2 ಕೊರಿಂಥದವರಿಗೆ 8 : 1 (OCVKN)
ಉದಾರತೆಗೆ ಪ್ರೋತ್ಸಾಹ ಪ್ರಿಯರೇ, ಮಕೆದೋನ್ಯದಲ್ಲಿರುವ ಸಭೆಗಳಿಗೆ ದೇವರು ಕೊಟ್ಟಿರುವ ಕೃಪೆಯನ್ನು ಕುರಿತು ನೀವು ತಿಳಿದಿರಬೇಕೆಂದು ನಮ್ಮ ಅಪೇಕ್ಷೆ.
2 ಕೊರಿಂಥದವರಿಗೆ 8 : 2 (OCVKN)
ಅವರು ಘೋರ ಹಿಂಸೆಯ ನಡುವೆಯಿದ್ದರೂ ಕಡುಬಡತನದಲ್ಲಿ ಬಳಲುತ್ತಿದ್ದರೂ ಅವರು ಬಹಳ ಸಂತೋಷದಿಂದ, ಉದಾರಮನಸ್ಸಿನಿಂದ ಕೊಡುವವರಾಗಿದ್ದಾರೆ.
2 ಕೊರಿಂಥದವರಿಗೆ 8 : 3 (OCVKN)
ಅವರು ತಮಗೆ ಸಾಧ್ಯವಾದಷ್ಟು ಕೊಟ್ಟಿದ್ದಾರೆ. ಮಾತ್ರವಲ್ಲದೇ ತಮ್ಮ ಶಕ್ತಿ ಮೀರಿ ಕೊಟ್ಟಿದ್ದಾರೆ ಎಂಬುದಕ್ಕೆ ನಾನೇ ಸಾಕ್ಷಿಯಾಗಿದ್ದೇನೆ.
2 ಕೊರಿಂಥದವರಿಗೆ 8 : 4 (OCVKN)
ದೇವಜನರಿಗೆ ಸಹಾಯಮಾಡಲು ಭಾಗಿಗಳಾಗುವ ಅವಕಾಶವನ್ನು ತಮಗೆ ಕೊಡಬೇಕೆಂದು ಅವರು ತಾವಾಗಿಯೇ ನಮ್ಮನ್ನು ಬಹಳವಾಗಿ ಕೇಳಿಕೊಂಡರು.
2 ಕೊರಿಂಥದವರಿಗೆ 8 : 5 (OCVKN)
ಇವೆಲ್ಲವನ್ನೂ ನಾವು ನೆನಸಿದ್ದಕ್ಕಿಂತಲೂ ಅವರು ಹೆಚ್ಚಾಗಿಯೇ ಮಾಡಿದರು. ಹೇಗೆಂದರೆ ಮೊದಲು ಅವರು ತಮ್ಮನ್ನೇ ಕರ್ತ ಯೇಸುವಿಗೆ ಒಪ್ಪಿಸಿಕೊಟ್ಟರು. ಅನಂತರ ದೇವರ ಚಿತ್ತಾನುಸಾರವಾಗಿ ತಮ್ಮನ್ನು ನಮಗೂ ಒಪ್ಪಿಸಿಕೊಟ್ಟರು.
2 ಕೊರಿಂಥದವರಿಗೆ 8 : 6 (OCVKN)
ಹೀಗಿರಲಾಗಿ, ತೀತನು ಪ್ರಾರಂಭಿಸಿದ ಈ ದಾನ ಕಾರ್ಯವನ್ನು ನಿಮ್ಮಲ್ಲಿ ಸಹ ಪೂರ್ಣಗೊಳಿಸಬೇಕೆಂದು ನಾವು ಅವನನ್ನು ಬಹಳವಾಗಿ ಕೇಳಿಕೊಂಡೆವು.
2 ಕೊರಿಂಥದವರಿಗೆ 8 : 7 (OCVKN)
ಹೇಗೆ ನೀವು ವಿಶ್ವಾಸ, ವಾಕ್ಚಾತುರ್ಯ, ತಿಳುವಳಿಕೆ, ಉತ್ಸಾಹ ಹಾಗೂ ನಮ್ಮ ಮೇಲೆ ನಿಮಗಿರುವ ಪ್ರೀತಿ, ಇವೆಲ್ಲವುಗಳಲ್ಲಿ ನೀವು ಸಮೃದ್ಧರಾಗಿದ್ದಂತೆ, ಈ ದಾನವೆಂಬ ಕೃಪಾಕಾರ್ಯದಲ್ಲಿಯೂ ಸಮೃದ್ಧರಾಗಿರಿ.
