1 ಪೂರ್ವಕಾಲವೃತ್ತಾ 9 : 1 (OCVKN)
1 ಪೂರ್ವಕಾಲವೃತ್ತಾ 9 : 2 (OCVKN)
ಇಸ್ರಾಯೇಲಿನ ಎಲ್ಲಾ ಜನರನ್ನು ಅವರ ಕುಟುಂಬಗಳಿಗೆ ಅನುಗುಣವಾಗಿ ಪಟ್ಟಿಮಾಡಲಾಗಿದೆ. ಈ ಮಾಹಿತಿ ಇಸ್ರಾಯೇಲಿನ ಅರಸರ ಪುಸ್ತಕದಲ್ಲಿ ದಾಖಲಾಗಿದೆ. ಯೆಹೂದ್ಯರು ದ್ರೋಹಿಗಳಾದದರಿಂದ ಬಾಬೆಲಿಗೆ ಸೆರೆಯವರಾಗಿ ಹೋಗಬೇಕಾಯಿತು. ಯೆರೂಸಲೇಮಿನವರ ಪಟ್ಟಿ ತಮ್ಮ ಸ್ವಾಸ್ತ್ಯಗಳಲ್ಲಿ, ತಮ್ಮ ಪಟ್ಟಣಗಳಲ್ಲಿ ಮೊದಲು ವಾಸವಾಗಿದ್ದವರಲ್ಲಿ ಕೆಲವರು ಇಸ್ರಾಯೇಲರೂ, ಯಾಜಕರೂ, ಲೇವಿಯರೂ ಮತ್ತು ದೇವಾಲಯದ ಸೇವಕರೂ ಆಗಿದ್ದರು.
1 ಪೂರ್ವಕಾಲವೃತ್ತಾ 9 : 3 (OCVKN)
ಯೆರೂಸಲೇಮಿನಲ್ಲಿ ವಾಸವಾಗಿದ್ದ ಯೆಹೂದನ ಮಕ್ಕಳೂ, ಬೆನ್ಯಾಮೀನನ ಮಕ್ಕಳೂ, ಎಫ್ರಾಯೀಮ್, ಮನಸ್ಸೆ ಎಂಬವರ ಮಕ್ಕಳು ಯಾರೆಂದರೆ:
1 ಪೂರ್ವಕಾಲವೃತ್ತಾ 9 : 4 (OCVKN)
ಯೆಹೂದನ ಮಗನಾದ ಪೆರೆಚನ ಮಕ್ಕಳಲ್ಲಿ ಒಬ್ಬನಾದ ಬಾನೀಯ ಮಗನಾದ ಇಮ್ರಿಯು, ಇವನ ಮಗನಾದ ಒಮ್ರಿ, ಇವನ ಮಗನು ಅಮ್ಮೀಹೂದನು, ಇವನ ಮಗನು ಉತೈ.
1 ಪೂರ್ವಕಾಲವೃತ್ತಾ 9 : 5 (OCVKN)
ಶೇಲಾಹನರಲ್ಲಿ ಚೊಚ್ಚಲಮಗನಾದ ಅಸಾಯನು, ಅವನ ಪುತ್ರರು.
1 ಪೂರ್ವಕಾಲವೃತ್ತಾ 9 : 6 (OCVKN)
ಜೆರಹನ ಪುತ್ರರಲ್ಲಿ ಯೆಯೂವೇಲನೂ, ಅವನ ಸಹೋದರರೂ 690 ಮಂದಿ.
1 ಪೂರ್ವಕಾಲವೃತ್ತಾ 9 : 7 (OCVKN)
ಬೆನ್ಯಾಮೀನ್ಯರಲ್ಲಿ ಹಸ್ಸೆನುವಾಹನ ಮಗನು ಹೋದವ್ಯನ ಮಗನು ಮೆಷುಲ್ಲಾಮನ ಮಗ ಸಲ್ಲು,
1 ಪೂರ್ವಕಾಲವೃತ್ತಾ 9 : 8 (OCVKN)
ಯೆರೋಹಾಮನ ಮಗ ಇಬ್ನೇಯಾಹನೂ; ಮಿಕ್ರಿಯ ಮಗ ಉಜ್ಜೀಯ ಮಗ ಏಲಾನೂ; ಇಬ್ನಿಯನ ಮಗ ರೆಯೂವೇಲನ ಮಗ, ಶೆಫಟ್ಯನ ಮಗ ಮೆಷುಲ್ಲಾಮನೂ,
1 ಪೂರ್ವಕಾಲವೃತ್ತಾ 9 : 9 (OCVKN)
ಅವರ ಸಹೋದರರೂ ತಮ್ಮ ವಂಶಗಳ ಪ್ರಕಾರ 956 ಮಂದಿ. ಇವರೆಲ್ಲರು ತಮ್ಮ ಕುಟುಂಬಗಳ ಮುಖ್ಯಸ್ಥರಾಗಿದ್ದರು.
1 ಪೂರ್ವಕಾಲವೃತ್ತಾ 9 : 10 (OCVKN)
ಯಾಜಕರಲ್ಲಿ ಯಾರೆಂದರೆ ಯೆದಾಯನೂ, ಯೆಹೋಯಾರೀಬನೂ, ಯಾಕೀನನೂ;
1 ಪೂರ್ವಕಾಲವೃತ್ತಾ 9 : 11 (OCVKN)
ದೇವರ ಮನೆಯ ಅಧಿಕಾರಿಯಾದ ಅಹೀಟೂಬನ ಮಗ ಮೆರಾಯೋತನ ಮಗ ಚಾದೋಕನ ಮಗ ಮೆಷುಲ್ಲಾಮನ ಮಗನಾದ ಹಿಲ್ಕೀಯನ ಮಗನು ಅಜರ್ಯನೂ;
1 ಪೂರ್ವಕಾಲವೃತ್ತಾ 9 : 12 (OCVKN)
ಮಲ್ಕೀಯನ ಮಗ ಪಷ್ಹೂರನ ಮಗ ಯೆರೋಹಾಮನ ಮಗ ಅದಾಯನು. ಇಮ್ಮೇರನ ಮಗ ಮೆಷಿಲ್ಲೇಮೋತನ ಮಗ ಮೆಷುಲ್ಲಾಮನ ಮಗ ಯಹ್ಜೇರನ ಮಗ ಅದೀಯೇಲನ ಮಗ ಮಾಸೈಯನೂ;
1 ಪೂರ್ವಕಾಲವೃತ್ತಾ 9 : 13 (OCVKN)
ಅವರ ಸಹೋದರರೂ ತಮ್ಮ ಕುಟುಂಬಗಳಲ್ಲಿ ಯಜಮಾನರು 1,760 ಮಂದಿಯಾಗಿದ್ದರು. ಇವರು ದೇವರ ಮನೆಯ ಸೇವೆಯ ಕೆಲಸದಲ್ಲಿ ಪರಾಕ್ರಮಶಾಲಿಗಳಾಗಿದ್ದರು.
1 ಪೂರ್ವಕಾಲವೃತ್ತಾ 9 : 14 (OCVKN)
ಲೇವಿಯರಲ್ಲಿ ಯಾರೆಂದರೆ: ಮೆರಾರೀಯ ಪುತ್ರರಲ್ಲಿ ಒಬ್ಬನಾದ ಹಷ್ಷೂಬನ ಮಗ ಅಜ್ರೀಕಾಮನ ಮಗ ಹಷಬ್ಯನ ಮಗ ಶೆಮಾಯನೂ;
1 ಪೂರ್ವಕಾಲವೃತ್ತಾ 9 : 15 (OCVKN)
ಬಕ್ಬಕ್ಕರನೂ, ಹೆರೆಷನೂ, ಗಲಾಲನೂ, ಆಸಾಫನ ಮಗ, ಜಿಕ್ರಿಯ ಮಗ, ಮೀಕನ ಮಗ ಮತ್ತನ್ಯನೂ;
1 ಪೂರ್ವಕಾಲವೃತ್ತಾ 9 : 16 (OCVKN)
ಯೆದುತೂನನ ಮಗ, ಗಲಾಲನ ಮಗ, ಶೆಮಾಯನ ಮಗ, ಓಬದ್ಯನೂ; ಎಲ್ಕಾನನ ಮಗ ಆಸನ ಮಗ ಬೆರೆಕ್ಯನೂ ಇವರು ನೆಟೋಫದವರ ಊರುಗಳಲ್ಲಿ ವಾಸವಾಗಿದ್ದರು.
1 ಪೂರ್ವಕಾಲವೃತ್ತಾ 9 : 17 (OCVKN)
ದ್ವಾರಪಾಲಕರು ಯಾರೆಂದರೆ: ಶಲ್ಲೂಮನೂ, ಅಕ್ಕೂಬನೂ, ಟಲ್ಮೋನನೂ, ಅಹೀಮನ್‌ನೂ, ಅವರ ಸಹೋದರರೂ. ಅವರಲ್ಲಿ ಶಲ್ಲೂಮನು ಮುಖ್ಯಸ್ಥನಾಗಿದ್ದನು.
1 ಪೂರ್ವಕಾಲವೃತ್ತಾ 9 : 18 (OCVKN)
ಇವರು ಈವರೆಗೂ ಪೂರ್ವದಿಕ್ಕಿನಲ್ಲಿರುವ ಅರಸನ ಬಾಗಿಲಲ್ಲಿ ಕಾದುಕೊಂಡಿದ್ದರು. ಇವರು ಲೇವಿಯ ಮಕ್ಕಳ ದಂಡುಗಳಲ್ಲಿ ದ್ವಾರಪಾಲಕರಾಗಿದ್ದರು.
1 ಪೂರ್ವಕಾಲವೃತ್ತಾ 9 : 19 (OCVKN)
ಇದಲ್ಲದೆ ಕೋರಹನ ಮಗನಾದ ಎಬ್ಯಾಸಾಫನ ಮೊಮ್ಮಗನೂ ಕೋರೇಯನ ಮರಿಮಗನಾದ ಶಲ್ಲೂಮನೂ, ಅವನ ತಂದೆಯ ಮನೆಯವರಾಗಿರುವ ತನ್ನ ಸಹೋದರರಾದ ಕೋರಹಿಯರೂ ಸೇವೆಯ ಕೆಲಸದ ಮೇಲಿದ್ದು, ದೇವದರ್ಶನ ಗುಡಾರದ ಬಾಗಿಲಿನ ಕಾವಲುಗಾರರಾಗಿದ್ದರು. ಅವರ ಪಿತೃಗಳು ಯೆಹೋವ ದೇವರ ಗುಡಾರದ ದ್ವಾರಗಳ ಕಾವಲಿನವರಾಗಿದ್ದರು.
1 ಪೂರ್ವಕಾಲವೃತ್ತಾ 9 : 20 (OCVKN)
ಎಲಿಯಾಜರನ ಮಗನಾದ ಫೀನೆಹಾಸನು ಮುಂಚೆ ಅವರ ಮೇಲೆ ಅಧಿಕಾರಿಯಾಗಿದ್ದನು. ಯೆಹೋವ ದೇವರು ಅವರ ಸಂಗಡ ಇದ್ದರು.
1 ಪೂರ್ವಕಾಲವೃತ್ತಾ 9 : 21 (OCVKN)
ಮೆಷೆಲೆಮ್ಯನ ಮಗನಾದ ಜೆಕರ್ಯನು ದೇವದರ್ಶನ ಗುಡಾರದ ದ್ವಾರಪಾಲಕನಾಗಿದ್ದನು.
1 ಪೂರ್ವಕಾಲವೃತ್ತಾ 9 : 22 (OCVKN)
ಬಾಗಿಲುಗಳಲ್ಲಿ ದ್ವಾರಪಾಲಕರಾಗಿರಲು ಆಯ್ಕೆಯಾದ ಇವರೆಲ್ಲರು 212 ಮಂದಿಯಾಗಿದ್ದರು. ಇವರು ಹೆಸರುಗಳು ಅವರವರ ಗ್ರಾಮಗಳಲ್ಲಿ ಅವರ ವಂಶಾವಳಿಯ ಪ್ರಕಾರ ಲಿಖಿತವಾಗಿದ್ದವು. ಇವರು ನಂಬಿಗಸ್ತರಾದ್ದರಿಂದ ದಾವೀದನೂ, ದರ್ಶಿಯಾದ ಸಮುಯೇಲನೂ ಇವರನ್ನು ಜವಾಬ್ದಾರಿಯ ಸ್ಥಾನಗಳಿಗೆ ನೇಮಿಸಿದರು.
1 ಪೂರ್ವಕಾಲವೃತ್ತಾ 9 : 23 (OCVKN)
ಹೀಗೆಯೇ ಅವರಿಗೂ, ಅವರ ಮಕ್ಕಳಿಗೂ ಯೆಹೋವ ದೇವರ ಮನೆಯ ಬಾಗಿಲು ಕಾವಲಿತ್ತು. ಅದು ದೇವದರ್ಶನ ಗುಡಾರವೆಂಬ ಮನೆಯ ಪ್ರಕಾರ ಕಾವಲುಗಾರರಿಂದ ಕಾಯಬೇಕಾಗಿತ್ತು.
1 ಪೂರ್ವಕಾಲವೃತ್ತಾ 9 : 24 (OCVKN)
ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ನಾಲ್ಕು ದಿಕ್ಕುಗಳಲ್ಲಿ ದ್ವಾರಪಾಲಕರಿದ್ದರು.
1 ಪೂರ್ವಕಾಲವೃತ್ತಾ 9 : 25 (OCVKN)
ಗ್ರಾಮಗಳಲ್ಲಿ ಇದ್ದ ಅವರ ಸಹೋದರರು ತಮ್ಮ ಕ್ರಮದ ಪ್ರಕಾರವಾಗಿ ಏಳೇಳು ದಿವಸಗಳಲ್ಲಿ ಬರುವ ನೇಮಕವಿತ್ತು.
1 ಪೂರ್ವಕಾಲವೃತ್ತಾ 9 : 26 (OCVKN)
ಏಕೆಂದರೆ ದ್ವಾರಪಾಲಕರಲ್ಲಿರುವ ನಾಲ್ಕು ಮಂದಿ ಮುಖ್ಯಸ್ಥರಾದ ಈ ಲೇವಿಯರು ತಮ್ಮ ನೇಮಕವಾದ ಉದ್ಯೋಗದಲ್ಲಿ ಇದ್ದು ದೇವರ ಆಲಯದ ಉಗ್ರಾಣಗಳ ಮೇಲೆಯೂ ಬೊಕ್ಕಸಗಳ ಜವಾಬ್ದಾರಿಯನ್ನು ವಹಿಸಲಾಗಿತ್ತು.
1 ಪೂರ್ವಕಾಲವೃತ್ತಾ 9 : 27 (OCVKN)
ಅವರು ದೇವರ ಆಲಯದ ಸುತ್ತಲೂ ರಾತ್ರಿಯನ್ನು ಕಳೆಯುತ್ತಿದ್ದರು, ಏಕೆಂದರೆ ಅವರು ಅದನ್ನು ಕಾವಲು ಕಾಯಬೇಕಾಗಿತ್ತು. ಮತ್ತು ಪ್ರತಿದಿನ ಬೆಳಿಗ್ಗೆ ಬಾಗಿಲುಗಳನ್ನು ತೆರೆಯುತ್ತಿದ್ದರು.
1 ಪೂರ್ವಕಾಲವೃತ್ತಾ 9 : 28 (OCVKN)
ಸೇವೆಯ ಸಲಕರಣೆಗಳನ್ನು ಒಳಗೆ ಲೆಕ್ಕದ ಪ್ರಕಾರ ತರುವುದಕ್ಕೂ, ಹೊರಗೆ ಲೆಕ್ಕದ ಪ್ರಕಾರ ತರುವುದಕ್ಕೂ ಅವರಲ್ಲಿ ಕೆಲವರು ಅವುಗಳ ಮೇಲೆ ನೇಮಕವಾಗಿದ್ದರು.
1 ಪೂರ್ವಕಾಲವೃತ್ತಾ 9 : 29 (OCVKN)
ಅವರಲ್ಲಿ ಕೆಲವರು ಸಲಕರಣೆಗಳನ್ನೂ, ಪರಿಶುದ್ಧ ಸ್ಥಾನದಲ್ಲಿರುವ ಎಲ್ಲಾ ಸಾಮಗ್ರಿಗಳನ್ನೂ, ನಯವಾದ ಹಿಟ್ಟನ್ನೂ, ದ್ರಾಕ್ಷಾರಸವನ್ನೂ, ಎಣ್ಣೆಯನ್ನೂ, ಸಾಂಬ್ರಾಣಿಯನ್ನೂ, ಸುಗಂಧಗಳನ್ನೂ ಕಾಯಲು ನೇಮಕರಾಗಿದ್ದರು.
1 ಪೂರ್ವಕಾಲವೃತ್ತಾ 9 : 30 (OCVKN)
ಯಾಜಕರ ಪುತ್ರರಲ್ಲಿ ಕೆಲವರು ಸುಗಂಧಗಳಿಂದ ತೈಲವನ್ನು ಮಾಡಿದರು.
1 ಪೂರ್ವಕಾಲವೃತ್ತಾ 9 : 31 (OCVKN)
ಕೋರಹಿಯನಾದ ಶಲ್ಲೂಮನ ಚೊಚ್ಚಲಮಗನಾದ ಮತ್ತಿತ್ಯನು ಲೇವಿಯರಲ್ಲಿ ಒಬ್ಬನಾಗಿದ್ದು, ತಟ್ಟೆಗಳ ಮೇಲೆ ಮಾಡುವ ಭಕ್ಷ್ಯಗಳ ಕೆಲಸದ ಮೇಲ್ವಿಚಾರಕನಾಗಿದ್ದನು.
1 ಪೂರ್ವಕಾಲವೃತ್ತಾ 9 : 32 (OCVKN)
ಕೊಹಾತ್ಯರ ಪುತ್ರರಾದ ಅವರ ಸಹೋದರರಲ್ಲಿ ಇನ್ನೂ ಕೆಲವರು ಸಮ್ಮುಖದ ರೊಟ್ಟಿಯನ್ನು ಪ್ರತಿ ಸಬ್ಬತ್* ಸಬ್ಬತ್ ಅಂದರೆ ವಿಶ್ರಾಂತಿ ದಿನ ದಿನದಲ್ಲಿ ಸಿದ್ಧಮಾಡುವ ಜವಾಬ್ದಾರಿಯನ್ನು ಹೊಂದಿದ್ದರು.
1 ಪೂರ್ವಕಾಲವೃತ್ತಾ 9 : 33 (OCVKN)
ಇದಲ್ಲದೆ ಲೇವಿಯರ ಕುಟುಂಬಗಳಲ್ಲಿ ಮುಖ್ಯಸ್ಥರಾದ ಇವರು ಹಾಡುಗಾರರಾಗಿದ್ದು, ಸ್ವತಂತ್ರವಾದ ಕೊಠಡಿಗಳಲ್ಲಿ ವಾಸವಾಗಿದ್ದರು. ಏಕೆಂದರೆ ಅವರು ರಾತ್ರಿ ಹಗಲು ಅದೇ ಕಾರ್ಯದಲ್ಲಿದ್ದರು.
1 ಪೂರ್ವಕಾಲವೃತ್ತಾ 9 : 34 (OCVKN)
ಲೇವಿಯರ ಕುಟುಂಬಗಳಲ್ಲಿ ಮುಖ್ಯಸ್ಥರಾದ ಇವರು ತಮ್ಮ ವಂಶಗಳಲ್ಲಿ ಮುಖ್ಯಸ್ಥರಾಗಿದ್ದು ಯೆರೂಸಲೇಮಿನಲ್ಲಿ ವಾಸವಾಗಿದ್ದರು.
1 ಪೂರ್ವಕಾಲವೃತ್ತಾ 9 : 35 (OCVKN)
ಸೌಲನ ವಂಶಾವಳಿ ಇದಲ್ಲದೆ ಗಿಬ್ಯೋನನ ಮೂಲಪುರುಷನಾದ ಯೆಹಿಯೇಲನು ಗಿಬ್ಯೋನಿನಲ್ಲಿ ವಾಸವಾಗಿದ್ದನು. ಅವನ ಹೆಂಡತಿಯ ಹೆಸರು ಮಾಕಳು.
1 ಪೂರ್ವಕಾಲವೃತ್ತಾ 9 : 36 (OCVKN)
ಅವನ ಚೊಚ್ಚಲ ಮಗನು ಅಬ್ದೋನನು ನಂತರ ಚೂರನು, ಕೀಷನು, ಬಾಳನು, ನೇರನು, ನಾದಾಬನು.
1 ಪೂರ್ವಕಾಲವೃತ್ತಾ 9 : 37 (OCVKN)
ಗೆದೋರನು, ಅಹಿಯೋನು, ಜೆಕರೀಯನು, ಮಿಕ್ಲೋತನು.
1 ಪೂರ್ವಕಾಲವೃತ್ತಾ 9 : 38 (OCVKN)
ಮಿಕ್ಲೋತನು ಶಿಮಾಮನನ್ನು ಪಡೆದನು. ಇವರೂ ಸಹ ಯೆರೂಸಲೇಮಿನಲ್ಲಿ ತಮ್ಮ ಸಹೋದರರ ಸಂಗಡ ವಾಸವಾಗಿದ್ದರು.
1 ಪೂರ್ವಕಾಲವೃತ್ತಾ 9 : 39 (OCVKN)
ನೇರನು ಕೀಷನನ್ನು ಪಡೆದನು; ಕೀಷನು ಸೌಲನನ್ನು ಪಡೆದನು; ಸೌಲನ ಮಕ್ಕಳು: ಯೋನಾತಾನ್, ಮಲ್ಕೀಷೂವ, ಅಬೀನಾದಾಬ್, ಎಷ್ಬಾಳ ಎಂಬವರು.
1 ಪೂರ್ವಕಾಲವೃತ್ತಾ 9 : 40 (OCVKN)
ಯೋನಾತಾನನ ಮಗನು ಮೆರೀಬ್ಬಾಳನು; ಮೆರೀಬ್ಬಾಳನು ಮೀಕನನ್ನು ಪಡೆದನು.
1 ಪೂರ್ವಕಾಲವೃತ್ತಾ 9 : 41 (OCVKN)
ಮೀಕನ ಪುತ್ರರು: ಪಿತೋನನು, ಮೇಲಕನು, ತಹ್ರೀಯನು ಮತ್ತು ಆಹಾಜನು.
1 ಪೂರ್ವಕಾಲವೃತ್ತಾ 9 : 42 (OCVKN)
ಆಹಾಜನು ಯಗ್ರಾಹನನ್ನು ಪಡೆದನು; ಯಗ್ರಾಹನು ಆಲೆಮೆತನನ್ನೂ, ಅಜ್ಮಾವೆತನನ್ನೂ, ಜಿಮ್ರಿಯನ್ನೂ ಪಡೆದನು; ಜಿಮ್ರಿಯು ಮೋಚನನ್ನು ಪಡೆದನು;
1 ಪೂರ್ವಕಾಲವೃತ್ತಾ 9 : 43 (OCVKN)
ಮೋಚನು ಬಿನ್ನನನ್ನು ಪಡೆದನು; ಅವನ ಮಗನು ರೆಫಾಯನು; ಅವನ ಮಗನು ಎಲ್ಲಾಸನು; ಅವನ ಮಗನು ಆಚೇಲನು.
1 ಪೂರ್ವಕಾಲವೃತ್ತಾ 9 : 44 (OCVKN)
ಈ ಆಚೇಲನಿಗೆ ಆರು ಮಂದಿ ಪುತ್ರರಿದ್ದರು: ಅವರ ಹೆಸರುಗಳು ಅಜ್ರೀಕಾಮನು, ಬೋಕೆರೂ, ಇಷ್ಮಾಯೇಲನು, ಶೆಯರ್ಯನು, ಓಬದ್ಯನು, ಹಾನಾನನು; ಇವರೆಲ್ಲರು ಆಚೇಲನ ಪುತ್ರರು.
❮
❯