರ್ಷಗಳ ಕಾಲ ಮುಂದುವರಿಯಿತು. ಇದರಿಂದ ಏಷ್ಯಾ ಪ್ರಾಂತದಲ್ಲಿ ವಾಸವಾಗಿದ್ದ ಎಲ್ಲಾ ಯೆಹೂದ್ಯರೂ ಗ್ರೀಕರೂ ಕರ್ತ ಯೇಸುವಿನ ವಾಕ್ಯವನ್ನು ಕೇಳಿದರು.
ಅಪೊಸ್ತಲರ ಕೃತ್ಯಗ 19 : 11 (OCVKN)
ದೇವರು ಪೌಲನ ಮುಖಾಂತರ ಅಸಾಧಾರಣ ಅದ್ಭುತಗಳನ್ನು ಮಾಡುತ್ತಿದ್ದರು.
ಅಪೊಸ್ತಲರ ಕೃತ್ಯಗ 19 : 12 (OCVKN)
ಹೀಗೆ ಪೌಲನನ್ನು ಮುಟ್ಟಿದ ಕೈವಸ್ತ್ರಗಳನ್ನೂ ಉಡುಪುಗಳನ್ನೂ ತೆಗೆದುಕೊಂಡುಹೋಗಿ ರೋಗಿಗಳಿಗೆ ಮುಟ್ಟಿಸಿದಾಗ ಅವರು ರೋಗಗಳಿಂದ ವಾಸಿಯಾಗುತ್ತಿದ್ದರು ಹಾಗೂ ಅವರಲ್ಲಿಯ ದುರಾತ್ಮಗಳು ಬಿಟ್ಟು ಹೋಗುತ್ತಿದ್ದವು.
ಅಪೊಸ್ತಲರ ಕೃತ್ಯಗ 19 : 13 (OCVKN)
ಕೆಲವು ಯೆಹೂದ್ಯರು ದುರಾತ್ಮಗಳನ್ನು ಬಿಡಿಸಲು ಪ್ರಯತ್ನಿಸಿ, “ಪೌಲನು ಸಾರುತ್ತಿರುವ ಯೇಸುವಿನ ಹೆಸರಿನಲ್ಲಿ ನಾನು ನಿಮಗೆ ಆಜ್ಞಾಪಿಸುತ್ತೇನೆ,” ಎಂದು ಅವರು ಕರ್ತ ಯೇಸುವಿನ ಹೆಸರನ್ನು ಬಳಸಲು ಪ್ರಯತ್ನಿಸಿದರು.
ಅಪೊಸ್ತಲರ ಕೃತ್ಯಗ 19 : 14 (OCVKN)
ಯೆಹೂದ್ಯ ಮುಖ್ಯಯಾಜಕ ಸ್ಕೇವ ಎಂಬುವನ ಏಳು ಜನ ಗಂಡು ಮಕ್ಕಳು ಈ ರೀತಿ ಮಾಡುತ್ತಿದ್ದರು.
ಅಪೊಸ್ತಲರ ಕೃತ್ಯಗ 19 : 15 (OCVKN)
ದುರಾತ್ಮವು ಅವರಿಗೆ ಉತ್ತರವಾಗಿ, “ಯೇಸುವನ್ನು ನಾನು ಬಲ್ಲೆ, ಪೌಲನೂ ನನಗೆ ಗೊತ್ತು, ಆದರೆ ನೀವು ಯಾರು?” ಎಂದು ಕೇಳಿ,
ಅಪೊಸ್ತಲರ ಕೃತ್ಯಗ 19 : 16 (OCVKN)
ದುರಾತ್ಮ ಪೀಡಿತ ಮನುಷ್ಯನು ಅವರ ಮೇಲೆ ಹಾರಿಬಿದ್ದು, ಅವರೆಲ್ಲರಿಗಿಂತಲೂ ಹೆಚ್ಚು ಬಲಗೊಂಡು ಅವರನ್ನು ಬಡಿದು ಗಾಯಗೊಳಿಸಲು, ಅವರು ನಗ್ನರಾಗಿಯೇ ಮನೆಬಿಟ್ಟು ಹೊರಗೆ ಓಡಿಹೋದರು.
ಅಪೊಸ್ತಲರ ಕೃತ್ಯಗ 19 : 17 (OCVKN)
ಎಫೆಸದಲ್ಲಿ ವಾಸಿಸುತ್ತಿದ್ದ ಯೆಹೂದ್ಯರಿಗೂ ಗ್ರೀಕರಿಗೂ ಈ ವಿಷಯ ತಿಳಿದಾಗ, ಅವರೆಲ್ಲರೂ ಬಹಳ ಭಯಗೊಂಡರು. ಹೀಗೆ ಕರ್ತ ಯೇಸುವಿನ ಹೆಸರಿಗೆ ಅತ್ಯಂತ ಮಹಿಮೆಯಾಯಿತು.
ಅಪೊಸ್ತಲರ ಕೃತ್ಯಗ 19 : 18 (OCVKN)
ವಿಶ್ವಾಸವಿಟ್ಟವರಲ್ಲಿ ಅನೇಕರು ಅಲ್ಲಿಗೆ ಬಂದು ತಮ್ಮ ಕೃತ್ಯಗಳನ್ನು ಅರಿಕೆಮಾಡಿದರು.
ಅಪೊಸ್ತಲರ ಕೃತ್ಯಗ 19 : 19 (OCVKN)
ಮಾಟಮಂತ್ರ ಮಾಡುತ್ತಿದ್ದವರು ತಮ್ಮ ಗ್ರಂಥಗಳನ್ನು ತೆಗೆದುಕೊಂಡು ಬಂದು ಎಲ್ಲರ ಮುಂದೆ ಸುಟ್ಟು ಹಾಕಿದರು. ಅವುಗಳ ಒಟ್ಟು ಮೌಲ್ಯ ಐವತ್ತು ಸಾವಿರ ಬೆಳ್ಳಿನಾಣ್ಯಗಳಷ್ಟಾಯಿತು.* ಒಂದು ದ್ರಹ್ಮ ನಾಣ್ಯದ ಮೌಲ್ಯವು ಒಂದು ದಿನದ ಕೂಲಿ
ಅಪೊಸ್ತಲರ ಕೃತ್ಯಗ 19 : 20 (OCVKN)
ಹೀಗೆ ಕರ್ತ ಯೇಸುವಿನ ವಾಕ್ಯವು ವಿಸ್ತಾರವಾಗಿ ಹರಡುತ್ತಾ ಪ್ರಬಲವಾಯಿತು.
ಅಪೊಸ್ತಲರ ಕೃತ್ಯಗ 19 : 21 (OCVKN)
ಇದೆಲ್ಲ ಸಂಭವಿಸಿದ ನಂತರ ಮಕೆದೋನ್ಯ ಮತ್ತು ಅಖಾಯ ಮಾರ್ಗವಾಗಿ ಯೆರೂಸಲೇಮಿಗೆ ಹೋಗಲು ಪೌಲನು ಮನಸ್ಸಿನಲ್ಲಿ ನಿರ್ಧರಿಸಿದನು. ಅವನು, “ಅಲ್ಲಿಗೆ ಹೋದ ನಂತರ ನಾನು ರೋಮ್ ಪಟ್ಟಣವನ್ನು ಸಂದರ್ಶಿಸಬೇಕು,” ಎಂದನು.
ಅಪೊಸ್ತಲರ ಕೃತ್ಯಗ 19 : 22 (OCVKN)
ತನ್ನ ಇಬ್ಬರು ಸಹಾಯಕರಾದ ತಿಮೊಥೆ ಮತ್ತು ಎರಸ್ತನನ್ನು ಮಕೆದೋನ್ಯಕ್ಕೆ ಕಳುಹಿಸಿ ತಾನು ಇನ್ನೂ ಸ್ವಲ್ಪಕಾಲ ಏಷ್ಯಾ ಪ್ರಾಂತದಲ್ಲಿ ಇದ್ದನು.
ಅಪೊಸ್ತಲರ ಕೃತ್ಯಗ 19 : 23 (OCVKN)
ಎಫೆಸದಲ್ಲಿ ದಂಗೆ ಕ್ರಿಸ್ತ ಯೇಸುವಿನ ಮಾರ್ಗದ ವಿಷಯವಾಗಿ ಆ ಸಮಯದಲ್ಲಿ ದೊಡ್ಡ ಗಲಭೆ ಉಂಟಾಯಿತು.
