ಅಪೊಸ್ತಲರ ಕೃತ್ಯಗ 14 : 1 (OCVKN)
ಇಕೋನ್ಯದಲ್ಲಿ ಇಕೋನ್ಯದಲ್ಲಿಯೂ ಪೌಲ ಮತ್ತು ಬಾರ್ನಬರು ವಾಡಿಕೆಯಂತೆ ಯೆಹೂದ್ಯರ ಸಭಾಮಂದಿರಕ್ಕೆ ಹೋದರು. ಅವರು ಅಲ್ಲಿ ಪರಿಣಾಮಕಾರಿಯಾಗಿ ಮಾತನಾಡಿದ್ದರಿಂದ ಬಹು ಸಂಖ್ಯೆಯಲ್ಲಿ ಯೆಹೂದ್ಯರೂ ಗ್ರೀಕರೂ ವಿಶ್ವಾಸವನ್ನಿಟ್ಟರು.
ಅಪೊಸ್ತಲರ ಕೃತ್ಯಗ 14 : 2 (OCVKN)
ಆದರೆ ನಂಬಲು ನಿರಾಕರಿಸಿದ ಯೆಹೂದ್ಯರು ಯೆಹೂದ್ಯರಲ್ಲದವರ ಮನಸ್ಸನ್ನು ಕೆಡಿಸಿ, ಸಹೋದರರ ಮೇಲೆ ವಿರೋಧ ಭಾವನೆ ಹುಟ್ಟಿಸಿದರು.
ಅಪೊಸ್ತಲರ ಕೃತ್ಯಗ 14 : 3 (OCVKN)
ಆದ್ದರಿಂದ ಪೌಲ ಬಾರ್ನಬರು ಅಲ್ಲಿ ಬಹಳ ಸಮಯವಿದ್ದು ಕರ್ತ ಯೇಸುವಿನ ವಿಷಯದಲ್ಲಿ ಧೈರ್ಯದಿಂದ ಮಾತನಾಡುತ್ತಿದ್ದರು. ಆದ್ದರಿಂದ ಕರ್ತ ಯೇಸು ಅವರ ಕೈಗಳಿಂದ ಅದ್ಭುತಕಾರ್ಯಗಳನ್ನೂ ಸೂಚಕಕಾರ್ಯಗಳನ್ನೂ ಮಾಡುವ ಶಕ್ತಿಯನ್ನು ಕೊಟ್ಟು ತಮ್ಮ ಕೃಪಾವಾಕ್ಯವನ್ನು ಖಚಿತಪಡಿಸಿದರು.
ಅಪೊಸ್ತಲರ ಕೃತ್ಯಗ 14 : 4 (OCVKN)
ಆದರೆ ಪಟ್ಟಣದ ಜನರಲ್ಲಿ ಭಿನ್ನಾಭಿಪ್ರಾಯಗಳಾದವು. ಕೆಲವರು ಯೆಹೂದ್ಯರ ಪರವಾದರು, ಇನ್ನೂ ಕೆಲವರು ಅಪೊಸ್ತಲರ ಪರವಾದರು.
ಅಪೊಸ್ತಲರ ಕೃತ್ಯಗ 14 : 5 (OCVKN)
ಯೆಹೂದ್ಯರೂ ಯೆಹೂದ್ಯರಲ್ಲದವರೂ ತಮ್ಮ ನಾಯಕರನ್ನು ಕೂಡಿಕೊಂಡು ಪೌಲ, ಬಾರ್ನಬರನ್ನು ಅವಮಾನ ಮಾಡಿ ಅವರ ಮೇಲೆ ಕಲ್ಲೆಸೆಯಬೇಕೆಂದು ನುಗ್ಗಿದಾಗ,
ಅಪೊಸ್ತಲರ ಕೃತ್ಯಗ 14 : 6 (OCVKN)
ಈ ವಿಷಯ ಅಪೊಸ್ತಲರಿಗೆ ತಿಳಿಯಲು ಅವರು ಅಲ್ಲಿಂದ ಪಲಾಯನ ಮಾಡಿ ಲುಕವೋನಿಯದ ಪಟ್ಟಣಗಳಾದ ಲುಸ್ತ್ರ ಮತ್ತು ದೆರ್ಬೆ ಹಾಗೂ ಅವುಗಳ ಸುತ್ತಮುತ್ತಲ ಪ್ರದೇಶಗಳಿಗೆ ಓಡಿಹೋದರು.
ಅಪೊಸ್ತಲರ ಕೃತ್ಯಗ 14 : 7 (OCVKN)
ಹೀಗೆ ಅವರು ಅಲ್ಲೆಲ್ಲಾ ಸುವಾರ್ತೆ ಸಾರಿದರು.
ಅಪೊಸ್ತಲರ ಕೃತ್ಯಗ 14 : 8 (OCVKN)
ಲುಸ್ತ್ರ ಮತ್ತು ದೆರ್ಬೆಯಲ್ಲಿ ಲುಸ್ತ್ರದಲ್ಲಿ ಒಬ್ಬ ಕುಂಟನಿದ್ದನು. ಅವನು ಹುಟ್ಟು ಕುಂಟನಾಗಿದ್ದುದರಿಂದ ಅವನೆಂದೂ ನಡೆದಾಡಿರಲಿಲ್ಲ.
ಅಪೊಸ್ತಲರ ಕೃತ್ಯಗ 14 : 9 (OCVKN)
ಪೌಲನು ಮಾತನಾಡುತ್ತಿರುವುದನ್ನು ಅವನು ಆಲಿಸುತ್ತಿದ್ದನು. ಪೌಲನು ನೇರವಾಗಿ ಅವನನ್ನೇ ದೃಷ್ಟಿಸಿ ನೋಡಿ, ತಾನು ಗುಣಹೊಂದಲು ಅವನಲ್ಲಿ ವಿಶ್ವಾಸವಿದೆಯೆಂದು ಕಂಡು,
ಅಪೊಸ್ತಲರ ಕೃತ್ಯಗ 14 : 10 (OCVKN)
“ಎದ್ದೇಳು, ಕಾಲೂರಿ ನಿಲ್ಲು!” ಎಂದು ದೊಡ್ಡ ಧ್ವನಿಯಿಂದ ಹೇಳಿದನು. ಆ ಮನುಷ್ಯನು ಜಿಗಿದು ನಿಂತು, ನಡೆದಾಡಲು ಪ್ರಾರಂಭಿಸಿದನು.
ಅಪೊಸ್ತಲರ ಕೃತ್ಯಗ 14 : 11 (OCVKN)
ಪೌಲನು ಮಾಡಿದ್ದನ್ನು ಜನರು ಕಂಡಾಗ, ಲುಕವೋನಿಯ ಭಾಷೆಯಲ್ಲಿ, “ಮಾನವ ರೂಪದಲ್ಲಿ ದೇವರುಗಳು ಬಂದಿದ್ದಾರೆ!” ಎಂದು ಘೋಷಿಸಿದರು.
ಅಪೊಸ್ತಲರ ಕೃತ್ಯಗ 14 : 12 (OCVKN)
ಅವರು ಬಾರ್ನಬನನ್ನು “ಜೆಯುಸ್” ದೇವರು ಎಂದೂ ಪೌಲನು ಪ್ರಮುಖ ಭಾಷಣಕಾರನಾದ್ದರಿಂದ ಅವನನ್ನು “ಹೆರ್ಮೆ” ದೇವರು ಎಂದೂ ಕರೆದರು.
ಅಪೊಸ್ತಲರ ಕೃತ್ಯಗ 14 : 13 (OCVKN)
ಪಟ್ಟಣದ ಹೊರಗೆ ಸಮೀಪದಲ್ಲಿದ್ದ ಜೆಯುಸ್ ದೇವರ ಗುಡಿಯ ಪೂಜಾರಿಯು, ಪಟ್ಟಣದ ದ್ವಾರಗಳ ಬಳಿಗೆ ಹೋರಿಗಳನ್ನೂ ಹೂಮಾಲೆಗಳನ್ನೂ ತೆಗೆದುಕೊಂಡು ಬರಲು, ಅವರಿಗಾಗಿ ಯಜ್ಞಗಳನ್ನು ಅರ್ಪಿಸಲು ಜನರು ಅಪೇಕ್ಷಿಸಿದರು.
ಅಪೊಸ್ತಲರ ಕೃತ್ಯಗ 14 : 14 (OCVKN)
ಆದರೆ ಅಪೊಸ್ತಲರಾದ ಬಾರ್ನಬ ಮತ್ತು ಪೌಲರು ಇದನ್ನು ಕೇಳಿದಾಗ, ತಮ್ಮ ಬಟ್ಟೆಗಳನ್ನು ಹರಿದುಕೊಂಡು ಜನಸಮೂಹದ ಕಡೆಗೆ ಓಡಿಬಂದು ಕೂಗಿ ಹೇಳಿದ್ದೇನೆಂದರೆ:
ಅಪೊಸ್ತಲರ ಕೃತ್ಯಗ 14 : 15 (OCVKN)
“ಪ್ರಿಯ ಜನರೇ, ನೀವಿದನ್ನು ಏಕೆ ಮಾಡುತ್ತಿರುವಿರಿ? ನಾವೂ ನಿಮ್ಮ ಹಾಗೆಯೇ ಮಾನವರು. ಇಂಥಾ ವ್ಯರ್ಥವಾದ ಸಂಗತಿಗಳನ್ನು ಬಿಟ್ಟು ಆಕಾಶವನ್ನೂ ಭೂಮಿಯನ್ನೂ ಸಮುದ್ರವನ್ನೂ ಅದರಲ್ಲಿರುವ ಪ್ರತಿಯೊಂದನ್ನೂ ಸೃಷ್ಟಿಸಿದ ಜೀವಿಸುವ ದೇವರ ಕಡೆಗೆ ತಿರುಗಿಕೊಳ್ಳಿರಿ ಎಂದು ನಿಮಗೆ ಸುವಾರ್ತೆಯನ್ನು ಸಾರುತ್ತಿದ್ದೇವೆ.
ಅಪೊಸ್ತಲರ ಕೃತ್ಯಗ 14 : 16 (OCVKN)
ದೇವರು ಹಿಂದಿನ ಕಾಲದಲ್ಲಿ, ಆಯಾ ದೇಶಗಳು ತಮ್ಮ ತಮ್ಮ ಮಾರ್ಗಗಳಲ್ಲಿಯೇ ನಡೆಯುವಂತೆ ಬಿಟ್ಟುಬಿಟ್ಟರು.
ಅಪೊಸ್ತಲರ ಕೃತ್ಯಗ 14 : 17 (OCVKN)
ಆದರೂ ದೇವರು ತಮ್ಮ ಬಗ್ಗೆ ಸಾಕ್ಷಿಕೊಡದೆ ಇರಲಿಲ್ಲ. ಆಕಾಶದಿಂದ ಮಳೆಯನ್ನೂ ಸಕಾಲದಲ್ಲಿ ಬೆಳೆಯನ್ನೂ ನಿಮಗೆ ದಯಪಾಲಿಸಿ ಆಹಾರಕೊಟ್ಟು ನಿಮ್ಮ ಹೃದಯಗಳನ್ನು ಆನಂದದಿಂದ ತುಂಬಿಸಿ ಒಳ್ಳೆಯದನ್ನು ಮಾಡುತ್ತಾ ಬಂದವರು ದೇವರೇ.”
ಅಪೊಸ್ತಲರ ಕೃತ್ಯಗ 14 : 18 (OCVKN)
ಹೀಗೆ ಹೇಳಿದರೂ ಆ ಜನಸಮೂಹ ಅವರಿಗೆ ಬಲಿಯರ್ಪಿಸುವುದನ್ನು ತಡೆಯಲು ಕಷ್ಟವಾಯಿತು.
ಅಪೊಸ್ತಲರ ಕೃತ್ಯಗ 14 : 19 (OCVKN)
ಅದೇ ಸಮಯದಲ್ಲಿ ಅಂತಿಯೋಕ್ಯ ಮತ್ತು ಇಕೋನ್ಯದಿಂದ ಕೆಲವು ಜನ ಯೆಹೂದ್ಯರು ಬಂದು ಜನಸಮೂಹವನ್ನು ತಮ್ಮ ಕಡೆಗೆ ಒಲಿಸಿಕೊಂಡು, ಪೌಲನ ಮೇಲೆ ಕಲ್ಲೆಸೆಯಲು, ಅವನು ಸತ್ತನೆಂದು ಭಾವಿಸಿ ಅವನನ್ನು ಊರ ಹೊರಗೆ ಎಳೆದು ಹಾಕಿದರು.
ಅಪೊಸ್ತಲರ ಕೃತ್ಯಗ 14 : 20 (OCVKN)
ಆದರೆ ಶಿಷ್ಯರು ಬಂದು ಪೌಲನ ಸುತ್ತಲೂ ನಿಂತುಕೊಳ್ಳಲು ಅವನು ಎದ್ದು ಪಟ್ಟಣಕ್ಕೆ ಹಿಂದಿರುಗಿ ಹೋದನು. ಮರುದಿನ ಅವನೂ ಬಾರ್ನಬನೂ ದೆರ್ಬೆಗೆ ಹೊರಟು ಹೋದರು.
ಅಪೊಸ್ತಲರ ಕೃತ್ಯಗ 14 : 21 (OCVKN)
ಸಿರಿಯದ ಅಂತಿಯೋಕ್ಯಕ್ಕೆ ಮರುಪ್ರಯಾಣ ಆ ಪಟ್ಟಣದಲ್ಲಿ ಪೌಲ, ಬಾರ್ನಬರು ಸುವಾರ್ತೆಯನ್ನು ಸಾರಿದರು. ಬಹುಜನರನ್ನು ಶಿಷ್ಯರನ್ನಾಗಿ ಮಾಡಿದರು. ಅನಂತರ ಅವರು ಲುಸ್ತ್ರ, ಇಕೋನ್ಯ ಮತ್ತು ಅಂತಿಯೋಕ್ಯಗಳಿಗೆ ಹಿಂದಿರುಗಿದರು.
ಅಪೊಸ್ತಲರ ಕೃತ್ಯಗ 14 : 22 (OCVKN)
ಅಲ್ಲಿದ್ದ ಶಿಷ್ಯರು ವಿಶ್ವಾಸದಲ್ಲಿ ಮುಂದುವರಿಯಲು, “ನಾವು ಅನೇಕ ಸಂಕಟಗಳಿಂದ ದೇವರ ರಾಜ್ಯದೊಳಗೆ ಸೇರಬೇಕು,” ಎಂದು ಹೇಳಿ ದೃಢಪಡಿಸಿದರು.
ಅಪೊಸ್ತಲರ ಕೃತ್ಯಗ 14 : 23 (OCVKN)
ಪ್ರತಿಯೊಂದು ಸಭೆಯಲ್ಲಿ ಪೌಲ, ಬಾರ್ನಬರು ಸಭಾ ಹಿರಿಯರನ್ನು ನೇಮಿಸಿ, ಉಪವಾಸ ಪ್ರಾರ್ಥನೆಯನ್ನು ಮಾಡಿ ಅವರು ನಂಬಿದ್ದ ಕರ್ತ ಯೇಸುವಿಗೆ ಅವರನ್ನು ಒಪ್ಪಿಸಿಕೊಟ್ಟರು.
ಅಪೊಸ್ತಲರ ಕೃತ್ಯಗ 14 : 24 (OCVKN)
ತರುವಾಯ ಪಿಸಿದ್ಯವನ್ನು ದಾಟಿಕೊಂಡು, ಪಂಫುಲ್ಯದೊಳಗೆ ಬಂದರು,
ಅಪೊಸ್ತಲರ ಕೃತ್ಯಗ 14 : 25 (OCVKN)
ಪೆರ್ಗೆಯಲ್ಲಿ ದೇವರ ವಾಕ್ಯವನ್ನು ಸಾರಿ, ಅಲ್ಲಿಂದ ಅತ್ತಾಲಿಯ ಎಂಬಲ್ಲಿಗೆ ಹೋದರು.
ಅಪೊಸ್ತಲರ ಕೃತ್ಯಗ 14 : 26 (OCVKN)
ಅತ್ತಾಲಿಯದಿಂದ ನೌಕೆಯಲ್ಲಿ ಪ್ರಯಾಣಮಾಡಿ ಅಂತಿಯೋಕ್ಯಕ್ಕೆ ಬಂದರು. ಅವರು ಪೂರೈಸಿದ ಸೇವೆಗಾಗಿ ದೇವರ ಕೃಪೆಗೆ ತಮ್ಮನ್ನು ಸಮರ್ಪಿಸಿಕೊಂಡದ್ದು ಈ ಪಟ್ಟಣದಿಂದಲೇ.
ಅಪೊಸ್ತಲರ ಕೃತ್ಯಗ 14 : 27 (OCVKN)
ಇಲ್ಲಿಗೆ ತಲುಪಿದಾಗ, ಅವರು ಸಭೆಯನ್ನು ಒಟ್ಟುಕೂಡಿಸಿದರು. ದೇವರು ಅವರಿಗೆ ತಮ್ಮ ಮುಖಾಂತರವಾಗಿ ಮಾಡಿದ್ದನ್ನೂ ಯೆಹೂದ್ಯರಲ್ಲದವರಿಗೂ ದೇವರು ವಿಶ್ವಾಸದ ದ್ವಾರವನ್ನು ತೆರೆದಿರುವುದನ್ನೂ ವರದಿಮಾಡಿದರು.
ಅಪೊಸ್ತಲರ ಕೃತ್ಯಗ 14 : 28 (OCVKN)
ಅವರು ಅಲ್ಲಿಯೇ ಶಿಷ್ಯರೊಂದಿಗೆ ಬಹುಕಾಲ ತಂಗಿದ್ದರು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28