1 ಪೂರ್ವಕಾಲವೃತ್ತಾ 26 : 1 (OCVKN)
ದ್ವಾರಪಾಲಕರು ದ್ವಾರಪಾಲಕರ ವರ್ಗಗಳು: ಕೋರಹಿಯರೊಳಗೆ: ಆಸಾಫನ ಪುತ್ರರಲ್ಲಿ ಒಬ್ಬನಾಗಿರುವ ಕೋರೆಯ ಮಗನಾದ ಮೆಷೆಲೆಮ್ಯನು.
1 ಪೂರ್ವಕಾಲವೃತ್ತಾ 26 : 2 (OCVKN)
ಮೆಷೆಲೆಮ್ಯನ ಪುತ್ರರು: ಚೊಚ್ಚಲ ಮಗನು ಜೆಕರ್ಯನು; ಎರಡನೆಯವನು ಯೆದೀಯಯೇಲನು; ಮೂರನೆಯವನು ಜೆಬದ್ಯನು; ನಾಲ್ಕನೆಯವನು ಯತ್ನಿಯೇಲನು;
1 ಪೂರ್ವಕಾಲವೃತ್ತಾ 26 : 3 (OCVKN)
ಐದನೆಯವನು ಏಲಾಮನು; ಆರನೆಯವನು ಯೆಹೋಹಾನಾನನು; ಏಳನೆಯವನು ಎಲಿಹೋಯೇನೈನು.
1 ಪೂರ್ವಕಾಲವೃತ್ತಾ 26 : 4 (OCVKN)
ಓಬೇದ್ ಏದೋಮನ ಪುತ್ರರು: ಚೊಚ್ಚಲ ಮಗನು ಶೆಮಾಯ; ಎರಡನೆಯವನು ಯೆಹೋಜಾಬಾದ್; ಮೂರನೆಯವನು ಯೋವಾಹ; ನಾಲ್ಕನೆಯವನು ಸಾಕಾರ; ಐದನೆಯವನು ನೆತನೆಯೇಲ್;
1 ಪೂರ್ವಕಾಲವೃತ್ತಾ 26 : 5 (OCVKN)
ಆರನೆಯವನು ಅಮ್ಮಿಯೇಲ್; ಏಳನೆಯವನು ಇಸ್ಸಾಕಾರ್ ಮತ್ತು ಎಂಟನೆಯವನು ಪೆಯುಲ್ಲೆತೈ. ಓಬೇದ್ ಎದೋಮನು ದೇವರ ಆಶೀರ್ವಾದಕ್ಕೆ ಪಾತ್ರನಾಗಿದ್ದನು.
1 ಪೂರ್ವಕಾಲವೃತ್ತಾ 26 : 6 (OCVKN)
ಇದಲ್ಲದೆ ತನ್ನ ಮಗನಾದ ಶೆಮಾಯನಿಗೆ ತಮ್ಮ ತಂದೆಯ ಮನೆಯಲ್ಲಿ ಆಳುವ ಪುತ್ರರು ಹುಟ್ಟಿದರು, ಅವರು ಪರಾಕ್ರಮಶಾಲಿಗಳಾಗಿದ್ದರು.
1 ಪೂರ್ವಕಾಲವೃತ್ತಾ 26 : 7 (OCVKN)
ಶೆಮಾಯನ ಪುತ್ರರು ಯಾರೆಂದರೆ: ಒತ್ನಿಯು, ರೆಫಾಯೇಲನು, ಓಬೇದನು, ಎಲ್ಜಾಬಾದನು; ಇವರ ಸಹೋದರರಾದ ಪರಾಕ್ರಮವುಳ್ಳ ಎಲೀಹುವು, ಸೆಮಕ್ಯನು.
1 ಪೂರ್ವಕಾಲವೃತ್ತಾ 26 : 8 (OCVKN)
ಇವರೆಲ್ಲರು ಓಬೇದ್ ಏದೋಮನ ಪುತ್ರರು; ಇವರೂ, ತಮ್ಮ ಪುತ್ರರೂ, ತಮ್ಮ ಸಹೋದರರೂ ಸೇವೆಗೆ ಶಕ್ತಿಯುಳ್ಳ ಸ್ಥಿತಿವಂತರು; ಒಬೆದೆದೋಮನವರು ಅರವತ್ತೆರಡು ಮಂದಿಯಾಗಿದ್ದರು.
