2 ಪೂರ್ವಕಾಲವೃತ್ತಾ 6 : 1 (OCVKN)
ಆಗ ಸೊಲೊಮೋನನು, “ಯೆಹೋವ ದೇವರೇ, ಕಾರ್ಗತ್ತಲಲ್ಲಿ ವಾಸಿಸುತ್ತೇನೆಂದು ಹೇಳಿದ್ದೀರಿ;
2 ಪೂರ್ವಕಾಲವೃತ್ತಾ 6 : 2 (OCVKN)
ಆದರೆ ನಾನು ನಿಮಗೋಸ್ಕರ ಭವ್ಯವಾದ ಮಂದಿರವನ್ನು ಕಟ್ಟಿಸಿದ್ದೇನೆ, ಅದು ನಿಮಗೆ ಶಾಶ್ವತವಾದ ವಾಸಸ್ಥಳವಾಗಿರಲಿ,” ಎಂದನು.
2 ಪೂರ್ವಕಾಲವೃತ್ತಾ 6 : 3 (OCVKN)
ಅರಸನು ಜನರ ಕಡೆ ತಿರುಗಿಕೊಂಡು, ಎದ್ದುನಿಂತಿದ್ದ ಇಸ್ರಾಯೇಲ್ ಜನರನ್ನೆಲ್ಲಾ ಆಶೀರ್ವದಿಸಿದನು.
2 ಪೂರ್ವಕಾಲವೃತ್ತಾ 6 : 4 (OCVKN)
ನಂತರ ಅರಸನು ಹೀಗೆ ಹೇಳಿದನು: “ಇಸ್ರಾಯೇಲಿನ ದೇವರಾದ ಯೆಹೋವ ದೇವರಿಗೆ ಸ್ತೋತ್ರವಾಗಲಿ. ಅವರು ನನ್ನ ತಂದೆಯಾದ ದಾವೀದನಿಗೆ ತಮ್ಮ ಬಾಯಿಂದ ವಾಗ್ದಾನ ಮಾಡಿದ್ದನ್ನು, ತಮ್ಮ ಕೈಗಳಿಂದಲೇ ನೆರವೇರಿಸಿದರು.
2 ಪೂರ್ವಕಾಲವೃತ್ತಾ 6 : 5 (OCVKN)
ದೇವರು ತಮ್ಮ ಬಾಯಿಂದ, ‘ನನ್ನ ಜನರಾದ ಇಸ್ರಾಯೇಲರನ್ನು ಈಜಿಪ್ಟ್ ದೇಶದಿಂದ ಬರಮಾಡಿದ ದಿನ ಮೊದಲುಗೊಂಡು, ನನ್ನ ನಾಮವು ಅದರಲ್ಲಿರುವ ಹಾಗೆ ಆಲಯವನ್ನು ಕಟ್ಟುವುದಕ್ಕೆ, ಇಸ್ರಾಯೇಲಿನ ಸಮಸ್ತ ಗೋತ್ರಗಳೊಳಗಿಂದ ಪಟ್ಟಣವನ್ನು ಆರಿಸಿಕೊಳ್ಳಲಿಲ್ಲ. ನನ್ನ ಜನರಾದ ಇಸ್ರಾಯೇಲರ ಮೇಲೆ ಆಳುವವನಾಗಿರಲು ನಾನು ಒಬ್ಬನನ್ನಾದರೂ ಆಯ್ದುಕೊಳ್ಳಲಿಲ್ಲ.
2 ಪೂರ್ವಕಾಲವೃತ್ತಾ 6 : 6 (OCVKN)
ಆದರೆ ನನ್ನ ಹೆಸರು ಅಲ್ಲಿ ಇರುವಂತೆ ಯೆರೂಸಲೇಮನ್ನೂ, ಇಸ್ರಾಯೇಲರನ್ನು ಆಳುವುದಕ್ಕೆ ನಾನು ದಾವೀದನನ್ನೂ ಆರಿಸಿಕೊಂಡಿದ್ದೇನೆ,’ ಎಂದು ಹೇಳಿದ್ದರು.
