1 ಪೂರ್ವಕಾಲವೃತ್ತಾ 27 : 1 (OCVKN)
ಸೈನಿಕರ ವಿಭಜನೆ ಇಸ್ರಾಯೇಲರು ತಮ್ಮ ಲೆಕ್ಕದ ಪ್ರಕಾರವಾಗಿ ಹೀಗೆಯೇ ಇದ್ದರು. ಹೇಗೆಂದರೆ, ಕುಟುಂಬಗಳ ಮುಖ್ಯಸ್ಥರೂ ಸಹಸ್ರಾಧಿಪತಿಗಳೂ, ಶತಾಧಿಪತಿಗಳೂ, ಅಧಿಪತಿಗಳೂ ವರ್ಷದ ಎಲ್ಲಾ ತಿಂಗಳುಗಳಲ್ಲಿ ಪ್ರತಿ ತಿಂಗಳು ಸರತಿಯಂತೆ ಬರುತ್ತಿದ್ದ ವರ್ಗಗಳ ಕಾರ್ಯಗಳಲ್ಲಿ ಅರಸನನ್ನು ಸೇವಿಸಿದ ಅವರ ಪಾರುಪತ್ಯಗಾರರೂ ಪ್ರತಿವರ್ಗದಲ್ಲಿ 24,000 ಮಂದಿಯಿದ್ದರು.
1 ಪೂರ್ವಕಾಲವೃತ್ತಾ 27 : 2 (OCVKN)
ಮೊದಲನೆಯ ತಿಂಗಳಿಗೋಸ್ಕರ ಮೊದಲನೆಯ ವರ್ಗದ ಮೇಲೆ ಜಬ್ದಿಯೇಲನ ಮಗ ಯಾಷೊಬ್ಬಾಮನು. ಅವನ ವರ್ಗದಲ್ಲಿ ಇಪ್ಪತ್ತನಾಲ್ಕು ಸಾವಿರ ಜನರು.
1 ಪೂರ್ವಕಾಲವೃತ್ತಾ 27 : 3 (OCVKN)
ಮೊದಲನೆಯ ತಿಂಗಳಿನ ಸೈನ್ಯದ ಸಮಸ್ತ ಅಧಿಪತಿಗಳಲ್ಲಿದ್ದ ಪ್ರಧಾನನಾದವನು ಪೆರೆಚನ ಮಕ್ಕಳಲ್ಲಿ ಒಬ್ಬನಾಗಿದ್ದನು.
1 ಪೂರ್ವಕಾಲವೃತ್ತಾ 27 : 4 (OCVKN)
ಎರಡನೆಯ ತಿಂಗಳಿನ ವರ್ಗದ ಮೇಲೆ ಅಹೋಹ್ಯನಾದ ದೊದಾಯಿಯು. ಅವನ ವರ್ಗದಲ್ಲಿ ಮಿಕ್ಲೋತನು ನಾಯಕನಾಗಿದ್ದನು. ಅವನ ವರ್ಗದಲ್ಲಿ 24,000 ಜನರಿದ್ದರು.
1 ಪೂರ್ವಕಾಲವೃತ್ತಾ 27 : 5 (OCVKN)
ಮೂರನೆಯ ತಿಂಗಳಿನ ಸೈನ್ಯದ ಮೂರನೆಯ ಅಧಿಪತಿಯು, ಯಾಜಕನಾಗಿರುವ ಯೆಹೋಯಾದಾವನ ಮಗ ಬೆನಾಯನು. ಅವನ ವರ್ಗದಲ್ಲಿ ಇಪ್ಪತ್ತನಾಲ್ಕು ಸಾವಿರ ಜನರು.
1 ಪೂರ್ವಕಾಲವೃತ್ತಾ 27 : 6 (OCVKN)
ಈ ಬೆನಾಯನು ಮೂವತ್ತು ಮಂದಿಯಲ್ಲಿ ಪರಾಕ್ರಮಶಾಲಿಯಾದವನಾಗಿ ಮೂವತ್ತು ಮಂದಿಯ ಮೇಲೆ ಮುಖ್ಯಸ್ಥನಾಗಿದ್ದನು. ಅವನ ವರ್ಗದಲ್ಲಿ ಅವನ ಮಗ ಅಮ್ಮೀಜಾಬಾದನು ಇದ್ದನು.
