1 ತಿಮೊಥೆಯನಿಗೆ 1 : 1 (OCVKN)
ಕ್ರಿಸ್ತ ಯೇಸುವಿನ ಅಪೊಸ್ತಲನಾದ ಪೌಲನು, ನಮಗೆ ರಕ್ಷಕ ಆಗಿರುವ ದೇವರ ಮತ್ತು ನಮ್ಮ ನಿರೀಕ್ಷೆಯಾಗಿರುವ ಕ್ರಿಸ್ತ ಯೇಸುವಿನ ಆಜ್ಞಾನುಸಾರ,
1 ತಿಮೊಥೆಯನಿಗೆ 1 : 2 (OCVKN)
ನಂಬಿಕೆಯಲ್ಲಿ ನನ್ನ ನಿಜ ಪುತ್ರನಾಗಿರುವ ತಿಮೊಥೆಯನಿಗೆ ಬರೆಯುವುದು: ನಮ್ಮ ತಂದೆ ದೇವರಿಂದಲೂ, ನಮ್ಮ ಕರ್ತ ಆಗಿರುವ ಕ್ರಿಸ್ತ ಯೇಸುವಿನಿಂದಲೂ ನಿನಗೆ ಕೃಪೆಯೂ ಕರುಣೆಯೂ ಶಾಂತಿಯೂ ದೊರೆಯಲಿ.
1 ತಿಮೊಥೆಯನಿಗೆ 1 : 3 (OCVKN)
ಸುಳ್ಳು ಬೋಧಕರನ್ನು ಎದುರಿಸಲು ಎಚ್ಚರಿಕೆ ನಾನು ಮಕೆದೋನ್ಯಕ್ಕೆ ಹೋದಾಗ ನೀನು ಎಫೆಸದಲ್ಲಿ ಇದ್ದುಕೊಂಡು ಸುಳ್ಳು ಬೋಧನೆಯನ್ನು ಉಪದೇಶಿಸಬಾರದೆಂತಲೂ
1 ತಿಮೊಥೆಯನಿಗೆ 1 : 4 (OCVKN)
ಕಟ್ಟುಕಥೆಗಳಿಗೂ ಕೊನೆಯಿಲ್ಲದ ವಂಶಾವಳಿಗಳಿಗೂ ಲಕ್ಷ್ಯ ಕೊಡಬಾರದೆಂತಲೂ ಕೆಲವರಿಗೆ ಆಜ್ಞಾಪಿಸಬೇಕೆಂದು ನಾನು ನಿನಗೆ ಖಂಡಿತವಾಗಿ ಹೇಳಿದಂತೆ ಈಗಲೂ ಹೇಳುತ್ತೇನೆ. ಅಂಥ ಕಥೆಗಳೂ ವಂಶಾವಳಿಗಳೂ ವಿವಾದಕ್ಕೆ ಆಸ್ಪದವಾಗಿವೆಯೇ ಹೊರತು ನಂಬಿಕೆಯಿಂದುಂಟಾಗುವ ದೇವರ ಕಾರ್ಯಭಾರವನ್ನು ವೃದ್ಧಿ ಮಾಡುವುದೇ ಇಲ್ಲ.
1 ತಿಮೊಥೆಯನಿಗೆ 1 : 5 (OCVKN)
ಈ ಆಜ್ಞೆಯ ಗುರಿಯು ಪ್ರೀತಿಯೇ ಆಗಿರುತ್ತದೆ. ಶುದ್ಧ ಹೃದಯ, ಒಳ್ಳೆಯ ಮನಸ್ಸಾಕ್ಷಿ ಹಾಗೂ ನಿಷ್ಕಪಟವಾದ ನಂಬಿಕೆಯಿಂದ ಈ ಪ್ರೀತಿಯು ಹುಟ್ಟುತ್ತದೆ.
1 ತಿಮೊಥೆಯನಿಗೆ 1 : 6 (OCVKN)
ಕೆಲವರು ಇವುಗಳನ್ನು ಬಿಟ್ಟುಬಿಟ್ಟು ವ್ಯರ್ಥವಾದ ಮಾತುಗಳಿಗೆ ತಿರುಗಿಕೊಂಡಿದ್ದಾರೆ.
1 ತಿಮೊಥೆಯನಿಗೆ 1 : 7 (OCVKN)
ಅವರು ನಿಯಮದ ಬೋಧಕರಾಗಿರಲು ಬಯಸಿದರೂ ತಾವು ಹೇಳುವುದನ್ನಾಗಲಿ, ತಾವು ಸ್ಥಾಪಿಸುವುದನ್ನಾಗಲಿ ಏನೆಂದು ದೃಢನಿಶ್ಚಯವಿಲ್ಲದವರಾಗಿದ್ದಾರೆ.
1 ತಿಮೊಥೆಯನಿಗೆ 1 : 8 (OCVKN)
ಒಬ್ಬನು ನಿಯಮವನ್ನು ಸರಿಯಾಗಿ ಉಪಯೋಗಿಸುವುದಾದರೆ ಅದು ಒಳ್ಳೆಯದೆಂದು ನಾವು ಬಲ್ಲೆವು.
1 ತಿಮೊಥೆಯನಿಗೆ 1 : 9 (OCVKN)
ನಿಯಮವು ನೀತಿವಂತರಿಗೋಸ್ಕರ ಅಲ್ಲ. ಬದಲಿಗೆ ಅದು ಅವಿಧೇಯರಿಗೆ, ಅಕ್ರಮಗಾರರಿಗೆ, ಭಕ್ತಿಹೀನರಿಗೆ, ಪಾಪಿಗಳಿಗೆ, ಅಶುದ್ಧರಿಗೆ, ಅಪವಿತ್ರರಿಗೆ, ತಂದೆತಾಯಿಗಳನ್ನು ಕೊಲ್ಲುವವರಿಗೆ, ಕೊಲೆಗಾರರಿಗೆ,
1 ತಿಮೊಥೆಯನಿಗೆ 1 : 10 (OCVKN)
ಜಾರರಿಗೆ, ಸಲಿಂಗಕಾಮಿಗಳಿಗೆ, ನರಚೋರರಿಗೆ, ಸುಳ್ಳುಗಾರರಿಗೆ, ಸುಳ್ಳಾಣೆಯಿಡುವವರಿಗೆ, ಸ್ವಸ್ಥಬೋಧನೆಯನ್ನು ವಿರೋಧಿಸುವ ಬೇರೆ ಏನಾದರೂ ಇದ್ದರೆ ಮೋಶೆಯ ನಿಯಮವು ಇಂಥವವರಿಗಾಗಿ ಕೊಡಲಾಗಿದೆ ಎಂದು ನಮಗೆ ತಿಳಿದಿದೆ.
1 ತಿಮೊಥೆಯನಿಗೆ 1 : 11 (OCVKN)
ಈ ಬೋಧನೆಯು ಭಾಗ್ಯವಂತರಾದ ದೇವರ ಮಹಿಮೆಯ ಸುವಾರ್ತೆಗೆ ಅನುರೂಪವಾಗಿದೆ. ಈ ಸುವಾರ್ತೆಯು ನನ್ನ ವಶಕ್ಕೆ ಕೊಡಲಾಗಿದೆ.
1 ತಿಮೊಥೆಯನಿಗೆ 1 : 12 (OCVKN)
ಪೌಲನ ಮೇಲೆ ಕ್ರಿಸ್ತ ಯೇಸುವಿನ ಕೃಪೆ ನನ್ನನ್ನು ಬಲಪಡಿಸುವ ನಮಗೆ ಕರ್ತ ಆಗಿರುವ ಕ್ರಿಸ್ತ ಯೇಸುವು ನನ್ನನ್ನು ನಂಬಿಗಸ್ತನೆಂದು ಎಣಿಸಿ ಸೇವೆಗೆ ನೇಮಿಸಿದ್ದಕ್ಕಾಗಿ ನಾನು ಅವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.
1 ತಿಮೊಥೆಯನಿಗೆ 1 : 13 (OCVKN)
ಮೊದಲು ದೇವದೂಷಕನೂ ಹಿಂಸಕನೂ ಅಪಮಾನ ಮಾಡುವವನೂ ಆಗಿದ್ದ ನಾನು ಅಜ್ಞಾನಿಯಾಗಿ ಅಪನಂಬಿಕೆಯಲ್ಲಿ ಹಾಗೆ ವರ್ತಿಸಿದ್ದರೂ ದೇವರು ನನಗೆ ಕರುಣೆತೋರಿದರು.
1 ತಿಮೊಥೆಯನಿಗೆ 1 : 14 (OCVKN)
ಆದರೆ ನಮಗೆ ಕರ್ತ ಆಗಿರುವ ಕ್ರಿಸ್ತ ಯೇಸುವಿನ ಕೃಪೆಯು ನನಗೆ ಧಾರಾಳವಾಗಿ ಸುರಿಯಲಾಯಿತು. ಮಾತ್ರವಲ್ಲದೆ ವಿಶ್ವಾಸ ಪ್ರೀತಿಯೊಂದಿಗೆ ಅತ್ಯಧಿಕವಾಯಿತು.
1 ತಿಮೊಥೆಯನಿಗೆ 1 : 15 (OCVKN)
ಕ್ರಿಸ್ತ ಯೇಸು ಪಾಪಿಗಳನ್ನು ರಕ್ಷಿಸುವುದಕ್ಕೋಸ್ಕರ ಈ ಲೋಕಕ್ಕೆ ಬಂದರು, ಎಂಬ ವಾಕ್ಯವು ನಂಬತಕ್ಕದ್ದೂ ಪೂರ್ಣ ಅಂಗೀಕಾರಕ್ಕೆ ಯೋಗ್ಯವಾದದ್ದೂ ಆಗಿದೆ. ಆ ಪಾಪಿಗಳಲ್ಲಿ ನಾನೇ ಮುಖ್ಯನು.
1 ತಿಮೊಥೆಯನಿಗೆ 1 : 16 (OCVKN)
ಆದರೂ ಇನ್ನು ಮುಂದೆ ನಿತ್ಯಜೀವಕ್ಕೆ ತಮ್ಮ ಮೇಲೆ ನಂಬಿಕೆಯಿಡುವವರಿಗೆ ದೃಷ್ಟಾಂತವಾಗಿರಬೇಕೆಂದು ಕ್ರಿಸ್ತ ಯೇಸು ಮುಖ್ಯ ಪಾಪಿಯಾದ ನನ್ನಲ್ಲಿ ತಮ್ಮ ಪೂರ್ಣ ಸಹನೆಯನ್ನು ತೋರ್ಪಡಿಸಿರುವುದಕ್ಕಾಗಿ ನನಗೆ ಕರುಣೆ ದೊರೆಯಿತು.
1 ತಿಮೊಥೆಯನಿಗೆ 1 : 17 (OCVKN)
ನಿತ್ಯವಾದ ಅರಸರೂ ಅಮರರೂ ಅದೃಶ್ಯರೂ ಆಗಿರುವ ಜ್ಞಾನಿಯಾದ ಒಬ್ಬರೇ ದೇವರಿಗೆ ಯುಗಯುಗಾಂತರಗಳಲ್ಲಿಯೂ ಘನವೂ ಮಹಿಮೆಯೂ ಉಂಟಾಗಲಿ. ಆಮೆನ್.
1 ತಿಮೊಥೆಯನಿಗೆ 1 : 18 (OCVKN)
ತಿಮೊಥೆಯನ ಜವಾಬ್ದಾರಿ ಮಗನಾದ ತಿಮೊಥೆಯನೇ, ನಿನ್ನ ವಿಷಯವಾಗಿ ಮೊದಲು ಉಂಟಾದ ಪ್ರವಾದನೆಗಳ ಪ್ರಕಾರವೇ ನೀನು ಅವುಗಳಿಂದ ಒಳ್ಳೆಯ ಯುದ್ಧವನ್ನು ನಡಿಸಬೇಕೆಂದು ಈ ಆಜ್ಞೆಯನ್ನು ನಿನಗೆ ಒಪ್ಪಿಸುತ್ತೇನೆ.
1 ತಿಮೊಥೆಯನಿಗೆ 1 : 19 (OCVKN)
ನಂಬಿಗಸ್ತನೂ ಒಳ್ಳೆಯ ಮನಸ್ಸಾಕ್ಷಿಯುಳ್ಳವನೂ ಆಗಿರು. ಕೆಲವರು ಈ ಒಳ್ಳೆಯ ಮನಸ್ಸಾಕ್ಷಿಯನ್ನು ತಳ್ಳಿಬಿಟ್ಟು ನಂಬಿಕೆಯ ಹಡಗನ್ನು ಒಡೆದವರ ಹಾಗೆ ಇದ್ದಾರೆ.
1 ತಿಮೊಥೆಯನಿಗೆ 1 : 20 (OCVKN)
ಹುಮೆನಾಯನೂ ಅಲೆಕ್ಸಾಂಡರನೂ ಅಂಥವರಾಗಿದ್ದಾರೆ. ಇವರು ದೇವದೂಷಣೆ ಮಾಡಬಾರದೆಂಬುದನ್ನು ಕಲಿತುಕೊಳ್ಳುವಂತೆ ಇವರನ್ನು ನಾನು ಸೈತಾನನಿಗೆ ಒಪ್ಪಿಸಿಬಿಟ್ಟಿದ್ದೇನೆ.
❮
❯
1
2
3
4
5
6
7
8
9
10
11
12
13
14
15
16
17
18
19
20