2 ಪೂರ್ವಕಾಲವೃತ್ತಾ 6 : 7 (OCVKN)
“ಆದಕಾರಣ ನನ್ನ ತಂದೆ ದಾವೀದನು ಇಸ್ರಾಯೇಲಿನ ದೇವರಾದ ಯೆಹೋವ ದೇವರ ಹೆಸರಿಗೋಸ್ಕರ ಆಲಯವನ್ನು ಕಟ್ಟಬೇಕೆಂದು ಮನಸ್ಸು ಮಾಡಿದಾಗ,
2 ಪೂರ್ವಕಾಲವೃತ್ತಾ 6 : 8 (OCVKN)
ಯೆಹೋವ ದೇವರು ಆತನಿಗೆ, ‘ನೀನು ನನ್ನ ಹೆಸರಿಗೋಸ್ಕರ ಒಂದು ಆಲಯವನ್ನು ಕಟ್ಟುವುದಕ್ಕೆ ಮನಸ್ಸು ಮಾಡಿದ್ದು ಒಳ್ಳೇದೇ ಸರಿ.
2 ಪೂರ್ವಕಾಲವೃತ್ತಾ 6 : 9 (OCVKN)
ಆದರೆ ನೀನು ಆಲಯವನ್ನು ಕಟ್ಟಬಾರದು. ನಿನ್ನಿಂದ ಹುಟ್ಟುವ ಮಗನೇ, ನನ್ನ ಹೆಸರಿಗೋಸ್ಕರ ಆಲಯವನ್ನು ಕಟ್ಟಬೇಕು,’ ಎಂದು ಹೇಳಿದರು.
2 ಪೂರ್ವಕಾಲವೃತ್ತಾ 6 : 10 (OCVKN)
“ಈಗ ಯೆಹೋವ ದೇವರು ತಾವು ಹೇಳಿದ ವಾಗ್ದಾನವನ್ನು ನೆರವೇರಿಸಿದ್ದಾರೆ. ನಾನು ನನ್ನ ತಂದೆಯಾದ ದಾವೀದನಿಗೆ ಬದಲಾಗಿ, ಯೆಹೋವ ದೇವರು ಮಾತುಕೊಟ್ಟ ಪ್ರಕಾರ ಇಸ್ರಾಯೇಲಿನ ಸಿಂಹಾಸನದ ಮೇಲೆ ಕುಳಿತುಕೊಂಡು, ಇಸ್ರಾಯೇಲಿನ ದೇವರಾದ ಯೆಹೋವ ದೇವರ ಹೆಸರಿಗೋಸ್ಕರ ಈ ಆಲಯವನ್ನು ಕಟ್ಟಿಸಿದ್ದೇನೆ.
2 ಪೂರ್ವಕಾಲವೃತ್ತಾ 6 : 11 (OCVKN)
ಯೆಹೋವ ದೇವರು ಇಸ್ರಾಯೇಲರ ಸಂಗಡ ಮಾಡಿದ ಒಡಂಬಡಿಕೆಯು ಇರುವ ಮಂಜೂಷವನ್ನು ಅದರಲ್ಲಿ ಇಟ್ಟಿದ್ದೇನೆ,” ಎಂದನು.
2 ಪೂರ್ವಕಾಲವೃತ್ತಾ 6 : 12 (OCVKN)
ಸೊಲೊಮೋನನ ಪ್ರಾರ್ಥನೆ ಆಗ ಸೊಲೊಮೋನನು ಇಸ್ರಾಯೇಲಿನ ಸಮಸ್ತ ಸಮೂಹದವರ ಸಮ್ಮುಖದಲ್ಲಿ ಯೆಹೋವ ದೇವರ ಬಲಿಪೀಠದ ಮುಂದೆ ನಿಂತು, ಪ್ರಾರ್ಥನೆಗಾಗಿ ತನ್ನ ಕೈಗಳನ್ನು ಚಾಚಿದನು.
