1 ಪೂರ್ವಕಾಲವೃತ್ತಾ 23 : 1 (OCVKN)
1 ಪೂರ್ವಕಾಲವೃತ್ತಾ 23 : 2 (OCVKN)
ದಾವೀದನು ಮುದುಕನಾದ ಮೇಲೆ ತನ್ನ ಮಗ ಸೊಲೊಮೋನನನ್ನು ಇಸ್ರಾಯೇಲಿನ ಮೇಲೆ ಅರಸನಾಗಿ ಮಾಡಿದನು. ಇದಲ್ಲದೆ ತಾನು ಇಸ್ರಾಯೇಲಿನ ಸಮಸ್ತ ಪ್ರಧಾನರನ್ನೂ ಯಾಜಕರನ್ನೂ ಲೇವಿಯರನ್ನೂ ಒಟ್ಟುಗೂಡಿಸಿ ಬರಮಾಡಿದನು.
1 ಪೂರ್ವಕಾಲವೃತ್ತಾ 23 : 3 (OCVKN)
ಲೇವಿಯರು ಮೂವತ್ತು ವರ್ಷ ಪ್ರಾಯದವರು ಮೊದಲುಗೊಂಡು ಎಣಿಕೆಯಾಗಿದ್ದರು. ಅವರ ಪುರುಷರ ಲೆಕ್ಕವು ಮೂವತ್ತೆಂಟು ಸಾವಿರವಾಗಿತ್ತು.
1 ಪೂರ್ವಕಾಲವೃತ್ತಾ 23 : 4 (OCVKN)
ದಾವೀದನು ಹೇಳಿದ್ದೇನೆಂದರೆ, “ಇವರಲ್ಲಿ ಇಪ್ಪತ್ತನಾಲ್ಕು ಸಾವಿರ ಮಂದಿ ಯೆಹೋವ ದೇವರ ಮನೆಯ ಕೆಲಸವನ್ನು ನಡಿಸುವವರಾಗಿದ್ದರು. ಮತ್ತು ಆರು ಸಾವಿರ ಮಂದಿ ಪಾರುಪತ್ಯಗಾರರೂ ನ್ಯಾಯಾಧಿಪತಿಗಳೂ ಆಗಿದ್ದರು.
1 ಪೂರ್ವಕಾಲವೃತ್ತಾ 23 : 5 (OCVKN)
ಇದಲ್ಲದೆ ನಾಲ್ಕು ಸಾವಿರ ಮಂದಿ ದ್ವಾರಪಾಲಕರಾಗಿದ್ದರು. ನಾಲ್ಕು ಸಾವಿರ ಮಂದಿ ಸ್ತುತಿಸುವುದಕ್ಕೆ ತಾನು ಸಿದ್ಧಮಾಡಿದ ವಾದ್ಯಗಳಿಂದ ಯೆಹೋವ ದೇವರನ್ನು ಸ್ತುತಿಸಿದರು.”
1 ಪೂರ್ವಕಾಲವೃತ್ತಾ 23 : 6 (OCVKN)
ಇದಲ್ಲದೆ ದಾವೀದನು ಗೇರ್ಷೋನ್ಯರು, ಕೊಹಾತ್ಯರು, ಮೆರಾರೀಯರು ಎಂಬ ಲೇವಿಯರನ್ನು ಮೂರು ವರ್ಗಗಳಾಗಿ ವಿಭಾಗಿಸಿದನು.
1 ಪೂರ್ವಕಾಲವೃತ್ತಾ 23 : 7 (OCVKN)
ಗೇರ್ಷೋನ್ಯರು ಗೇರ್ಷೋನ್ಯರಲ್ಲಿ, ಲದ್ದಾನ್ ಮತ್ತು ಶಿಮ್ಮೀ.
1 ಪೂರ್ವಕಾಲವೃತ್ತಾ 23 : 8 (OCVKN)
ಲದ್ದಾನನ ಪುತ್ರರು: ಮೊದಲನೆಯವನು ಯೆಹೀಯೇಲ್, ಜೇತಾಮ್, ಯೋಯೇಲ್ ಎಂಬ ಮೂರು ಮಕ್ಕಳಿದ್ದರು.
1 ಪೂರ್ವಕಾಲವೃತ್ತಾ 23 : 9 (OCVKN)
ಶಿಮ್ಮೀಯ ಪುತ್ರರು: ಶೆಲೋಮೋತ್, ಹಜೀಯೇಲ್, ಹಾರಾನ್ ಎಂಬ ಮೂರು ಮಂದಿಯು. ಇವರು ಲದ್ದಾನನ ಕುಟುಂಬಗಳಲ್ಲಿ ಮುಖ್ಯಸ್ಥರಾಗಿದ್ದರು.
