ಪರಮ ಗೀತ 3 : 1 (KNV)
ರಾತ್ರಿಯಲ್ಲಿ ನನ್ನ ಹಾಸಿಗೆಯ ಮೇಲೆ ನನ್ನ ಪ್ರಾಣ ಪ್ರಿಯನನ್ನು ಹುಡುಕಿದೆನು; ಅವನನ್ನು ಹುಡುಕಿದೆನು, ಆದರೆ ಕಾಣದೆಹೋದೆನು.
ಪರಮ ಗೀತ 3 : 2 (KNV)
ನಾನು ಈಗ ಎದ್ದು ಪಟ್ಟಣವನ್ನು ಸಂಚರಿಸಿ ಬೀದಿ ಗಳಲ್ಲಿಯೂ ಮಾರ್ಗಗಳಲ್ಲಿಯೂ ನನ್ನ ಪ್ರಾಣಪ್ರಿಯ ನನ್ನು ಹುಡುಕುವೆನು. ಅವನನ್ನು ಹುಡುಕಿ ಕಾಣದೆ ಹೋದೆನು.
ಪರಮ ಗೀತ 3 : 3 (KNV)
ಪಟ್ಟಣವನ್ನು ಸಂಚರಿಸುವ ಕಾವಲು ಗಾರರು ನನ್ನನ್ನು ಕಂಡಾಗ--ನನ್ನ ಪ್ರಾಣಪ್ರಿಯ ನನ್ನು ನೀವು ಕಂಡಿರಾ ಅಂದೆನು.
ಪರಮ ಗೀತ 3 : 4 (KNV)
ನಾನು ಅವರನ್ನು ಬಿಟ್ಟು ಸ್ವಲ್ಪ ಆಚೆಗೆ ಹೋದ ತರುವಾಯ, ನನ್ನ ಪ್ರಾಣಪ್ರಿಯನನ್ನು ಕಂಡೆನು. ನಾನು ಅವನನ್ನು ಹಿಡುಕೊಂಡು ನನ್ನ ತಾಯಿಯ ಮನೆಗೂ ನನ್ನನ್ನು ಹೆತ್ತವಳ ಕೊಠಡಿಗೂ ಅವನನ್ನು ಕರತರುವ ವರೆಗೆ ಹೋಗಗೊಡಿಸಲಿಲ್ಲ.
ಪರಮ ಗೀತ 3 : 5 (KNV)
ಯೆರೂಸಲೇಮಿನ ಕುಮಾರ್ತೆಯರೇ, ನನ್ನ ಪ್ರಿಯನು ಮೆಚ್ಚುವ ವರೆಗೆ ನೀವು ನನ್ನ ಪ್ರೀತಿಯನ್ನು ಎಬ್ಬಿಸಬೇಡಿರಿ, ಎಚ್ಚರಿಸಬೇಡಿರಿ ಎಂದು ಅಡವಿಯ ಜಿಂಕೆಗಳಿಂದಲೂ ದುಪ್ಪಿಗಳಿಂದಲೂ ನಿಮಗೆ ಆಜ್ಞಾಪಿಸುತ್ತೇನೆ.
ಪರಮ ಗೀತ 3 : 6 (KNV)
ರಕ್ತಬೋಳ ಸಾಂಬ್ರಾಣಿಗಳಿಂದಲೂ ವರ್ತಕರ ಸಕಲ ಸುಗಂಧ ದ್ರವ್ಯಗಳಿಂದಲೂ ಧೂಮ ಸ್ತಂಭ ಗಳ ಹಾಗೆಯೂ ಅಡವಿಯಿಂದ ಬರುವ ಇವಳಾರು?
ಪರಮ ಗೀತ 3 : 7 (KNV)
ಸೊಲೊಮೋನನ ಹಾಸಿಗೆಯನ್ನು ನೋಡು; ಇಸ್ರಾ ಯೇಲಿನ ಪರಾಕ್ರಮಶಾಲಿಗಳಲ್ಲಿ ಅರವತ್ತು ಮಂದಿ ಪರಾಕ್ರಮಶಾಲಿಗಳು ಅದನ್ನು ಸುತ್ತಿಕೊಂಡಿದ್ದಾರೆ.
ಪರಮ ಗೀತ 3 : 8 (KNV)
ಅವರೆಲ್ಲರು ಕತ್ತಿಹಿಡಿದವರು, ಯುದ್ಧನಿಪುಣರು.
ಪರಮ ಗೀತ 3 : 9 (KNV)
ರಾತ್ರಿಯ ಭಯದ ನಿಮಿತ್ತ ಪ್ರತಿ ಮನುಷ್ಯನು ತನ್ನ ಕತ್ತಿಯನ್ನು ಸೊಂಟಕ್ಕೆ ಕಟ್ಟಿಕೊಂಡಿದ್ದಾನೆ. ಅರಸನಾದ ಸೊಲೊಮೋನನು ಲೆಬನೋನಿನ ಮರದಿಂದ ಒಂದು ರಥವನ್ನು ತನಗೆ ಮಾಡಿಸಿಕೊಂಡನು.
ಪರಮ ಗೀತ 3 : 10 (KNV)
ಅವನು ಅದರ ಸ್ತಂಭಗಳನ್ನು ಬೆಳ್ಳಿಯಿಂದಲೂ ಕೆಳಗಿನ ಭಾಗವನ್ನು ಬಂಗಾರದಿಂದಲೂ ಹೊದಿಕೆ ಯನ್ನು ಧೂಮ್ರ ವರ್ಣದ ವಸ್ತ್ರದಿಂದಲೂ ಮಾಡಿ ಸಿದನು. ಯೆರೂಸಲೇಮಿನ ಕುಮಾರ್ತೆಯರ ನಿಮಿತ್ತ ಅದರ ಮಧ್ಯದಲ್ಲಿದ್ದದ್ದು ಪ್ರೀತಿಯಿಂದ ಹಾಸಲ್ಪಟ್ಟಿತು.
ಪರಮ ಗೀತ 3 : 11 (KNV)
ಚೀಯೋನಿನ ಕುಮಾರ್ತೆಯರೇ, ನೀವು ಹೊರಟು ಹೋಗಿ ಅವನ ಮದುವೆಯ ದಿವಸದಲ್ಲಿಯೂ ಹೃದ ಯದ ಸಂತೋಷದ ದಿವಸದಲ್ಲಿಯೂ ತನ್ನ ತಾಯಿ ತನಗೆ ಧರಿಸಿದ ಕಿರೀಟ ಇರುವ ಅರಸನಾದ ಸೊಲೊ ಮೋನನನ್ನು ನೋಡಿರಿ.
❮
❯