1 ಪೂರ್ವಕಾಲವೃತ್ತಾ 27 : 7 (OCVKN)
ನಾಲ್ಕನೆಯ ತಿಂಗಳಿನ ನಾಲ್ಕನೆಯವನು ಯೋವಾಬನ ಸಹೋದರನಾದ ಅಸಾಯೇಲನು; ಅವನ ತರುವಾಯ ಅವನ ಮಗ ಜೆಬದ್ಯನು; ಅವನ ವರ್ಗದಲ್ಲಿ 24,000 ಜನರು.
1 ಪೂರ್ವಕಾಲವೃತ್ತಾ 27 : 8 (OCVKN)
ಐದನೆಯ ತಿಂಗಳಿನ ಐದನೆಯ ಅಧಿಪತಿಯು ಇಜ್ರಾಹನಾದ ಶಮ್ಹೂತನು; ಅವನ ವರ್ಗದಲ್ಲಿ 24,000 ಜನರು.
1 ಪೂರ್ವಕಾಲವೃತ್ತಾ 27 : 9 (OCVKN)
ಆರನೆಯ ತಿಂಗಳಿನ ಆರನೆಯವನು ತೆಕೋವಿಯನಾಗಿರುವ ಇಕ್ಕೇಷನ ಮಗ ಈರನು; ಅವನ ವರ್ಗದಲ್ಲಿ 24,000 ಜನರು.
1 ಪೂರ್ವಕಾಲವೃತ್ತಾ 27 : 10 (OCVKN)
ಏಳನೆಯ ತಿಂಗಳಿನ ಏಳನೆಯವನು ಎಫ್ರಾಯೀಮನ ಮಕ್ಕಳಲ್ಲಿ ಒಬ್ಬನಾಗಿರುವ ಪೆಲೋನ್ಯನಾದ ಹೆಲೆಚನು; ಅವನ ವರ್ಗದಲ್ಲಿ 24,000 ಜನರು.
1 ಪೂರ್ವಕಾಲವೃತ್ತಾ 27 : 11 (OCVKN)
ಎಂಟನೆಯ ತಿಂಗಳಿನ ಎಂಟನೆಯವನು ಜೆರಹಿಯರಲ್ಲಿ ಒಬ್ಬನಾಗಿರುವ ಹುಷಾತ್ಯನಾದ ಸಿಬ್ಬೆಕೈ; ಅವನ ವರ್ಗದಲ್ಲಿ 24,000 ಜನರು.
1 ಪೂರ್ವಕಾಲವೃತ್ತಾ 27 : 12 (OCVKN)
ಒಂಬತ್ತನೆಯ ತಿಂಗಳಿನ ಒಂಬತ್ತನೆಯವನು ಬೆನ್ಯಾಮೀನ್ಯರಲ್ಲಿ ಒಬ್ಬನಾಗಿರುವ ಅನಾತೋತ್ಯನಾದ ಅಬೀಯೆಜೆರನು; ಅವನ ವರ್ಗದಲ್ಲಿ 24,000 ಜನರು.
1 ಪೂರ್ವಕಾಲವೃತ್ತಾ 27 : 13 (OCVKN)
ಹತ್ತನೆಯ ತಿಂಗಳಿನ ಹತ್ತನೆಯವನು ಜೆರಹಿಯರಲ್ಲಿ ಒಬ್ಬನಾಗಿರುವ ನೆಟೋಫದವನಾದ ಮಹರೈಯು ಅವನ ವರ್ಗದಲ್ಲಿ 24,000 ಜನರು.
1 ಪೂರ್ವಕಾಲವೃತ್ತಾ 27 : 14 (OCVKN)
ಹನ್ನೊಂದನೆಯ ತಿಂಗಳಿನ ಹನ್ನೊಂದನೆಯವನು ಎಫ್ರಾಯೀಮನ ಮಕ್ಕಳಲ್ಲಿ ಒಬ್ಬನಾಗಿರುವ ಪಿರಾತೋನ್ಯನಾದ ಬೆನಾಯನು; ಅವನ ವರ್ಗದಲ್ಲಿ 24,000 ಜನರು.