2 ಪೂರ್ವಕಾಲವೃತ್ತಾ 6 : 13 (OCVKN)
ಸೊಲೊಮೋನನು ಸುಮಾರು ಎರಡೂವರೆ ಮೀಟರ್ ಉದ್ದ, ಎರಡೂವರೆ ಮೀಟರ್ ಅಗಲ, ಒಂದೂವರೆ ಮೀಟರ್ ಎತ್ತರವಾಗಿರುವ ಒಂದು ಕಂಚಿನ ಪೀಠವನ್ನು ಮಾಡಿಸಿ, ಅಂಗಳದ ಮಧ್ಯದಲ್ಲಿಡಿಸಿದನು. ತಾನು ಅದರ ಮೇಲೆ ನಿಂತು ಇಸ್ರಾಯೇಲಿನ ಸಮಸ್ತ ಸಮೂಹದವರ ಸಮ್ಮುಖದಲ್ಲಿ ಮೊಣಕಾಲೂರಿ ಆಕಾಶದೆಡೆಗೆ ತನ್ನ ಕೈಗಳನ್ನು ಚಾಚಿ,
2 ಪೂರ್ವಕಾಲವೃತ್ತಾ 6 : 14 (OCVKN)
ಹೀಗೆ ಪ್ರಾರ್ಥಿಸಿದನು. “ಇಸ್ರಾಯೇಲಿನ ದೇವರಾದ ಯೆಹೋವ ದೇವರೇ, ಆಕಾಶದಲ್ಲಾದರೂ, ಭೂಮಿಯಲ್ಲಾದರೂ ನಿಮ್ಮ ಹಾಗೆ ದೇವರು ಯಾರೂ ಇಲ್ಲ. ಸಂಪೂರ್ಣ ಹೃದಯದಿಂದ ನಿಮಗೆ ನಡೆದುಕೊಳ್ಳುವಂಥ ಸೇವಕರ ಬಗ್ಗೆ ನೀವು ನಿಮ್ಮ ಒಡಂಬಡಿಕೆಯನ್ನು ನೆರವೇರಿಸಿ ಕೃಪೆಯನ್ನು ತೋರಿಸಿದ್ದೀರಿ.
2 ಪೂರ್ವಕಾಲವೃತ್ತಾ 6 : 15 (OCVKN)
ನಿಮ್ಮ ಸೇವಕನಾದಂಥ ನನ್ನ ತಂದೆಯಾದ ದಾವೀದನಿಗೆ ಕೊಟ್ಟ ಮಾತನ್ನು ನೆರವೇರಿಸಿ, ನೀವು ನಿಮ್ಮ ಬಾಯಿಂದ ಹೇಳಿದ್ದನ್ನು ಇಂದು ಈಡೇರಿಸಿದ್ದೀರಿ.
2 ಪೂರ್ವಕಾಲವೃತ್ತಾ 6 : 16 (OCVKN)
“ಆದಕಾರಣ, ಈಗ ಇಸ್ರಾಯೇಲಿನ ದೇವರಾದ ಯೆಹೋವ ದೇವರೇ, ‘ನಿಮ್ಮ ಸಂತಾನದವರು, ನಿನ್ನಂತೆ ಜಾಗ್ರತೆಯಾಗಿದ್ದು, ನನ್ನ ನಿಯಮದ ಪ್ರಕಾರ ನಡೆದುಕೊಳ್ಳುವದಾದರೆ, ಅವರು ತಪ್ಪದೆ ಇಸ್ರಾಯೇಲಿನ ಸಿಂಹಾಸನದ ಮೇಲೆ ನನ್ನ ಸಮ್ಮುಖದಲ್ಲಿ ಕುಳಿತುಕೊಳ್ಳುವರು,’ ಎಂದು ನೀವು ನನ್ನ ತಂದೆಯಾದ ನಿಮ್ಮ ಸೇವಕನಾದ ದಾವೀದನಿಗೆ ವಾಗ್ದಾನ ಮಾಡಿದ್ದನ್ನು ನೆರವೇರಿಸಿರಿ.
2 ಪೂರ್ವಕಾಲವೃತ್ತಾ 6 : 17 (OCVKN)
ಈಗ ಇಸ್ರಾಯೇಲಿನ ದೇವರಾದ ಯೆಹೋವ ದೇವರೇ, ನಿಮ್ಮ ಸೇವಕನಾದ ದಾವೀದನಿಗೆ ಹೇಳಿದ ವಾಕ್ಯವು ನೆರವೇರಲಿ.
