1 ಕೊರಿಂಥದವರಿಗೆ 4 : 1 (OCVKN)
ಕ್ರಿಸ್ತ ಯೇಸುವಿನ ಅಪೊಸ್ತಲರು ಆದ್ದರಿಂದ ನೀವು ಈ ರೀತಿಯಾಗಿ ನಮ್ಮನ್ನು ಪರಿಗಣಿಸಬೇಕು: ನಾವು ಕ್ರಿಸ್ತ ಯೇಸುವಿನ ದಾಸರೆಂತಲೂ ದೇವರ ರಹಸ್ಯಗಳ ನಂಬಿಗಸ್ತ ನಿರ್ವಾಹಕರೆಂದೂ ಪರಿಗಣಿಸಿರಿ.
1 ಕೊರಿಂಥದವರಿಗೆ 4 : 2 (OCVKN)
ಹೀಗಿರುವುದರಿಂದ ನಂಬಿಗಸ್ತರಾಗಿರುವುದು ನಿರ್ವಾಹಕರಲ್ಲಿ ಅವಶ್ಯವಾಗಿ ಕಾಣತಕ್ಕ ಸದ್ಗುಣವಾಗಿದೆ.
1 ಕೊರಿಂಥದವರಿಗೆ 4 : 3 (OCVKN)
ನನಗಾದರೋ ನಿಮ್ಮಿಂದಾಗಲಿ, ಮನುಷ್ಯರ ನ್ಯಾಯಾಲಯದಿಂದಾಗಲಿ ವಿಚಾರಣೆಯಾಗುವುದು ಅತ್ಯಲ್ಪ ಕಾರ್ಯವಾಗಿದೆ. ನನ್ನನ್ನು ನಾನೇ ನ್ಯಾಯತೀರ್ಪು ಮಾಡಿಕೊಳ್ಳುವುದೂ ಇಲ್ಲ.
1 ಕೊರಿಂಥದವರಿಗೆ 4 : 4 (OCVKN)
ನನ್ನ ಮನಸ್ಸಾಕ್ಷಿಯು ಶುದ್ಧವಾಗಿದೆ. ಆದರೆ ಅದು ನನ್ನನ್ನು ನಿರ್ದೋಷಿಯೆಂದು ಹೇಳುವಂತಿಲ್ಲ. ನನ್ನ ನ್ಯಾಯತೀರಿಸುವವರು ಕರ್ತದೇವರೇ,
1 ಕೊರಿಂಥದವರಿಗೆ 4 : 5 (OCVKN)
ಆದುದರಿಂದ ನೀವು ಕಾಲಕ್ಕೆ ಮೊದಲು ಯಾವುದನ್ನು ಕುರಿತೂ ತೀರ್ಪುಮಾಡದೆ, ಕರ್ತದೇವರ ಬರುವಿಕೆಗಾಗಿ ಕಾಯಿರಿ. ಅವರು ಕತ್ತಲಲ್ಲಿರುವ ಗುಪ್ತ ಕಾರ್ಯಗಳನ್ನು ಬೆಳಕಿಗೆ ತಂದು ಮನುಷ್ಯನ ಹೃದಯದ ಉದ್ದೇಶಗಳನ್ನು ಪ್ರತ್ಯಕ್ಷಪಡಿಸುವರು. ಆಗ ಪ್ರತಿಯೊಬ್ಬನಿಗೆ ಬರತಕ್ಕ ಹೊಗಳಿಕೆಯು ದೇವರಿಂದ ಬರುವುದು.
1 ಕೊರಿಂಥದವರಿಗೆ 4 : 6 (OCVKN)
ಪ್ರಿಯರೇ, ನಾನು ನಿಮ್ಮ ಪ್ರಯೋಜನಕ್ಕಾಗಿ ಇವುಗಳನ್ನು ದೃಷ್ಟಾಂತರೂಪವಾಗಿ ನನ್ನ ವಿಷಯದಲ್ಲಿಯೂ ಅಪೊಲ್ಲೋಸನ ವಿಷಯದಲ್ಲಿಯೂ ಹೇಳಿದ್ದೇನೆ. “ನೀವು ಬರೆದಿರುವುದಕ್ಕೆ ಮೀರಿ ಹೋಗಬಾರದು,” ಎಂಬ ಹೇಳಿಕೆಯ ಅರ್ಥವನ್ನು ನಮ್ಮಿಂದ ಕಲಿತುಕೊಳ್ಳಬಹುದು. ಆಗ ನಿಮ್ಮಲ್ಲಿ ಒಬ್ಬರು ಮತ್ತೊಬ್ಬರನ್ನು ಅನುಸರಿಸುತ್ತಿದ್ದೇವೆಂದು ಹೇಳಿಕೊಳ್ಳುವುದರ ವಿರೋಧವಾಗಿ ಹೆಮ್ಮೆ ಪಡುವುದಿಲ್ಲ.
1 ಕೊರಿಂಥದವರಿಗೆ 4 : 7 (OCVKN)
ನಿಮ್ಮನ್ನು ಇತರರಿಗಿಂತಲೂ ವ್ಯತ್ಯಾಸವುಳ್ಳವರಾಗಿ ಮಾಡಿದವರು ಯಾರು? ನೀವು ದೇವರಿಂದ ಪಡೆಯದಿರುವಂಥದು ನಿಮ್ಮಲ್ಲಿ ಯಾವುದಾದರೂ ಇದೆಯೇ? ಹೀಗೆ ಎಲ್ಲವನ್ನೂ ಪಡೆದ ಮೇಲೆ, ಪಡೆಯದವರಂತೆ ನೀವು ಹೆಮ್ಮೆ ಪಟ್ಟುಕೊಳ್ಳುವುದೇಕೆ?
1 ಕೊರಿಂಥದವರಿಗೆ 4 : 8 (OCVKN)
ಈಗ ನೀವು ತೃಪ್ತರಾಗಿದ್ದೀರಿ! ಈಗಾಗಲೇ ಐಶ್ವರ್ಯವಂತರಾಗಿದ್ದೀರಿ. ನಮ್ಮ ಸಹಾಯವಿಲ್ಲದೆ ಆಳುತ್ತಿದ್ದೀರಿ. ನೀವು ನಿಜವಾಗಿಯೂ ಅರಸರಾಗಿದ್ದರೆ, ನಾವು ಸಹ ನಿಮ್ಮೊಂದಿಗೆ ಸೇರಿ ಆಳುತ್ತಿದ್ದೇವಲ್ಲವೇ?
1 ಕೊರಿಂಥದವರಿಗೆ 4 : 9 (OCVKN)
ಅಪೊಸ್ತಲರಾದ ನಮ್ಮನ್ನು ಮರಣದಂಡನೆ ಹೊಂದಿದವರಂತೆ ದೇವರು ಮೆರವಣಿಗೆಯ ಕಡೆಯವರನ್ನಾಗಿ ಮಾಡಿ ತೋರಿಸಿದ್ದಾರೆಂದು ನನಗನಿಸುತ್ತದೆ. ಏಕೆಂದರೆ, ದೇವರು ನಮ್ಮನ್ನು ದೇವದೂತರಿಗೂ ಮನುಷ್ಯರಿಗೂ ಇಡೀ ಜಗತ್ತಿಗೂ ಹಾಸ್ಯಾಸ್ಪದವಾದ ನೋಟವನ್ನಾಗಿ ಮಾಡಿದ್ದಾರೆ.
1 ಕೊರಿಂಥದವರಿಗೆ 4 : 10 (OCVKN)
ನಾವು ಕ್ರಿಸ್ತ ಯೇಸುವಿನ ನಿಮಿತ್ತ ಮೂರ್ಖರಾಗಿದ್ದೇವೆ! ನೀವೋ ಕ್ರಿಸ್ತ ಯೇಸುವಿನಲ್ಲಿ ಬುದ್ಧಿವಂತರು, ನಾವೋ ಬಲಹೀನರು. ನೀವು ಬಲಿಷ್ಠರು, ನೀವು ಮಾನವಂತರು, ನಾವೋ ಮಾನಹೀನರು!
1 ಕೊರಿಂಥದವರಿಗೆ 4 : 11 (OCVKN)
ಈ ಗಳಿಗೆಯವರೆಗೂ ನಾವು ಹಸಿದು ಬಾಯಾರಿದವರೂ, ಸಾಕಷ್ಟು ವಸ್ತ್ರವಿಲ್ಲದವರೂ, ಕ್ರೂರವಾಗಿ ಪೆಟ್ಟಿಗೆ ಗುರಿಯಾಗುವವರೂ, ಮನೆಯಿಲ್ಲದವರೂ,
1 ಕೊರಿಂಥದವರಿಗೆ 4 : 12 (OCVKN)
ಸ್ವಂತ ಕೈಯಿಂದ ಕೆಲಸಮಾಡಿ ದುಡಿಯುವವರೂ ಆಗಿದ್ದೇವೆ. ಶಪಿಸಿಕೊಂಡು ಆಶೀರ್ವದಿಸುತ್ತೇವೆ, ಹಿಂಸೆಪಟ್ಟು ಸಹಿಸಿಕೊಳ್ಳುತ್ತೇವೆ,
1 ಕೊರಿಂಥದವರಿಗೆ 4 : 13 (OCVKN)
ಅಪಕೀರ್ತಿ ಹೊಂದಿ ಸಮಾಧಾನವಾಗುತ್ತೇವೆ. ನಾವು ಈಗಿನ ವರೆಗೂ ಭೂಮಿಯ ಕಸವೋ ವಿಶ್ವದ ಹೊಲಸೋ ಎಂಬಂತೆ ಆಗಿದ್ದೇವೆ.
1 ಕೊರಿಂಥದವರಿಗೆ 4 : 14 (OCVKN)
ಪೌಲನ ಬೇಡಿಕೆ ಹಾಗೂ ಬುದ್ಧಿಮಾತುಗಳು ನಾನು ನಿಮ್ಮನ್ನು ನಾಚಿಕೆಪಡಿಸುವುದಕ್ಕಾಗಿ ಬರೆಯದೆ, ನನ್ನ ಪ್ರಿಯ ಮಕ್ಕಳೆಂದು ನಿಮಗೆ ಬುದ್ಧಿ ಹೇಳುತ್ತೇನಷ್ಟೆ.
1 ಕೊರಿಂಥದವರಿಗೆ 4 : 15 (OCVKN)
ಏಕೆಂದರೆ, ನಿಮಗೆ ಕ್ರಿಸ್ತ ಯೇಸುವಿನಲ್ಲಿ ಹತ್ತು ಸಾವಿರ ಮಂದಿ ಪೋಷಕರು ಇದ್ದರೂ, ತಂದೆಗಳು ಬಹುಮಂದಿ ಇಲ್ಲ. ಸುವಾರ್ತೆಯ ಮೂಲಕ ಕ್ರಿಸ್ತ ಯೇಸುವಿನಲ್ಲಿ ನಾನು ನಿಮ್ಮ ತಂದೆಯಾದೆನು.
1 ಕೊರಿಂಥದವರಿಗೆ 4 : 16 (OCVKN)
ಆದ್ದರಿಂದ ನೀವು ನನ್ನನ್ನು ಅನುಕರಣೆ ಮಾಡುವವರಾಗಿ ಇರಬೇಕು ಎಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ.
1 ಕೊರಿಂಥದವರಿಗೆ 4 : 17 (OCVKN)
ಇದರ ನಿಮಿತ್ತವೇ ಕರ್ತ ದೇವರಲ್ಲಿ ನಂಬಿಗಸ್ತನಾಗಿರುವ ನನ್ನ ಮಗ ತಿಮೊಥೆಯನನ್ನು ನಿಮ್ಮ ಬಳಿಗೆ ಕಳುಹಿಸಿಕೊಟ್ಟಿದ್ದೇನೆ. ಅವನು ನನಗೆ ಪ್ರಿಯನಾಗಿದ್ದಾನೆ. ನಾನು ಎಲ್ಲಾ ಕಡೆಗಳಲ್ಲಿಯೂ ಪ್ರತಿಯೊಂದು ಸಭೆಯಲ್ಲಿಯೂ ಬೋಧಿಸುವುದರ ಪ್ರಕಾರ, ಅವನು ಕ್ರಿಸ್ತ ಯೇಸುವಿನಲ್ಲಿರುವ ನನ್ನ ನಡವಳಿಕೆಯನ್ನು, ನಿಮ್ಮ ನೆನಪಿಗೆ ತರುವನು.
1 ಕೊರಿಂಥದವರಿಗೆ 4 : 18 (OCVKN)
ನಾನು ನಿಮ್ಮಲ್ಲಿಗೆ ಬರುವುದಿಲ್ಲವೆಂದು ಕೆಲವರು ಅಹಂಕಾರಿಗಳಾಗಿದ್ದಾರೆ.
1 ಕೊರಿಂಥದವರಿಗೆ 4 : 19 (OCVKN)
ಆದರೆ ಕರ್ತದೇವರ ಚಿತ್ತವಿದ್ದರೆ, ನಾನು ಬೇಗ ನಿಮ್ಮ ಬಳಿಗೆ ಬಂದು, ಅಹಂಕಾರಿಗಳ ಮಾತನ್ನಲ್ಲ, ಅವರಿಗೆ ಎಷ್ಟು ಶಕ್ತಿ ಇದೆ ಎಂಬುವುದನ್ನು ಕಂಡುಕೊಳ್ಳುವೆನು.
1 ಕೊರಿಂಥದವರಿಗೆ 4 : 20 (OCVKN)
ಏಕೆಂದರೆ ದೇವರ ರಾಜ್ಯವು ಮಾತಿನಲ್ಲಿ ಅಲ್ಲ, ಶಕ್ತಿಯಲ್ಲಿ ಇದೆ.
1 ಕೊರಿಂಥದವರಿಗೆ 4 : 21 (OCVKN)
ಶಿಸ್ತಿನ ಬೆತ್ತವನ್ನು ಹಿಡಿದು ಬಿಗಿಯಲು ನಿಮ್ಮ ಬಳಿ ಬರಲೋ? ಅಥವಾ ಪ್ರೀತಿ ಸೌಮ್ಯದಿಂದ ಬರಲೋ? ನಿಮಗೆ ಯಾವುದು ಇಷ್ಟ?
❮
❯
1
2
3
4
5
6
7
8
9
10
11
12
13
14
15
16
17
18
19
20
21