1 ಕೊರಿಂಥದವರಿಗೆ 8 : 1 (OCVKN)
ವಿಗ್ರಹಗಳಿಗೆ ಸಮರ್ಪಿಸಿದ ನೈವೇದ್ಯ ಈಗ ವಿಗ್ರಹಕ್ಕೆ ನೈವೇದ್ಯ ಮಾಡಿದ ಆಹಾರ ಪದಾರ್ಥಗಳ ವಿಷಯ: “ನಮ್ಮೆಲ್ಲರಿಗೂ ತಿಳುವಳಿಕೆಯಿದೆ,” ಎಂದು ಬಲ್ಲೆವು. ತಿಳುವಳಿಕೆಯು ಅಹಂಕಾರಿಗಳನ್ನಾಗಿ ಮಾಡುತ್ತದೆ. ಆದರೆ ಪ್ರೀತಿಯು ಭಕ್ತಿವೃದ್ಧಿಯನ್ನುಂಟುಮಾಡುತ್ತದೆ.
1 ಕೊರಿಂಥದವರಿಗೆ 8 : 2 (OCVKN)
ಯಾರಾದರೂ ತಾನು ಏನನ್ನಾದರೂ ತಿಳಿದಿರುವುದಾಗಿ ಭಾವಿಸಿದರೆ, ಅಂಥವನು ತಿಳಿಯಬೇಕಾದ ರೀತಿಯಲ್ಲಿ ಇನ್ನೂ ತಿಳಿದುಕೊಂಡಿರುವುದಿಲ್ಲ.
1 ಕೊರಿಂಥದವರಿಗೆ 8 : 3 (OCVKN)
ಆದರೆ ದೇವರನ್ನು ಪ್ರೀತಿಸುವವರನ್ನು ದೇವರು ತಿಳಿದುಕೊಂಡಿರುತ್ತಾರೆ.
1 ಕೊರಿಂಥದವರಿಗೆ 8 : 4 (OCVKN)
ಹಾಗಾದರೆ, ವಿಗ್ರಹಗಳಿಗೆ ನೈವೇದ್ಯ ಮಾಡಿದ ಆಹಾರ ಪದಾರ್ಥಗಳನ್ನು ತಿನ್ನುವುದರ ವಿಷಯ: “ಲೋಕದಲ್ಲಿ ವಿಗ್ರಹವು ಏನೂ ಅಲ್ಲ. ಒಬ್ಬ ದೇವರೇ ಹೊರತು ಬೇರೆ ದೇವರಿಲ್ಲ,” ಎಂದು ನಮಗೆ ಗೊತ್ತಿದೆ.
1 ಕೊರಿಂಥದವರಿಗೆ 8 : 5 (OCVKN)
ಆಕಾಶದಲ್ಲಾಗಲಿ, ಭೂಮಿಯ ಮೇಲೆ ಆಗಲಿ, ದೇವರುಗಳು ಎಂದು ಎನ್ನಿಸಿಕೊಳ್ಳುವವರು ಉಂಟು. ಅನೇಕರಿಗೆ ಅಂಥ “ದೇವರುಗಳು” ಹಾಗೂ “ಸ್ವಾಮಿಗಳು” ಇದ್ದಾರೆ.
1 ಕೊರಿಂಥದವರಿಗೆ 8 : 6 (OCVKN)
ನಮಗಾದರೋ ತಂದೆ ದೇವರು ಒಬ್ಬರೇ ಇರುತ್ತಾರೆ. ಅವರಿಂದಲೇ ಸಮಸ್ತವೂ ಉಂಟಾಯಿತು. ಅವರಿಗಾಗಿಯೇ ನಾವು ಜೀವಿಸುತ್ತೇವೆ. ನಮಗಿರುವ ಕರ್ತದೇವರು ಒಬ್ಬರೇ. ಅವರೇ ಕ್ರಿಸ್ತ ಯೇಸು. ಅವರಿಂದಲೇ ಸಮಸ್ತವೂ ಉಂಟಾಯಿತು. ಅವರ ಮುಖಾಂತರವೇ ನಾವು ಜೀವಿಸುತ್ತೇವೆ.
1 ಕೊರಿಂಥದವರಿಗೆ 8 : 7 (OCVKN)
ಆದರೆ ಈ ತಿಳುವಳಿಕೆಯು ಎಲ್ಲರಲ್ಲಿಯೂ ಇಲ್ಲ. ಕೆಲವರು ಇದುವರೆಗೂ ವಿಗ್ರಹಕ್ಕೆ ಅರ್ಪಿತವಾದದ್ದನ್ನು ತಿನ್ನುವ ರೂಢಿಯಲ್ಲಿದ್ದು, ಅವರು ವಿಗ್ರಹಕ್ಕೆ ನೈವೇದ್ಯ ಮಾಡಿ ತಿನ್ನುವುದಾಗಿ ಭಾವಿಸಿಕೊಳ್ಳುತ್ತಾರೆ. ಹೀಗೆ ಅವರ ಮನಸ್ಸಾಕ್ಷಿ ಬಲಹೀನವಾಗಿರುವುದರಿಂದ, ಅದು ಅಶುದ್ಧವಾಗಿರುತ್ತದೆ.
1 ಕೊರಿಂಥದವರಿಗೆ 8 : 8 (OCVKN)
ಆದರೆ ಆಹಾರವು ನಮ್ಮನ್ನು ದೇವರ ಸಮೀಪಕ್ಕೆ ಸೇರಿಸಲಾರದು. ಅದನ್ನು ತಿನ್ನದಿದ್ದರೆ ನಮಗೆ ನಷ್ಟವಿಲ್ಲ, ತಿಂದರೆ ನಮಗೆ ಲಾಭವಿಲ್ಲ.
1 ಕೊರಿಂಥದವರಿಗೆ 8 : 9 (OCVKN)
ಆದರೆ ಈ ನಿಮ್ಮ ಸ್ವಾತಂತ್ರ್ಯವು ಬಲಹೀನರಿಗೆ ವಿಘ್ನವಾಗದಂತೆ ಜಾಗರೂಕರಾಗಿರಿ.
1 ಕೊರಿಂಥದವರಿಗೆ 8 : 10 (OCVKN)
ಎಲ್ಲಾ ತಿಳುವಳಿಕೆಯಿರುವ ನೀನು ವಿಗ್ರಹದ ಗುಡಿಯಲ್ಲಿ ತಿನ್ನುವುದನ್ನು ನೋಡಿದರೆ ಬಲಹೀನ ಮನಸ್ಸಾಕ್ಷಿಯುಳ್ಳ ಸಹೋದರನು, ತಾನೂ ವಿಗ್ರಹಕ್ಕೆ ನೈವೇದ್ಯ ಮಾಡಿದ್ದನ್ನು ತಿನ್ನುವುದಕ್ಕೆ ಧೈರ್ಯಗೊಳ್ಳುವನಲ್ಲವೇ?
1 ಕೊರಿಂಥದವರಿಗೆ 8 : 11 (OCVKN)
ಆ ಬಲಹೀನನು ನಿನ್ನ ತಿಳುವಳಿಕೆಯಿಂದ ನಾಶವಾಗುತ್ತಾನೆ. ಆ ಸಹೋದರನಿಗಾಗಿಯೂ ಕ್ರಿಸ್ತ ಯೇಸುವು ತಮ್ಮ ಪ್ರಾಣವನ್ನು ಕೊಟ್ಟರಲ್ಲವೇ?
1 ಕೊರಿಂಥದವರಿಗೆ 8 : 12 (OCVKN)
ಹೀಗೆ ನಿನ್ನ ಸಹೋದರರ ವಿರುದ್ಧ ಪಾಪಮಾಡಿ, ಬಲಹೀನವಾದ ಅವರ ಮನಸ್ಸನ್ನು ನೋಯಿಸಿ, ಕ್ರಿಸ್ತ ಯೇಸುವಿಗೆ ವಿರುದ್ಧವಾಗಿ ಪಾಪಮಾಡುವವನಾಗಿರುತ್ತಿ.
1 ಕೊರಿಂಥದವರಿಗೆ 8 : 13 (OCVKN)
ಆದ್ದರಿಂದ ನಾನು ತಿನ್ನುವಂಥದ್ದು ನನ್ನ ಸಹೋದರನನ್ನು ಪಾಪದಲ್ಲಿ ಬೀಳುವಂತೆ ಮಾಡುವುದಾದರೆ, ಎಂದಿಗೂ ನಾನು ಮಾಂಸವನ್ನು ತಿನ್ನುವುದೇ ಇಲ್ಲ. ಅವನ ಬೀಳುವಿಕೆಗೆ ಕಾರಣವಾಗುವುದೂ ಇಲ್ಲ.
❮
❯
1
2
3
4
5
6
7
8
9
10
11
12
13