1 ಪೂರ್ವಕಾಲವೃತ್ತಾ 27 : 15 (OCVKN)
ಹನ್ನೆರಡನೆಯ ತಿಂಗಳಿನ ಹನ್ನೆರಡನೆಯವನು ಒತ್ನಿಯೇಲನ ಮಕ್ಕಳಲ್ಲಿ ಒಬ್ಬನಾಗಿರುವ ನೆಟೋಫದವನಾದ ಹೆಲ್ದಾಯಿಯು; ಅವನ ವರ್ಗದಲ್ಲಿ 24,000 ಜನರು.
1 ಪೂರ್ವಕಾಲವೃತ್ತಾ 27 : 16 (OCVKN)
ಇಸ್ರಾಯೇಲಿನ ಗೋತ್ರಗಳ ಮೇಲೆ ಅಧಿಕಾರಿಗಳು ಇಸ್ರಾಯೇಲಿನ ಗೋತ್ರಗಳ ಮೇಲೆ ಇರುವ ಅಧಿಕಾರಿಗಳು ಯಾರೆಂದರೆ: ರೂಬೇನ್ಯರ ಮೇಲೆ ನಾಯಕನು, ಜಿಕ್ರಿಯ ಮಗ ಎಲೀಯೆಜೆರನು. ಸಿಮೆಯೋನ್ಯರ ಮೇಲೆ ನಾಯಕನು, ಮಾಕನ ಮಗ ಶೆಫಟ್ಯನು.
1 ಪೂರ್ವಕಾಲವೃತ್ತಾ 27 : 17 (OCVKN)
ಲೇವಿಯರ ಮೇಲೆ ಕೆಮುವೇಲನ ಮಗ ಹಷಬ್ಯನು. ಆರೋನ್ಯರ ಮೇಲೆ ಚಾದೋಕನು.
1 ಪೂರ್ವಕಾಲವೃತ್ತಾ 27 : 18 (OCVKN)
ಯೆಹೂದನಿಗೆ ದಾವೀದನ ಸಹೋದರರಲ್ಲಿ ಒಬ್ಬನಾಗಿರುವ ಎಲೀಹುವು; ಇಸ್ಸಾಕಾರನಿಗೆ ಮೀಕಾಯೇಲನ ಮಗ ಒಮ್ರಿಯು.
1 ಪೂರ್ವಕಾಲವೃತ್ತಾ 27 : 19 (OCVKN)
ಜೆಬುಲೂನನಿಗೆ ಓಬದ್ಯನ ಮಗ ಇಷ್ಮಾಯನು ನಫ್ತಾಲಿಯ ಗೋತ್ರಕ್ಕೆ ಅಜ್ರಿಯೇಲನ ಮಗ ಯೆರೀಮೋತನು.
1 ಪೂರ್ವಕಾಲವೃತ್ತಾ 27 : 20 (OCVKN)
ಎಫ್ರಾಯೀಮನ ಮಕ್ಕಳಲ್ಲಿ ಅಜಜ್ಯನ ಮಗ ಹೋಶೇಯನು; ಮನಸ್ಸೆಯ ಅರ್ಧ ಗೋತ್ರಕ್ಕೆ ಪೆದಾಯನ ಮಗ ಯೋಯೇಲನು.
1 ಪೂರ್ವಕಾಲವೃತ್ತಾ 27 : 21 (OCVKN)
ಗಿಲ್ಯಾದಿನಲ್ಲಿರುವ ಮನಸ್ಸೆಯ ಅರ್ಧ ಗೋತ್ರಕ್ಕೆ ಜೆಕರ್ಯನ ಮಗ ಇದ್ದೋನು; ಬೆನ್ಯಾಮೀನನ ಗೋತ್ರಕ್ಕೆ ಅಬ್ನೇರನ ಮಗ ಯಾಸೀಯೇಲನು;
1 ಪೂರ್ವಕಾಲವೃತ್ತಾ 27 : 22 (OCVKN)
ದಾನನ ಗೋತ್ರಕ್ಕೆ ಯೆರೋಹಾಮನ ಮಗ ಅಜರಯೇಲ್. ಇವರೇ ಇಸ್ರಾಯೇಲಿನ ಗೋತ್ರಗಳ ಪ್ರಧಾನರು.