1 ಪೂರ್ವಕಾಲವೃತ್ತಾ 26 : 9 (OCVKN)
ಮೆಷೆಲೆಮ್ಯನಿಗೆ ಬಲವುಳ್ಳ ಪುತ್ರರೂ, ಸಹೋದರರೂ ಹದಿನೆಂಟು ಮಂದಿಯಾಗಿದ್ದರು.
1 ಪೂರ್ವಕಾಲವೃತ್ತಾ 26 : 10 (OCVKN)
ಇದಲ್ಲದೆ ಮೆರಾರೀಯ ಮಕ್ಕಳಲ್ಲಿರುವ ಹೋಸ ಎಂಬವನಿಗೆ ಮಕ್ಕಳಿದ್ದರು. ಮೊದಲನೆಯವನು ಶಿಮ್ರಿಯು; ಅವನು ಚೊಚ್ಚಲ ಮಗನಲ್ಲ; ಆದರೆ ಅವನ ತಂದೆ ಅವನನ್ನು ಮುಖ್ಯಸ್ಥನನ್ನಾಗಿ ಮಾಡಿದನು;
1 ಪೂರ್ವಕಾಲವೃತ್ತಾ 26 : 11 (OCVKN)
ಎರಡನೆಯವನು ಹಿಲ್ಕೀಯನು; ಮೂರನೆಯವನು ಟೆಬಲ್ಯನು; ನಾಲ್ಕನೆಯವನು ಜಕರೀಯನು. ಹೋಸನ ಸಮಸ್ತ ಪುತ್ರರು ಮತ್ತು ಸಹೋದರರೂ ಹದಿಮೂರು ಮಂದಿಯಾಗಿದ್ದರು.
1 ಪೂರ್ವಕಾಲವೃತ್ತಾ 26 : 12 (OCVKN)
ಇದರಲ್ಲಿ ದ್ವಾರಪಾಲಕರ ವರ್ಗಗಳು ಯೆಹೋವ ದೇವರ ಆಲಯದಲ್ಲಿ ಸೇವೆ ಮಾಡುವುದಕ್ಕೆ ವರ್ಗಕ್ಕೆದುರಾಗಿ ಮುಖ್ಯಸ್ಥರಲ್ಲಿ ವಿಭಾಗಿಸಲಾಗಿದ್ದವು.
1 ಪೂರ್ವಕಾಲವೃತ್ತಾ 26 : 13 (OCVKN)
ಅವರು ಕಿರಿಯರು ಹಿರಿಯರ ಹಾಗೆ ತಮ್ಮ ಪಿತೃಗಳ ಮನೆಯ ಪ್ರಕಾರ ಬಾಗಿಲಿಂದ ಬಾಗಿಲಿಗೂ ಚೀಟುಗಳನ್ನು ಹಾಕಿದರು.
1 ಪೂರ್ವಕಾಲವೃತ್ತಾ 26 : 14 (OCVKN)
ಪೂರ್ವದಿಕ್ಕಿನ ಭಾಗದ ಚೀಟು ಶೆಲೆಮ್ಯನಿಗೆ ಬಿತ್ತು. ಅವನ ಮಗ ಬುದ್ಧಿಯುಳ್ಳ ಆಲೋಚನೆಯವನಾಗಿರುವ ಜೆಕರ್ಯನಿಗೋಸ್ಕರ ಹಾಕಿದ ಚೀಟು ಉತ್ತರ ಭಾಗಕ್ಕೆ ಇತ್ತು.
1 ಪೂರ್ವಕಾಲವೃತ್ತಾ 26 : 15 (OCVKN)
ಓಬೇದ್ ಏದೋಮನಿಗೆ ದಕ್ಷಿಣ ಭಾಗ ಬಂತು. ಅವನ ಪುತ್ರರಿಗೆ ಉಗ್ರಾಣ ಮನೆ ಬಂತು.
