ಪರಮ ಗೀತ 4 : 1 (KNV)
ಇಗೋ, ನನ್ನ ಪ್ರಿಯಳೇ, ನೀನು ಸುಂದರಿಯು! ಇಗೋ, ನೀನು ಸುಂದರಿಯು! ನಿನ್ನ ಮುಸುಕಿನೊಳಗೆ ನಿನಗೆ ಪಾರಿವಾಳದ ಕಣ್ಣುಗ ಳಿವೆ. ನಿನ್ನ ಕೂದಲು ಗಿಲ್ಯಾದಿನ ಪರ್ವತದಲ್ಲಿ ಕಾಣ ಲ್ಪಡುವ ಮೇಕೆ ಮಂದೆಯ ಹಾಗೆ ಇದೆ.
ಪರಮ ಗೀತ 4 : 2 (KNV)
ನಿನ್ನ ಹಲ್ಲುಗಳು ತೊಳೆಯಲ್ಪಟ್ಟು ಮೇಲಕ್ಕೆ ಬರುವ ಉಣ್ಣೆ ಕತ್ತರಿಸಿದ ಕುರಿಮಂದೆಗೆ ಸಮಾನವಾಗಿವೆ; ಅವೆಲ್ಲಾ ಅವಳಿ ಜವಳಿ ಈಯುತ್ತವೆ; ಅವುಗಳಲ್ಲಿ ಒಂದೂ ಬಂಜೆಯಾಗಿರದು.
ಪರಮ ಗೀತ 4 : 3 (KNV)
ನಿನ್ನ ತುಟಿಗಳು ಕೆಂಪು ದಾರದ ಹಾಗೆ ಅವೆ; ನಿನ್ನ ಮಾತು ರಮ್ಯವಾದದ್ದು; ನಿನ್ನ ಕೆನ್ನೆಯು ಮುಸುಕಿನೊಳಗೆ ವಿಭಾಗಿಸಿದ ದಾಳಿಂಬರ ಹಣ್ಣಿನ ಹಾಗೆ ಇದೆ.
ಪರಮ ಗೀತ 4 : 4 (KNV)
ನಿನ್ನ ಕುತ್ತಿಗೆ ದಾವೀದನ ಆಯುಧ ಶಾಲೆಗೋಸ್ಕರ ಕಟ್ಟಿಸಲ್ಪಟ್ಟ ಬುರುಜಿನ ಹಾಗೆ ಇದೆ; ಅದರಲ್ಲಿ ಸಾವಿರ ಗುರಾಣಿಗಳು ತೂಗ ಹಾಕಿವೆ; ಅವುಗಳೆಲ್ಲಾ ಪರಾಕ್ರಮಶಾಲಿಗಳ ಡಾಲುಗಳು.
ಪರಮ ಗೀತ 4 : 5 (KNV)
ನಿನ್ನ ಎರಡು ಸ್ತನಗಳು ತಾವರೆ ಹೂವುಗಳಲ್ಲಿ ಮೇಯುವ ಅವಳಿ ಜವಳಿಯಾದ ಎರಡು ಜಿಂಕೆಯ ಮರಿಗಳ ಹಾಗೆ ಅವೆ.
ಪರಮ ಗೀತ 4 : 6 (KNV)
ಉದಯವಾಗುವ ವರೆಗೂ ನೆರಳುಗಳು ಓಡಿಹೋಗುವ ವರೆಗೂ ನಾನು ರಕ್ತಬೋಳದ ಪರ್ವತಕ್ಕೂ ಸಾಂಬ್ರಾಣಿಯ ಗುಡ್ಡಕ್ಕೂ ಹೋಗುವೆನು.
ಪರಮ ಗೀತ 4 : 7 (KNV)
ನನ್ನ ಪ್ರಿಯಳೇ, ನೀನು ಪೂರ್ಣ ಸುಂದರಿಯು, ನಿನ್ನಲ್ಲಿ ಕಳಂಕವೇನೂ ಇಲ್ಲ.
ಪರಮ ಗೀತ 4 : 8 (KNV)
ನನ್ನ ಸಂಗಡ ಲೆಬನೋನಿನಿಂದ ಬಾ, ಪತ್ನಿಯೇ; ಲೆಬನೋನಿನಿಂದ ನನ್ನ ಸಂಗಡ ಬಾ. ಅಮಾನದ ಶಿಖರದಿಂದ, ಶೆನೀರ್, ಹೆರ್ಮೋನ್ ಶಿಖರದಿಂದ, ಸಿಂಹದ ಗವಿಗಳಿಂದ, ಚಿರತೆಗಳ ಪರ್ವತಗಳಿಂದ ದೃಷ್ಟಿಸು.