ಅಪೊಸ್ತಲರ ಕೃತ್ಯಗ 19 : 24 (OCVKN)
ಏಕೆಂದರೆ ದೇಮೇತ್ರಿಯ ಎಂಬ ಒಬ್ಬ ಅಕ್ಕಸಾಲಿಗನು ಅರ್ತೆಮೀ ದೇವಿಯ ಬೆಳ್ಳಿಯ ಮೂರ್ತಿಗಳನ್ನು ಮಾಡುವವನಾಗಿದ್ದು, ಆ ಶಿಲ್ಪಿಗಳ ಹಣ ಸಂಪಾದನೆಗೆ ಬಹಳ ವ್ಯಾಪಾರವನ್ನು ಒದಗಿಸುತ್ತಿದ್ದನು.
ಅಪೊಸ್ತಲರ ಕೃತ್ಯಗ 19 : 25 (OCVKN)
ಅವನು ಶಿಲ್ಪಿಗಳನ್ನೂ ಆ ಕಸುಬಿಗೆ ಸಂಬಂಧಪಟ್ಟ ವ್ಯಾಪಾರಿಗಳನ್ನೂ ಒಟ್ಟಿಗೆ ಕೂಡಿಸಿ ಅವರಿಗೆ, “ಜನರೇ, ಈ ವೃತ್ತಿಯಿಂದ ನಮಗೆ ಉತ್ತಮ ಆದಾಯ ಬರುತ್ತಿದೆಯೆಂಬುದನ್ನು ನೀವು ತಿಳಿದಿರುವಿರಿ.
ಅಪೊಸ್ತಲರ ಕೃತ್ಯಗ 19 : 26 (OCVKN)
ಪೌಲನೆಂಬ ಈ ಮನುಷ್ಯನು ಎಫೆಸದಲ್ಲಿಯೂ ಇಡೀ ಏಷ್ಯಾ ಪ್ರಾಂತದಲ್ಲಿಯೂ ದೊಡ್ಡ ಸಂಖ್ಯೆಯಲ್ಲಿ ಜನರನ್ನು ಮನವೊಲಿಸಿ, ಕೈಯಿಂದ ಮಾಡಿದ ಮೂರ್ತಿಗಳು ದೇವರುಗಳಲ್ಲ ಎಂದು ಹೇಳಿ, ಅವರನ್ನು ಮಾರ್ಪಡಿಸಿಬಿಟ್ಟಿದ್ದಾನೆ ಎಂಬುದನ್ನು ನೀವು ಕೇಳಿದ್ದೀರಿ ಹಾಗೂ ಕಂಡಿದ್ದೀರಿ.
ಅಪೊಸ್ತಲರ ಕೃತ್ಯಗ 19 : 27 (OCVKN)
ಇದರಿಂದ ಈಗ ನಮ್ಮ ವೃತ್ತಿಗೆ ಅಪಾಯ ಬಂದಿರುವುದಲ್ಲದೆ ಅರ್ತೆಮೀ ಮಹಾದೇವಿಯ ಗುಡಿಯ ಬಗ್ಗೆಯೂ ಯೋಚಿಸಬೇಕು. ಏಕೆಂದರೆ ಏಷ್ಯಾದಲ್ಲಿಯೂ ಇಡೀ ಜಗತ್ತಿನಲ್ಲೆಲ್ಲಾ ಪೂಜಿಸುತ್ತಿರುವ ದೇವಿಯ ಮಹತ್ವವು ಸಹ ಕುಂದಿಹೋಗುವಂತಿದೆ,” ಎಂದನು.
ಅಪೊಸ್ತಲರ ಕೃತ್ಯಗ 19 : 28 (OCVKN)
ಈ ಮಾತುಗಳನ್ನು ಕೇಳಿ ಅವರು ಉಗ್ರರಾಗಿ, “ಎಫೆಸದ ಅರ್ತೆಮೀ ದೇವಿಯೇ ಮಹಾದೇವಿ!” ಎಂದು ಆರ್ಭಟಿಸಿದರು.
