2 ಕೊರಿಂಥದವರಿಗೆ 9 : 1 (OCVKN)
ದೇವಜನರಿಗೆ ಸಹಾಯ ಮಾಡುವುದನ್ನು ಕುರಿತು ನಾನು ನಿಮಗೆ ಬರೆಯುವ ಅವಶ್ಯವಿಲ್ಲ.
2 ಕೊರಿಂಥದವರಿಗೆ 9 : 2 (OCVKN)
ಅಖಾಯದಲ್ಲಿರುವ ನೀವು ಕಳೆದ ಒಂದು ವರ್ಷದಿಂದ ಉದಾರವಾಗಿ ದಾನ ಮಾಡಲು ಸಿದ್ಧರಾಗಿದ್ದೀರಿ ಎಂಬ ವಿಷಯವನ್ನು ಮಕೆದೋನ್ಯದವರ ಮುಂದೆ ನಿಮ್ಮನ್ನು ಹೊಗಳಿದ್ದೇನೆ. ನಿಮ್ಮ ಆಸಕ್ತಿಯನ್ನು ಕೇಳಿ ಮಕೆದೋನ್ಯದವರಲ್ಲಿ ಎಷ್ಟೋ ಮಂದಿ ಕಾರ್ಯರೂಪಕ್ಕೆ ಉತ್ತೇಜನಗೊಂಡಿರುತ್ತಾರೆ.
2 ಕೊರಿಂಥದವರಿಗೆ 9 : 3 (OCVKN)
ಆದರೂ ಈ ವಿಷಯದಲ್ಲಿ ನಿಮ್ಮ ಬಗ್ಗೆ ನಮಗಿರುವ ಹೊಗಳಿಕೆಯು ಸುಳ್ಳಾಗಿರಬಾರದೆಂದು ಸಹೋದರರನ್ನು ನಿಮ್ಮ ಬಳಿಗೆ ಕಳುಹಿಸುತ್ತಿದ್ದೇನೆ. ನೀವು ಸಹ ನಾನು ನಿಮಗೆ ಹೇಳಿದಂತೆ, ಇದಕ್ಕಾಗಿ ಸಿದ್ಧರಾಗಿರುವಿರಿ ಎಂದು ಭಾವಿಸುತ್ತೇನೆ.
2 ಕೊರಿಂಥದವರಿಗೆ 9 : 4 (OCVKN)
ಏಕೆಂದರೆ, ಮಕೆದೋನ್ಯದವರಲ್ಲಿ ಯಾರಾದರೂ ನನ್ನ ಜೊತೆಯಲ್ಲಿ ಬಂದು, ನೀವು ಇನ್ನೂ ಸಿದ್ಧರಿಲ್ಲದೆ ಇರುವುದನ್ನು ಕಂಡರೆ, ನಿಮಗೆ ಬೇಸರವಾಗುವುದಲ್ಲದೆ, ನಿಮ್ಮ ಬಗ್ಗೆ ಭರವಸೆಯಿಟ್ಟಿರುವುದಕ್ಕೆ ನಾವು ಸಹ ನಾಚಿಕೆಪಡುವ ಸನ್ನಿವೇಶ ಬರಬಾರದು.
2 ಕೊರಿಂಥದವರಿಗೆ 9 : 5 (OCVKN)
ಆದ್ದರಿಂದ ಸಹೋದರರನ್ನು ಮುಂಚಿತವಾಗಿ ಹೋಗುವುದಕ್ಕೆ ನಾನು ಏರ್ಪಾಡು ಮಾಡಬೇಕಾಯಿತು. ಅವರು ಬಂದು ನೀವು ವಾಗ್ದಾನಮಾಡಿದ ಕೊಡುಗೆಯನ್ನು ಸಂಗ್ರಹಿಸುವ ಕಾರ್ಯವನ್ನು ಮುಗಿಸುವರು. ಹೀಗೆ ಈ ಉದಾರವಾಗಿರುವ ದಾನವು ಬಲಾತ್ಕಾರದ ವಸೂಲಿಯಾಗಿರದೆ ಮನಃಪೂರ್ವಕವಾಗಿ ಕೊಟ್ಟಿರುವ ಸಹಾಯ ಧನವಾಗಿರುವುದು.
2 ಕೊರಿಂಥದವರಿಗೆ 9 : 6 (OCVKN)
ಉದಾರತೆಯ ಚಿಂತನೆ ಸ್ವಲ್ಪವಾಗಿ ಬಿತ್ತುವವನು ಸ್ವಲ್ಪವಾಗಿ ಕೊಯ್ಯುವನು, ಹೆಚ್ಚಾಗಿ ಬಿತ್ತುವವನು ಹೆಚ್ಚಾಗಿ ಕೊಯ್ಯುವನು ಎಂಬ ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳಿರಿ.
2 ಕೊರಿಂಥದವರಿಗೆ 9 : 7 (OCVKN)
ಪ್ರತಿಯೊಬ್ಬನೂ ತನ್ನ ಮನಸ್ಸಿನಲ್ಲಿ ನಿರ್ಧರಿಸಿದ್ದನ್ನು ಕೊಡಲಿ. ಮನಸ್ಸಿಲ್ಲದ ಮನಸ್ಸಿನಿಂದಾಗಲಿ ಅಥವಾ ಬಲವಂತದಿಂದಾಗಲಿ ಕೊಡಬಾರದು. ಏಕೆಂದರೆ ಸಂತೋಷದಿಂದ ಕೊಡುವವನನ್ನು ದೇವರು ಪ್ರೀತಿಸುತ್ತಾರೆ.
2 ಕೊರಿಂಥದವರಿಗೆ 9 : 8 (OCVKN)
ದೇವರು ಸಕಲ ವಿಧವಾದ ಕೃಪೆಯನ್ನು ನಿಮಗೆ ಧಾರಾಳವಾಗಿ ಅನುಗ್ರಹಿಸುವುದಕ್ಕೆ ಶಕ್ತರಾಗಿರುವುದರಿಂದ ನೀವು ಯಾವಾಗಲೂ ಎಲ್ಲಾ ವಿಷಯಗಳಲ್ಲಿಯೂ ಪರಿಪೂರ್ಣತೆಯುಳ್ಳವರಾಗಿ ಸಕಲ ಸತ್ಕಾರ್ಯಗಳನ್ನು ಹೇರಳವಾಗಿ ಮಾಡುವವರಾಗಿರಿ.
2 ಕೊರಿಂಥದವರಿಗೆ 9 : 9 (OCVKN)
ಪವಿತ್ರ ವೇದದಲ್ಲಿ ಬರೆದಿರುವ ಪ್ರಕಾರ, “ಅವರು ಬಡವರಿಗೆ ದಾನಗಳನ್ನು ಧಾರಾಳವಾಗಿ ಹಂಚಿಕೊಟ್ಟರು; ಅವರ ನೀತಿಯು ಸದಾಕಾಲವೂ ನೆಲೆಯಾಗಿ ಇರುವುದು.”* ಕೀರ್ತನೆ 112:9
2 ಕೊರಿಂಥದವರಿಗೆ 9 : 10 (OCVKN)
10 ಬಿತ್ತುವವನಿಗೆ ಬೀಜವನ್ನು, ಉಣ್ಣುವವನಿಗೆ ಊಟವನ್ನು ಒದಗಿಸುವ ದೇವರು ನಿಮಗೂ ಬಿತ್ತುವುದಕ್ಕೆ ಬೀಜವನ್ನು ಕೊಟ್ಟು, ಹೆಚ್ಚಿಸಿ ನಿಮ್ಮ ನೀತಿಯ ಸುಗ್ಗಿಯನ್ನು ವೃದ್ಧಿಪಡಿಸುವರು.
2 ಕೊರಿಂಥದವರಿಗೆ 9 : 11 (OCVKN)
ನೀವು ಸದಾ ಉದಾರಿಗಳಾಗುವಂತೆ ನಿಮ್ಮನ್ನು ಎಲ್ಲಾ ವಿಷಯಗಳಲ್ಲಿಯೂ ಸಿರಿವಂತರನ್ನಾಗಿ ಮಾಡುವನು. ನಿಮ್ಮ ಕೊಡುಗೆಯು ನಮ್ಮ ಸೇವೆಯ ಮೂಲಕ ಬೇರೆಯವರಿಗೆ ಮುಟ್ಟಿ, ಅವರು ದೇವರನ್ನು ಕೃತಜ್ಞತೆಯಿಂದ ಸ್ಮರಿಸುವಂತೆ ನಡೆಸುವುದು.
2 ಕೊರಿಂಥದವರಿಗೆ 9 : 12 (OCVKN)
ಈ ನಿಮ್ಮ ಸೇವೆಯು ಬರೀ ದೇವಜನರ ಕೊರತೆಯನ್ನು ನೀಗಿಸುವುದು ಮಾತ್ರವಲ್ಲ, ಅನೇಕರು ದೇವರಿಗೆ ತುಂಬಿ ಹರಿಯುವಷ್ಟು ಕೃತಜ್ಞತಾಸ್ತುತಿ ಸಲ್ಲಿಸುವಂತೆ ಮಾಡುವುದು.
2 ಕೊರಿಂಥದವರಿಗೆ 9 : 13 (OCVKN)
ನಿಮ್ಮ ಸ್ವಭಾವವನ್ನು ರುಜುಪಡಿಸಿದ ಈ ಸೇವೆಯ ನಿಮಿತ್ತವಾಗಿಯೂ, ಕ್ರಿಸ್ತ ಯೇಸುವಿನ ಸುವಾರ್ತೆಯ ಅರಿಕೆಯನ್ನು ಅನುಸರಿಸುವ ನಿಮ್ಮ ವಿಧೇಯತೆಗಾಗಿಯೂ ಇತರರು ದೇವರನ್ನು ಸ್ತುತಿಸುವರು. ಹೀಗೆ, ನೀವು ಅವರಿಗೂ ಪ್ರತಿಯೊಬ್ಬರಿಗೂ ಎಷ್ಟು ಉದಾರಿಗಳಾಗಿದ್ದೀರಿ ಎಂಬುದನ್ನು ತಿಳಿದುಕೊಳ್ಳುವರು.
2 ಕೊರಿಂಥದವರಿಗೆ 9 : 14 (OCVKN)
ನಿಮಗೆ ದೊರೆತ ಮಿತಿಯಿಲ್ಲದ ದೇವರ ಕೃಪೆಯ ನಿಮಿತ್ತ, ಅವರು ನಿಮ್ಮನ್ನು ಕಾಣುವ ಬಯಕೆಯಿಂದ ನಿಮಗಾಗಿ ಪ್ರಾರ್ಥಿಸುವರು.
2 ಕೊರಿಂಥದವರಿಗೆ 9 : 15 (OCVKN)
ವರ್ಣಿಸಲು ಅಸಾಧ್ಯವಾದ ದೇವರ ಕೃಪಾವರಕ್ಕಾಗಿ ಅವರಿಗೆ ಸ್ತೋತ್ರವಾಗಲಿ!

1 2 3 4 5 6 7 8 9 10 11 12 13 14 15