2 ಪೂರ್ವಕಾಲವೃತ್ತಾ 6 : 18 (OCVKN)
“ಆದರೆ ದೇವರು ನಿಜವಾಗಿ ಭೂಮಿಯ ಮೇಲೆ ಮನುಷ್ಯರ ಸಂಗಡ ವಾಸವಾಗಿರುವರೋ? ಇಗೋ, ಆಕಾಶವೂ, ಉನ್ನತೋನ್ನತ ಆಕಾಶವೂ ನಿಮಗೆ ಸಾಲದು. ಹಾಗಾದರೆ, ನಾನು ಕಟ್ಟಿಸಿದ ಈ ಆಲಯವು ನಿಮಗೆ ಸಾಲುವುದು ಹೇಗೆ?
2 ಪೂರ್ವಕಾಲವೃತ್ತಾ 6 : 19 (OCVKN)
ಆದರೂ ನನ್ನ ದೇವರಾದ ಯೆಹೋವ ದೇವರೇ, ನಿಮ್ಮ ಸೇವಕನ ಪ್ರಾರ್ಥನೆಗೂ, ಅವನ ವಿಜ್ಞಾಪನೆಗೂ ತಿರುಗಿಕೊಂಡು, ನಿಮ್ಮ ಸೇವಕನು ನಿಮ್ಮ ಮುಂದೆ ಪ್ರಾರ್ಥಿಸುವ ಪ್ರಾರ್ಥನೆಯ ಕೂಗನ್ನು ಕೇಳಿರಿ.
2 ಪೂರ್ವಕಾಲವೃತ್ತಾ 6 : 20 (OCVKN)
ನಿಮ್ಮ ಸೇವಕನು ಈ ಸ್ಥಳದಲ್ಲಿ ಮಾಡುವ ಪ್ರಾರ್ಥನೆಯನ್ನು ನೀವು ಕೇಳುವಂತೆ, ‘ಇಲ್ಲಿ ನನ್ನ ನಾಮಪ್ರಭಾವ ಇರುವುದು,’ ಎಂದು ನೀವು ಹೇಳಿದ ಈ ಆಲಯದ ಮೇಲೆ ರಾತ್ರಿ ಹಗಲೂ ನಿಮ್ಮ ಕಟಾಕ್ಷವಿರಲಿ.
2 ಪೂರ್ವಕಾಲವೃತ್ತಾ 6 : 21 (OCVKN)
ಇದಲ್ಲದೆ ನೀವು ನಿಮ್ಮ ಸೇವಕನ ಮತ್ತು ನಿಮ್ಮ ಜನರಾದ ಇಸ್ರಾಯೇಲರ ವಿಜ್ಞಾಪನೆಯನ್ನೂ ಕೇಳಿರಿ. ಅವರು ಈ ಸ್ಥಳದ ಕಡೆಗೆ ಪ್ರಾರ್ಥಿಸುವಾಗ, ನೀವು ವಾಸಮಾಡುವ ಸ್ಥಳವಾದ ಪರಲೋಕದಿಂದ ಕೇಳಿ, ಕ್ಷಮೆಯನ್ನು ದಯಪಾಲಿಸಿರಿ.
2 ಪೂರ್ವಕಾಲವೃತ್ತಾ 6 : 22 (OCVKN)
“ತನ್ನ ನೆರೆಯವನಿಗೆ ವಿರೋಧವಾಗಿ ತಪ್ಪುಮಾಡಿದವನೆಂಬ ಸಂಶಯಕ್ಕೆ ಗುರಿಯಾದ ಒಬ್ಬ ವ್ಯಕ್ತಿ, ತಾನು ನಿರ್ದೋಷಿಯೆಂದು ಪ್ರಮಾಣಮಾಡಬೇಕಾದಾಗ, ಅಂಥವನು ಈ ಆಲಯಕ್ಕೆ ಬಂದು, ನಿಮ್ಮ ಪೀಠದ ಮುಂದೆ ನಿಂತು ಪ್ರಮಾಣಮಾಡಿದರೆ,
2 ಪೂರ್ವಕಾಲವೃತ್ತಾ 6 : 23 (OCVKN)
ನೀವೇ ಆ ಅಪರಾಧಿಯನ್ನು ಖಂಡಿಸಿ ಅವನ ತಪ್ಪನ್ನು ಅವನ ತಲೆಯ ಮೇಲೆಯೇ ಹೊರಿಸಿರಿ; ಅವನು ಅಪರಾಧಿಯೆಂದು ತೋರಿಸಿಕೊಡಿರಿ. ನಿರ್ದೋಷಿಯಾಗಿದ್ದರೆ ಅವನ ನೀತಿಯ ಫಲವನ್ನು ಅನುಗ್ರಹಿಸಿ ಅವನು ನೀತಿವಂತನೆಂದು ತೋರಿಸಿಕೊಡುವ ಹಾಗೆ ಪರಲೋಕದಲ್ಲಿರುವ ನೀವು ಅದನ್ನು ಕೇಳಿ, ನಿಮ್ಮ ಸೇವಕರ ನ್ಯಾಯವನ್ನು ತೀರಿಸಿರಿ.
