2 ಕೊರಿಂಥದವರಿಗೆ 6 : 1 (OCVKN)
ನೀವು ಹೊಂದಿರುವ ದೇವರ ಕೃಪೆಯನ್ನು ವ್ಯರ್ಥಮಾಡಿಕೊಳ್ಳಬೇಡಿರೆಂದು ದೇವರ ಜೊತೆಕೆಲಸದವರಾದ ನಾವು ನಿಮ್ಮಲ್ಲಿ ಬೇಡಿಕೊಳ್ಳುತ್ತೇವೆ,
2 ಕೊರಿಂಥದವರಿಗೆ 6 : 2 (OCVKN)
ಏಕೆಂದರೆ ದೇವರು ಹೇಳಿದ ಹಾಗೆ, “ಪ್ರಸನ್ನತೆಯ ಕಾಲದಲ್ಲಿ ನಿನ್ನ ಪ್ರಾರ್ಥನೆಯನ್ನು ನಾನು ಲಾಲಿಸಿದೆನು. ರಕ್ಷಣೆಯ ದಿನದಲ್ಲಿ ನಾನು ನಿನಗೆ ಸಹಾಯ ಮಾಡಿದೆನು,”* ಯೆಶಾಯ 49:8 ಇಗೋ, ಇದೇ ದೇವರ ಮೆಚ್ಚುಗೆಯ ಕಾಲ, ಈಗಲೇ ರಕ್ಷಣೆಯ ದಿನ.
2 ಕೊರಿಂಥದವರಿಗೆ 6 : 3 (OCVKN)
ಪೌಲನ ಕಷ್ಟಸಂಕಟಗಳು ನಮ್ಮ ಸೇವೆಯು ಅಪವಾದಕ್ಕೆ ಗುರಿಯಾಗದಂತೆ ನಾವು ಯಾರಿಗೂ ಅಡ್ಡಿಯನ್ನು ಒಡ್ಡಲಿಲ್ಲ.
2 ಕೊರಿಂಥದವರಿಗೆ 6 : 4 (OCVKN)
ಅದಕ್ಕೆ ಬದಲಾಗಿ, ಸರ್ವ ವಿಷಯಗಳಲ್ಲಿ ನಾವು ದೇವರ ಸೇವಕರಾಗಿದ್ದೇವೆಂದು ತೋರಿಸುತ್ತೇವೆ. ಕಷ್ಟ, ಸಂಕಟ ತೊಂದರೆಗಳಲ್ಲಿ ಮಹಾ ದೀರ್ಘತಾಳ್ಮೆಯನ್ನು ತೋರಿಸುತ್ತೇವೆ.
2 ಕೊರಿಂಥದವರಿಗೆ 6 : 5 (OCVKN)
ನಾವು ಪೆಟ್ಟು ತಿಂದಿದ್ದೇವೆ, ಸೆರೆವಾಸವಾಗಿದ್ದೇವೆ, ಕಲಹಗಳನ್ನು ಅನುಭವಿಸಿದ್ದೇವೆ, ಶ್ರಮೆಪಟ್ಟು ದುಡಿದಿದ್ದೇವೆ, ರಾತ್ರಿಯಲ್ಲಿ ನಿದ್ರೆಗೆಟ್ಟಿದ್ದೇವೆ, ಊಟವಿಲ್ಲದೆ ಹಸಿದಿದ್ದೇವೆ,
2 ಕೊರಿಂಥದವರಿಗೆ 6 : 6 (OCVKN)
ಪವಿತ್ರಾತ್ಮ ದೇವರ ಸಹಾಯದಿಂದ ಶುದ್ಧ ಮನಸ್ಸು, ತಿಳುವಳಿಕೆ, ಸಹನೆಯು ಮತ್ತು ದಯೆಯಿಂದಕೂಡಿ, ನಿಷ್ಕಪಟ ಪ್ರೀತಿಯಲ್ಲಿ ಜೀವಿಸಿದ್ದೇವೆ.