1 ಪೂರ್ವಕಾಲವೃತ್ತಾ 26 : 16 (OCVKN)
ಶುಪ್ಪೀಮ್, ಹೋಸ ಎಂಬವರಿಗೆ ಪಶ್ಚಿಮದಲ್ಲಿರುವ ಶೆಲ್ಲೆಕೆತ್ ಎಂಬ ಬಾಗಿಲು ಬಂತು. ಅವು ಮೇಲಕ್ಕೆ ಹೋಗುವ ರಾಜಮಾರ್ಗದ ಬಳಿಯಲ್ಲಿ ಒಂದಕ್ಕೊಂದು ಎದುರಾಗಿ ವರ್ಗಗಳಿದ್ದವು.
1 ಪೂರ್ವಕಾಲವೃತ್ತಾ 26 : 17 (OCVKN)
ಪೂರ್ವ ಕಡೆಯಾಗಿ ಆರು ಮಂದಿ ಲೇವಿಯರಿದ್ದರು. ಉತ್ತರ ಭಾಗವಾಗಿ ದಿನಕ್ಕೆ ನಾಲ್ಕು ಮಂದಿಯೂ, ದಕ್ಷಿಣ ಭಾಗವಾಗಿ ದಿನಕ್ಕೆ ನಾಲ್ಕು ಮಂದಿಯೂ ಉಗ್ರಾಣ ಮಂದಿರದ ಬಳಿಯಲ್ಲಿ ಇಬ್ಬರಿಬ್ಬರಾಗಿಯೂ,
1 ಪೂರ್ವಕಾಲವೃತ್ತಾ 26 : 18 (OCVKN)
ಪಶ್ಚಿಮ ಭಾಗವಾದ ದೇವಾಲಯದ ಅಂಗಳಕ್ಕೆ ಹೋಗುವ ರಾಜಮಾರ್ಗದಲ್ಲಿ ನಾಲ್ಕು ಮಂದಿಯೂ, ದೇವಾಲಯದ ಅಂಗಳ ಬಳಿಯಲ್ಲಿ ಇಬ್ಬರೂ ಇದ್ದರು.
1 ಪೂರ್ವಕಾಲವೃತ್ತಾ 26 : 19 (OCVKN)
ಕೋರಹೀಯರ ಪುತ್ರರಲ್ಲಿಯೂ, ಮೆರಾರೀಯ ಪುತ್ರರಲ್ಲಿಯೂ ವಿಭಾಗಿಸಿದ ದ್ವಾರಪಾಲಕರ ವರ್ಗಗಳು ಇವೆ.
1 ಪೂರ್ವಕಾಲವೃತ್ತಾ 26 : 20 (OCVKN)
ಖಜಾಂಚಿಗಳೂ, ಇತರ ಅಧಿಕಾರಿಗಳು
1 ಪೂರ್ವಕಾಲವೃತ್ತಾ 26 : 21 (OCVKN)
ಇದಲ್ಲದೆ ಲೇವಿಯರಲ್ಲಿ ಅಹೀಯನು ದೇವರ ಆಲಯದ ಬೊಕ್ಕಸದ ಮೇಲೆಯೂ, ಪ್ರತಿಷ್ಠಿತವಾದವುಗಳ ಬೊಕ್ಕಸಗಳ ಮೇಲೆಯೂ ಅಧಿಕಾರಿಯಾಗಿದ್ದನು. ಲದ್ದಾನನ ವಂಶಜರು: ಗೇರ್ಷೋನ್ಯನಾದ ಲದ್ದಾನನ ಪುತ್ರರು ಕುಟುಂಬಗಳ ಮುಖ್ಯಸ್ಥರಾಗಿದ್ದರು. ಈ ಗೇರ್ಷೋನ್ಯನಾದ ಲಡಾನನ ಮಗನು ಯೆಹೀಯೇಲನು.
