ತೀತನಿಗೆ 1 : 1 (KNV)
ದೇವರಾದುಕೊಂಡವರ ನಂಬಿಕೆಗನುಸಾರ ವೂ ಭಕ್ತಿಗನುಸಾರವಾದ ಸತ್ಯದ ತಿಳು ವಳಿಕೆಗನುಸಾರವೂ ದೇವರ ಸೇವಕನಾದ ಯೇಸು ಕ್ರಿಸ್ತನ ಅಪೊಸ್ತಲನಾಗಿರುವ ಪೌಲನೆಂಬ ನನಗೆ
ತೀತನಿಗೆ 1 : 2 (KNV)
ಸುಳ್ಳಾಡದ ದೇವರು ಲೋಕದಾರಂಭಕ್ಕೆ ಮೊದಲೇ ವಾಗ್ದಾನ ಮಾಡಿದ ನಿತ್ಯಜೀವದ ನಿರೀಕ್ಷೆಯನ್ನು
ತೀತನಿಗೆ 1 : 3 (KNV)
ತನ್ನ ವಾಕ್ಯ ಸಾರೋಣದ ಮೂಲಕ ತಕ್ಕ ಕಾಲದಲ್ಲಿ ಪ್ರಕಟಿಸಿ ನಮ್ಮ ರಕ್ಷಕನಾದ ದೇವರ ಆಜ್ಞೆಗನುಸಾರ ಆ ಸಾರೋಣ ವನ್ನು ಒಪ್ಪಿಸಿದನು.
ತೀತನಿಗೆ 1 : 4 (KNV)
ನಮ್ಮಲ್ಲಿ ಹುದುವಾಗಿರುವ ನಂಬಿಕೆ ಗನುಸಾರವಾಗಿ ನನ್ನ ನಿಜಕುಮಾರನಾದ ತೀತನಿಗೆ-- ತಂದೆಯಾದ ದೇವರಿಂದಲೂ ನಮ್ಮ ರಕ್ಷಕನೂ ಕರ್ತನೂ ಆಗಿರುವ ಯೇಸು ಕ್ರಿಸ್ತನಿಂದಲೂ ನಿನಗೆ ಕೃಪೆಯೂ ಕನಿಕರವೂ ಶಾಂತಿಯೂ ಆಗಲಿ.
ತೀತನಿಗೆ 1 : 5 (KNV)
ಈ ಕಾರಣದಿಂದ ಕ್ರೇತದಲ್ಲಿ ಇನ್ನೂ ಕ್ರಮಕ್ಕೆ ಬಾರದಿರುವವುಗಳನ್ನು ನೀನು ಕ್ರಮಪಡಿಸಿ ನಾನು ನಿನಗೆ ನೇಮಿಸಿದ ಪ್ರಕಾರ ಪ್ರತಿಯೊಂದು ಪಟ್ಟಣ ದಲ್ಲಿ (ಸಭೆಯ) ಹಿರಿಯರನ್ನು ನೇಮಿಸಬೇಕೆಂದು ನಿನ್ನನ್ನು ಅಲ್ಲೇ ಬಿಟ್ಟು ಬಂದೆನು.
ತೀತನಿಗೆ 1 : 6 (KNV)
ಸಭೆಯ ಹಿರಿಯನು ನಿಂದಾ ರಹಿತನೂ ಏಕಪತ್ನಿಯುಳ್ಳವನೂ ಆಗಿರಬೇಕು. ಅವನ ಮಕ್ಕಳು ನಂಬಿಗಸ್ತರಾಗಿರಬೇಕು; ಅವರು ದುರ್ಮಾರ್ಗ ಸ್ತರೆನಿಸಿ ಕೊಂಡವರಾಗಲಿ ಅಧಿಕಾರಕ್ಕೆ ಒಳಗಾಗದವ ರಾಗಲಿ ಆಗಿರಬಾರದು.
ತೀತನಿಗೆ 1 : 7 (KNV)
ಯಾಕಂದರೆ ಸಭಾಧ್ಯಕ್ಷನು ದೇವರ ಮನೆವಾರ್ತೆಯವನಾಗಿರುವದರಿಂದ ನಿಂದಾ ರಹಿತನಾಗಿರಬೇಕು; ಅವನು ಸ್ವೇಚ್ಛಾಪರನೂ ಮುಂಗೋಪಿಯೂ ಕುಡಿಯುವವನೂ ಹೊಡೆದಾಡು ವವನೂ ನೀಚಲಾಭವನ್ನು ಅಪೇಕ್ಷಿಸುವವನೂ ಆಗಿರದೆ
ತೀತನಿಗೆ 1 : 8 (KNV)
ಅತಿಥಿಸತ್ಕಾರವನ್ನು ಪ್ರೀತಿಸುವವನು ಒಳ್ಳೆಯವರನ್ನು ಪ್ರೀತಿಸುವವನೂ ಸ್ವಸ್ಥಚಿತ್ತನೂ ನ್ಯಾಯವಂತನೂ ಪರಿಶುದ್ಧನೂ ಜಿತೇಂದ್ರಿಯನೂ ಆಗಿದ್ದು
ತೀತನಿಗೆ 1 : 9 (KNV)