2 ಕೊರಿಂಥದವರಿಗೆ 8 : 8 (OCVKN)
ಇದು ನಿಮಗೆ ನನ್ನ ಆಜ್ಞೆಯಲ್ಲ. ಆದರೆ ಇತರರಿಗೆ ನಿಮಗಿರುವ ಈ ಸೇವಾಕಾರ್ಯದ ಉತ್ಸಾಹವನ್ನೂ ನಮ್ಮ ಮೇಲಿರುವ ನಿಮ್ಮ ಪ್ರೀತಿಯು ಎಷ್ಟು ಯಥಾರ್ಥವಾಗಿದೆಯೆಂಬುದನ್ನೂ ಹೋಲಿಕೆಮಾಡಿ ಪರೀಕ್ಷಿಸಿನೋಡಲು ಬಯಸುತ್ತಿದ್ದೇನೆ.
2 ಕೊರಿಂಥದವರಿಗೆ 8 : 9 (OCVKN)
ನಮಗೆ ಕರ್ತ ಆಗಿರುವ ಯೇಸುಕ್ರಿಸ್ತರ ಕೃಪೆಯನ್ನು ನೀವು ಬಲ್ಲವರಾಗಿದ್ದೀರಿ. ಅವರು ಐಶ್ವರ್ಯವಂತರಾಗಿದ್ದರೂ ತಮ್ಮ ಬಡತನದ ಮೂಲಕ ನೀವು ಐಶ್ವರ್ಯವಂತರಾಗುವಂತೆ ಅವರು ನಿಮಗೋಸ್ಕರ ಬಡವರಾದರು.
2 ಕೊರಿಂಥದವರಿಗೆ 8 : 10 (OCVKN)
ಈ ವಿಷಯದಲ್ಲಿ ನನ್ನ ಸಲಹೆ ಏನೆಂದರೆ, ಕಳೆದ ವರ್ಷದಲ್ಲಿ ಮೊದಲು ನೀವೇ ಈ ಕಾರ್ಯವನ್ನು ಪ್ರಾರಂಭಿಸಿದ್ದಲ್ಲದೇ ಇದನ್ನು ಮಾಡಬೇಕೆಂದು ಬಯಸಿದ್ದೀರಿ.
2 ಕೊರಿಂಥದವರಿಗೆ 8 : 11 (OCVKN)
ಆದ್ದರಿಂದ ನೀವು ಎಷ್ಟು ಆಸಕ್ತರಾಗಿ ಪ್ರಾರಂಭಿಸಿದ್ದೀರೋ, ಅಷ್ಟೇ ಆಸಕ್ತಿಯಿಂದ ಅದನ್ನು ಮುಗಿಸಿರಿ. ನಿಮ್ಮ ನಿಮ್ಮ ಶಕ್ತ್ಯಾನುಸಾರವಾಗಿ ಈ ಯೋಜನೆಯನ್ನು ಪೂರ್ಣಗೊಳಿಸಿರಿ.
2 ಕೊರಿಂಥದವರಿಗೆ 8 : 12 (OCVKN)
ಯಾರಿಗಾದರೂ ಕೊಡುವ ಮನಸ್ಸಿದ್ದರೆ, ಅದು ದೇವರ ದೃಷ್ಟಿಯಲ್ಲಿ ಕೊಟ್ಟಂತೆ ಪರಿಗಣಿಸಲಾಗುವುದು. ಏಕೆಂದರೆ ಕೊಡುವವರು ಎಷ್ಟು ಕೊಟ್ಟಿದ್ದಾರೆ ಎಂಬುದು ಪ್ರಾಮುಖ್ಯವಲ್ಲ, ಆದರೆ ಇಲ್ಲದಿರುವುದನ್ನು ದೇವರು ಬಯಸದೇ ಇರುವುದನ್ನು ಕೊಡಬಯಸುತ್ತಾರೆ.
2 ಕೊರಿಂಥದವರಿಗೆ 8 : 13 (OCVKN)
ನಿಮ್ಮನ್ನು ಕಷ್ಟಕ್ಕೆ ಒಳಪಡಿಸಿ, ಬೇರೆಯವರನ್ನು ಕಷ್ಟಕ್ಕೆ ಒಳಪಡಿಸಬಾರದೆಂಬುದು ನಮ್ಮ ಉದ್ದೇಶವಲ್ಲ. ಸಮಾನತ್ವವಿರಬೇಕೆಂಬುದೇ ನಮ್ಮ ಉದ್ದೇಶವಾಗಿದೆ.
2 ಕೊರಿಂಥದವರಿಗೆ 8 : 14 (OCVKN)
ಸದ್ಯದಲ್ಲಿ ನಿಮ್ಮ ಸಮೃದ್ಧಿಯು ಅವರ ಕೊರತೆಯನ್ನು ನೀಗಿಸುವುದು. ಅನಂತರ ಅವರ ಸಮೃದ್ಧಿಯು ನಿಮ್ಮ ಕೊರತೆಯನ್ನು ನೀಗಿಸುವುದು. ಆಗ ಸಮಾನತೆಯ ಗುರಿಯು ಉಂಟಾಗುವುದು.
2 ಕೊರಿಂಥದವರಿಗೆ 8 : 15 (OCVKN)
ಪವಿತ್ರ ವೇದದಲ್ಲಿ ಬರೆದಿರುವಂತೆ: “ಅತಿಯಾಗಿ ಕೂಡಿಸಿದವನಿಗೆ ಹೆಚ್ಚಾಗಲಿಲ್ಲ, ಮಿತವಾಗಿ ಕೂಡಿಸಿದವನಿಗೆ ಕೊರತೆಯಾಗಲಿಲ್ಲ.”* ವಿಮೋ 16:18
2 ಕೊರಿಂಥದವರಿಗೆ 8 : 16 (OCVKN)
ತೀತನನ್ನು ಕೊರಿಂಥಕ್ಕೆ ಕಳುಹಿಸಿದ್ದು ನಿಮ್ಮ ವಿಷಯವಾಗಿ ನನಗಿರುವ ಹಿತಚಿಂತನೆಯನ್ನು ತೀತನ ಹೃದಯದಲ್ಲಿಯೂ ಹುಟ್ಟಿಸಿದ್ದಕ್ಕಾಗಿ ದೇವರಿಗೆ ಕೃತಜ್ಞತೆ ಸಲ್ಲಿಸುತ್ತೇವೆ.
2 ಕೊರಿಂಥದವರಿಗೆ 8 : 17 (OCVKN)
ನಮ್ಮ ವಿನಂತಿಯನ್ನು ತೀತನು ಒಪ್ಪಿಕೊಂಡದ್ದು ಮಾತ್ರವಲ್ಲದೆ, ತನ್ನ ಸ್ವಂತ ಇಚ್ಛೆಯಿಂದ ನಿಮ್ಮಲ್ಲಿಗೆ ಬರಲು ಆಸಕ್ತಿಯಿಂದ ಹೊರಟಿರುತ್ತಾನೆ.
2 ಕೊರಿಂಥದವರಿಗೆ 8 : 18 (OCVKN)
ಅವನೊಂದಿಗೆ ಇನ್ನೊಬ್ಬ ಸಹೋದರನನ್ನೂ ಕಳುಹಿಸುತ್ತಿದ್ದೇನೆ. ಆ ಸಹೋದರನು ಮಾಡಿದ ಸುವಾರ್ತೆ ಸೇವೆಯನ್ನು ಎಲ್ಲಾ ಸಭೆಗಳವರು ಪ್ರಶಂಶಿಸಿದ್ದಾರೆ.
2 ಕೊರಿಂಥದವರಿಗೆ 8 : 19 (OCVKN)
ಅಲ್ಲದೆ, ಕರ್ತ ಯೇಸುವಿನ ಮಹಿಮೆಗಾಗಿಯೂ ಸಹಾಯಮಾಡಬೇಕೆಂಬ ಸದುದ್ದೇಶ ತೋರಿಸುವುದಕ್ಕಾಗಿಯೂ ನಾವು ಸೇವೆಯನ್ನು ನಿರ್ವಹಿಸುತ್ತೇವೆ. ಇದಕ್ಕಾಗಿಯೇ, ನಮ್ಮ ಜೊತೆ ಬಂದು ಸಹಾಯಮಾಡಲು ಸಭೆಗಳಿಂದ ಆಯ್ಕೆಯಾದವನು ಆ ಸಹೋದರನು.
2 ಕೊರಿಂಥದವರಿಗೆ 8 : 20 (OCVKN)
ಹೀಗೆ ನಮ್ಮ ಕೈಗೆ ಒಪ್ಪಿಸಲಾದ ಈ ಉದಾರ ಕೊಡುಗೆಯ ವಿತರಣೆಯ ಕಾರ್ಯದಲ್ಲಿ ಯಾರೂ ನಮ್ಮ ಮೇಲೆ ತಪ್ಪು ಹೊರಿಸಲು ಆಸ್ಪದವಿರಕೂಡದು.
2 ಕೊರಿಂಥದವರಿಗೆ 8 : 21 (OCVKN)
ಏಕೆಂದರೆ, ಕರ್ತ ಯೇಸುವಿನ ದೃಷ್ಟಿಯಲ್ಲಿ ಮಾತ್ರ ಅಲ್ಲ, ಜನರ ದೃಷ್ಟಿಯಲ್ಲಿಯೂ ಯೋಗ್ಯವಾದದ್ದನ್ನು ಮಾಡಬೇಕೆಂಬುದು ನಮ್ಮ ಪ್ರಯಾಸವಾಗಿದೆ.
2 ಕೊರಿಂಥದವರಿಗೆ 8 : 22 (OCVKN)
ಇವರಿಬ್ಬರ ಜೊತೆಯಲ್ಲಿ ನಾವು ನಮ್ಮ ಅನೇಕ ಅನುಭವಗಳಿಂದ ಆಸಕ್ತಿಯುಳ್ಳವನೆಂಬುದನ್ನು ದೃಢಪಡಿಸಿಕೊಂಡ ಬೇರೊಬ್ಬ ಸಹೋದರನನ್ನೂ ಕಳುಹಿಸುತ್ತಿದ್ದೇವೆ. ಅವನು ನಿಮ್ಮ ಬಗ್ಗೆ ಪೂರ್ಣ ಭರವಸೆಯನ್ನಿಟ್ಟು ನಿಮಗೆ ನೆರವಾಗಲು ಇನ್ನೂ ಉತ್ಸುಕತೆಯಲ್ಲಿದ್ದಾನೆ.
2 ಕೊರಿಂಥದವರಿಗೆ 8 : 23 (OCVKN)
ತೀತನು ನನ್ನ ಸಹೋದ್ಯೋಗಿ ಮತ್ತು ನಿಮ್ಮ ನಡುವೆಯಿರುವ ನನ್ನ ಸಹಕಾರಿಯಾಗಿರುತ್ತಾನೆ. ಇವನ ಸಂಗಡ ಬರುತ್ತಿರುವ ನಮ್ಮ ಸಹೋದರರು ಸಭೆಗಳ ಪ್ರತಿನಿಧಿಗಳಾಗಿದ್ದಾರೆ ಮತ್ತು ಕ್ರಿಸ್ತ ಯೇಸುವಿನ ಮಹಿಮೆಗೆ ಕಾರಣಸ್ಥರೂ ಆಗಿದ್ದಾರೆ.
2 ಕೊರಿಂಥದವರಿಗೆ 8 : 24 (OCVKN)
ಆದ್ದರಿಂದ, ಇವರೊಂದಿಗೆ ನಿಮಗಿರುವ ಪ್ರೀತಿಯನ್ನೂ ನಿಮ್ಮ ಬಗ್ಗೆಯಿರುವ ನಮ್ಮ ಹೊಗಳಿಕೆಯನ್ನೂ ಸಭೆಗಳವರ ಮುಂದೆ ರುಜುಪಡಿಸಿ ತೋರಿಸಿರಿ.
❮
❯
1
2
3
4
5
6
7
8
9
10
11
12
13
14
15
16
17
18
19
20
21
22
23
24