1 ಪೂರ್ವಕಾಲವೃತ್ತಾ 23 : 10 (OCVKN)
ಶಿಮ್ಮೀಯ ಪುತ್ರರು: ಯಹತ್, ಜೀನ, ಯೆಯೂಷ್, ಬೆರೀಯ ಶಿಮ್ಮನ ಈ ನಾಲ್ಕು ಮಂದಿ ಪುತ್ರರಲ್ಲಿ
1 ಪೂರ್ವಕಾಲವೃತ್ತಾ 23 : 11 (OCVKN)
ಯಹತನು ಮೊದಲನೆಯವನು, ಜೀಜನು ಎರಡನೆಯವನಾಗಿದ್ದನು. ಯೆಯೂಷನಿಗೂ ಬೆರೀಯನಿಗೂ ಹೆಚ್ಚು ಮಕ್ಕಳು ಇಲ್ಲದ್ದರಿಂದ ಇವರು ತಮ್ಮ ತಂದೆಯ ಮನೆಯಲ್ಲಿ ಒಂದೇ ಲೆಕ್ಕವಾಗಿ ಎಣಿಕೆಯಾಗಿದ್ದರು.
1 ಪೂರ್ವಕಾಲವೃತ್ತಾ 23 : 12 (OCVKN)
ಕೊಹಾತ್ಯರು ಕೊಹಾತನ ಪುತ್ರರು: ಅಮ್ರಾಮ್, ಇಚ್ಹಾರ್, ಹೆಬ್ರೋನ್, ಉಜ್ಜೀಯೇಲ್ ಎಂಬ ನಾಲ್ಕು ಮಂದಿ ಮಕ್ಕಳಿದ್ದರು.
1 ಪೂರ್ವಕಾಲವೃತ್ತಾ 23 : 13 (OCVKN)
ಅಮ್ರಾಮನ ಪುತ್ರರು: ಆರೋನ್ ಮತ್ತು ಮೋಶೆ; ಆರೋನನನ್ನು ಮತ್ತು ಅವನ ಪುತ್ರರನ್ನು ಮಹಾಪರಿಶುದ್ಧವಾದ ವಸ್ತುಗಳನ್ನು ಪ್ರತಿಷ್ಠಿಸುವುದಕ್ಕೆ ಶಾಶ್ವತವಾಗಿ ಪ್ರತ್ಯೇಕಿಸಲಾಯಿತು. ಇವರು ಯೆಹೋವ ದೇವರ ಸನ್ನಿಧಿಯಲ್ಲಿ ಸದಾಕಾಲ ಧೂಪಹಾಕುವವರೂ, ಅವರ ಸೇವೆ ಮಾಡುವವರೂ, ಅವರ ಹೆಸರಿನಿಂದ ಜನರನ್ನು ಆಶೀರ್ವದಿಸುವವರೂ ಆಗಿದ್ದರು.
1 ಪೂರ್ವಕಾಲವೃತ್ತಾ 23 : 14 (OCVKN)
ದೇವರ ಮನುಷ್ಯನಾದ ಮೋಶೆಯಾದರೋ, ಅವನ ಪುತ್ರರು ಲೇವಿಯ ಗೋತ್ರದಲ್ಲಿ ಲೆಕ್ಕಿತರಾಗಿದ್ದರು.
1 ಪೂರ್ವಕಾಲವೃತ್ತಾ 23 : 15 (OCVKN)
ಮೋಶೆಯ ಪುತ್ರರು: ಗೇರ್ಷೋಮ್ ಮತ್ತು ಎಲೀಯೆಜೆರ್.
1 ಪೂರ್ವಕಾಲವೃತ್ತಾ 23 : 16 (OCVKN)
ಗೇರ್ಷೋಮನ ಪುತ್ರರಲ್ಲಿ ಶೆಬೂಯೇಲನು ಮೊದಲನೆಯವನಾಗಿದ್ದನು.
1 ಪೂರ್ವಕಾಲವೃತ್ತಾ 23 : 17 (OCVKN)
ಎಲೀಯೆಜೆರನ ಪುತ್ರರು: ಮೊದಲನೆಯವನಾದ ರೆಹಬ್ಯನು. ಇವನ ಹೊರತಾಗಿ ಎಲೀಯೆಜೆರನಿಗೆ ಬೇರೆ ಪುತ್ರರಿಲ್ಲ; ಆದರೆ ರೆಹಬ್ಯನ ಪುತ್ರರು ಬಹಳ ಮಂದಿ ಇದ್ದರು.
1 ಪೂರ್ವಕಾಲವೃತ್ತಾ 23 : 18 (OCVKN)
ಇಚ್ಹಾರನ ಪುತ್ರರಲ್ಲಿ ಶೆಲೋಮೋತನು ಮೊದಲನೆಯವನಾಗಿದ್ದನು.
1 ಪೂರ್ವಕಾಲವೃತ್ತಾ 23 : 19 (OCVKN)
ಹೆಬ್ರೋನನ ಪುತ್ರರಲ್ಲಿ ಯೆರೀಯ ಮೊದಲನೆಯವನೂ ಅಮರ್ಯ ಎರಡನೆಯವನು, ಯಹಜಿಯೇಲ್ ಮೂರನೆಯವನು, ಯೆಕಮ್ಮಾಮ್ ನಾಲ್ಕನೆಯವನು.
1 ಪೂರ್ವಕಾಲವೃತ್ತಾ 23 : 20 (OCVKN)
ಉಜ್ಜೀಯೇಲನ ಪುತ್ರರಲ್ಲಿ ಮೀಕನು ಮೊದಲನೆಯವನು, ಇಷೀಯನು ಎರಡನೆಯವನು.
1 ಪೂರ್ವಕಾಲವೃತ್ತಾ 23 : 21 (OCVKN)
ಮೆರಾರೀಯರು ಮೆರಾರೀಯ ಪುತ್ರರು: ಮಹ್ಲೀ ಮತ್ತು ಮೂಷೀ. ಮಹ್ಲೀಯ ಪುತ್ರರು: ಎಲಿಯಾಜರ್ ಮತ್ತು ಕೀಷ್.
1 ಪೂರ್ವಕಾಲವೃತ್ತಾ 23 : 22 (OCVKN)
ಎಲಿಯಾಜರನು ಗಂಡುಮಕ್ಕಳಿಲ್ಲದೆ ಸತ್ತನು. ಅವನಿಗೆ ಪುತ್ರಿಯರು ಮಾತ್ರ ಇದ್ದರು; ಇವರು ತಮ್ಮ ಬಂಧುಗಳಾದ ಕೀಷನ ಪುತ್ರರೊಂದಿಗೆ ಮದುವೆಯಾದರು.
1 ಪೂರ್ವಕಾಲವೃತ್ತಾ 23 : 23 (OCVKN)
ಮೂಷೀಯ ಪುತ್ರರು: ಮಹ್ಲೀ, ಏದೆರ್, ಯೆರೇಮೋತ್ ಎಂಬ ಈ ಮೂರು ಮಂದಿ.
1 ಪೂರ್ವಕಾಲವೃತ್ತಾ 23 : 24 (OCVKN)
ಇವರು ತಮ್ಮ ಪಿತೃಗಳ ವಂಶದ ಪ್ರಕಾರವಾಗಿ ಲೇವಿಯ ಪುತ್ರರಾಗಿದ್ದರು. ತಮ್ಮ ಹೆಸರುಗಳಿಂದ, ಎಣಿಕೆಯಾಗಿದ್ದ ಇವರು ತಮ್ಮ ಕುಟುಂಬಗಳಲ್ಲಿ ಮುಖ್ಯಸ್ಥರಾಗಿದ್ದರು. ಇವರು ಇಪ್ಪತ್ತು ವರ್ಷ ಪ್ರಾಯದವರು ಮೊದಲುಗೊಂಡು, ಯೆಹೋವ ದೇವರ ಮನೆಯ ಸೇವೆಗೋಸ್ಕರ ಕೆಲಸಮಾಡಿದರು.
1 ಪೂರ್ವಕಾಲವೃತ್ತಾ 23 : 25 (OCVKN)
ದಾವೀದನು, “ಇಸ್ರಾಯೇಲಿನ ದೇವರಾದ ಯೆಹೋವ ದೇವರು, ಅವರು ಯುಗಯುಗಾಂತರಕ್ಕೂ ಯೆರೂಸಲೇಮಿನಲ್ಲಿ ವಾಸಿಸುವ ಹಾಗೆ ತಮ್ಮ ಜನರಿಗೆ ವಿಶ್ರಾಂತಿಯನ್ನು ಕೊಟ್ಟಿದ್ದಾರೆ,” ಎಂದು ಹೇಳಿ,
1 ಪೂರ್ವಕಾಲವೃತ್ತಾ 23 : 26 (OCVKN)
ಲೇವಿಯರನ್ನು ಕುರಿತು ಅವರು ಗುಡಾರವನ್ನೂ, ಅವರ ಸೇವೆಗೋಸ್ಕರ ಅದರ ಪಾತ್ರೆಗಳನ್ನೂ ಇನ್ನು ಮೇಲೆ ಹೊರುವ ಕೆಲಸವಿಲ್ಲವೆಂದು ಹೇಳಿದ್ದನು.
1 ಪೂರ್ವಕಾಲವೃತ್ತಾ 23 : 27 (OCVKN)
ಏಕೆಂದರೆ ದಾವೀದನ ಕಡೇ ಮಾತುಗಳ ಪ್ರಕಾರ, ಲೇವಿಯರು ಇಪ್ಪತ್ತು ವರ್ಷವೂ ಅದಕ್ಕೆ ಮೇಲ್ಪಟ್ಟ ಪ್ರಾಯದವರು ಮೊದಲುಗೊಂಡು ಎಣಿಕೆಯಾಗಿದ್ದರು.
1 ಪೂರ್ವಕಾಲವೃತ್ತಾ 23 : 28 (OCVKN)
ಅವರು ಆರೋನನ ವಂಶಸ್ಥರ ಕೈಕೆಳಗಿದ್ದುಕೊಂಡು ಯೆಹೋವ ದೇವರ ಆಲಯದ ಸೇವೆಗೋಸ್ಕರ ಅಂಗಳಗಳಲ್ಲಿಯೂ ಕೊಠಡಿಗಳಲ್ಲಿಯೂ ಸಮಸ್ತ ಪರಿಶುದ್ಧ ಸಾಮಗ್ರಿಗಳನ್ನು ಶುದ್ಧ ಮಾಡುವುದರಲ್ಲಿಯೂ,
1 ಪೂರ್ವಕಾಲವೃತ್ತಾ 23 : 29 (OCVKN)
ಯೆಹೋವ ದೇವರ ಮಂದಿರದ ಸೇವೆಯ ಕಾರ್ಯದಲ್ಲಿರುವ ಸಮ್ಮುಖದ ರೊಟ್ಟಿಗೋಸ್ಕರವೂ, ಅರ್ಪಣೆ ಬಲಿಯ ನಯವಾದ ಹಿಟ್ಟಿಗೋಸ್ಕರವೂ, ಹುಳಿಯಿಲ್ಲದ ರೊಟ್ಟಿಗಳಿಗೋಸ್ಕರವೂ, ಬಾಂಡ್ಲಿಯಲ್ಲಿ ಮಾಡಿದ್ದಕ್ಕೋಸ್ಕರವೂ, ಕರಿದಿದ್ದಕ್ಕೋಸ್ಕರವೂ, ಸಮಸ್ತ ವಿವಿಧ ಅಳತೆಗೋಸ್ಕರವೂ ಆರೋನನ ಮಕ್ಕಳ ಬಳಿಯಲ್ಲಿ ಅವರಿಗೆ ನೇಮಕವಾಗಿತ್ತು.
1 ಪೂರ್ವಕಾಲವೃತ್ತಾ 23 : 30 (OCVKN)
ಇದಲ್ಲದೆ ಉದಯಕಾಲದಲ್ಲಿಯೂ, ಸಾಯಂಕಾಲದಲ್ಲಿಯೂ ನಿಂತು, ಯೆಹೋವ ದೇವರನ್ನು ಕೊಂಡಾಡುವುದಕ್ಕೂ, ಯೆಹೋವ ದೇವರನ್ನು ಸ್ತುತಿಸುವುದಕ್ಕೂ,
1 ಪೂರ್ವಕಾಲವೃತ್ತಾ 23 : 31 (OCVKN)
ಯೆಹೋವ ದೇವರ ಮುಂದೆ ನಿರಂತರವಾಗಿ ಅವರಿಗೆ ಆಜ್ಞಾಪಿಸಿದ ಕಟ್ಟಳೆಯ ಪ್ರಕಾರವಾಗಿ ಸಬ್ಬತ್ ದಿನಗಳಲ್ಲಿಯೂ ಅಮಾವಾಸ್ಯೆಗಳಲ್ಲಿಯೂ ನೇಮಕವಾದ ಹಬ್ಬಗಳಲ್ಲಿಯೂ ಲೆಕ್ಕದ ಪ್ರಕಾರ ಎಲ್ಲಾ ದಹನಬಲಿಗಳನ್ನು ಅರ್ಪಿಸುವುದು.
1 ಪೂರ್ವಕಾಲವೃತ್ತಾ 23 : 32 (OCVKN)
ಯೆಹೋವ ದೇವರ ಮನೆಯ ಸೇವೆಯಲ್ಲಿ ದೇವದರ್ಶನ ಗುಡಾರದ ಕಾವಲನ್ನೂ, ಪರಿಶುದ್ಧ ಸ್ಥಾನದ ಕಾವಲನ್ನೂ, ತಮ್ಮ ಸಹೋದರರಾದ ಆರೋನನ ಪುತ್ರರ ಆಜ್ಞೆಯನ್ನೂ ಕೈಗೊಳ್ಳುವುದು ಅವರಿಗೆ ನೇಮಕವಾಗಿತ್ತು.
❮
❯