2 ಕೊರಿಂಥದವರಿಗೆ 6 : 7 (OCVKN)
ಸತ್ಯಮಾತುಗಳಿಂದಲೂ, ದೇವರ ಶಕ್ತಿಯಿಂದಲೂ, ಎಡಬಲಗೈಗಳಲ್ಲಿ ನೀತಿಯ ಆಯುಧಗಳೂ
2 ಕೊರಿಂಥದವರಿಗೆ 6 : 8 (OCVKN)
ಮಾನ ಅವಮಾನಗಳಿಂದಲೂ ಕೀರ್ತಿ ಅಪಕೀರ್ತಿಗಳಿಂದಲೂ ಸತ್ಯವಂತರಾಗಿದ್ದರೂ ಮೋಸಗಾರರೂ ಎಂದೆಣಿಸಿಕೊಂಡವರಾಗಿದ್ದೇವೆ.
2 ಕೊರಿಂಥದವರಿಗೆ 6 : 9 (OCVKN)
ಪ್ರಖ್ಯಾತರಾಗಿದ್ದರೂ ಅಪ್ರಖ್ಯಾತರಾಗಿದ್ದೇವೆ; ಸಾಯುತ್ತಿದ್ದರೂ ನಾವು ಜೀವಿಸುತ್ತಿದ್ದೇವೆ, ನಾವು ಪೆಟ್ಟು ತಿಂದಿದ್ದೇವೆ, ಕೊಲೆಗೆ ಗುರಿಯಾಗಲಿಲ್ಲ.
2 ಕೊರಿಂಥದವರಿಗೆ 6 : 10 (OCVKN)
ದುಃಖ ಪಡುವವರಾಗಿದ್ದರೂ ಹರ್ಷಿಸುತ್ತಿದ್ದೆವು, ಬಡವರಾಗಿದ್ದಾಗಲೂ ಅನೇಕರನ್ನು ಐಶ್ವರ್ಯವಂತರನ್ನಾಗಿ ಮಾಡಿದೆವು, ಏನೂ ಇಲ್ಲದವರಾಗಿದ್ದರೂ ಎಲ್ಲವನ್ನೂ ಪಡೆದವರಾಗಿದ್ದೇವೆ.
2 ಕೊರಿಂಥದವರಿಗೆ 6 : 11 (OCVKN)
ಕೊರಿಂಥದವರೇ, ನಾವು ನಿಮ್ಮೊಂದಿಗೆ ಮುಚ್ಚುಮರೆಯಿಲ್ಲದೆ ಹೇಳಿಕೊಂಡೆವು, ನಮ್ಮ ಹೃದಯವನ್ನು ನಿಮ್ಮೊಂದಿಗೆ ವಿಶಾಲವಾಗಿ ತೆರೆದಿದ್ದೇವೆ.
2 ಕೊರಿಂಥದವರಿಗೆ 6 : 12 (OCVKN)
ನಿಮ್ಮ ಕಡೆಗಿರುವ ನಮ್ಮ ಪ್ರೀತಿಯನ್ನು ನಿಲ್ಲಿಸಲಿಲ್ಲ. ಆದರೆ ನೀವು ನಮಗೆ ತೋರಿಸಬೇಕಾದ ಪ್ರೀತಿಯನ್ನು ತೋರಿಸಲಿಲ್ಲ.
2 ಕೊರಿಂಥದವರಿಗೆ 6 : 13 (OCVKN)
ಆದ್ದರಿಂದ ಮಕ್ಕಳಿಗೆ ಹೇಳುವ ರೀತಿಯಲ್ಲಿ ನಿಮಗೆ ಹೇಳುತ್ತಿದ್ದೇವೆ. ನಾವು ನಿಮ್ಮನ್ನು ಪೂರ್ಣಹೃದಯದಿಂದ ಪ್ರೀತಿಸಿದಂತೆ ನೀವೂ ಪೂರ್ಣಹೃದಯದಿಂದ ನಮ್ಮನ್ನು ಪ್ರೀತಿಸಿರಿ.