ಅಪೊಸ್ತಲರ ಕೃತ್ಯಗ 19 : 29 (OCVKN)
ಕೂಡಲೇ ಇಡೀ ಪಟ್ಟಣದಲ್ಲೆಲ್ಲಾ ಕೋಲಾಹಲ ಉಂಟಾಯಿತು. ಜನರು ಗುಂಪಾಗಿ ಕೂಡಿಕೊಂಡು ಬಂದು ಮಕೆದೋನ್ಯದಿಂದ ಪೌಲನೊಂದಿಗೆ ಪ್ರಯಾಣಮಾಡಿ ಬಂದ, ಗಾಯ ಮತ್ತು ಅರಿಸ್ತಾರ್ಕರನ್ನು ಬಂಧಿಸಿ ಕ್ರೀಡಾಂಗಣದೊಳಗೆ ಎಳೆದುಕೊಂಡು ಬಂದರು.
ಅಪೊಸ್ತಲರ ಕೃತ್ಯಗ 19 : 30 (OCVKN)
ಪೌಲನು ಜನರೆದುರಿಗೆ ಬರಬೇಕೆಂದಿದ್ದಾಗ ಶಿಷ್ಯರು ಅವನನ್ನು ಬಿಡಲಿಲ್ಲ.
ಅಪೊಸ್ತಲರ ಕೃತ್ಯಗ 19 : 31 (OCVKN)
ಪೌಲನ ಸ್ನೇಹಿತರಾಗಿದ್ದ ಏಷ್ಯಾ ಸೀಮೆಯ ಕೆಲವು ಅಧಿಕಾರಿಗಳೂ ಈ ಕ್ರೀಡಾಂಗಣದೊಳಗೆ ಹೋಗುವ ಸಾಹಸ ಮಾಡಬಾರದೆಂದು ವಿನಂತಿಸಿ ಅವನಿಗೆ ಸಂದೇಶ ಕಳುಹಿಸಿದರು.
ಅಪೊಸ್ತಲರ ಕೃತ್ಯಗ 19 : 32 (OCVKN)
ಜನಸಮೂಹ ಗಲಿಬಿಲಿಗೊಂಡಿತ್ತು. ಕೆಲವರು ಒಂದು ರೀತಿಯಾಗಿಯೂ ಇನ್ನು ಕೆಲವರು ಬೇರೊಂದು ವಿಧವಾಗಿಯೂ ಕೂಗುತ್ತಿದ್ದರು. ಬಹು ಪಾಲು ಜನರಿಗೆ ತಾವೇಕೆ ಅಲ್ಲಿಗೆ ಬಂದಿದ್ದೇವೆಂಬುದರ ಬಗ್ಗೆ ತಿಳಿದಿರಲೇ ಇಲ್ಲ.
ಅಪೊಸ್ತಲರ ಕೃತ್ಯಗ 19 : 33 (OCVKN)
ಆದರೆ ಯೆಹೂದ್ಯರು ಅಲೆಕ್ಸಾಂದ್ರ ಎಂಬುವನನ್ನು ಮುಂದಕ್ಕೆ ತಳ್ಳಿದರು. ಜನಸಮೂಹದಲ್ಲಿದ್ದ ಕೆಲವರು ಅವನಿಗೆ ವಿಷಯ ತಿಳಿಸಿದರು. ಆಗ ಅಲೆಕ್ಸಾಂದ್ರನು, ಜನರ ಎದುರಿನಲ್ಲಿ ವಾದಿಸಲಿಕ್ಕಾಗುವಂತೆ ಕೈಸನ್ನೆ ಮಾಡಿದನು.
ಅಪೊಸ್ತಲರ ಕೃತ್ಯಗ 19 : 34 (OCVKN)
ಆದರೆ ಅವನು ಯೆಹೂದ್ಯನೆಂದು ಜನರು ತಿಳಿದಾಗ, “ಎಫೆಸದ ಅರ್ತೆಮೀ ದೇವಿ ಮಹಾದೇವಿ!” ಎಂದು ಒಕ್ಕೊರಲಿನಿಂದ ಎರಡು ತಾಸುಗಳವರೆಗೆ ಆರ್ಭಟಿಸುತ್ತಲೇ ಇದ್ದರು.