1 ಪೂರ್ವಕಾಲವೃತ್ತಾ 27 : 23 (OCVKN)
ದಾವೀದನು ಇಪ್ಪತ್ತು ವರ್ಷಗಳೊಳಗೆ ಇದ್ದವರ ಲೆಕ್ಕ ತೆಗೆದುಕೊಳ್ಳಲಿಲ್ಲ. ಏಕೆಂದರೆ, “ಇಸ್ರಾಯೇಲನನ್ನು ಆಕಾಶದ ನಕ್ಷತ್ರಗಳ ಹಾಗೆ ಹೆಚ್ಚಾಗಿ ಮಾಡುವೆನು,” ಎಂದು ಯೆಹೋವ ದೇವರು ಹೇಳಿದ್ದರು.
1 ಪೂರ್ವಕಾಲವೃತ್ತಾ 27 : 24 (OCVKN)
ಚೆರೂಯಳ ಮಗ ಯೋವಾಬನು ಎಣಿಸಲು ಆರಂಭಿಸಿದನು. ಆದರೆ ಇಸ್ರಾಯೇಲಿಗೆ ವಿರೋಧವಾಗಿ ದೇವರ ಕೋಪಾಗ್ನಿಯು ಬಂದದ್ದರಿಂದ, ಅವನು ಪೂರ್ತಿಗೊಳಿಸಲಿಲ್ಲ. ಆ ಲೆಕ್ಕವು ಅರಸನಾದ ದಾವೀದನ ಇತಿಹಾಸಗಳ ಪುಸ್ತಕದಲ್ಲಿ ಲಿಖಿತವಾಗಲಿಲ್ಲ.
1 ಪೂರ್ವಕಾಲವೃತ್ತಾ 27 : 25 (OCVKN)
ಅರಸನ ಬೊಕ್ಕಸಗಳ ಮೇಲೆ ಅಧಿಕಾರಿಗಳು ಅರಸನ ಬೊಕ್ಕಸಗಳ ಮೇಲೆ ಅದೀಯೇಲನ ಮಗ ಅಜ್ಮಾವೆತನು ಇದ್ದನು. ಹೊಲಗಳಲ್ಲಿಯೂ, ಪಟ್ಟಣಗಳಲ್ಲಿಯೂ, ಗ್ರಾಮಗಳಲ್ಲಿಯೂ, ಬುರುಜುಗಳ ಮೇಲೆಯೂ ಇದ್ದ ಉಗ್ರಾಣಗಳ ಮೇಲೆ ಉಜ್ಜೀಯನ ಮಗ ಯೋನಾತಾನನು ಇದ್ದನು.
1 ಪೂರ್ವಕಾಲವೃತ್ತಾ 27 : 26 (OCVKN)
ಹೊಲವನ್ನು ವ್ಯವಸಾಯ ಮಾಡುವ ಕೆಲಸದವರ ಮೇಲೆ ಕೆಲೂಬನ ಮಗ ಎಜ್ರಿಯು ಇದ್ದನು.
1 ಪೂರ್ವಕಾಲವೃತ್ತಾ 27 : 27 (OCVKN)
ರಾಮಾ ಊರಿನ ಶಿಮ್ಮೀ ದ್ರಾಕ್ಷಿತೋಟಗಳನ್ನು ನೋಡಿಕೊಳ್ಳುತ್ತಿದ್ದನು. ದ್ರಾಕ್ಷಿ ತೋಟಗಳಲ್ಲಿರುವ ದ್ರಾಕ್ಷಾರಸದ ಉಗ್ರಾಣಗಳ ಮೇಲೆ ಶಿಪ್ಮೀಯನಾದ ಜಬ್ದೀ ಜವಾಬ್ದಾರಿಯಾಗಿದ್ದನು.