2 ಪೂರ್ವಕಾಲವೃತ್ತಾ 6 : 24 (OCVKN)
“ನಿಮ್ಮ ಜನರಾದ ಇಸ್ರಾಯೇಲರು ನಿಮಗೆ ವಿರೋಧವಾಗಿ ಪಾಪಮಾಡಿದ್ದರಿಂದ, ತಮ್ಮ ಶತ್ರುವಿನ ಮುಂದೆ ಪರಾಭವಗೊಂಡು, ನಿಮ್ಮ ಕಡೆಗೆ ತಿರುಗಿಕೊಂಡು, ನಿಮ್ಮ ನಾಮವನ್ನು ಕೊಂಡಾಡಿ, ಈ ಆಲಯಕ್ಕೆ ಬಂದು, ನಿಮ್ಮ ಸನ್ನಿಧಿಯಲ್ಲಿ ವಿಜ್ಞಾಪನೆಯನ್ನೂ ಪ್ರಾರ್ಥನೆಯನ್ನೂ ಮಾಡಿದರೆ,
2 ಪೂರ್ವಕಾಲವೃತ್ತಾ 6 : 25 (OCVKN)
ಆಗ ನೀವು ಪರಲೋಕದಿಂದ ಕೇಳಿ, ನಿಮ್ಮ ಜನರಾದ ಇಸ್ರಾಯೇಲರ ಪಾಪವನ್ನು ಮನ್ನಿಸಿ, ನೀವು ಅವರಿಗೂ ಅವರ ತಂದೆಗಳಿಗೂ ಕೊಟ್ಟ ದೇಶಕ್ಕೆ ಅವರನ್ನು ತಿರುಗಿ ಬರಮಾಡಿರಿ.
2 ಪೂರ್ವಕಾಲವೃತ್ತಾ 6 : 26 (OCVKN)
“ಅವರು ನಿಮಗೆ ವಿರೋಧವಾಗಿ ಪಾಪವನ್ನು ಮಾಡಿದ್ದರಿಂದ, ನೀವು ಆಕಾಶವನ್ನು ಮಳೆಗರೆಯದಂತೆ ಮುಚ್ಚಿ ಅವರನ್ನು ಕುಂದಿಸಿದಾಗ ಅವರು ತಮ್ಮ ಪಾಪವನ್ನು ಬಿಟ್ಟು ಈ ಸ್ಥಳದ ಕಡೆಗೆ ತಿರುಗಿಕೊಂಡು, ನಿಮ್ಮ ನಾಮವನ್ನು ಕೊಂಡಾಡಿ ಪ್ರಾರ್ಥಿಸಿದರೆ,
2 ಪೂರ್ವಕಾಲವೃತ್ತಾ 6 : 27 (OCVKN)
ಆಗ ನೀವು ಪರಲೋಕದಿಂದ ಕೇಳಿ, ನಿಮ್ಮ ಸೇವಕರಾದ ಇಸ್ರಾಯೇಲ್ ಜನರ ಪಾಪವನ್ನು ಮನ್ನಿಸಿ, ಅವರು ನಡೆಯಬೇಕಾದ ಸನ್ಮಾರ್ಗವನ್ನು ಅವರಿಗೆ ಕಲಿಸಿ, ನಿಮ್ಮ ಜನರಿಗೆ ಬಾಧ್ಯತೆಯಾಗಿ ಕೊಟ್ಟ ಭೂಮಿಯ ಮೇಲೆ ಮಳೆಯನ್ನು ಕೊಡಿರಿ.
2 ಪೂರ್ವಕಾಲವೃತ್ತಾ 6 : 28 (OCVKN)
“ದೇಶದಲ್ಲಿ ಬರಗಾಲ, ಘೋರವ್ಯಾಧಿ, ಉರಿಗಾಳಿ, ಬೆಳೆಗಳ ಮೇಲೆ ಮಿಡತೆ, ಕಂಬಳಿಹುಳು ಇವುಗಳು ಇದ್ದರೆ, ಅಥವಾ ಅವರ ಶತ್ರುಗಳು ತಮ್ಮ ಸ್ವದೇಶದ ಪಟ್ಟಣಗಳಲ್ಲಿ ಅವರನ್ನು ಹಿಂಸಿಸಿದರೂ, ಯಾವ ಬಾಧೆ ಯಾವ ಬೇನೆ ಇದ್ದರೂ,
2 ಪೂರ್ವಕಾಲವೃತ್ತಾ 6 : 29 (OCVKN)
ನಿಮ್ಮ ಜನರಾದ ಸಮಸ್ತ ಇಸ್ರಾಯೇಲಿನ ಯಾವ ಒಬ್ಬ ಮನುಷ್ಯನಾದರೂ ತಾನು ಅನುಭವಿಸುತ್ತಿರುವ ಉಪದ್ರವ ದುಃಖಗಳ ನಿಮಿತ್ತವಾಗಿ ಈ ಮಂದಿರದ ಕಡೆಗೆ ತನ್ನ ಕೈಗಳನ್ನು ಚಾಚಿ, ಯಾವ ಪ್ರಾರ್ಥನೆಯನ್ನಾದರೂ, ವಿಜ್ಞಾಪನೆಯನ್ನಾದರೂ ಮಾಡಿದರೆ,
2 ಪೂರ್ವಕಾಲವೃತ್ತಾ 6 : 30 (OCVKN)
ನೀವು ವಾಸಮಾಡುವ ಪರಲೋಕದಿಂದ ಕೇಳಿ ಮನ್ನಿಸಿ, ಮನುಷ್ಯನ ಹೃದಯವನ್ನು ತಿಳಿದಿರುವ ನೀವು ಪ್ರತಿ ಮನುಷ್ಯನಿಗೂ ಅವನವನ ಮಾರ್ಗದ ಪ್ರಕಾರ ಪ್ರತಿಫಲಕೊಡಿರಿ. ಏಕೆಂದರೆ ನೀವೊಬ್ಬರೇ ಸಮಸ್ತ ಜನರ ಹೃದಯಗಳನ್ನು ತಿಳಿದವರಾಗಿದ್ದೀರಿ.
2 ಪೂರ್ವಕಾಲವೃತ್ತಾ 6 : 31 (OCVKN)
ಆಗ ನೀವು ನಮ್ಮ ತಂದೆಗಳಿಗೆ ಕೊಟ್ಟ ದೇಶದಲ್ಲಿ ಅವರು ವಾಸಿಸುವ ಕಾಲದಲ್ಲೆಲ್ಲಾ ನಿಮ್ಮಲ್ಲಿ ಭಯಭಕ್ತಿಯುಳ್ಳವರಾಗಿ ನಿಮ್ಮ ಮಾರ್ಗಗಳಲ್ಲಿ ನಡೆಯುವರು.