1 ಪೂರ್ವಕಾಲವೃತ್ತಾ 26 : 22 (OCVKN)
ಯೆಹೀಯೇಲನ ಪುತ್ರರು ಜೇತಾಮನು, ಅವನ ಸಹೋದರನಾದ ಯೋಯೇಲನು; ಇವರು ಯೆಹೋವ ದೇವರ ಆಲಯದ ಬೊಕ್ಕಸಗಳ ಮೇಲೆ ಇದ್ದರು.
1 ಪೂರ್ವಕಾಲವೃತ್ತಾ 26 : 23 (OCVKN)
ಅಮ್ರಾಮಿಯರಲ್ಲಿಯೂ ಇಚ್ಹಾರರಲ್ಲಿಯೂ ಹೆಬ್ರೋನಿಯರಲ್ಲಿಯೂ ಉಜ್ಜೀಯೇಲರಲ್ಲಿಯೂ ಇವರ ಸಂತಾನದವರಲ್ಲಿ:
1 ಪೂರ್ವಕಾಲವೃತ್ತಾ 26 : 24 (OCVKN)
ಮೋಶೆಯ ಮೊಮ್ಮಗನೂ, ಗೇರ್ಷೋಮನ ಮಗನೂ ಆಗಿರುವ ಶೆಬೂಯೇಲನು ಬೊಕ್ಕಸಗಳ ಮೇಲೆ ಅಧಿಕಾರಿಯಾಗಿದ್ದನು.
1 ಪೂರ್ವಕಾಲವೃತ್ತಾ 26 : 25 (OCVKN)
ಇವನ ಸಹೋದರರು, ಎಲೀಯೆಜೆರನ ಮಗನು ರೆಹಬ್ಯನು, ಇವನ ಮಗನು ಯೆಶಾಯನು, ಇವನ ಮಗನು ಯೋರಾಮ, ಇವನ ಮಗನು ಜಿಕ್ರಿಯು, ಇವನ ಮಗನು ಶೆಲೋಮೋತನು.
1 ಪೂರ್ವಕಾಲವೃತ್ತಾ 26 : 26 (OCVKN)
ಈ ಶೆಲೋಮೋತನೂ ಅವನ ಸಹೋದರರೂ ಅರಸನಾದ ದಾವೀದನೂ ಮುಖ್ಯಸ್ಥರಾದ ಪಿತೃಗಳೂ ಸೈನ್ಯಾಧಿಪತಿಗಳಾದ ಸಹಸ್ರಗಳ ಮೇಲೆಯೂ ಶತ್ರುಗಳ ಮೇಲೆಯೂ ಅಧಿಪತಿಗಳಾದವರೂ ಪ್ರತಿಷ್ಠೆ ಮಾಡಿದ ಪ್ರತಿಷ್ಠಿತವಾದವುಗಳ ಬೊಕ್ಕಸಗಳನ್ನು ಕಾಯುತ್ತಿದ್ದರು.
1 ಪೂರ್ವಕಾಲವೃತ್ತಾ 26 : 27 (OCVKN)
ಅವರು ಯೆಹೋವ ದೇವರ ಆಲಯವನ್ನು ದುರಸ್ತಿಪಡಿಸುವುದಕ್ಕೆ ಯುದ್ಧಗಳಿಂದಲೂ, ಕೊಳ್ಳೆಯಿಂದಲೂ ಸಂಪಾದಿಸಿದವುಗಳನ್ನು ಪ್ರತಿಷ್ಠೆ ಮಾಡಿದರು.
1 ಪೂರ್ವಕಾಲವೃತ್ತಾ 26 : 28 (OCVKN)
ಇದಲ್ಲದೆ ದರ್ಶಿಯಾದ ಸಮುಯೇಲನೂ, ಕೀಷನ ಮಗ ಸೌಲನೂ, ನೇರನ ಮಗ ಅಬ್ನೇರನೂ, ಚೆರೂಯಳ ಮಗ ಯೋವಾಬನೂ ಪ್ರತಿಷ್ಠೆ ಮಾಡಿದ್ದೆಲ್ಲವೂ ಮತ್ತು ಯಾರು ಪ್ರತಿಷ್ಠೆ ಮಾಡಿದ್ದರೋ, ಅದೆಲ್ಲವೂ ಶೆಲೋಮೋತನ ಕೈಕೆಳಗೂ, ಅವನ ಸಹೋದರರ ಕೈಕೆಳಗೂ ಇತ್ತು.
1 ಪೂರ್ವಕಾಲವೃತ್ತಾ 26 : 29 (OCVKN)
ಇಚ್ಹಾರರಲ್ಲಿ ಕೆನನ್ಯನನ್ನು, ಅವನ ಪುತ್ರರನ್ನು ಪಾರುಪತ್ಯಗಾರರಿಗೋಸ್ಕರವೂ, ನ್ಯಾಯಾಧಿಪತಿಗಳಿಗೋಸ್ಕರವೂ ಇಸ್ರಾಯೇಲಿನ ಮೇಲೆ ಹೊರಗಿನ ಕಾರ್ಯಗಳನ್ನು ನೋಡಲು ನೇಮಿಸಲಾಗಿತ್ತು.
1 ಪೂರ್ವಕಾಲವೃತ್ತಾ 26 : 30 (OCVKN)
ಹೆಬ್ರೋನಿಯರಲ್ಲಿ ಬಲವುಳ್ಳವರಾದ ಹಷಬ್ಯನೂ, ಅವನ ಸಹೋದರರೂ ಯೆಹೋವ ದೇವರ ಸಮಸ್ತ ಕಾರ್ಯಗಳಲ್ಲಿಯೂ, ಅರಸನ ಸೇವೆಯಲ್ಲಿಯೂ ಸಾವಿರದ ಏಳು ನೂರು ಮಂದಿ ಪಶ್ಚಿಮವಾಗಿ ಯೊರ್ದನ್ ನದಿ ಈಚೆಯಲ್ಲಿ ಇಸ್ರಾಯೇಲರೊಳಗೆ ಅಧಿಪತಿಗಳಾಗಿದ್ದರು.
1 ಪೂರ್ವಕಾಲವೃತ್ತಾ 26 : 31 (OCVKN)
ಹೆಬ್ರೋನಿಯರಲ್ಲಿ ಯೆರೀಯನು ತನ್ನ ಪಿತೃಗಳ ಸಂತತಿಗಳ ಪ್ರಕಾರ ಹೆಬ್ರೋನ್ಯರಲ್ಲಿ ಮುಖ್ಯಸ್ಥನಾಗಿದ್ದನು. ಇವರು ದಾವೀದನ ಆಳಿಕೆಯ ನಲ್ವತ್ತನೆಯ ವರ್ಷದಲ್ಲಿ ಆಯ್ಕೆಯಾಗಿದ್ದರು. ಆಗ ಗಿಲ್ಯಾದಿನ ಯಜ್ಜೇರಿನಲ್ಲಿ ಅವರೊಳಗೆ ಬಲವುಳ್ಳ ಪರಾಕ್ರಮಶಾಲಿಗಳು ಸಿಕ್ಕಿದರು.
1 ಪೂರ್ವಕಾಲವೃತ್ತಾ 26 : 32 (OCVKN)
ಇದಲ್ಲದೆ ಬಲವುಳ್ಳವರಾದ ಯೆರೀಯನ ಸಹೋದರರು ಎರಡು ಸಾವಿರದ ಏಳು ನೂರು ಮಂದಿ ಕುಟುಂಬಗಳ ಮುಖ್ಯಸ್ಥರಾಗಿದ್ದರು. ಅರಸನಾದ ದಾವೀದನು ಇವರನ್ನು ದೇವರ ಸಮಸ್ತ ಕಾರ್ಯಗಳ ನಿಮಿತ್ತವಾಗಿಯೂ ರೂಬೇನ್ಯರ ಮೇಲೆಯೂ, ಗಾದ್ಯರ ಮೇಲೆಯೂ, ಮನಸ್ಸೆಯ ಅರ್ಧ ಗೋತ್ರದ ಮೇಲೆಯೂ ಅಧಿಪತಿಗಳಾಗಿ ಮಾಡಿದನು.
❮
❯