1 ಪೂರ್ವಕಾಲವೃತ್ತಾ 27 : 28 (OCVKN)
ತಗ್ಗಿನಲ್ಲಿರುವ ಓಲಿವ್ ಮರಗಳ ಮೇಲೆಯೂ, ಅತ್ತಿಮರಗಳ ಮೇಲೆಯೂ ಗೆದೇರ್ಯನಾದ ಬಾಳ್ ಹಾನಾನನು ಇದ್ದನು. ಎಣ್ಣೆಯ ಉಗ್ರಾಣಗಳ ಮೇಲೆ ಯೋವಾಷನು ಜವಾಬ್ದಾರಿಯಾಗಿದ್ದನು.
1 ಪೂರ್ವಕಾಲವೃತ್ತಾ 27 : 29 (OCVKN)
ಶಾರೋನಿನಲ್ಲಿ ಮೇಯಿಸುವ ದನಗಳ ಮೇಲೆ ಶಾರೋನಿನವನಾದ ಶಿಟ್ರೈ ಜವಾಬ್ದಾರಿಯಾಗಿದ್ದನು. ತಗ್ಗುಗಳಲ್ಲಿರುವ ದನಗಳ ಮೇಲೆ ಅಡ್ಲಾಯಿಯ ಮಗನಾದ ಶಾಫಾಟನು ಜವಾಬ್ದಾರಿಯಾಗಿದ್ದನು.
1 ಪೂರ್ವಕಾಲವೃತ್ತಾ 27 : 30 (OCVKN)
ಒಂಟೆಗಳ ಮೇಲೆ ಜವಾಬ್ದಾರಿಯಾಗಿದ್ದವನು ಇಷ್ಮಾಯೇಲನಾದ ಓಬೀಲ್. ಕತ್ತೆಗಳ ಮೇಲೆ ಜವಾಬ್ದಾರಿಯಾಗಿದ್ದವನು ಮೇರೊನೋತ್ಯನಾದ ಯೆಹ್ದೆಯ.
1 ಪೂರ್ವಕಾಲವೃತ್ತಾ 27 : 31 (OCVKN)
ಕುರಿ ಮಂದೆಗಳ ಮೇಲೆ ಜವಾಬ್ದಾರಿಯಾಗಿದ್ದವನು ಹಗ್ರೀಯನಾದ ಯಾಜೀಜ್. ಇವರೆಲ್ಲರು ಅರಸನಾದ ದಾವೀದನ ಸ್ವತ್ತಿನ ಮೇಲೆ ಪ್ರಧಾನರಾಗಿದ್ದರು.
1 ಪೂರ್ವಕಾಲವೃತ್ತಾ 27 : 32 (OCVKN)
ಇದಲ್ಲದೆ ದಾವೀದನ ಚಿಕ್ಕಪ್ಪನಾದ ಯೋನಾತಾನನು ಗ್ರಹಿಕೆಯು, ವಿವೇಕಿಯೂ ಆದ ಲೇಖಕನಾಗಿದ್ದನು. ಹಕ್ಮೋನಿಯ ಮಗನಾದ ಯೆಹೀಯೇಲ್ ಅರಸನ ಪುತ್ರರನ್ನು ನೋಡಿಕೊಳ್ಳುತ್ತಿದ್ದನು.
1 ಪೂರ್ವಕಾಲವೃತ್ತಾ 27 : 33 (OCVKN)
ಅರಸನ ಆಲೋಚನೆಗಾರನು ಅಹೀತೋಫೆಲ್; ಅರಸನ ಆಪ್ತ ಸ್ನೇಹಿತನು ಅರ್ಕಿಯನಾದ ಹೂಷೈ.
1 ಪೂರ್ವಕಾಲವೃತ್ತಾ 27 : 34 (OCVKN)
ಅಹೀತೋಫೆಲನ ತರುವಾಯ ಬೆನಾಯನ ಮಗನಾದ ಯೆಹೋಯಾದಾವನೂ, ಅಬಿಯಾತರನೂ ಅರಸನ ಆಲೋಚನೆಗಾರರಾಗಿದ್ದರು. ಯೋವಾಬನು ಅರಸನ ಸೈನ್ಯಾಧಿಪತಿಯಾಗಿದ್ದನು.
❮
❯