ಪ್ರಕಟನೆ 9 : 1 (KNV)
ಐದನೆಯ ದೂತನು ಊದಿದಾಗ ಆಕಾಶದಿಂದ ಭೂಮಿಗೆ ಬಿದ್ದ ಒಂದು ನಕ್ಷತ್ರವನ್ನು ಕಂಡೆನು. ಅವನಿಗೆ ತಳವಿಲ್ಲದ ತಗ್ಗಿನ ಬೀಗದ ಕೈ ಕೊಡಲ್ಪಟ್ಟಿತು.
ಪ್ರಕಟನೆ 9 : 2 (KNV)
ಅವನು ಆ ತಳವಿಲ್ಲದ ತಗ್ಗನ್ನು ತೆರೆದಾಗ ಅಲ್ಲಿಂದ ದೊಡ್ಡ ಕುಲುಮೆಯ ಹೊಗೆಯಂತೆ ಆ ತಗ್ಗಿನೊಳಗಿಂದ ಹೊಗೆಯು ಏರಿತು; ಆ ತಗ್ಗಿನ ಹೊಗೆಯ ದೆಸೆಯಿಂದ ಸೂರ್ಯನು ವಾಯು ಮಂಡಲವು ಕತ್ತಲಾದವು.
ಪ್ರಕಟನೆ 9 : 3 (KNV)
ಹೊಗೆಯೊಳಗಿಂದ ಮಿಡಿತೆಗಳು ಭೂಮಿಯ ಮೇಲೆ ಹೊರಟು ಬಂದವು. ಭೂಮಿಯಲ್ಲಿರುವ ಚೇಳುಗಳಿಗೆ ಬಲವಿರುವ ಪ್ರಕಾರ ಅವುಗಳಿಗೆ ಬಲವು ಕೊಡಲ್ಪಟ್ಟಿತು.
ಪ್ರಕಟನೆ 9 : 4 (KNV)
ಭೂಮಿಯ ಮೇಲಿರುವ ಹುಲ್ಲನ್ನಾಗಲೀ ಯಾವ ಹಸುರಾದ ದ್ದನ್ನಾಗಲೀ ಯಾವ ಮರವನ್ನಾಗಲೀ ಕೆಡಿಸದೆ ಹಣೆಯಮೇಲೆ ದೇವರ ಮುದ್ರೆಯಿಲ್ಲದ ಮನುಷ್ಯರನ್ನು ಮಾತ್ರ ಬಾಧಿಸಬೇಕೆಂದು ಅವುಗಳಿಗೆ ಅಪ್ಪಣೆಯಾಯಿತು.
ಪ್ರಕಟನೆ 9 : 5 (KNV)
ಅವರನ್ನು (ಮುದ್ರೆಯಿಲ್ಲದವರನ್ನು) ಕೊಲ್ಲದೆ ಐದು ತಿಂಗಳುಗಳವರೆಗೂ ಯಾತನೆಪಡಿಸಬೇಕೆಂದಾ ಯಿತು. ಅವರಿಗುಂಟಾದ ಯಾತನೆಯು ಮನುಷ್ಯನನ್ನು ಹೊಡೆಯುವ ಚೇಳಿನ ಯಾತನೆಯ ಹಾಗೆ ಇತ್ತು.
ಪ್ರಕಟನೆ 9 : 6 (KNV)
ಆ ದಿನಗಳಲ್ಲಿ ಮನುಷ್ಯರು ಮರಣವನ್ನು ಹುಡುಕಿ ಅದನ್ನು ಕಾಣದೆ ಇರುವರು; ಸಾಯಬೇಕೆಂದು ಕೋರು ವರು, ಆದರೆ ಮೃತ್ಯುವು ಅವರ ಬಳಿಯಿಂದ ಓಡಿ ಹೋಗುವದು
ಪ್ರಕಟನೆ 9 : 7 (KNV)
ಆ ಮಿಡಿತೆಗಳ ಆಕಾರಗಳು ಯುದ್ಧಕ್ಕೆ ಸನ್ನದ್ಧವಾಗಿರುವ ಕುದುರೆಗಳ ಆಕಾರದಂತೆ ಇದ್ದವು ಅವುಗಳ ತಲೆಯ ಮೇಲೆ ಚಿನ್ನದ ಕಿರೀಟಗಳೋ ಎಂಬಂತೆ ಇದ್ದವು; ಅವುಗಳ ಮುಖಗಳು ಮನುಷ್ಯರ ಮುಖಗಳ ಹಾಗೆ ಇದ್ದವು.
ಪ್ರಕಟನೆ 9 : 8 (KNV)
ಸ್ತ್ರೀಯರ ಕೂದಲಿ ನಂತಿರುವ ಕೂದಲು ಅವುಗಳಿಗೆ ಇತ್ತು; ಅವುಗಳ ಹಲ್ಲುಗಳು ಸಿಂಹದ ಹಲ್ಲುಗಳ ಹಾಗಿದ್ದವು.
ಪ್ರಕಟನೆ 9 : 9 (KNV)
ಅವುಗಳಿಗೆ ಕಬ್ಬಿಣದ ಕವಚಗಳಂತಿದ್ದ ಕವಚಗಳು ಇದ್ದವು; ಅವುಗಳ ರೆಕ್ಕೆಗಳ ಶಬ್ದವು ಯುದ್ಧಕ್ಕೆ ಓಡುವ ಅನೇಕ ರಥಾಶ್ವಗಳ ಶಬ್ದದ ಹಾಗೆ ಇತ್ತು.
ಪ್ರಕಟನೆ 9 : 10 (KNV)
ಚೇಳಿಗಿರುವಂತೆ ಅವುಗಳಿಗೆ ಬಾಲಗಳೂ ಆ ಬಾಲಗಳಲ್ಲಿ ಕೊಂಡಿಗಳೂ ಇದ್ದವು; ಮನುಷ್ಯರನ್ನು ಐದು ತಿಂಗಳುಗಳ ವರೆಗೂ ಬಾಧಿಸುವ ಬಲವು ಅವುಗಳಿಗೆ ಇತ್ತು.
ಪ್ರಕಟನೆ 9 : 11 (KNV)
ತಳವಿಲ್ಲದ ತಗ್ಗಿನ ದೂತನು ಅವುಗಳನ್ನಾಳುವ ಅರಸನು; ಅವನಿಗೆ ಇಬ್ರಿಯ ಭಾಷೆಯಲ್ಲಿ ಅಬದ್ದೋನನೆಂತಲೂ ಗ್ರೀಕ್ ಭಾಷೆಯಲ್ಲಿ ಅಪೊಲ್ಲುವೋನನೆಂತಲೂ ಹೆಸರು.
ಪ್ರಕಟನೆ 9 : 12 (KNV)
ಒಂದು ಆಪತ್ತು ಕಳೆದುಹೋಯಿತು; ಇದಾದ ಮೇಲೆ ಇಗೋ, ಇನ್ನೂ ಎರಡು ಆಪತ್ತುಗಳು ಬರುವದಕ್ಕಿವೆ.
ಪ್ರಕಟನೆ 9 : 13 (KNV)
ಆರನೆಯ ದೂತನು ಊದಿದಾಗ ದೇವರ ಸಮ್ಮುಖದಲ್ಲಿರುವ ಚಿನ್ನದ ವೇದಿಗಿದ್ದ ನಾಲ್ಕು ಕೊಂಬು ಗಳಿಂದ ಬಂದ ಧ್ವನಿಯನ್ನು ನಾನು ಕೇಳಿದೆನು.
ಪ್ರಕಟನೆ 9 : 14 (KNV)
ಅದು ತುತೂರಿಯನ್ನು ಹಿಡಿದಿದ್ದ ಆರನೆಯ ದೂತನಿಗೆ--ಯೂಫ್ರೇಟೀಸ್ ಮಹಾ ನದಿಯಲ್ಲಿ ಬಂಧಿಸಲ್ಪಟ್ಟಿರುವ ನಾಲ್ಕು ಮಂದಿ ದೂತರನ್ನು ಬಿಚ್ಚಿಬಿಡು ಎಂದು ಹೇಳಿತು.
ಪ್ರಕಟನೆ 9 : 15 (KNV)
ಆಗ ಮೂರರಲ್ಲಿ ಒಂದು ಭಾಗದ ಜನರನ್ನು ಸಂಹಾರ ಮಾಡುವ ತಾಸು, ದಿನ, ತಿಂಗಳು ಮತ್ತು ವರುಷಕ್ಕೆ ಸಿದ್ಧವಾಗಿದ್ದ ಆ ನಾಲ್ಕು ದೂತರನ್ನು ಬಿಚ್ಚಿದನು.
