ಜೆಕರ್ಯ 6 : 1 (KNV)
ನಾನು ತಿರುಗಿಕೊಂಡು ನನ್ನ ಕಣ್ಣುಗಳನ್ನೆತ್ತಿ ನೋಡಿದಾಗ ಇಗೋ, ನಾಲ್ಕು ರಥಗಳು ಎರಡು ಬೆಟ್ಟಗಳ ನಡುವೆಯಿಂದ ಹೊರಟುಬಂದವು; ಆ ಬೆಟ್ಟಗಳು ಹಿತ್ತಾಳೆಯ ಬೆಟ್ಟಗಳಾಗಿದ್ದವು.
ಜೆಕರ್ಯ 6 : 2 (KNV)
ಮೊದಲನೇ ರಥಕ್ಕೆ ಕೆಂಪು ಕುದುರೆಗಳಿದ್ದವು; ಎರಡನೇ ರಥಕ್ಕೆ ಕಪ್ಪು ಕುದುರೆಗಳು;
ಜೆಕರ್ಯ 6 : 3 (KNV)
ಮೂರನೇ ರಥಕ್ಕೆ ಬಿಳಿ ಕುದುರೆಗಳು; ನಾಲ್ಕನೇ ರಥಕ್ಕೆ ಕಪಿಲ ವರ್ಣದ ಕುದುರೆಗಳು.
ಜೆಕರ್ಯ 6 : 4 (KNV)
ಆಗ ನಾನು ಉತ್ತರ ಕೊಟ್ಟು ನನ್ನ ಸಂಗಡ ಮಾತನಾಡಿದ ದೂತನಿಗೆ--ನನ್ನ ಒಡೆಯನೇ, ಇದೇನು ಅಂದೆನು.
ಜೆಕರ್ಯ 6 : 5 (KNV)
ದೂತನು ನನಗೆ ಉತ್ತರಕೊಟ್ಟು ಹೇಳಿದ್ದೇನಂದರೆ--ಇವು ಆಕಾಶಗಳ ನಾಲ್ಕು ಆತ್ಮಗಳು; ಇವು ಸಮಸ್ತ ಭೂಮಿಯ ಕರ್ತನ ಮುಂದೆ ನಿಂತಲ್ಲಿಂದ ಹೊರಟುಬಂದವೆ.
ಜೆಕರ್ಯ 6 : 6 (KNV)
ಆ ಕಪ್ಪು ಕುದುರೆಗಳು ಉತ್ತರ ದೇಶಕ್ಕೆ ಹೊರಡುತ್ತವೆ; ಬಿಳಿಯವುಗಳು ಇವುಗಳ ಹಿಂದೆ ಹೊರಡುತ್ತವೆ; ಚುಕ್ಕೆಗಳಿದ್ದವುಗಳು ದಕ್ಷಿಣ ದೇಶಕ್ಕೆ ಹೊರಡುತ್ತವೆ.
ಜೆಕರ್ಯ 6 : 7 (KNV)
ಕಪಿಲ ವರ್ಣದವುಗಳು ಹೊರಟು ದೇಶದಲ್ಲಿ ಸಂಚಾರ ಮಾಡಹೋಗುವದಕ್ಕೆ ನೋಡಿದವು ಅಂದನು. ಆಗ ಅವನು--ಹೋಗಿ ದೇಶದಲ್ಲಿ ಅತ್ತಿತ್ತ ನಡೆದಾಡುವದಕ್ಕೆ ಇಲ್ಲಿಂದ ಹೋಗಿರಿ ಅಂದನು; ಹಾಗೆ ಅವು ದೇಶದಲ್ಲಿ ಅತ್ತಿತ್ತ ತಿರುಗಾಡಿದವು.
ಜೆಕರ್ಯ 6 : 8 (KNV)
ಆಗ ಅವನು ನನಗೆ ಕೂಗಿ ಹೇಳಿದ್ದೇನಂ ದರೆ--ನೋಡು, ಉತ್ತರ ದೇಶಕ್ಕೆ ಹೊರಟವುಗಳು ಉತ್ತರ ದೇಶದಲ್ಲಿ ನನ್ನ ಆತ್ಮವನ್ನು ಶಾಂತಿಪಡಿಸಿವೆ ಅಂದನು.
ಜೆಕರ್ಯ 6 : 9 (KNV)
ಇದಲ್ಲದೆ ಕರ್ತನ ವಾಕ್ಯವು ನನಗೆ ಉಂಟಾಯಿತು.
ಜೆಕರ್ಯ 6 : 10 (KNV)
ಹೇಗಂದರೆ--ಆ ಸೆರೆಯವರಿಂದ ಅಂದರೆ ಬಾಬೆಲಿ ನಿಂದ ಬಂದಿರುವ ಹೆಲ್ದಾಯನಿಂದಲೂ ತೋಬೀಯ ನಿಂದಲೂ ಯೆದಾಯನಿಂದಲೂ ತಕ್ಕೊಂಡು ಅದೇ ದಿವಸದಲ್ಲಿ ನೀನು ಬಂದು ಚೆಫನ್ಯನ ಮಗನಾದ ಯೋಷೀಯನ ಮನೆಗೆ ಹೋಗಿ
ಜೆಕರ್ಯ 6 : 11 (KNV)
ಬೆಳ್ಳಿಬಂಗಾರವನ್ನು ತಕ್ಕೊಂಡು ಕಿರೀಟಗಳನ್ನು ಮಾಡಿ ಅವುಗಳನ್ನು ಯೆಹೋಚಾದಾಕನ ಮಗನಾದ ಪ್ರಧಾನ ಯಾಜಕ ನಾದ ಯೆಹೋಶುವನ ತಲೆಯ ಮೇಲೆ ಇಟ್ಟು
ಜೆಕರ್ಯ 6 : 12 (KNV)
ಅವನಿಗೆ ಹೇಳತಕ್ಕದ್ದೇನಂದರೆ--ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ಇಗೋ, ಚಿಗುರೆಂದು ಹೆಸರುಳ್ಳ ಮನುಷ್ಯನು, ಅವನು ತನ್ನ ಸ್ಥಳದೊಳಗಿಂದ ಚಿಗುರು ವನು, ಆತನೇ ಕರ್ತನ ದೇವಾಲಯವನ್ನು ಕಟ್ಟುವನು.
ಜೆಕರ್ಯ 6 : 13 (KNV)
ಹೌದು, ಆತನು ಕರ್ತನ ದೇವಾಲಯವನ್ನು ಕಟ್ಟು ವನು; ಆತನು ಮಹಿಮೆಯನ್ನು ಧರಿಸುವನು; ಕೂತು ಕೊಂಡು ತನ್ನ ಸಿಂಹಾಸನದಲ್ಲಿ ಆಳುವನು, ತನ್ನ ಸಿಂಹಾಸನದಲ್ಲಿ ಯಾಜಕನಾಗಿರುವನು; ಸಮಾಧಾನದ ಆಲೋಚನೆ ಅವರಿಬ್ಬರೊಳಗೆ ಇರುವದು.
ಜೆಕರ್ಯ 6 : 14 (KNV)
ಆ ಕಿರೀಟಗಳು ಹೇಲೆಮನಿಗೂ ತೋಬೀಯನಿಗೂ ಯೆದಾಯನಿಗೂ ಚೆಫನ್ಯನ ಮಗನಾದ ಹೇನನಿಗೂ ಕರ್ತನ ದೇವಾಲಯದಲ್ಲಿ ಜ್ಞಾಪಕಾರ್ಥವಾಗಿ ಇರು ವವು.
ಜೆಕರ್ಯ 6 : 15 (KNV)
ದೂರವಾದವರು ಬಂದು ಕರ್ತನ ದೇವಾ ಲಯವನ್ನು ಕಟ್ಟುವರು; ಸೈನ್ಯಗಳ ಕರ್ತನು ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದ್ದಾನೆಂದು ತಿಳಿಯುವಿರಿ; ನೀವು ನಿಮ್ಮ ದೇವರಾದ ಕರ್ತನ ಶಬ್ದಕ್ಕೆ ಜಾಗ್ರತೆಯಾಗಿ ಕಿವಿಗೊಟ್ಟರೆ ಇದು ನೆರವೇರುವದು.

1 2 3 4 5 6 7 8 9 10 11 12 13 14 15