ಪರಮ ಗೀತ 4 : 9 (KNV)
ನನ್ನ ಹೃದಯವನ್ನು ನೀನು ಸೆಳಕೊಂಡಿದ್ದೀ. ನನ್ನ ಸಹೋದರಿಯೇ, ವಧುವೇ, ನಿನ್ನ ಕಣ್ಣುಗಳ ಏಕದೃಷ್ಟಿಯಿಂದಲೂ ನಿನ್ನ ಕೊರಳಲ್ಲಿರುವ ಒಂದು ಕಂಠಮಾಲೆಯಿಂದಲೂ ನನ್ನ ಹೃದಯವನ್ನು ನೀನು ಸೆಳಕೊಂಡಿದ್ದೀ.
ಪರಮ ಗೀತ 4 : 10 (KNV)
ನಿನ್ನ ಪ್ರೀತಿಯು ಎಷ್ಟೋ ಚಂದ! ನನ್ನ ಸಹೋದರಿಯೇ, ವಧುವೇ, ನಿನ್ನ ಪ್ರೀತಿಯು ದ್ರಾಕ್ಷಾರಸಕ್ಕಿಂತ ಎಷ್ಟೋ ಉತ್ತಮ! ಎಲ್ಲಾ ಸುಗಂಧ ಗಳಿಗಿಂತ ನಿನ್ನ ತೈಲಗಳ ವಾಸನೆಯು ಎಷ್ಟೋ ಉತ್ತಮ!
ಪರಮ ಗೀತ 4 : 11 (KNV)
ನಿನ್ನ ತುಟಿಗಳು, ಓ ನನ್ನ ವಧುವೇ, ಜೇನುಗೂಡಿನ ಹಾಗೆ ಸುರಿಯುತ್ತವೆ; ಹಾಲೂ ಜೇನೂ ನಿನ್ನ ನಾಲಿಗೆಯ ಕೆಳಗೆ ಅವೆ; ನಿನ್ನ ವಸ್ತ್ರಗಳ ವಾಸನೆಯು ಲೆಬನೋನಿನ ವಾಸನೆಯ ಹಾಗೆ ಅವೆ.
ಪರಮ ಗೀತ 4 : 12 (KNV)
ನನ್ನ ಸಹೋದರಿಯು, ಪತ್ನಿಯು, ಮುಚ್ಚಲ್ಪಟ್ಟ ತೋಟವೂ ಮುಚ್ಚಲ್ಪಟ್ಟ ಒರತೆಯೂ ಮುದ್ರೆ ಹಾಕಲ್ಪಟ್ಟ ಬುಗ್ಗೆಯೂ ಆಗಿದ್ದಾಳೆ.
ಪರಮ ಗೀತ 4 : 13 (KNV)
ನಿನ್ನ ಗಿಡಗಳಲ್ಲಿ ದಾಳಿಂಬರದ ವನವೂ ರಮ್ಯವಾದ ಫಲಕೊಡುವ ಗಿಡಗಳೂ ಕರ್ಪೂರವೂ ಜಟಾಮಾಂಸಿಯೂ ಕೂಡ ಇವೆ.
ಪರಮ ಗೀತ 4 : 14 (KNV)
ಜಟಾಮಾಂಸಿಯೂ-- ಕೇಸರಿಯೂ ಬಜೆಯೂ ಲವಂಗವೂ ಎಲ್ಲಾ ಸಾಂಬ್ರಾಣಿ ಗಿಡಗಳೂ ರಕ್ತಬೋಳವೂ ಅಗರೂ
ಪರಮ ಗೀತ 4 : 15 (KNV)
ಸಮಸ್ತ ಮುಖ್ಯವಾದ ಸುಗಂಧದ್ರವ್ಯ ಗಳೂ ತೋಟಗಳ ಬುಗ್ಗೆಯೂ ಜೀವಜಲಗಳ ಬಾವಿಯೂ ಲೆಬನೋನಿನಿಂದ ಹರಿಯುವ ಕಾಲುವೆ ಗಳೂ ನಿನ್ನಲ್ಲಿ ಇವೆ.
ಪರಮ ಗೀತ 4 : 16 (KNV)
ಓ ಉತ್ತರ ಗಾಳಿಯೇ, ಎಚ್ಚರವಾಗು! ದಕ್ಷಿಣ ಗಾಳಿಯೇ, ಬಾ! ನನ್ನ ತೋಟದ ಮೇಲೆ ಬೀಸು; ಅದರ ಸುಗಂಧಗಳು ಹರಿಯಲಿ. ನನ್ನ ಪ್ರಿಯನು ತನ್ನ ತೋಟದಲ್ಲಿ ಬಂದು ತನ್ನ ರಮ್ಯವಾದ ಫಲಗ ಳನ್ನು ತಿನ್ನಲಿ.
❮
❯