ಅಪೊಸ್ತಲರ ಕೃತ್ಯಗ 19 : 35 (OCVKN)
ನಗರದ ಗುಮಾಸ್ತ ಜನಸಮೂಹವನ್ನು ಸುಮ್ಮನಿರಿಸಿ, “ಎಫೆಸದ ಜನರೇ, ಮಹಾ ಅರ್ತೆಮೀ ದೇವಿಯ ಮಂದಿರ ಹಾಗೂ ಆಕಾಶದಿಂದ ಬಿದ್ದ ಆಕೆಯ ಮೂರ್ತಿಯನ್ನು ಎಫೆಸ ಪಟ್ಟಣವು ಕಾಪಾಡುತ್ತಿದೆ ಎಂಬುದನ್ನು ತಿಳಿಯದಿರುವ ಮನುಷ್ಯನು ಇದ್ದಾನೆಯೇ?
ಅಪೊಸ್ತಲರ ಕೃತ್ಯಗ 19 : 36 (OCVKN)
ಈ ಸಂಗತಿಯನ್ನು ಅಲ್ಲಗಳೆಯುವಂತಿಲ್ಲ. ಆದ್ದರಿಂದ ನೀವು ಸುಮ್ಮನಿರಬೇಕು. ಅವಸರದಿಂದ ಏನನ್ನೂ ಮಾಡಲು ಹೋಗಬಾರದು.
ಅಪೊಸ್ತಲರ ಕೃತ್ಯಗ 19 : 37 (OCVKN)
ನೀವು ತಂದಿರುವ ಈ ಜನರು ನಮ್ಮ ಗುಡಿ ಕಳ್ಳರಲ್ಲ; ನಮ್ಮ ದೇವತೆಯ ದೂಷಕರೂ ಅಲ್ಲ.
ಅಪೊಸ್ತಲರ ಕೃತ್ಯಗ 19 : 38 (OCVKN)
ಹೀಗಿರುವುದರಿಂದ ದೇಮೇತ್ರಿಯನಿಗೂ ಅವನ ಸಹ ಶಿಲ್ಪಿಗಳಿಗೂ ಯಾವುದೇ ವ್ಯಕ್ತಿಯ ವಿರುದ್ಧ ಏನಾದರೂ ಆಪಾದನೆಗಳಿದ್ದರೆ ಅವರಿಗಾಗಿ ನ್ಯಾಯಾಲಯಗಳು ತೆರೆದಿವೆ. ರಾಜ್ಯಪಾಲರು ಇದ್ದಾರೆ; ಅವರ ಮುಂದೆ ದೂರುಗಳನ್ನು ಸಲ್ಲಿಸಲಿ.
ಅಪೊಸ್ತಲರ ಕೃತ್ಯಗ 19 : 39 (OCVKN)
ಆದರೆ ನೀವು ಇದಕ್ಕಿಂತ ಹೆಚ್ಚಾಗಿ ಬೇರೆ ಏನನ್ನಾದರೂ ತರುವುದಾದರೆ ಅದು ಕಾನೂನುಬದ್ಧ ಸಭೆಯಲ್ಲಿ ತೀರ್ಮಾನವಾಗಬೇಕು.
ಅಪೊಸ್ತಲರ ಕೃತ್ಯಗ 19 : 40 (OCVKN)
ಈಗ ಇದ್ದ ಪರಿಸ್ಥಿತಿಯಲ್ಲಿ ಇಂದಿನ ಘಟನೆಯಿಂದ ನಾವು ದಂಗೆಯೆದ್ದಿದ್ದೇವೆ ಎಂಬ ಅಪರಾಧ ನಮ್ಮ ಮೇಲೆ ಬರುವ ಆಸ್ಪದವಿದೆ. ಈ ಗಲಭೆಗೆ ಕಾರಣವೇನೆಂದು ವಿವರಿಸಲು ನಮಗೆ ಸಾಧ್ಯವಾಗುವುದಿಲ್ಲ. ಏಕೆಂದರೆ ಇದು ಕಾರಣವಿಲ್ಲದೇ ಎದ್ದ ದಂಗೆ,” ಎಂದನು.
ಅಪೊಸ್ತಲರ ಕೃತ್ಯಗ 19 : 41 (OCVKN)
ಇದನ್ನು ಹೇಳಿ ಅವನು ಜನಸಮೂಹವನ್ನು ಚದರಿಸಿಬಿಟ್ಟನು.
❮
❯