2 ಪೇತ್ರನು 3 : 1 (OCVKN)
ಕರ್ತ ಯೇಸುವಿನ ದಿನವು ಪ್ರಿಯರೇ, ನಿಮಗೀಗ ಬರೆಯುವುದು ಎರಡನೆಯ ಪತ್ರ. ಈ ಎರಡು ಪತ್ರಗಳಲ್ಲಿಯೂ ನಿಮ್ಮ ನೆನಪಿಗೆ ತಂದು ನಿಮ್ಮ ನಿರ್ಮಲವಾದ ಮನಸ್ಸನ್ನು ಉತ್ತೇಜಿಸಿದ್ದೇನೆ.
2 ಪೇತ್ರನು 3 : 2 (OCVKN)
ಪರಿಶುದ್ಧ ಪ್ರವಾದಿಗಳು ಪೂರ್ವದಲ್ಲಿ ಹೇಳಿದ ಮಾತುಗಳನ್ನೂ ನಮಗೆ ಕರ್ತ ಹಾಗೂ ರಕ್ಷಕ ಆಗಿರುವವರು ನಿಮ್ಮ ಅಪೊಸ್ತಲರ ಮೂಲಕ ಕೊಟ್ಟ ಅಪ್ಪಣೆಯನ್ನೂ ನೀವು ನೆನಪಿನಲ್ಲಿ ಇಟ್ಟುಕೊಳ್ಳಬೇಕು ಎಂದು ಬಯಸುತ್ತೇನೆ.
2 ಪೇತ್ರನು 3 : 3 (OCVKN)
ಕಡೇ ದಿವಸಗಳಲ್ಲಿ ತಮ್ಮ ದುರಾಶೆಗಳ ಪ್ರಕಾರ ನಡೆಯುವ ಕುಚೋದ್ಯಗಾರರು ಬಂದು,
2 ಪೇತ್ರನು 3 : 4 (OCVKN)
“ಆತನ ಪ್ರತ್ಯಕ್ಷತೆಯ ವಿಷಯವಾದ ವಾಗ್ದಾನವು ಏನಾಯಿತು? ಪಿತೃಗಳು ನಿದ್ರೆಹೊಂದಿದಂದಿನಿಂದ ಸಮಸ್ತವೂ ಸೃಷ್ಟಿ ಮೊದಲುಗೊಂಡು ಹಾಗೆಯೇ ಇರುತ್ತದಲ್ಲಾ?” ಎಂದು ಕುಚೋದ್ಯದಿಂದ ಕೇಳುವರೆಂದು ನೀವು ಮೊದಲು ತಿಳಿದುಕೊಳ್ಳಬೇಕು.
2 ಪೇತ್ರನು 3 : 5 (OCVKN)
ಆದರೆ ಪೂರ್ವಕಾಲದಲ್ಲಿ ದೇವರ ವಾಕ್ಯದಿಂದ ಆಕಾಶವು ಅಸ್ತಿತ್ವಕ್ಕೆ ಬಂದಿತು ಎಂತಲೂ ಜಲದಿಂದ ಜಲದ ಮೂಲಕ ಭೂಮಿಯು ಉಂಟಾಯಿತೆಂಬುದನ್ನು ಅವರು ಬೇಕೆಂತಲೇ ಮರೆತುಬಿಡುತ್ತಾರೆ.
2 ಪೇತ್ರನು 3 : 6 (OCVKN)
ಈ ಜಲದಿಂದ ಆ ಸಮಯದಲ್ಲಿ ಜಗತ್ತು ಪ್ರಳಯದಲ್ಲಿ ನಾಶವಾಯಿತು.
2 ಪೇತ್ರನು 3 : 7 (OCVKN)
ಆದರೆ ಈಗಿನ ಆಕಾಶವೂ ಭೂಮಿಯೂ ಅದೇ ವಾಕ್ಯದಿಂದ ಬೆಂಕಿಗಾಗಿ ಕಾದಿರಿಸಲಾಗಿವೆ. ಅವು ನ್ಯಾಯತೀರ್ಪಿಗಾಗಿ ಮತ್ತು ಭಕ್ತಿಹೀನರ ನಾಶನಕ್ಕಾಗಿ ಇಡಲಾಗಿವೆ.
2 ಪೇತ್ರನು 3 : 8 (OCVKN)
ಆದರೆ ಪ್ರಿಯರೇ, ಕರ್ತದೇವರ ಎಣಿಕೆಯಲ್ಲಿ ಒಂದು ದಿನವು ಸಾವಿರ ವರ್ಷಗಳಂತೆಯೂ ಸಾವಿರ ವರ್ಷಗಳು ಒಂದು ದಿನದಂತೆಯೂ ಇವೆ ಎಂಬುದನ್ನು ಮಾತ್ರ ಮರೆಯಬೇಡಿರಿ.
2 ಪೇತ್ರನು 3 : 9 (OCVKN)
ಕರ್ತದೇವರು ತಮ್ಮ ವಾಗ್ದಾನದ ವಿಷಯವಾಗಿ ತಡಮಾಡುತ್ತಾರೆಂಬದಾಗಿ ಕೆಲವರು ಎಣಿಸುವ ಪ್ರಕಾರ ಅವರು ತಡಮಾಡುವವರಲ್ಲ. ಆದರೆ ಯಾವನಾದರೂ ನಾಶವಾಗುವುದರಲ್ಲಿ ಅವರು ಇಷ್ಟಪಡದೆ ಎಲ್ಲರೂ ಪಶ್ಚಾತ್ತಾಪಡಬೇಕೆಂದು ಅಪೇಕ್ಷಿಸುವವರಾಗಿದ್ದು ನಮ್ಮ ಕಡೆಗೆ ದೀರ್ಘಶಾಂತರಾಗಿದ್ದಾರೆ.
2 ಪೇತ್ರನು 3 : 10 (OCVKN)
2 ಪೇತ್ರನು 3 : 11 (OCVKN)
ಆದರೂ ಕರ್ತ ಯೇಸುವಿನ ದಿನವು ರಾತ್ರಿಯಲ್ಲಿ ಕಳ್ಳನು ಬರುವಂತೆ ಬರುತ್ತದೆ. ಆ ದಿನದಲ್ಲಿ ಆಕಾಶಗಳು ಮಹಾಘೋಷದಿಂದ ಇಲ್ಲದೆ ಹೋಗುವವು. ಅತಿ ಉಷ್ಣದಿಂದ ಪಂಚಭೂತಗಳು ಉರಿದು ಲಯವಾಗಿ ಹೋಗುವವು. ಭೂಮಿಯೂ ಅದರಲ್ಲಿರುವ ಕೆಲಸಗಳೂ ಸುಟ್ಟು ಹೋಗುವವು. ಇವೆಲ್ಲವುಗಳು ಹೀಗೆ ಲಯವಾಗಿ ಹೋಗುವುದರಿಂದ ನೀವು ಎಷ್ಟೋ ಪರಿಶುದ್ಧವಾದ ನಡವಳಿಕೆಯೂ ಭಕ್ತಿಯೂ ಉಳ್ಳವರಾಗಿರಬೇಕು.
2 ಪೇತ್ರನು 3 : 12 (OCVKN)
ದೇವರ ದಿನದ ಪ್ರತ್ಯಕ್ಷತೆಯನ್ನು ಎದುರುನೋಡುತ್ತಾ ಆತುರಪಡುವ ಆ ದಿನದಲ್ಲಿ ಆಕಾಶಗಳು ಬೆಂಕಿಹತ್ತಿ ಲಯವಾಗಿ ಹೋಗುವವು. ಅತಿ ಉಷ್ಣದಿಂದ ಪಂಚಭೂತಗಳು ಉರಿದು ಕರಗಿ ಹೋಗುವವಲ್ಲವೇ?
2 ಪೇತ್ರನು 3 : 13 (OCVKN)
ಆದರೂ ನಾವು ದೇವರ ವಾಗ್ದಾನದ ಪ್ರಕಾರ ನೂತನ ಆಕಾಶಗಳನ್ನೂ ನೂತನ ಭೂಮಿಯನ್ನೂ ಎದುರುನೋಡುತ್ತಾ ಇದ್ದೇವೆ. ಅವುಗಳಲ್ಲಿ ನೀತಿಯು ವಾಸವಾಗಿರುವುದು.
2 ಪೇತ್ರನು 3 : 14 (OCVKN)
ಆದಕಾರಣ ಪ್ರಿಯ ಸ್ನೇಹಿತರೇ, ನೀವು ಇಂಥವುಗಳನ್ನು ಎದುರು ನೋಡುವವರಾಗಿರುವುದರಿಂದ ಸಮಾಧಾನದಲ್ಲಿದ್ದು ನಿರ್ಮಲರಾಗಿಯೂ ನಿರ್ದೋಷಿಗಳಾಗಿಯೂ ಅವರಿಗೆ ಕಾಣಿಸಿಕೊಳ್ಳುವಂತೆ ಜಾಗ್ರತೆಯುಳ್ಳವರಾಗಿರಿ.
2 ಪೇತ್ರನು 3 : 15 (OCVKN)
ನಮ್ಮ ಕರ್ತದೇವರ ದೀರ್ಘಶಾಂತಿಯು ನಮ್ಮ ರಕ್ಷಣೆಯ ಕಾರಣಕ್ಕಾಗಿ ಇದೆ ಎಂದು ಎಣಿಸಿಕೊಳ್ಳಿರಿ. ನಮ್ಮ ಪ್ರಿಯ ಸಹೋದರನಾದ ಪೌಲನು ಸಹ ತನಗೆ ಅನುಗ್ರಹಿಸಿರುವ ಜ್ಞಾನದ ಪ್ರಕಾರ ನಿಮಗೆ ಬರೆದಿದ್ದಾನೆ.
2 ಪೇತ್ರನು 3 : 16 (OCVKN)
ಅವನು ತನ್ನ ಎಲ್ಲಾ ಪತ್ರಿಕೆಗಳಲ್ಲಿಯೂ ಈ ವಿಷಯಗಳನ್ನು ಕುರಿತು ಹೇಳಿದ್ದಾನೆ. ಆ ಪತ್ರಗಳಲ್ಲಿರುವ ಕೆಲವು ವಿಷಯಗಳು ತಿಳಿಯುವುದಕ್ಕೆ ಕಷ್ಟವಾಗಿವೆ. ಪವಿತ್ರ ವೇದದ ಮಿಕ್ಕಾದ ಭಾಗಗಳಿಗೆ ಸಹ ತಪ್ಪಾದ ಅರ್ಥಮಾಡಿಕೊಂಡ ಹಾಗೆಯೇ ವಿದ್ಯಾಹೀನರೂ ಚಪಲಚಿತ್ತರೂ ಇವುಗಳಿಗೂ ತಪ್ಪಾದ ಅರ್ಥಮಾಡಿಕೊಂಡು ತಮಗೆ ನಾಶವನ್ನುಂಟುಮಾಡಿಕೊಳ್ಳುತ್ತಾರೆ.
2 ಪೇತ್ರನು 3 : 17 (OCVKN)
ಆದಕಾರಣ ಪ್ರಿಯರೇ, ನೀವು ಈ ಸಂಗತಿಗಳನ್ನು ಮುಂದಾಗಿ ತಿಳಿದುಕೊಂಡಿರುವುದರಿಂದ ನಿಯಮರಹಿತರ ಸೆಳೆಯುವಿಕೆಗೆ ಮರುಳಾಗಿ ನಿಮ್ಮ ಸ್ಥಿರತೆಯಿಂದ ಬಿದ್ದುಹೋಗದಂತೆ ಎಚ್ಚರಿಕೆಯಿಂದಿರಿ.
2 ಪೇತ್ರನು 3 : 18 (OCVKN)
ನೀವು ಕೃಪೆಯಲ್ಲಿ ಬೆಳೆಯಿರಿ ಮತ್ತು ನಮಗೆ ಕರ್ತ ಹಾಗೂ ರಕ್ಷಕ ಆಗಿರುವ ಕ್ರಿಸ್ತ ಯೇಸುವಿನ ವಿಷಯವಾದ ಜ್ಞಾನದಲ್ಲಿಯೂ ಬೆಳೆಯಿರಿ. ಅವರಿಗೆ ಈಗಲೂ ಸರ್ವಕಾಲವೂ ಮಹಿಮೆ ಇರಲಿ! ಆಮೆನ್.

1 2 3 4 5 6 7 8 9 10 11 12 13 14 15 16 17 18