2 ಕೊರಿಂಥದವರಿಗೆ 6 : 14 (OCVKN)
ಅವಿಶ್ವಾಸಿಗಳ ಸಂಗಡ ಸೇರಬೇಡಿರಿ ಕ್ರಿಸ್ತ ಯೇಸುವಿನಲ್ಲಿ ನಂಬಿಕೆ ಇಲ್ಲದವರೊಂದಿಗೆ ಸೇರಿ ಒಂದಾಗಿ ಪಾಲುಗಾರರಾಗಬೇಡಿರಿ. ನೀತಿಗೂ ಅನೀತಿಗೂ ಸಮಾನವೆಲ್ಲಿ? ಅಥವಾ ಬೆಳಕಿಗೂ ಕತ್ತಲೆಗೂ ಅನ್ಯೋನ್ಯತೆಯೇನು?
2 ಕೊರಿಂಥದವರಿಗೆ 6 : 15 (OCVKN)
ಕ್ರಿಸ್ತ ಯೇಸುವಿಗೂ ಪಿಶಾಚನಿಗೂ ಗ್ರೀಕ್ ಭಾಷೆಯಲ್ಲಿ ಬೆಲಿಯಲ್ ಐಕ್ಯತೆಯೇನು? ಅಥವಾ ಕ್ರಿಸ್ತ ವಿಶ್ವಾಸಿಗೂ ಅವಿಶ್ವಾಸಿಗೂ ಹುದುವಾಗಿರುವುದೇನು?
2 ಕೊರಿಂಥದವರಿಗೆ 6 : 16 (OCVKN)
ದೇವರ ಆಲಯಕ್ಕೂ ವಿಗ್ರಹಗಳಿಗೂ ಏನು ಒಪ್ಪಂದ? ನಾವು ಜೀವಿಸುವ ದೇವರ ಆಲಯವಾಗಿದ್ದೇವೆ. ದೇವರು ಹೀಗೆ ಹೇಳಿದ್ದಾರೆ: “ನಾನು ಅವರೊಂದಿಗೆ ವಾಸಿಸುವೆನು, ಅವರ ಮಧ್ಯದಲ್ಲಿ ತಿರುಗಾಡುವೆನು. ನಾನು ಅವರಿಗೆ ದೇವರಾಗಿರುವೆನು ಮತ್ತು ಅವರು ನನ್ನ ಜನರಾಗಿರುವರು.” ಯಾಜಕ 26:12; ಯೆರೆ 32:38; ಯೆಹೆ 37:27
2 ಕೊರಿಂಥದವರಿಗೆ 6 : 17 (OCVKN)
17 ಆದ್ದರಿಂದ, “ಅವರ ನಡುವೆಯಿಂದ ಹೊರಟುಬಂದು ಪ್ರತ್ಯೇಕವಾಗಿರಿ. ಅಶುದ್ಧವಾದ ಯಾವುದನ್ನೂ ಮುಟ್ಟದಿರಿ, ನಾನು ನಿಮ್ಮನ್ನು ಸ್ವೀಕರಿಸುವೆನು ಎಂದು ಕರ್ತದೇವರು ಹೇಳುತ್ತಾರೆ.”§ ಯೆಶಾಯ 52:11; ಯೆಹೆ 20:34,41
2 ಕೊರಿಂಥದವರಿಗೆ 6 : 18 (OCVKN)
18 ಇದಲ್ಲದೆ, “ನಾನು ನಿಮಗೆ ತಂದೆಯಾಗಿರುವೆನು. ನೀವು ನನಗೆ ಪುತ್ರಪುತ್ರಿಯರು ಆಗಿರುವಿರಿ,”* 2 ಸಮು 7:14; 7:8 ಎಂದು ಸರ್ವಶಕ್ತ ಆಗಿರುವ ಕರ್ತದೇವರು ಹೇಳುತ್ತಾರೆ.

1 2 3 4 5 6 7 8 9 10 11 12 13 14 15 16 17 18