2 ಪೂರ್ವಕಾಲವೃತ್ತಾ 6 : 32 (OCVKN)
“ನಿಮ್ಮ ಜನರಾದ ಇಸ್ರಾಯೇಲಿನವನಲ್ಲದೆ ನಿಮ್ಮ ಮಹಾನಾಮದ ನಿಮಿತ್ತ ದೂರದೇಶದಿಂದ ಬಂದ ಒಬ್ಬ ಪರದೇಶಿಯು, ನಿಮ್ಮ ಬಲವಾದ ಕೈ, ನಿಮ್ಮ ಚಾಚಿದ ತೋಳು ಇವುಗಳ ಕುರಿತು ಕೇಳಿ, ಅವರು ಈ ಆಲಯದ ಕಡೆಗೆ ಬಂದು ಪ್ರಾರ್ಥನೆಮಾಡಿದರೆ,
2 ಪೂರ್ವಕಾಲವೃತ್ತಾ 6 : 33 (OCVKN)
ನೀವು ವಾಸಮಾಡುವ ಪರಲೋಕದಿಂದ ಕೇಳಿ, ಪರದೇಶಿಯು ಕೇಳಿದ್ದೆಲ್ಲವನ್ನು ನೆರವೇರಿಸಿರಿ. ಆಗ ಭೂಲೋಕದ ಎಲ್ಲಾ ಜನರೂ ನಿಮ್ಮ ನಾಮವನ್ನು ತಿಳಿದು, ನಿಮ್ಮ ಜನರಾದ ಇಸ್ರಾಯೇಲರಂತೆ ನಿಮಗೆ ಭಯಭಕ್ತಿಯುಳ್ಳವರಾಗಿ, ನಾನು ಕಟ್ಟಿಸಿದ ಈ ಆಲಯವು ನಿಮ್ಮ ಹೆಸರಿನಿಂದ ಕರೆಯಲಾಗಿದೆ ಎಂದು ತಿಳಿದುಕೊಳ್ಳುವರು.
2 ಪೂರ್ವಕಾಲವೃತ್ತಾ 6 : 34 (OCVKN)
“ನೀವು ನಿಮ್ಮ ಜನರನ್ನು ತಮ್ಮ ಶತ್ರುಗಳ ಸಂಗಡ ಯುದ್ಧಮಾಡುವದಕ್ಕೆ ಎಲ್ಲಿಗಾದರೂ ಕಳುಹಿಸಿದಾಗ, ಅವರು ಅಲ್ಲಿಂದ ನೀವು ಆಯ್ದುಕೊಂಡ ಪಟ್ಟಣದ ಕಡೆಗೂ, ನಾನು ನಿಮ್ಮ ಹೆಸರಿಗಾಗಿ ಕಟ್ಟಿಸಿದ ಈ ಆಲಯದ ಕಡೆಗೂ ತಿರುಗಿಕೊಂಡು, ಅವರು ನಿಮಗೆ ಪ್ರಾರ್ಥನೆಮಾಡಿದರೆ,
2 ಪೂರ್ವಕಾಲವೃತ್ತಾ 6 : 35 (OCVKN)
ಆಗ ನೀವು ಪರಲೋಕದಿಂದ ಅವರ ಪ್ರಾರ್ಥನೆಯನ್ನೂ ವಿಜ್ಞಾಪನೆಯನ್ನೂ ಕೇಳಿ, ಅವರಿಗೆ ನ್ಯಾಯವನ್ನು ತೀರಿಸಿರಿ.
2 ಪೂರ್ವಕಾಲವೃತ್ತಾ 6 : 36 (OCVKN)
“ಪಾಪ ಮಾಡದವನು ಯಾವನೂ ಇಲ್ಲವಲ್ಲಾ. ಆದ್ದರಿಂದ ಅವರು ನಿಮಗೆ ವಿರೋಧವಾಗಿ ಪಾಪಮಾಡಲು, ನೀವು ಅವರ ಮೇಲೆ ಕೋಪಿಸಿಕೊಂಡು ದೂರವಾದರೂ, ಸಮೀಪವಾದರೂ ಶತ್ರುವಿನ ದೇಶಕ್ಕೆ ಅವರು ಸೆರೆಯಾಗಿ ಹೋಗುವಂತೆ ನೀವು ಅವರನ್ನು ಶತ್ರುವಿನ ಕೈಯಲ್ಲಿ ಒಪ್ಪಿಸಿದರೆ,
2 ಪೂರ್ವಕಾಲವೃತ್ತಾ 6 : 37 (OCVKN)