ಪ್ರಕಟನೆ 9 : 16 (KNV)
ಕುದುರೇ ದಂಡಿನವರ ಸಂಖ್ಯೆಯು ಇಪ್ಪತ್ತು ಕೋಟಿ ಎಂದು ನಾನು ಕೇಳಿದೆನು.
ಪ್ರಕಟನೆ 9 : 17 (KNV)
ನಾನು ದರ್ಶನದಲ್ಲಿ ಕುದುರೆಗಳನ್ನು ಕಂಡೆನು, ಅವುಗಳ ಮೇಲೆ ಕೂತಿದ್ದವರು ಬೆಂಕಿಯ ನೀಲಿಯ ಮತ್ತು ಗಂಧಕದ ಕವಚಗಳನ್ನು ಧರಿಸಿದ್ದರು; ಆ ಕುದುರೆಗಳ ತಲೆಗಳು ಸಿಂಹಗಳ ತಲೆಗಳಂತಿದ್ದವು; ಅವುಗಳ ಬಾಯೊಳಗಿಂದ ಬೆಂಕಿ ಹೊಗೆ ಗಂಧಕ ಇವುಗಳು ಹೊರಡುತ್ತಿದ್ದವು.
ಪ್ರಕಟನೆ 9 : 18 (KNV)
ಅವುಗಳ ಬಾಯಿಂದ ಹೊರಟ ಆ ಬೆಂಕಿ ಹೊಗೆ ಗಂಧಕ ಈ ಮೂರರಿಂದ ಮನುಷ್ಯರಲ್ಲಿ ಮೂರನೇ ಭಾಗವು ಹತವಾಯಿತು.
ಪ್ರಕಟನೆ 9 : 19 (KNV)
ಅವುಗಳ ಬಲವು ಅವುಗಳ ಬಾಯಲ್ಲಿಯೂ ಬಾಲಗಳಲ್ಲಿಯೂ ಇರುತ್ತದೆ. ಅವುಗಳ ಬಾಲಗಳು ತಲೆಗಳುಳ್ಳವುಗಳಾಗಿ ಸರ್ಪಗಳ ಹಾಗೆ ಇದ್ದವು. ಅವುಗಳಿಂದ ಅವು ಕೇಡನ್ನುಂಟುಮಾಡು ತ್ತವೆ.
ಪ್ರಕಟನೆ 9 : 20 (KNV)
ಈ ಉಪದ್ರವಗಳಿಂದ ಕೊಲ್ಲಲ್ಪಡದೆ ಉಳಿದ ಮನುಷ್ಯರು ದೆವ್ವಗಳನ್ನೂ ಬಂಗಾರದ ವಿಗ್ರಹಗಳನ್ನೂ ಬೆಳ್ಳಿಯ, ಹಿತ್ತಾಳೆಯ, ಕಲ್ಲಿನ ಮತ್ತು ಮರದ ವಿಗ್ರಹ ಗಳನ್ನೂ ಅಂದರೆ ನೋಡಲಾರದ ಕೇಳಲಾರದ ಇಲ್ಲವೆ ನಡೆಯಲಾರದವುಗಳನ್ನು ಆರಾಧಿಸದಂತೆ ಮಾನ ಸಾಂತರಪಡದೆ ಹೋದರು.
ಪ್ರಕಟನೆ 9 : 21 (KNV)
ಇದಲ್ಲದೆ ತಾವು ಮಾಡುತ್ತಿದ್ದ ಕೊಲೆ ಮಾಟ ಜಾರತ್ವ ಕಳ್ಳತನ ಇವುಗಳಿ ಗಾಗಿಯೂ ಮಾನಸಾಂತರಪಡಲಿಲ್ಲ.

1 2 3 4 5 6 7 8 9 10 11 12 13 14 15 16 17 18 19 20 21

BG:

Opacity:

Color:


Size:


Font: