1 ಪೂರ್ವಕಾಲವೃತ್ತಾ 6 : 1 (OCVKN)
ಲೇವಿ ಲೇವಿಯ ಪುತ್ರರು: ಗೇರ್ಷೋನ್, ಕೊಹಾತ್, ಮೆರಾರೀ.
1 ಪೂರ್ವಕಾಲವೃತ್ತಾ 6 : 2 (OCVKN)
ಕೊಹಾತನ ಪುತ್ರರು: ಅಮ್ರಾಮ್, ಇಚ್ಹಾರ್, ಹೆಬ್ರೋನ್, ಉಜ್ಜೀಯೇಲನು.
1 ಪೂರ್ವಕಾಲವೃತ್ತಾ 6 : 3 (OCVKN)
ಅಮ್ರಾಮನ ಪುತ್ರರು: ಆರೋನನು, ಮೋಶೆಯು, ಮಿರ್ಯಾಮಳು. ಆರೋನನ ಪುತ್ರರು: ನಾದಾಬ್, ಅಬೀಹೂ, ಎಲಿಯಾಜರ್, ಈತಾಮಾರ್.
1 ಪೂರ್ವಕಾಲವೃತ್ತಾ 6 : 4 (OCVKN)
ಎಲಿಯಾಜರನು ಫೀನೆಹಾಸನನ್ನು ಪಡೆದನು, ಫೀನೆಹಾಸನು ಅಬೀಷೂವನನ್ನು ಪಡೆದನು,
1 ಪೂರ್ವಕಾಲವೃತ್ತಾ 6 : 5 (OCVKN)
ಅಬೀಷೂವನು ಬುಕ್ಕೀಯನನ್ನು ಪಡೆದನು, ಬುಕ್ಕೀಯನು ಉಜ್ಜೀಯನನ್ನು ಪಡೆದನು,
1 ಪೂರ್ವಕಾಲವೃತ್ತಾ 6 : 6 (OCVKN)
ಉಜ್ಜೀಯನು ಜೆರಹ್ಯನನ್ನು ಪಡೆದನು, ಜೆರಹ್ಯನು ಮೆರಾಯೋತನನ್ನು ಪಡೆದನು,
1 ಪೂರ್ವಕಾಲವೃತ್ತಾ 6 : 7 (OCVKN)
ಮೆರಾಯೋತನು ಅಮರ್ಯನನ್ನು ಪಡೆದನು, ಅಮರ್ಯನು ಅಹೀಟೂಬನನ್ನು ಪಡೆದನು,
1 ಪೂರ್ವಕಾಲವೃತ್ತಾ 6 : 8 (OCVKN)
ಅಹೀಟೂಬನು ಚಾದೋಕನನ್ನು ಪಡೆದನು, ಚಾದೋಕನು ಅಹೀಮಾಚನನ್ನು ಪಡೆದನು,
1 ಪೂರ್ವಕಾಲವೃತ್ತಾ 6 : 9 (OCVKN)
ಅಹೀಮಾಚನು ಅಜರ್ಯನನ್ನು ಪಡೆದನು, ಅಜರ್ಯನು ಯೋಹಾನಾನನನ್ನು ಪಡೆದನು;
1 ಪೂರ್ವಕಾಲವೃತ್ತಾ 6 : 10 (OCVKN)
ಯೋಹಾನಾನನು ಅಜರ್ಯನನ್ನು ಪಡೆದನು. ಅಜರ್ಯನು ಯೆರೂಸಲೇಮಿನಲ್ಲಿ ಸೊಲೊಮೋನನು ಕಟ್ಟಿಸಿದ ದೇವಾಲಯದೊಳಗೆ ಯಾಜಕ ಸೇವೆ ಮಾಡುತ್ತಿದ್ದವನು.
1 ಪೂರ್ವಕಾಲವೃತ್ತಾ 6 : 11 (OCVKN)
ಅಜರ್ಯನು ಅಮರ್ಯನನ್ನು ಪಡೆದನು, ಅಮರ್ಯನು ಅಹೀಟೂಬನನ್ನು ಪಡೆದನು,
1 ಪೂರ್ವಕಾಲವೃತ್ತಾ 6 : 12 (OCVKN)
ಅಹೀಟೂಬನು ಚಾದೋಕನನ್ನು ಪಡೆದನು, ಚಾದೋಕನು ಶಲ್ಲೂಮನನ್ನು ಪಡೆದನು,
1 ಪೂರ್ವಕಾಲವೃತ್ತಾ 6 : 13 (OCVKN)
ಶಲ್ಲೂಮನು ಹಿಲ್ಕೀಯನನ್ನು ಪಡೆದನು, ಹಿಲ್ಕೀಯನು ಅಜರ್ಯನನ್ನು ಪಡೆದನು,
1 ಪೂರ್ವಕಾಲವೃತ್ತಾ 6 : 14 (OCVKN)
ಅಜರ್ಯನು ಸೆರಾಯನನ್ನು ಪಡೆದನು, ಸೆರಾಯನು ಯೆಹೋಚಾದಾಕನನ್ನು* ಯೆಹೋಚಾದಾಕ ಅಥವಾ ಯೋಚಾದಾಕ ಪಡೆದನು,
1 ಪೂರ್ವಕಾಲವೃತ್ತಾ 6 : 15 (OCVKN)
ಯೆಹೋವ ದೇವರು ನೆಬೂಕದ್ನೆಚ್ಚರನ ಕೈಯಿಂದ ಯೆಹೂದ, ಯೆರೂಸಲೇಮಿನವರನ್ನು ಸೆರೆಯಾಗಿ ಒಯ್ದಾಗ ಯೆಹೋಚಾದಾಕನು ಸೆರೆಯಾಗಿ ಹೋದನು.
1 ಪೂರ್ವಕಾಲವೃತ್ತಾ 6 : 16 (OCVKN)
ಲೇವಿಯ ಪುತ್ರರು: ಗೇರ್ಷೋಮ್, ಕೊಹಾತ್, ಮೆರಾರೀ ಎಂಬುವರು.
1 ಪೂರ್ವಕಾಲವೃತ್ತಾ 6 : 17 (OCVKN)
ಗೇರ್ಷೋಮನ ಪುತ್ರರ ಹೆಸರುಗಳು: ಲಿಬ್ನೀ, ಶಿಮ್ಮೀ.
1 ಪೂರ್ವಕಾಲವೃತ್ತಾ 6 : 18 (OCVKN)
ಕೊಹಾತನ ಪುತ್ರರು: ಅಮ್ರಾಮ್, ಇಚ್ಹಾರ್, ಹೆಬ್ರೋನ್, ಉಜ್ಜೀಯೇಲ್.
1 ಪೂರ್ವಕಾಲವೃತ್ತಾ 6 : 19 (OCVKN)
ಮೆರಾರೀಯ ಪುತ್ರರು: ಮಹ್ಲೀ, ಮೂಷೀ. ಲೇವಿಯರ ಸಂತತಿಗಳು ತಮ್ಮ ಪಿತೃಗಳ ಪ್ರಕಾರವಾಗಿ:
1 ಪೂರ್ವಕಾಲವೃತ್ತಾ 6 : 20 (OCVKN)
ಗೇರ್ಷೋಮಿನವರು: ಅವನ ಮಗ ಲಿಬ್ನೀ, ಅವನ ಮಗ ಯಹತ್, ಅವನ ಮಗ ಜಿಮ್ಮ,
1 ಪೂರ್ವಕಾಲವೃತ್ತಾ 6 : 21 (OCVKN)
ಅವನ ಮಗ ಯೋವಾಹ, ಅವನ ಮಗ ಇದ್ದೋ, ಅವನ ಮಗನಾದ ಜೆರಹ, ಅವನ ಮಗ ಯೆವತ್ರೈ.
1 ಪೂರ್ವಕಾಲವೃತ್ತಾ 6 : 22 (OCVKN)
ಕೊಹಾತನ ಪುತ್ರರು: ಅವನ ಮಗ ಅಮ್ಮೀನಾದಾಬ್, ಅವನ ಮಗ ಕೋರಹ, ಅವನ ಮಗ ಅಸ್ಸೀರ್,
1 ಪೂರ್ವಕಾಲವೃತ್ತಾ 6 : 23 (OCVKN)
ಅವನ ಮಗ ಎಲ್ಕಾನಾ, ಅವನ ಮಗ ಎಬ್ಯಾಸಾಫ್, ಅವನ ಮಗ ಅಸ್ಸೀರ್,
1 ಪೂರ್ವಕಾಲವೃತ್ತಾ 6 : 24 (OCVKN)
ಅವನ ಮಗ ತಹತ್, ಅವನ ಮಗ ಉರೀಯೇಲ್, ಅವನ ಮಗ ಉಜ್ಜೀಯ, ಅವನ ಮಗ ಸೌಲ್.
1 ಪೂರ್ವಕಾಲವೃತ್ತಾ 6 : 25 (OCVKN)
ಎಲ್ಕಾನನ ವಂಶಜರು: ಅಮಾಸೈ, ಅಹಿಮೋತ್,
1 ಪೂರ್ವಕಾಲವೃತ್ತಾ 6 : 26 (OCVKN)
ಅವನ ಮಗ ಎಲ್ಕಾನ, ಅವನ ಮಗ ಚೋಫೈ, ಅವನ ಮಗ ನಹತ್,
1 ಪೂರ್ವಕಾಲವೃತ್ತಾ 6 : 27 (OCVKN)
ಅವನ ಮಗ ಎಲೀಯಾಬ್, ಅವನ ಮಗ ಯೆರೋಹಾಮ್, ಅವನ ಮಗ ಎಲ್ಕಾನ, ಅವನ ಮಗ ಸಮುಯೇಲ್.
1 ಪೂರ್ವಕಾಲವೃತ್ತಾ 6 : 28 (OCVKN)
ಸಮುಯೇಲನ ಪುತ್ರರು: ಚೊಚ್ಚಲ ಮಗ ವಷ್ಣಿ ಎಂಬ ಯೋಯೇಲ್ ಮತ್ತು ಎರಡನೆಯ ಮಗ ಅಬೀಯ.
1 ಪೂರ್ವಕಾಲವೃತ್ತಾ 6 : 29 (OCVKN)
ಮೆರಾರೀಯ ವಂಶಜರು: ಮಹ್ಲೀ, ಅವನ ಮಗ ಲಿಬ್ನೀ, ಅವನ ಮಗ ಶಿಮ್ಮಿ; ಅವನ ಮಗ ಉಜ್ಜ,
1 ಪೂರ್ವಕಾಲವೃತ್ತಾ 6 : 30 (OCVKN)
ಅವನ ಮಗ ಶಿಮ್ಮಾ, ಅವನ ಮಗ ಹಗ್ಗೀಯ, ಅವನ ಮಗ ಅಸಾಯ.
1 ಪೂರ್ವಕಾಲವೃತ್ತಾ 6 : 31 (OCVKN)
ದೇವಾಲಯದ ವಾದ್ಯಗಾರರು ಮಂಜೂಷವನ್ನು ನೆಲೆಗೊಳಿಸಿದ ತರುವಾಯ ದಾವೀದನು ಯೆಹೋವ ದೇವರ ಮನೆಯಲ್ಲಿ ವಾದ್ಯಗಾರರನ್ನು ನೇಮಿಸಿದನು.
1 ಪೂರ್ವಕಾಲವೃತ್ತಾ 6 : 32 (OCVKN)
ಸೊಲೊಮೋನನು ಯೆರೂಸಲೇಮಿನಲ್ಲಿ ಯೆಹೋವ ದೇವರ ಆಲಯವನ್ನು ಕಟ್ಟುವವರೆಗೆ, ಈ ವಾದ್ಯಗಾರರು ಸಭೆಯ ಗುಡಾರದ ನಿವಾಸದ ಮುಂದೆ ಸೇವಿಸುತ್ತಾ ಇದ್ದರು. ಆಗ ಅವರು ತಮ್ಮ ಸೇವೆಯಲ್ಲಿ ಕ್ರಮದ ಪ್ರಕಾರ ಕಾಯುತ್ತಿದ್ದರು.
1 ಪೂರ್ವಕಾಲವೃತ್ತಾ 6 : 33 (OCVKN)
ಸೇವೆಗೆ ಆಯ್ಕೆಯಾದ ವ್ಯಕ್ತಿಗಳು ಮತ್ತು ಅವರ ಪುತ್ರರ ಹೆಸರುಗಳು ಹೀಗಿವೆ: ಕೊಹಾತ್ಯರ ಮಕ್ಕಳಲ್ಲಿ ಸಂಗೀತಗಾರನಾದ ಹೇಮಾನನು. ಅವನು ಯೋಯೇಲನ ಮಗನು, ಅವನು ಸಮುಯೇಲನ ಮಗನು,
1 ಪೂರ್ವಕಾಲವೃತ್ತಾ 6 : 34 (OCVKN)
ಅವನು ಎಲ್ಕಾನನ ಮಗನು, ಅವನು ಯೆರೋಹಾಮನ ಮಗನು, ಅವನು ಎಲೀಯೇಲನ ಮಗನು, ಅವನು ತೋಹನ ಮಗನು,
1 ಪೂರ್ವಕಾಲವೃತ್ತಾ 6 : 35 (OCVKN)
ಅವನು ಚೂಫನ ಮಗನು, ಅವನು ಎಲ್ಕಾನನ ಮಗನು, ಅವನು ಮಹತನ ಮಗನು, ಅವನು ಅಮಾಸೈಯ ಮಗನು,
1 ಪೂರ್ವಕಾಲವೃತ್ತಾ 6 : 36 (OCVKN)
ಅವನು ಎಲ್ಕಾನನ ಮಗನು, ಅವನು ಯೋಯೇಲನ ಮಗನು, ಅವನು ಅಜರ್ಯನ ಮಗನು, ಅವನು ಚೆಫನ್ಯನ ಮಗನು,
1 ಪೂರ್ವಕಾಲವೃತ್ತಾ 6 : 37 (OCVKN)
ಅವನು ತಹತನ ಮಗನು, ಅವನು ಅಸ್ಸೀರನ ಮಗನು, ಅವನು ಎಬ್ಯಾಸಾಫನ ಮಗನು, ಅವನು ಕೋರಹನ ಮಗನು,
1 ಪೂರ್ವಕಾಲವೃತ್ತಾ 6 : 38 (OCVKN)
ಅವನು ಇಚ್ಹಾರನ ಮಗನು, ಅವನು ಕೊಹಾತನ ಮಗನು, ಅವನು ಲೇವಿಯನ ಮಗನು, ಅವನು ಇಸ್ರಾಯೇಲನ ಮಗನು.
1 ಪೂರ್ವಕಾಲವೃತ್ತಾ 6 : 39 (OCVKN)
ಹೇಮಾನನ ಬಲಗಡೆಯಲ್ಲಿ ನಿಲ್ಲುತ್ತಿದ್ದ ಅವನ ಸಹೋದರನಾದ ಆಸಾಫನು ಜೊತೆಸೇವಕನಾಗಿದ್ದನು. ಈ ಆಸಾಫನು ಬೆರೆಕ್ಯನ ಮಗನು, ಅವನು ಶಿಮ್ಮನ ಮಗನು.
1 ಪೂರ್ವಕಾಲವೃತ್ತಾ 6 : 40 (OCVKN)
ಅವನು ಮೀಕಾಯೇಲನ ಮಗನು, ಅವನು ಬಾಸೇಯನ ಮಗನು, ಅವನು ಮಲ್ಕೀಯನ ಮಗನು,
1 ಪೂರ್ವಕಾಲವೃತ್ತಾ 6 : 41 (OCVKN)
ಅವನು ಎತ್ನಿಯ ಮಗನು, ಅವನು ಜೆರಹನ ಮಗನು, ಅವನು ಅದಾಯನ ಮಗನು,
1 ಪೂರ್ವಕಾಲವೃತ್ತಾ 6 : 42 (OCVKN)
ಅವನು ಏತಾನನ ಮಗನು, ಅವನು ಜಿಮ್ಮನ ಮಗನು, ಅವನು ಶಿಮ್ಮಿಯ ಮಗನು,
1 ಪೂರ್ವಕಾಲವೃತ್ತಾ 6 : 43 (OCVKN)
ಅವನು ಯಹತನ ಮಗನು, ಅವನು ಗೇರ್ಷೋಮನ ಮಗನು, ಅವನು ಲೇವಿಯ ಮಗನು.
1 ಪೂರ್ವಕಾಲವೃತ್ತಾ 6 : 44 (OCVKN)
ಅವರ ಸಹೋದ್ಯೋಗಿ ಮೆರಾರೀಯ ಪುತ್ರರು ಎಡಗಡೆಯಲ್ಲಿ ನಿಂತಿದ್ದರು. ಏತಾನನು ಕೀಷೀಯ ಮಗನು, ಅವನು ಅಬ್ದೀಯ ಮಗನು, ಅವನು ಮಲ್ಲೂಕನ ಮಗನು,
1 ಪೂರ್ವಕಾಲವೃತ್ತಾ 6 : 45 (OCVKN)
ಅವನು ಹಷಬ್ಯನ ಮಗನು, ಅವನು ಅಮಚ್ಯನ ಮಗನು, ಅವನು ಹಿಲ್ಕೀಯನ ಮಗನು,
1 ಪೂರ್ವಕಾಲವೃತ್ತಾ 6 : 46 (OCVKN)
ಅವನು ಅಮ್ಚೀಯ ಮಗನು, ಅವನು ಬಾನೀಯ ಮಗನು, ಅವನು ಶೆಮೆರನ ಮಗನು,
1 ಪೂರ್ವಕಾಲವೃತ್ತಾ 6 : 47 (OCVKN)
ಅವನು ಮಹ್ಲೀಯ ಮಗನು, ಅವನು ಮೂಷೀಯ ಮಗನು, ಅವನು ಮೆರಾರೀಯ ಮಗನು, ಅವನು ಲೇವಿಯ ಮಗನು.
1 ಪೂರ್ವಕಾಲವೃತ್ತಾ 6 : 48 (OCVKN)
ಅವರ ಸಹೋದರರಾದ ಇತರ ಲೇವಿಯರು ದೇವರ ಮನೆಯ ಗುಡಾರದ ಸಮಸ್ತ ಸೇವೆಗೆ ನೇಮಕವಾಗಿದ್ದರು.
1 ಪೂರ್ವಕಾಲವೃತ್ತಾ 6 : 49 (OCVKN)
ಆದರೆ ಆರೋನನೂ, ಅವನ ಪುತ್ರರೂ ದಹನಬಲಿಯ ಪೀಠದ ಮೇಲೆಯೂ, ಧೂಪವನ್ನು ಪೀಠದ ಮೇಲೆಯೂ ಅರ್ಪಿಸುತ್ತಿದ್ದರು. ದೇವರ ಸೇವಕನಾದ ಮೋಶೆ ಆಜ್ಞಾಪಿಸಿದ ಎಲ್ಲಾದರ ಪ್ರಕಾರ ಅವರು ಮಹಾಪರಿಶುದ್ಧ ಸ್ಥಳದ ಸಮಸ್ತ ಕಾರ್ಯಕ್ಕೂ, ಇಸ್ರಾಯೇಲಿಗೋಸ್ಕರ ಪ್ರಾಯಶ್ಚಿತ್ತ ಮಾಡುವುದಕ್ಕೂ ನೇಮಕವಾಗಿದ್ದರು.
1 ಪೂರ್ವಕಾಲವೃತ್ತಾ 6 : 50 (OCVKN)
ಆರೋನನ ವಂಶಜರು: ಅವನ ಮಗನು ಎಲಿಯಾಜರನು, ಅವನ ಮಗನು ಫೀನೆಹಾಸನು, ಅವನ ಮಗನು ಅಬೀಷೂವನು,
1 ಪೂರ್ವಕಾಲವೃತ್ತಾ 6 : 51 (OCVKN)
ಅವನ ಮಗನು ಬುಕ್ಕೀಯು, ಅವನ ಮಗನು ಉಜ್ಜೀ, ಅವನ ಮಗನು ಜೆರಹ್ಯಾಹನು,
1 ಪೂರ್ವಕಾಲವೃತ್ತಾ 6 : 52 (OCVKN)
ಅವನ ಮಗನು ಮೆರಾಯೋತನು, ಅವನ ಮಗನು ಅಮರ್ಯನು, ಅವನ ಮಗನು ಅಹೀಟೂಬನು,
1 ಪೂರ್ವಕಾಲವೃತ್ತಾ 6 : 53 (OCVKN)
ಅವನ ಮಗನು ಚಾದೋಕನು, ಅವನ ಮಗನು ಅಹೀಮಾಚನು.
1 ಪೂರ್ವಕಾಲವೃತ್ತಾ 6 : 54 (OCVKN)
ಕೊಹಾತನ ಗೋತ್ರದ ಆರೋನನ ವಂಶಜರಿಗೆ ನೇಮಕವಾದ ಪ್ರಾಂತ್ಯ ಇದು: ಅವರಿಗೆಂದು ಪ್ರತ್ಯೇಕಿಸಿದ ಪ್ರದೇಶದ ಪ್ರಥಮ ಚೀಟಿನ ಪಾಲನ್ನು ಅವರು ಪಡೆದುಕೊಂಡರು.
1 ಪೂರ್ವಕಾಲವೃತ್ತಾ 6 : 55 (OCVKN)
ಅವು ಯಾವುವೆಂದರೆ: ಕೊಹಾತ್ಯರ ಕುಟುಂಬಗಳಿಗೆ ಚೀಟು ಬಿದ್ದ ಪ್ರಕಾರ, ಯೆಹೂದ ದೇಶದಲ್ಲಿ ಹೆಬ್ರೋನ್ ಪಟ್ಟಣವೂ, ಅದರ ಸುತ್ತಲಿರುವ ಗೋಮಾಳಗಳೂ ಅವರಿಗೆ ದೊರೆತವು.
1 ಪೂರ್ವಕಾಲವೃತ್ತಾ 6 : 56 (OCVKN)
ಆದರೆ ಆ ಪಟ್ಟಣದ ಹೊಲಗಳನ್ನೂ, ಅದರ ಗ್ರಾಮಗಳನ್ನೂ, ಯೆಫುನ್ನೆಯ ಮಗ ಕಾಲೇಬನಿಗೆ ಕೊಟ್ಟರು.
1 ಪೂರ್ವಕಾಲವೃತ್ತಾ 6 : 57 (OCVKN)
ಯೆಹೂದದ ಕುಲಗಳಲ್ಲಿ ಆರೋನನ ಪುತ್ರರಿಗೆ ಕೊಟ್ಟ ಪಟ್ಟಣಗಳು ಯಾವುವೆಂದರೆ: ಆಶ್ರಯ ನಗರವಾದ ಹೆಬ್ರೋನ್, ಲಿಬ್ನವೂ, ಯತ್ತೀರೂ, ಎಷ್ಟೆಮೋವವೂ, ಅವುಗಳ ಉಪನಗರಗಳೂ;
1 ಪೂರ್ವಕಾಲವೃತ್ತಾ 6 : 58 (OCVKN)
1 ಪೂರ್ವಕಾಲವೃತ್ತಾ 6 : 59 (OCVKN)
ಆಷಾನ್, ಯುತಾಹ ಮತ್ತು ಬೇತ್ ಷೆಮೆಷ್ ಎಂಬ ಗೋಮಾಳ ಸಹಿತವಾದ ಪಟ್ಟಣಗಳು.
1 ಪೂರ್ವಕಾಲವೃತ್ತಾ 6 : 60 (OCVKN)
ಬೆನ್ಯಾಮೀನನ ಗೋತ್ರದಿಂದ ಕೊಟ್ಟವುಗಳು, ಗಿಬ್ಯೋನ್, ಗೆಬಾ, ಆಲೆಮೆತೂ, ಅನಾತೋತೂ, ಅದರ ಗೋಮಾಳುಗಳು. ಇವರ ಕುಟುಂಬಗಳಿಗೆ ದೊರಕಿದ ಎಲ್ಲಾ ಪಟ್ಟಣಗಳು ಹದಿಮೂರು.
1 ಪೂರ್ವಕಾಲವೃತ್ತಾ 6 : 61 (OCVKN)
ಆ ಗೋತ್ರದ ಕುಟುಂಬಗಳಲ್ಲಿ ಉಳಿದ ಕೊಹಾತನ ಪುತ್ರರಿಗೂ ಚೀಟುಹಾಕಿ ಮನಸ್ಸೆಯ ಅರ್ಧ ಗೋತ್ರದಿಂದ ಹತ್ತು ಪಟ್ಟಣಗಳು ದೊರೆತವು.
1 ಪೂರ್ವಕಾಲವೃತ್ತಾ 6 : 62 (OCVKN)
ಗೇರ್ಷೋಮನ ಪುತ್ರರಿಗೆ ತಮ್ಮ ಕುಟುಂಬಗಳ ಪ್ರಕಾರವೇ ಇಸ್ಸಾಕಾರನ ಗೋತ್ರದಿಂದಲೂ, ಆಶೇರನ ಗೋತ್ರದಿಂದಲೂ, ನಫ್ತಾಲಿಯ ಗೋತ್ರದಿಂದಲೂ, ಬಾಷಾನಿನಲ್ಲಿರುವ ಮನಸ್ಸೆಯ ಗೋತ್ರದಿಂದಲೂ ಹದಿಮೂರು ಪಟ್ಟಣಗಳು ದೊರಕಿದ್ದವು.
1 ಪೂರ್ವಕಾಲವೃತ್ತಾ 6 : 63 (OCVKN)
ಮೆರಾರೀಯ ಪುತ್ರರಿಗೂ ಅವರ ಕುಟುಂಬಗಳ ಪ್ರಕಾರ ಚೀಟುಹಾಕಿ, ರೂಬೇನನ ಗೋತ್ರದಿಂದಲೂ, ಗಾದನ ಗೋತ್ರದಿಂದಲೂ, ಜೆಬುಲೂನನ ಗೋತ್ರದಿಂದಲೂ ಹನ್ನೆರಡು ಪಟ್ಟಣಗಳು ದೊರಕಿದ್ದವು.
1 ಪೂರ್ವಕಾಲವೃತ್ತಾ 6 : 64 (OCVKN)
ಇಸ್ರಾಯೇಲರು ಲೇವಿಯರಿಗೆ ಈ ಪಟ್ಟಣಗಳನ್ನೂ, ಅವುಗಳ ಉಪನಗರಗಳನ್ನೂ ಕೂಡಾ ಕೊಟ್ಟರು.
1 ಪೂರ್ವಕಾಲವೃತ್ತಾ 6 : 65 (OCVKN)
ಅವರು ಚೀಟುಹಾಕಿ ಯೆಹೂದ ಸಿಮೆಯೋನ್ ಬೆನ್ಯಾಮೀನ್ ಕುಲಗಳಿಂದ ಮೇಲೆ ಹೆಸರು ಹೇಳಿದ ಪಟ್ಟಣಗಳನ್ನು ಕೊಟ್ಟರು.
1 ಪೂರ್ವಕಾಲವೃತ್ತಾ 6 : 66 (OCVKN)
ಕೊಹಾತನ ಪುತ್ರರ ಮಿಕ್ಕಾದ ಕುಟುಂಬಗಳಿಗೂ, ಅವರ ಮೇರೆಗಳಲ್ಲಿ ಎಫ್ರಾಯೀಮನ ಗೋತ್ರದೊಳಗೆ ಪಟ್ಟಣಗಳು ದೊರೆತಿದ್ದವು.
1 ಪೂರ್ವಕಾಲವೃತ್ತಾ 6 : 67 (OCVKN)
ಇದಲ್ಲದೆ ಎಫ್ರಾಯೀಮ್ ಬೆಟ್ಟದಲ್ಲಿರುವ ಶೆಕೆಮ್ ಎಂಬ ಆಶ್ರಯ ನಗರ, ಗೆಜೆರ್ ಮತ್ತು ಅದರ ಉಪನಗರಗಳನ್ನೂ,
1 ಪೂರ್ವಕಾಲವೃತ್ತಾ 6 : 68 (OCVKN)
ಯೊಕ್ಮೆಯಾಮನ್ನೂ, ಬೇತ್ ಹೋರೋನ್,
1 ಪೂರ್ವಕಾಲವೃತ್ತಾ 6 : 69 (OCVKN)
ಅಯ್ಯಾಲೋನ್, ಗತ್ ರಿಮ್ಮೋನನ್ನೂ, ಅದರ ಉಪನಗರಗಳನ್ನೂ ಕೊಟ್ಟರು.
1 ಪೂರ್ವಕಾಲವೃತ್ತಾ 6 : 70 (OCVKN)
ಇದಲ್ಲದೆ ಕೊಹಾತನ ಪುತ್ರರ ಮಿಕ್ಕಾದ ಕುಟುಂಬಕ್ಕೋಸ್ಕರ ಮನಸ್ಸೆಯ ಅರ್ಧ ಗೋತ್ರದಿಂದ ಆನೇರನ್ನೂ, ಅದರ ಉಪನಗರಗಳನ್ನೂ; ಬಿಳ್ಳಾಮ್ ಉಪನಗರಗಳನ್ನೂ ಕೊಟ್ಟರು.
1 ಪೂರ್ವಕಾಲವೃತ್ತಾ 6 : 71 (OCVKN)
ಮನಸ್ಸೆಯ ಅರ್ಧ ಗೋತ್ರದಿಂದ ಗೇರ್ಷೋಮನ ಪುತ್ರರಿಗೆ ಬಾಷಾನಿನಲ್ಲಿರುವ ಗೋಲಾನೂ, ಅದರ ಉಪನಗರಗಳನ್ನೂ; ಅಷ್ಟಾರೋತ್ ಅದರ ಉಪನಗರಗಳನ್ನೂ;
1 ಪೂರ್ವಕಾಲವೃತ್ತಾ 6 : 72 (OCVKN)
ಇಸ್ಸಾಕಾರನ ಗೋತ್ರದಿಂದ ಕೆದೆಷ್, ಅದರ ಉಪನಗರಗಳನ್ನೂ; ದಾಬೆರತ್ ಅದರ ಉಪನಗರಗಳನ್ನೂ;
1 ಪೂರ್ವಕಾಲವೃತ್ತಾ 6 : 73 (OCVKN)
ರಾಮೋತ್ ಅದರ ಉಪನಗರಗಳನ್ನೂ; ಅನೇಮ್, ಅದರ ಉಪನಗರಗಳನ್ನೂ;
1 ಪೂರ್ವಕಾಲವೃತ್ತಾ 6 : 74 (OCVKN)
ಆಶೇರನ ಗೋತ್ರದಿಂದ ಮಷಾಲ್, ಅಬ್ದೋನ್
1 ಪೂರ್ವಕಾಲವೃತ್ತಾ 6 : 75 (OCVKN)
ಹೂಕೋಕ್, ಅದರ ಉಪನಗರಗಳನ್ನೂ; ರೆಹೋಬ್, ಅದರ ಉಪನಗರಗಳನ್ನೂ;
1 ಪೂರ್ವಕಾಲವೃತ್ತಾ 6 : 76 (OCVKN)
ನಫ್ತಾಲಿ ಗೋತ್ರದಿಂದ ಗಲಿಲಾಯದಲ್ಲಿರುವ ಕೆದೆಷ್, ಅದರ ಉಪನಗರಗಳನ್ನೂ; ಹಮ್ಮೋನ್, ಅದರ ಉಪನಗರಗಳನ್ನೂ; ಕಿರ್ಯಾತಯಿಮ್, ಅದರ ಉಪನಗರಗಳೂ ದೊರಕಿದ್ದವು.
1 ಪೂರ್ವಕಾಲವೃತ್ತಾ 6 : 77 (OCVKN)
ಮೆರಾರೀಯ ಉಳಿದ ಮಕ್ಕಳಿಗೂ, ಜೆಬುಲೂನನ ಗೋತ್ರದಿಂದ ರಿಮ್ಮೋನೋ, ಅದರ ಉಪನಗರಗಳೂ, ತಾಬೋರ್, ಅದರ ಉಪನಗರಗಳೂ;
1 ಪೂರ್ವಕಾಲವೃತ್ತಾ 6 : 78 (OCVKN)
ರೂಬೇನನ ಗೋತ್ರದಿಂದ ಯೆರಿಕೋವಿನ ಬಳಿಯಲ್ಲಿ ಯೊರ್ದನ್ ನದಿಯ ಪೂರ್ವದಿಕ್ಕಿನ ಮರುಭೂಮಿಯಲ್ಲಿರುವ ಬೆಚೆರ್, ಅದರ ಉಪನಗರಗಳೂ; ಯಹಚ, ಅದರ ಉಪನಗರಗಳೂ;
1 ಪೂರ್ವಕಾಲವೃತ್ತಾ 6 : 79 (OCVKN)
ಕೆದೇಮೋತ್, ಮೇಫಾತ್ ಅದರ ಉಪನಗರಗಳೂ;
1 ಪೂರ್ವಕಾಲವೃತ್ತಾ 6 : 80 (OCVKN)
ಗಾದನ ಗೋತ್ರದಿಂದ ಗಿಲ್ಯಾದಿನ ರಾಮೋತ್, ಅದರ ಉಪನಗರಗಳೂ; ಮಹನಯಿಮ್ ಅದರ ಉಪನಗರಗಳೂ;
1 ಪೂರ್ವಕಾಲವೃತ್ತಾ 6 : 81 (OCVKN)
ಹೆಷ್ಬೋನ್, ಯಜ್ಜೇರ್ ಮತ್ತು ಅದರ ಉಪನಗರಗಳೂ ದೊರೆತವು.
❮
❯