ರೂತಳು 3 : 1 (KNV)
ಅವಳ ಅತ್ತೆಯಾದ ನೊವೊಮಿಯು ಅವಳಿಗೆ ನನ್ನ ಮಗಳೇ, ನಿನಗೆ ಒಳ್ಳೇದಾಗುವದಕ್ಕೋಸ್ಕರ ನಾನು ನಿನಗೆ ವಿಶ್ರಾಂತಿ ಯನ್ನು ಹುಡುಕಬೇಕಲ್ಲವೋ?
ರೂತಳು 3 : 2 (KNV)
ಈಗ ನೀನು ಯಾರ ದಾಸಿಗಳ ಸಂಗಡ ಇದ್ದಿಯೋ ಆ ಬೋವಜನು ನಮ್ಮ ಸಂಬಂಧಿಕನಾಗಿದ್ದಾನಲ್ಲಾ? ಇಗೋ, ಅವನು ರಾತ್ರಿ ಯಲ್ಲಿ ಕಣದೊಳಗೆ ಜವೆಗೋಧಿಯನ್ನು ತೂರುವನು.
ರೂತಳು 3 : 3 (KNV)
ನೀನು ಸ್ನಾನಮಾಡಿ ಎಣ್ಣೆ ಹಚ್ಚಿಕೊಂಡು ನಿನ್ನ ವಸ್ತ್ರಗಳನ್ನು ಧರಿಸಿಕೊಂಡು ಆ ಕಣಕ್ಕೆ ಹೋಗು. ಆದರೆ ಆ ಮನುಷ್ಯನು ಅನ್ನಪಾನಗಳನ್ನು ತೆಗೆದು ಕೊಳ್ಳುವ ವರೆಗೂ ಅವನಿಗೆ ನೀನು ತಿಳಿಯದಂತೆ ಮರೆಯಾಗಿರು.
ರೂತಳು 3 : 4 (KNV)
ಅವನು ಮಲಗಿಕೊಂಡಾಗ ಅವನು ಮಲಗಿರುವ ಸ್ಥಳವನ್ನು ನೀನು ತಿಳುಕೊಂಡಿದ್ದು ಹೋಗಿ ಅವನ ಕಾಲುಗಳ ಮೇಲೆ ಹೊದ್ದಿದ್ದನ್ನು ತೆಗೆದು ಮಲಗಿಕೋ. ಆಗ ನೀನು ಮಾಡಬೇಕಾದದ್ದೇನೆಂದು ಅವನು ನಿನಗೆ ತಿಳಿಸುವನು ಅಂದಳು.
ರೂತಳು 3 : 5 (KNV)
ಅದಕ್ಕೆ ಇವಳು ನೀನು ನನಗೆ ಹೇಳಿದ್ದೆಲ್ಲಾ ಮಾಡುವೆನು ಅಂದಳು.
ರೂತಳು 3 : 6 (KNV)
ಅವಳು ಆ ಕಣಕ್ಕೆ ಹೋಗಿ ತನ್ನ ಅತ್ತೆ ತನಗೆ ಆಜ್ಞಾಪಿಸಿದ ಪ್ರಕಾರವೆಲ್ಲಾ ಮಾಡಿದಳು.
ರೂತಳು 3 : 7 (KNV)
ಏನಂದರೆ, ಬೋವಜನು ತಿಂದು ಕುಡಿದು ಹೃದಯ ಸಂತೋಷ ವಾಗಿದ್ದು ಕಾಳಿನ ರಾಶಿಯ ಕೊನೆಯಲ್ಲಿ ಬಂದು ಮಲಗಿದನು. ಆಗ ಅವಳು ಮೆಲ್ಲಗೆ ಬಂದು ಅವನ ಕಾಲುಗಳ ಮೇಲೆ ಹೊದ್ದಿದ್ದನ್ನು ತೆಗೆದು ಮಲಗಿದಳು.
ರೂತಳು 3 : 8 (KNV)
ಆದರೆ ಅರ್ಧ ರಾತ್ರಿಯಲ್ಲಿ ಆ ಮನುಷ್ಯನು ಹೆದರಿ ತಿರುಗಿಕೊಂಡಾಗ ಇಗೋ, ಒಬ್ಬ ಸ್ತ್ರೀ ತನ್ನ ಕಾಲುಗಳ ಬಳಿಯಲ್ಲಿ ಮಲಗಿದ್ದಳು.
ರೂತಳು 3 : 9 (KNV)
ಆಗ ಅವನು ನೀನು ಯಾರು ಅಂದನು. ಅದಕ್ಕವಳು ನಾನು ನಿನ್ನ ದಾಸಿಯಾದ ರೂತಳು; ನೀನು ನಿನ್ನ ದಾಸಿಯ ಮೇಲೆ ನಿನ್ನ ಅಂಚನ್ನು ಹರಡು; ಯಾಕಂದರೆ ನೀನು ಹತ್ತಿರ ಸಂಬಂಧಿಕನು ಅಂದಳು.
ರೂತಳು 3 : 10 (KNV)
ಅದಕ್ಕೆ ಅವನು ಹೇಳಿದ್ದೇನಂದರೆ ನನ್ನ ಮಗಳೇ, ಕರ್ತನಿಂದ ನಿನಗೆ ಆಶೀರ್ವಾದವಾಗಲಿ; ಬಡವರೂ ಐಶ್ವರ್ಯವಂತರೂ ಆದ ಯೌವನಸ್ಥರ ಹಿಂದೆ ನೀನು ಹೋಗದೆ ಇದ್ದದರಿಂದ ಮೊದಲು ತೋರಿಸಿದ್ದಕ್ಕಿಂತ ಕಡೆಯಲ್ಲಿ ನೀನು ತೋರಿಸಿದದಯೆಯು ಹೆಚ್ಚಾಗಿದೆ.
ರೂತಳು 3 : 11 (KNV)
ಈಗ ನನ್ನ ಮಗಳೇ, ನೀನು ಭಯಪಡಬೇಡ; ನಿನಗೆ ಬೇಕಾಗಿರುವದನ್ನು ನಿನಗೆ ಮಾಡುವೆನು; ಯಾಕಂದರೆ ನೀನು ಗುಣವತಿ ಯಾದ ಸ್ತ್ರೀ ಎಂದು ಪಟ್ಟಣದಲ್ಲಿರುವ ನನ್ನ ಜನರೆಲ್ಲರು ಬಲ್ಲರು.
ರೂತಳು 3 : 12 (KNV)
ಈಗ ನಾನು ನಿನ್ನ ಸವಿಾಪ ಬಂಧು ವಾಗಿದ್ದೇನೆ ಎಂಬದು ನಿಜವೇ; ಆದರೆ ನನಗಿಂತಲೂ ಸವಿಾಪಸ್ಥನಾದ ಬಂಧುವು ಒಬ್ಬನಿದ್ದಾನೆ.
ರೂತಳು 3 : 13 (KNV)
ಈ ರಾತ್ರಿಯಲ್ಲಿ ಇಲ್ಲಿರು; ನಾಳೆ ಬೆಳಿಗ್ಗೆ ಅವನು ನಿನಗೆ ಸಂಬಂಧಿಕನ ಕಾರ್ಯ ಮಾಡಿದರೆ ಒಳ್ಳೇದಾಯಿತು; ಅವನು ನಿನಗೆ ಸಂಬಂಧಿಕನ ಕಾರ್ಯಮಾಡಲು ಮನಸ್ಸಿಲ್ಲದೆ ಇದ್ದರೆ ಕರ್ತನ ಜೀವದಾಣೆ--ನಾನೇ ನಿನಗೆ ಸಂಬಂಧಿಕನ ಕಾರ್ಯ ಮಾಡುತ್ತೇನೆ. ಉದಯ ಕಾಲದ ವರೆಗೂ ಮಲಗಿರು ಅಂದನು.
ರೂತಳು 3 : 14 (KNV)
ಅವಳು ಹಾಗೆಯೇ ಉದಯ ಕಾಲದ ವರೆಗೂ ಅವನ ಪಾದ ಗಳ ಬಳಿಯಲ್ಲಿ ಮಲಗಿದ್ದು ಒಬ್ಬನಿಗೂ ಗೊತ್ತಾಗ ಬಾರದೆಂದು ಇನ್ನೂ ಕತ್ತಲಿರುವಾಗಲೇ ಎದ್ದಳು. ಅವನು ಒಬ್ಬ ಹೆಂಗಸು ಕಣದಲ್ಲಿ ಬಂದಳೆಂದು ಯಾರಿಗೂ ತಿಳಿಯಲ್ಪಡದಿರಲಿ ಅಂದನು.
ರೂತಳು 3 : 15 (KNV)
ಇದಲ್ಲದೆ ಅವನು ನೀನು ಹೊದ್ದುಕೊಂಡಿರುವ ವಸ್ತ್ರವನ್ನು ತಂದು ಹಿಡಿ ಅಂದನು. ಅವಳು ಅದನ್ನು ಹಿಡಿದಾಗ ಅವನು ಅದ ರಲ್ಲಿ ಆರು ಸೊಲಿಗೆ ಜವೆಗೋಧಿಯನ್ನು ಅಳೆದು ಹಾಕಿ ಆಕೆಯ ಮೇಲೆ ಹೊರಿಸಿದನು. ಆಗ ಅವಳು ಪಟ್ಟಣಕ್ಕೆ ಬಂದಳು.
ರೂತಳು 3 : 16 (KNV)
ಅವಳು ತನ್ನ ಅತ್ತೆಯ ಬಳಿಗೆ ಬಂದಾಗ ಅವಳ ಅತ್ತೆಯು ನನ್ನ ಮಗಳೇ, ನಿನ್ನ ಕಾರ್ಯ ಏನಾಯಿತು? ಅಂದಳು. ಆಗ ಅವಳು ಆ ಮನುಷ್ಯನು ತನಗೆ ಮಾಡಿದ್ದನ್ನೆಲ್ಲಾ ಅವಳಿಗೆ ತಿಳಿಸಿದಳು;
ರೂತಳು 3 : 17 (KNV)
ನೀನು ನಿನ್ನ ಅತ್ತೆಯ ಬಳಿಗೆ ಬರಿ ಕೈಯಾಗಿ ಹೋಗಬಾರದೆಂದು ಅವನು ಈ ಆರು ಸೊಲಿಗೆ ಜವೆಗೋಧಿಯನ್ನು ನನಗೆ ಕೊಟ್ಟನು ಅಂದಳು.
ರೂತಳು 3 : 18 (KNV)
ಅದಕ್ಕೆ ಅವಳು ನನ್ನ ಮಗಳೇ, ಈ ಕಾರ್ಯ ಏನಾಗುವದೋ ಎಂದು ನೀನು ತಿಳಿಯುವ ವರೆಗೂ ಸುಮ್ಮನೆ ಇರು; ಯಾಕಂದರೆ ಆ ಮನುಷ್ಯನು ಈ ಹೊತ್ತು ಈ ಕಾರ್ಯವನ್ನು ತೀರಿಸುವ ವರೆಗೂ ವಿಶ್ರಾಂತಿಯಲ್ಲಿ ಇರನು ಅಂದಳು.

1 2 3 4 5 6 7 8 9 10 11 12 13 14 15 16 17 18

BG:

Opacity:

Color:


Size:


Font: