2 ಅರಸುಗಳು 11 : 1 (OCVKN)
ಅತಲ್ಯಳು ಹಾಗೂ ಯೋವಾಷ್ ಅಹಜ್ಯನ ತಾಯಿಯಾದ ಅತಲ್ಯಳು ತನ್ನ ಮಗನು ಸತ್ತು ಹೋದದ್ದನ್ನು ಕಂಡಾಗ, ಅವಳು ಎದ್ದು ರಾಜಸಂತಾನದವರನ್ನೆಲ್ಲಾ ನಾಶಮಾಡಲು ಆರಂಭಿಸಿದಳು.
2 ಅರಸುಗಳು 11 : 2 (OCVKN)
ಆದರೆ ಅರಸನಾದ ಯೆಹೋರಾಮನ* ಯೆಹೋರಾಮ ಅಥವಾ ಯೋರಾಮ ಮಗಳೂ ಅಹಜ್ಯನ ಸಹೋದರಿಯೂ ಆದ ಯೆಹೋಷೆಬಳು ಹತರಾಗುವುದಕ್ಕಿದ್ದ ಅರಸನ ಮಕ್ಕಳ ಮಧ್ಯದಿಂದ ಅಹಜ್ಯನ ಮಗನಾದ ಯೋವಾಷನನ್ನು ಕದ್ದುಕೊಂಡು ಹೋಗಿ ಅವನು ಹತನಾಗದ ಹಾಗೆ ಅವನನ್ನೂ ಅವನ ದಾದಿಯನ್ನೂ ಅತಲ್ಯಳಿಗೆ ಕಾಣದ ಹಾಗೆ ಮಲಗುವ ಕೋಣೆಯಲ್ಲಿ ಬಚ್ಚಿಟ್ಟಳು.
2 ಅರಸುಗಳು 11 : 3 (OCVKN)
ಹೀಗೆ ಅವನು ಯೆಹೋಷೆಬಳ ಸಂಗಡ ಆರು ವರ್ಷ ಯೆಹೋವ ದೇವರ ಆಲಯದಲ್ಲಿ ಗುಪ್ತವಾಗಿದ್ದನು, ಈ ಆರು ವರ್ಷ ಅತಲ್ಯಳು ದೇಶವನ್ನು ಆಳುತ್ತಾ ಇದ್ದಳು.
2 ಅರಸುಗಳು 11 : 4 (OCVKN)
ಏಳನೆಯ ವರ್ಷದಲ್ಲಿ ಯೆಹೋಯಾದಾವನು ಶತಾಧಿಪತಿಯಾದವರನ್ನೂ, ಕಾರಿ ಎಂಬ ಸಿಪಾಯಿಗಳ ಅಧಿಪತಿಗಳನ್ನೂ ಕಾವಲುಗಾರರ ಸಹಿತವಾಗಿ ಕರೆಯಿಸಿ, ತನ್ನ ಬಳಿಗೆ ಯೆಹೋವ ದೇವರ ಆಲಯಕ್ಕೆ ಕರೆದುಕೊಂಡು ಬಂದನು. ಅವರ ಸಂಗಡ ಒಡಂಬಡಿಕೆಯನ್ನು ಮಾಡಿ, ಯೆಹೋವ ದೇವರ ಆಲಯದಲ್ಲಿ ಅವರಿಂದ ಪ್ರಮಾಣ ತೆಗೆದುಕೊಂಡು, ಅನಂತರ ಅವನಿಗೆ ಅರಸನ ಮಗನನ್ನು ತೋರಿಸಿದನು.
2 ಅರಸುಗಳು 11 : 5 (OCVKN)
ಅವರಿಗೆ, “ನೀವು ಮಾಡಬೇಕಾದದ್ದೇನೆಂದರೆ, ಸಬ್ಬತ್ ದಿನದಲ್ಲಿ ಪ್ರವೇಶಿಸುವ ನಿಮ್ಮಲ್ಲಿರುವ ಮೂರನೇ ಒಂದು ಭಾಗವು ಅರಮನೆಯ ಕಾವಲುಗಾರರಾಗಿರಬೇಕು.
2 ಅರಸುಗಳು 11 : 6 (OCVKN)
ಇನ್ನೊಂದು ಭಾಗವು ಸೂರ್ ಎಂಬ ಬಾಗಿಲ ಬಳಿಯಲ್ಲಿಯೂ, ಮತ್ತೊಂದು ಭಾಗವು ಕಾವಲಿನ ಹಿಂದೆ ಇರುವ ಬಾಗಿಲ ಬಳಿಯಲ್ಲಿಯೂ ಇರಿ. ಹೀಗೆಯೇ ದೇವಾಲಯ ಕಾವಲು ಮುರಿಯದ ಹಾಗೆ ಅದನ್ನು ಕಾಯಿರಿ.
2 ಅರಸುಗಳು 11 : 7 (OCVKN)
ಇದಲ್ಲದೆ ಸಬ್ಬತ್ ದಿನದಲ್ಲಿ ಹೊರಡುವ ನಿಮ್ಮೆಲ್ಲರಲ್ಲಿ ಎರಡು ಭಾಗ ಯೆಹೋವ ದೇವರ ಆಲಯದಲ್ಲಿರುವ ಅರಸನನ್ನು ಕಾಯುವವರಾಗಿರಿ.
2 ಅರಸುಗಳು 11 : 8 (OCVKN)
ನಿಮ್ಮಲ್ಲಿ ಪ್ರತಿ ಮನುಷ್ಯನು ತನ್ನ ಕೈಯಲ್ಲಿ ಆಯುಧಗಳನ್ನು ಹಿಡಿದುಕೊಂಡು ಅರಸನ ಸುತ್ತಲೂ ಇರಬೇಕು. ಯಾವನಾದರೂ ನಿಮ್ಮ ಸಾಲುಗಳಲ್ಲಿ ನುಗ್ಗುವಂಥವನನ್ನು ಸಂಹರಿಸಬೇಕು. ಆದರೆ ಅರಸನು ಹೊರಗೆ ಹೋಗುವಾಗಲೂ, ಒಳಗೆ ಬರುವಾಗಲೂ ನೀವು ಅವನ ಜೊತೆಯಲ್ಲಿಯೇ ಇರಬೇಕು,” ಎಂದು ಆಜ್ಞಾಪಿಸಿದನು.
2 ಅರಸುಗಳು 11 : 9 (OCVKN)
ಯಾಜಕನಾದ ಯೆಹೋಯಾದಾವನು ಆಜ್ಞಾಪಿಸಿದ ಪ್ರಕಾರ ಶತಾಧಿಪತಿಗಳು ಮಾಡಿದರು. ಪ್ರತಿ ಮನುಷ್ಯನು ಸಬ್ಬತ್ ದಿನದಲ್ಲಿ ಮನೆಗೆ ಹೋಗತಕ್ಕ ಮತ್ತು ಬರತಕ್ಕ ಸಿಪಾಯಿಗಳನ್ನು ಯೆಹೋಯಾದಾವನ ಬಳಿಗೆ ಕರೆದುಕೊಂಡು ಬಂದರು.
2 ಅರಸುಗಳು 11 : 10 (OCVKN)
ಆಗ ಯಾಜಕನು ಯೆಹೋವ ದೇವರ ಆಲಯದಲ್ಲಿದ್ದ ಅರಸನಾದ ದಾವೀದನ ಈಟಿಗಳನ್ನೂ, ಗುರಾಣಿಗಳನ್ನೂ ಶತಾಧಿಪತಿಗಳಿಗೆ ಕೊಟ್ಟನು.
2 ಅರಸುಗಳು 11 : 11 (OCVKN)
ಕಾವಲುಗಾರರಲ್ಲಿ ಪ್ರತಿ ಮನುಷ್ಯನು ತನ್ನ ಆಯುಧಗಳನ್ನು ಕೈಯಲ್ಲಿ ಹಿಡಿದುಕೊಂಡು ಬಲಿಪೀಠದ ಬಳಿಯಲ್ಲಿಯೂ, ಆಲಯದ ಬಳಿಯಲ್ಲಿಯೂ, ಆಲಯದ ಬಲಗಡೆಯ ಮೊದಲುಗೊಂಡು, ಆಲಯದ ಎಡಗಡೆಯವರೆಗೂ ಅರಸನ ಸುತ್ತಲೂ ನಿಂತುಕೊಂಡರು.
2 ಅರಸುಗಳು 11 : 12 (OCVKN)
2 ಅರಸುಗಳು 11 : 13 (OCVKN)
ಆಗ ಯೆಹೋಯಾದಾವನು ರಾಜಪುತ್ರನನ್ನು ಹೊರಗೆ ಕರೆತಂದು, ಅವನ ತಲೆಯ ಮೇಲೆ ಕಿರೀಟವನ್ನಿಟ್ಟು, ಕೈಗೆ ದೇವರ ನಿಯಮ ಗ್ರಂಥವನ್ನು ಕೊಟ್ಟು, ಅರಸನನ್ನಾಗಿ ಮಾಡಿ ಅವನನ್ನು ಅಭಿಷೇಕಿಸಿದರು. ಕೂಡಲೆ ಜನರು ಚಪ್ಪಾಳೆ ಹೊಡೆದು, “ಅರಸನು ಚಿರಂಜೀವಿಯಾಗಿರಲಿ!” ಎಂದು ಹರಸಿದರು. ಅತಲ್ಯಳು ಕಾವಲುಗಾರರ ಮತ್ತು ಜನರ ಶಬ್ದವನ್ನೂ ಕೇಳಿದಾಗ, ಯೆಹೋವ ದೇವರ ಆಲಯದಲ್ಲಿ ಜನರ ಬಳಿಗೆ ಬಂದಳು.
2 ಅರಸುಗಳು 11 : 14 (OCVKN)
ಅಲ್ಲಿ ಅರಸನು ಪದ್ಧತಿಯ ಪ್ರಕಾರ ಕಂಬದ ಬಳಿಯಲ್ಲಿ ನಿಂತಿದ್ದನು. ಪ್ರಧಾನರೂ, ತುತೂರಿ ಊದುವವರೂ ಅರಸನ ಬಳಿಯಲ್ಲಿ ನಿಂತಿದ್ದರು. ಇದಲ್ಲದೆ ದೇಶದ ಜನರೆಲ್ಲರೂ ಸಂತೋಷಪಟ್ಟು ತುತೂರಿಗಳನ್ನು ಊದುತ್ತಿದ್ದರು. ಇದನ್ನು ಕಂಡ ಕೂಡಲೆ ಅತಲ್ಯಳು ತನ್ನ ವಸ್ತ್ರಗಳನ್ನು ಹರಿದುಕೊಂಡು, “ದ್ರೋಹ! ದ್ರೋಹ!” ಎಂದು ಕೂಗಿದಳು.
2 ಅರಸುಗಳು 11 : 15 (OCVKN)
ಆಗ ಯಾಜಕನಾದ ಯೆಹೋಯಾದಾವನು ಸೈನ್ಯದ ಮೇಲೆ ಇರುವ ಶತಾಧಿಪತಿಗಳಿಗೆ, “ಅವಳನ್ನು ಯೆಹೋವ ದೇವರ ಆಲಯದಲ್ಲಿ ಕೊಲ್ಲಬೇಡಿರಿ, ಎರಡು ಸಾಲು ಸಿಪಾಯಿಗಳು ಅವಳನ್ನು ನಡುವೆ ಸಾಗಿಸಿಕೊಂಡು ಹೋಗಿ ಹೊರಗೆ ತಳ್ಳಲಿ ಮತ್ತು ಅವಳನ್ನು ಹಿಂಬಾಲಿಸುವಂಥವರನ್ನು ಖಡ್ಗದಿಂದ ಕೊಂದುಹಾಕಿರಿ,” ಎಂದು ಆಜ್ಞಾಪಿಸಿದನು.
2 ಅರಸುಗಳು 11 : 16 (OCVKN)
ಆಗ ಅವರು ಅವಳನ್ನು ಅಧೀನಕ್ಕೆ ತೆಗೆದುಕೊಂಡು, ಕುದುರೆಗಳು ಅರಸನ ಮನೆಯೊಳಕ್ಕೆ ಬರುವ ಮಾರ್ಗದಲ್ಲಿ ಅವಳನ್ನು ಕೊಂದುಹಾಕಿದರು.
2 ಅರಸುಗಳು 11 : 17 (OCVKN)
ಅನಂತರ ಯೆಹೋವ ದೇವರ ಜನರಾಗಿರುವಂತೆ ಯೆಹೋಯಾದಾವನು ಯೆಹೋವ ದೇವರಿಗೂ, ಅರಸನಿಗೂ, ಜನರಿಗೂ ಮಧ್ಯೆ ಒಡಂಬಡಿಕೆ ಮಾಡಿದನು. ಹಾಗೆಯೇ ಅರಸನಿಗೂ, ಜನರಿಗೂ ಮಧ್ಯದಲ್ಲಿ ಒಡಂಬಡಿಕೆ ಮಾಡಿಸಿದನು.
2 ಅರಸುಗಳು 11 : 18 (OCVKN)
ದೇಶದ ಜನರೆಲ್ಲರೂ ಬಾಳನ ದೇವಸ್ಥಾನಕ್ಕೆ ಹೋಗಿ ಅದನ್ನು ಕೆಡವಿಹಾಕಿ, ಅದರ ಬಲಿಪೀಠಗಳನ್ನೂ, ವಿಗ್ರಹಗಳನ್ನೂ ಸಂಪೂರ್ಣವಾಗಿ ತುಂಡುತುಂಡಾಗಿ ಒಡೆದುಬಿಟ್ಟು, ಬಲಿಪೀಠಗಳ ಮುಂದೆ ಬಾಳನ ಯಾಜಕನಾದ ಮತ್ತಾನನನ್ನು ಕೊಂದುಹಾಕಿದರು. ಆಗ ಯಾಜಕನಾದ ಯೆಹೋಯಾದಾವನು ಯೆಹೋವ ದೇವರ ಆಲಯಕ್ಕೆ ಕಾವಲುಗಾರರನ್ನು ನೇಮಿಸಿದನು.
2 ಅರಸುಗಳು 11 : 19 (OCVKN)
ಅವನು ಶತಾಧಿಪತಿಗಳನ್ನೂ, “ಕಾರಿ” ಎಂಬ ಸಿಪಾಯಿಗಳ ಅಧಿಕಾರಿಗಳನ್ನೂ, ಕಾವಲುಗಾರರನ್ನೂ, ದೇಶದ ಜನರೆಲ್ಲರನ್ನೂ ಕರೆದುಕೊಂಡು ಹೋಗಿ, ಅರಸನನ್ನು ಯೆಹೋವ ದೇವರ ಆಲಯದಿಂದ ಕಾವಲುಗಾರರ ಬಾಗಿಲ ಮಾರ್ಗವಾಗಿ ಅರಮನೆಗೆ ಕರೆದುಕೊಂಡು ಬಂದು, ರಾಜಸಿಂಹಾಸನದ ಮೇಲೆ ಕುಳ್ಳಿರಿಸಿದನು.
2 ಅರಸುಗಳು 11 : 20 (OCVKN)
ಅತಲ್ಯಳನ್ನು ಅರಮನೆಯ ಬಳಿಯಲ್ಲಿ ಖಡ್ಗದಿಂದ ಕೊಂದುಹಾಕಿದ್ದರಿಂದ ದೇಶದ ಜನರೆಲ್ಲರೂ ಸಂತೋಷಪಟ್ಟರು, ಪಟ್ಟಣವು ಶಾಂತವಾಯಿತು.
2 ಅರಸುಗಳು 11 : 21 (OCVKN)
ಯೋವಾಷ್ ಯೋವಾಷ್ ಅಥವಾ ಯೆಹೋವಾಷ್ ಅರಸನಾದಾಗ ಏಳು ವರ್ಷದವನಾಗಿದ್ದನು.

1 2 3 4 5 6 7 8 9 10 11 12 13 14 15 16 17 18 19 20 21