ಅವರು ಸೆರೆಯವರಾಗಿ ಬಿದ್ದುಕೊಂಡಿರುವ ದೇಶದಲ್ಲಿ ಮಾನಸಾಂತರಪಟ್ಟು, ‘ನಾವು ಪಾಪಮಾಡಿದ್ದೇವೆ, ತಪ್ಪುಮಾಡಿ ದುಷ್ಟರಾಗಿ ನಡೆದಿದ್ದೇವೆ,’ ಎಂದು ಅವರನ್ನು ಸೆರೆಯಾಗಿ ಒಯ್ಯುವವರ ದೇಶದಲ್ಲಿ ನಿಮಗೆ ಪ್ರಾರ್ಥನೆಮಾಡಿ,
2 ಪೂರ್ವಕಾಲವೃತ್ತಾ 6 : 38 (OCVKN)
ತಮ್ಮ ಪೂರ್ಣಹೃದಯದಿಂದಲೂ, ಪೂರ್ಣಪ್ರಾಣದಿಂದಲೂ ನಿಮ್ಮ ಕಡೆಗೆ ತಿರುಗಿಕೊಂಡು, ನೀವು ಅವರ ಪಿತೃಗಳಿಗೆ ಕೊಟ್ಟ ತಮ್ಮ ದೇಶದ ಕಡೆಗೂ, ನೀವು ಆಯ್ದುಕೊಂಡ ಪಟ್ಟಣದ ಕಡೆಗೂ ನಿಮ್ಮ ನಾಮಕ್ಕೋಸ್ಕರ ನಾನು ಕಟ್ಟಿಸಿದ ಈ ಆಲಯದ ಕಡೆಗೂ ತಿರುಗಿಕೊಂಡು, ಅವರು ನಿಮಗೆ ಪ್ರಾರ್ಥನೆಮಾಡಿದರೆ,
2 ಪೂರ್ವಕಾಲವೃತ್ತಾ 6 : 39 (OCVKN)
ಆಗ ನೀವು ವಾಸಮಾಡುವ ಪರಲೋಕದಿಂದ ಅವರ ಪ್ರಾರ್ಥನೆಯನ್ನೂ ವಿಜ್ಞಾಪನೆಯನ್ನೂ ಕೇಳಿ ಅವರ ನ್ಯಾಯವನ್ನು ತೀರಿಸಿರಿ, ನಿಮ್ಮ ಜನರು ನಿಮಗೆ ವಿರೋಧವಾಗಿ ಮಾಡಿದ ಪಾಪಗಳನ್ನು ಕ್ಷಮಿಸಿರಿ.
2 ಪೂರ್ವಕಾಲವೃತ್ತಾ 6 : 40 (OCVKN)
“ಈಗ ನನ್ನ ದೇವರೇ, ಈ ಸ್ಥಳದಲ್ಲಿ ಮಾಡಿದ ಪ್ರಾರ್ಥನೆಗೆ ನಿಮ್ಮ ಕಣ್ಣುಗಳು ತೆರೆದಿರಲಿ. ನಿಮ್ಮ ಕಿವಿಗಳು ಆಲಿಸುತ್ತಾ ಇರಲಿ.
2 ಪೂರ್ವಕಾಲವೃತ್ತಾ 6 : 41 (OCVKN)
“ಈಗ ದೇವರಾದ ಯೆಹೋವ ದೇವರೇ, ಎದ್ದು ನಿಮ್ಮ ವಿಶ್ರಾಂತಿಯ ಸ್ಥಳಕ್ಕೆ ಬನ್ನಿರಿ; ನೀವೂ, ನಿಮ್ಮ ಶಕ್ತಿಯುತ ಮಂಜೂಷವೂ ಬರಲಿ. ಯೆಹೋವ ದೇವರೇ, ನಿಮ್ಮ ಯಾಜಕರು ರಕ್ಷಣೆಯೆಂಬ ವಸ್ತ್ರವನ್ನು ಧರಿಸಿಕೊಳ್ಳಲಿ. ನಿಮ್ಮ ಭಕ್ತರು ಒಳ್ಳೆಯದರಲ್ಲಿ ಸಂತೋಷಪಡಲಿ.
2 ಪೂರ್ವಕಾಲವೃತ್ತಾ 6 : 42 (OCVKN)
ಯೆಹೋವ ದೇವರೇ, ನಿಮ್ಮ ಅಭಿಷಿಕ್ತನನ್ನು ತಿರಸ್ಕರಿಸಬೇಡಿರಿ. ನಿಮ್ಮ ಸೇವಕನಾದ ದಾವೀದನಿಗೆ ವಾಗ್ದಾನಮಾಡಿದ ಮಹಾ ಪ್ರೀತಿಯನ್ನು ನೆನಪುಮಾಡಿಕೊಳ್ಳಿರಿ,” ಎಂದು ಬೇಡಿಕೊಂಡನು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35 36 37 38 39 40 41 42