ತಾನು ಸ್ವಸ್ಥ ಬೋಧನೆಯಿಂದ ಎಚ್ಚರಿಸುವದಕ್ಕೂ ಎದುರಿಸು ವವರು ಒಪ್ಪುವಂತೆ ಮಾಡುವದಕ್ಕೂ ಶಕ್ತನಾಗಿರುವಂತೆ ತನಗೆ ಕಲಿಸಲ್ಪಟ್ಟ ಪ್ರಕಾರ ವಿಶ್ವಾಸದ ವಾಕ್ಯವನ್ನು ದೃಢವಾಗಿ ಹಿಡಿದುಕೊಂಡವನಾಗಿರತಕ್ಕದ್ದು.
ತೀತನಿಗೆ 1 : 10 (KNV)
ಅನೇಕರು ಅವರೊಳಗೆ ಮುಖ್ಯವಾಗಿ ಸುನ್ನತಿ ಯವರು ಅಧಿಕಾರಕ್ಕೆ ಒಳಗಾಗದವರೂ ವ್ಯರ್ಥವಾದ ಮಾತಿನವರೂ ಮೋಸಗಾರರೂ ಆಗಿದ್ದಾರೆ;
ತೀತನಿಗೆ 1 : 11 (KNV)
ಅವರು ನೀಚಲಾಭವನ್ನು ಹೊಂದುವದಕ್ಕಾಗಿ ಮಾಡಬಾರದ ಉಪದೇಶವನ್ನು ಮಾಡಿ ಇಡೀ ಕುಟುಂಬಗಳನ್ನೇ ಹಾಳುಮಾಡುತ್ತಾರಾದದರಿಂದ ಅವರ ಬಾಯಿಗಳನ್ನು ಮುಚ್ಚಿಸತಕ್ಕದ್ದು.
ತೀತನಿಗೆ 1 : 12 (KNV)
ಕ್ರೇತದವರು ಯಾವಾಗಲೂ ಸುಳ್ಳುಗಾರರೂ ದುಷ್ಟಮೃಗಗಳೂ ಹೊಟ್ಟೇಬಾಕರೂ ಆಗಿದ್ದಾರೆಂದು ಅವರ ಸ್ವಂತ ಪ್ರವಾದಿಗಳಲ್ಲಿ ಒಬ್ಬನು ಹೇಳಿದನು.
ತೀತನಿಗೆ 1 : 13 (KNV)
ಈ ಸಾಕ್ಷಿಯು ನಿಜವೇ; ಆದದರಿಂದ ಅವರು ನಂಬಿಕೆಯಲ್ಲಿ ಸ್ವಸ್ಥ ಚಿತ್ತರಾಗಿರುವಂತೆ ಅವ ರನ್ನು ಕಠಿಣವಾಗಿ ಖಂಡಿಸು.
ತೀತನಿಗೆ 1 : 14 (KNV)
ಅವರು ಯೆಹೂದ್ಯರ ಕಲ್ಪನಾಕಥೆಗಳಿಗೂ ಸತ್ಯಭ್ರಷ್ಟರಾದ ಮನುಷ್ಯರ ಆಜ್ಞೆ ಗಳಿಗೂ ಲಕ್ಷ್ಯಕೊಡಬಾರದು.
ತೀತನಿಗೆ 1 : 15 (KNV)
ಶುದ್ಧರಿಗೆ ಎಲ್ಲವೂ ಶುದ್ಧವೇ; ಆದರೆ ಮಲಿನವಾದವರಿಗೂ ನಂಬಿಕೆಯಿಲ್ಲ ದವರಿಗೂ ಯಾವದೂ ಶುದ್ಧವಲ್ಲ; ಆದರೆ ಅವರ ಬುದ್ಧಿಯೂ ಮನಸ್ಸಾಕ್ಷಿಯೂ ಕೂಡ ಮಲಿನವಾಗಿವೆ.ಅವರು ತಾವು ದೇವರನ್ನು ಅರಿತವರೆಂದು ಹೇಳಿ ಕೊಳ್ಳುತ್ತಾರೆ; ಆದರೆ ಅವರು ಅಸಹ್ಯರೂ ಅವಿಧೇಯ ರೂ ಸತ್ಕಾರ್ಯಗಳಿಗೆಲ್ಲಾ ಭ್ರಷ್ಟರೂ ಆಗಿರುವದರಿಂದ ದೇವರನ್ನು ತಮ್ಮ ಕೃತ್ಯಗಳಿಂದಲೇ ಅಲ್ಲಗಳೆಯುವರು.
ತೀತನಿಗೆ 1 : 16 (KNV)
ಅವರು ತಾವು ದೇವರನ್ನು ಅರಿತವರೆಂದು ಹೇಳಿ ಕೊಳ್ಳುತ್ತಾರೆ; ಆದರೆ ಅವರು ಅಸಹ್ಯರೂ ಅವಿಧೇಯ ರೂ ಸತ್ಕಾರ್ಯಗಳಿಗೆಲ್ಲಾ ಭ್ರಷ್ಟರೂ ಆಗಿರುವದರಿಂದ ದೇವರನ್ನು ತಮ್ಮ ಕೃತ್ಯಗಳಿಂದಲೇ ಅಲ್ಲಗಳೆಯುವರು.

1 2 3 4 5 6 7 8 9 10 11 12 13 14 15 16

BG:

Opacity:

Color:


Size:


Font: