1 ಕೊರಿಂಥದವರಿಗೆ 5 : 1 (OCVKN)
ಅನೈತಿಕ ಸಹೋದರನ ಶಿಕ್ಷೆ ಯೆಹೂದ್ಯರಲ್ಲದವರಲ್ಲಿ ನಡೆಯದೇ ಇರುವಂಥ ಅನೈತಿಕತೆ ನಿಮ್ಮಲ್ಲಿದೆಯೆಂದು ವಾಸ್ತವವಾಗಿ ವರದಿ ಬಂದಿದೆ: ಒಬ್ಬನು ತನ್ನ ತಂದೆಯ ಹೆಂಡತಿಯನ್ನು ಇಟ್ಟುಕೊಂಡಿದ್ದಾನಂತೆ.
1 ಕೊರಿಂಥದವರಿಗೆ 5 : 2 (OCVKN)
ಹೀಗಿದ್ದರೂ ಗರ್ವಪಡುತ್ತಿದ್ದೀರಲ್ಲಾ! ನೀವು ದುಃಖಪಟ್ಟು, ಈ ಕಾರ್ಯ ಮಾಡಿದವನನ್ನು ನಿಮ್ಮೊಳಗಿಂದ ಬಹಿಷ್ಕರಿಸಬೇಕಲ್ಲವೇ?
1 ಕೊರಿಂಥದವರಿಗೆ 5 : 3 (OCVKN)
ನಾನು ಸ್ವತಃ ನಿಮ್ಮ ಮಧ್ಯದಲ್ಲಿ ಇರದಿದ್ದರೂ ಆತ್ಮದಲ್ಲಿ ನಿಮ್ಮೊಂದಿಗಿದ್ದೇನೆ. ಈ ಕಾರ್ಯಮಾಡಿದವನ ಮೇಲೆ ಆಗಲೇ ಹತ್ತಿರವಿದ್ದವನಂತೆ ನಮಗೆ ಕರ್ತ ಆಗಿರುವ ಯೇಸುವಿನ ಹೆಸರಿನಲ್ಲಿ ತೀರ್ಪುಮಾಡಿದ್ದೇನೆ.
1 ಕೊರಿಂಥದವರಿಗೆ 5 : 4 (OCVKN)
ನೀವು ಕರ್ತ ಯೇಸುವಿನ ಹೆಸರಿನಲ್ಲಿ ಸಭೆಯಾಗಿ ಬಂದು ಸೇರಿದಾಗ, ನಾನೂ ಆತ್ಮದಲ್ಲಿ ನಿಮ್ಮೊಂದಿಗಿದ್ದು ನಮಗೆ ಕರ್ತ ಆಗಿರುವ ಯೇಸುವಿನ ಸಾನಿಧ್ಯ ಶಕ್ತಿಯೊಂದಿರುವಾಗ,
1 ಕೊರಿಂಥದವರಿಗೆ 5 : 5 (OCVKN)
ಕರ್ತ ಯೇಸುವಿನ ಪುನರಾಗಮನ ದಿನದಲ್ಲಿ ಆ ಮನುಷ್ಯನ ಆತ್ಮವು ರಕ್ಷಣೆ ಹೊಂದುವಂತೆಯೂ ಅವನ ಪಾಪಭರಿತ ಶರೀರವು ನಾಶವಾಗುವಂತೆಯೂ ಅವನನ್ನು ಸೈತಾನನಿಗೆ ಒಪ್ಪಿಸಿ ಬಿಡುತ್ತೇನೆ.
1 ಕೊರಿಂಥದವರಿಗೆ 5 : 6 (OCVKN)
ನೀವು ಜಂಬ ಕೊಚ್ಚಿಕೊಳ್ಳುವುದು ಸರಿಯಲ್ಲ. ಸ್ವಲ್ಪ ಹುಳಿ ಕಲಸಿದರೆ ಕಣಕವೆಲ್ಲಾ ಹುಳಿಯಾಗುತ್ತದೆಂಬುದು ನಿಮಗೆ ತಿಳಿಯದೋ?
1 ಕೊರಿಂಥದವರಿಗೆ 5 : 7 (OCVKN)
ಹೊಸ ಕಣಕವಾಗುವಂತೆ ಹುಳಿಯನ್ನು ತೆಗೆದುಹಾಕಿರಿ. ನೀವು ಹುಳಿಯಿಲ್ಲದವರಾಗಿದ್ದೀರಲ್ಲ. ಏಕೆಂದರೆ ನಮ್ಮ ಪಸ್ಕದ ಕುರಿಯಾದ ಕ್ರಿಸ್ತ ಯೇಸು ಯಜ್ಞಾರ್ಪಿತನಾಗಿದ್ದಾರೆ.
1 ಕೊರಿಂಥದವರಿಗೆ 5 : 8 (OCVKN)
ಆದಕಾರಣ ಹಗೆತನ, ದುಷ್ಟತನ, ಎಂಬ ಹಳೇ ಹುಳಿಯಿಂದಲ್ಲ, ಯಥಾರ್ಥತೆ ಹಾಗೂ ಸತ್ಯ ಎಂಬ ಹುಳಿಯಿಲ್ಲದ ರೊಟ್ಟಿಯಿಂದಲೇ ಹಬ್ಬವನ್ನು ಆಚರಿಸೋಣ.
1 ಕೊರಿಂಥದವರಿಗೆ 5 : 9 (OCVKN)
ಅನೈತಿಕರೊಡನೆ ಸಹವಾಸ ಮಾಡಬಾರದೆಂದು ನಾನು ಪತ್ರದಲ್ಲಿ ಬರೆದಿದ್ದೆನಷ್ಟೆ.
1 ಕೊರಿಂಥದವರಿಗೆ 5 : 10 (OCVKN)
ಈ ಲೋಕದಲ್ಲಿರುವ ಎಲ್ಲಾ ಅನೈತಿಕರು, ಲೋಭಿಗಳು, ಸುಲಿಗೆ ಮಾಡುವವರು, ವಿಗ್ರಹಾರಾಧಕರು ಇಂಥವರ ಸಹವಾಸವನ್ನು ನೀವು ಬಿಟ್ಟು ಇರಬೇಕೆಂಬುದು ನನ್ನ ಅರ್ಥವಲ್ಲ. ಹಾಗಿದ್ದರೆ, ನೀವು ಈ ಲೋಕವನ್ನೇ ಬಿಟ್ಟು ಹೋಗಬೇಕಾಗುವುದು.
1 ಕೊರಿಂಥದವರಿಗೆ 5 : 11 (OCVKN)
ಆದರೆ ಸಹೋದರಿ ಅಥವಾ ಸಹೋದರನೆನಿಸಿಕೊಂಡವನು ಜಾರನಾದರೂ ಲೋಭಿಯಾದರೂ ವಿಗ್ರಹಾರಾಧಕನಾದರೂ ಪರನಿಂದಕನಾದರೂ ಕುಡುಕನಾದರೂ ಸುಲಿಗೆ ಮಾಡುವವನಾದರೂ ಆಗಿದ್ದರೆ, ಅಂಥವರ ಸಹವಾಸ ಮಾಡಬೇಡಿರಿ. ಅಂಥವರ ಸಂಗಡ ಊಟ ಮಾಡಲೂ ಬೇಡಿರಿ ಎಂದು ಈಗ ಬರೆಯುತ್ತಿದ್ದೇನೆ.
1 ಕೊರಿಂಥದವರಿಗೆ 5 : 12 (OCVKN)
ಸಭೆಗೆ ಸೇರದಿರುವ ಹೊರಗಿನವರನ್ನು ತೀರ್ಪುಮಾಡುವುದಕ್ಕೆ ನಾನು ಯಾರು? ಸಭೆಯ ಒಳಗಿನವರನ್ನು ತೀರ್ಪುಮಾಡಬೇಕಾದವರು ನೀವಲ್ಲವೇ?
1 ಕೊರಿಂಥದವರಿಗೆ 5 : 13 (OCVKN)
ಆದರೆ ಹೊರಗಿನವರನ್ನು ತೀರ್ಪುಮಾಡುವವರು ದೇವರೇ. “ಆ ದುಷ್ಟನನ್ನು ನಿಮ್ಮಿಂದ ತೆಗೆದು ಹೊರಗೆ ಹಾಕಿರಿ.”* ಧರ್ಮೋ 13:5; 17:7; 19:19; 21:21; 22:21,24; 24:7

1 2 3 4 5 6 7 8 9 10 11 12 13