ಪ್ರಕಟನೆ 7 : 1 (KNV)
ಇವುಗಳಾದ ಮೇಲೆ ನಾಲ್ಕು ಮಂದಿ ದೂತರು ಭೂಮಿಯ ನಾಲ್ಕು ಮೂಲೆ ಗಳಲ್ಲಿ ನಿಂತುಕೊಂಡು ಭೂಮಿಯ ಮೇಲಾಗಲಿ ಸಮುದ್ರದ ಮೇಲಾಗಲಿ ಯಾವ ಮರದ ಮೇಲಾಗಲಿ ಗಾಳಿ ಬೀಸದಂತೆ ಭೂಮಿಯ ನಾಲ್ಕು ದಿಕ್ಕಿನ ಗಾಳಿ ಗಳನ್ನು ಹಿಡಿದಿರುವದನ್ನು ನಾನು ಕಂಡೆನು.
ಪ್ರಕಟನೆ 7 : 2 (KNV)
ಇದಲ್ಲದೆ ಮತ್ತೊಬ್ಬ ದೂತನು ಜೀವವುಳ್ಳ ದೇವರ ಮುದ್ರೆಯನ್ನು ಹಿಡಿದುಕೊಂಡು ಮೂಡಲದಿಂದ ಏರಿ ಬರುವದನ್ನು ಕಂಡೆನು. ಅವನು ಭೂಮಿಯನ್ನೂ ಸಮುದ್ರವನ್ನೂ ಕೆಡಿಸುವ ಅಧಿಕಾರ ಹೊಂದಿದ ಆ ನಾಲ್ಕು ಮಂದಿ ದೂತರಿಗೆ--
ಪ್ರಕಟನೆ 7 : 3 (KNV)
ನಾವು ನಮ್ಮ ದೇವರ ಸೇವಕರ ಹಣೆಗಳಲ್ಲಿ ಮುದ್ರಿಸುವ ತನಕ ಭೂಮಿಯನ್ನಾಗಲಿ ಸಮುದ್ರವನ್ನಾಗಲಿ ಮರಗಳನ್ನಾಗಲಿ ಕೆಡಿಸಬೇಡಿರಿ ಎಂದು ಮಹಾಶಬ್ದದಿಂದ ಕೂಗುತ್ತಾ ಹೇಳಿದನು.
ಪ್ರಕಟನೆ 7 : 4 (KNV)
ಮುದ್ರೆ ಹೊಂದಿದವರ ಸಂಖ್ಯೆಯನ್ನು ನಾನು ಕೇಳಿದೆನು; ಇಸ್ರಾಯೇಲ್ಯನ ಮಕ್ಕಳ ಗೋತ್ರದವರಲ್ಲಿ ಮುದ್ರೆಯನ್ನು ಹೊಂದಿದವರು ಒಂದು ಲಕ್ಷ ನಾಲ್ವತ್ತು ನಾಲ್ಕು ಸಾವಿರ.
ಪ್ರಕಟನೆ 7 : 5 (KNV)
ಯೂದನ ಗೋತ್ರದವರಲ್ಲಿ ಮುದ್ರಿಸಲ್ಪಟ್ಟವರು ಹನ್ನೆರಡು ಸಾವಿರ, ರೂಬೇನನ ಗೋತ್ರದವರಲ್ಲಿ ಮುದ್ರಿಸಲ್ಪಟ್ಟವರು ಹನ್ನೆರಡು ಸಾವಿರ, ಗಾದನ ಗೋತ್ರ ದವರಲ್ಲಿ ಮುದ್ರಿಸಲ್ಪಟ್ಟವರು ಹನ್ನೆರಡು ಸಾವಿರ.
ಪ್ರಕಟನೆ 7 : 6 (KNV)
ಅಷೇರನ ಗೋತ್ರದವರಲ್ಲಿ ಮುದ್ರಿಸಲ್ಪಟ್ಟವರು ಹನ್ನೆ ರಡು ಸಾವಿರ, ನೆಫ್ತಲೀಮನ ಗೋತ್ರದವರಲ್ಲಿ ಮುದ್ರಿಸ ಲ್ಪಟ್ಟವರು ಹನ್ನೆರಡು ಸಾವಿರ, ಮನಸ್ಸೆಯ ಗೋತ್ರದವ ರಲ್ಲಿ ಮುದ್ರಿಸಲ್ಪಟ್ಟವರು ಹನ್ನೆರಡು ಸಾವಿರ.
ಪ್ರಕಟನೆ 7 : 7 (KNV)
ಸಿಮೆ ಯೋನನ ಗೋತ್ರದವರಲ್ಲಿ ಮುದ್ರಿಸಲ್ಪಟ್ಟವರು ಹನ್ನೆ ರಡು ಸಾವಿರ, ಲೇವಿಯ ಗೋತ್ರದವರಲ್ಲಿ ಮುದ್ರಿಸ ಲ್ಪಟ್ಟವರು ಹನ್ನೆರಡು ಸಾವಿರ, ಇಸ್ಸಾಕಾರನ ಗೋತ್ರ ದವರಲ್ಲಿ ಮುದ್ರಿಸಲ್ಪಟ್ಟವರು ಹನ್ನೆರಡು ಸಾವಿರ.
ಪ್ರಕಟನೆ 7 : 8 (KNV)
ಜೆಬುಲೂನನ ಗೋತ್ರದವರಲ್ಲಿ ಮುದ್ರಿಸಲ್ಪಟ್ಟವರು ಹನ್ನೆರಡು ಸಾವಿರ, ಯೋಸೇಫನ ಗೋತ್ರದವರಲ್ಲಿ ಮುದ್ರಿಸಲ್ಪಟ್ಟವರು ಹನ್ನೆರಡು ಸಾವಿರ, ಬೆನ್ಯಾವಿಾನನ ಗೋತ್ರದವರಲ್ಲಿ ಮುದ್ರಿಸಲ್ಪಟ್ಟವರು ಹನ್ನೆರಡುಸಾವಿರ.
ಪ್ರಕಟನೆ 7 : 9 (KNV)
ಇದಾದ ಮೇಲೆ ಇಗೋ, ನಾನು ನೋಡಲಾಗಿ ಸಮಸ್ತ ಜನಾಂಗ ಕುಲ ಪ್ರಜೆ ಭಾಷೆಗಳೊಳಗಿಂದ ಯಾರೂ ಎಣಿಸಲಾಗದಂತ ಮಹಾ ಸಮೂಹವು ಬಿಳೀ ನಿಲುವಂಗಿಗಳನ್ನು ತೊಟ್ಟುಕೊಂಡವರಾಗಿ ತಮ್ಮ ಕೈಗಳಲ್ಲಿ ಖರ್ಜೂರದ ಗರಿಗಳನ್ನು ಹಿಡಿದುಕೊಂಡು ಸಿಂಹಾಸನದ ಮುಂದೆಯೂ ಕುರಿಮರಿಯಾದಾತನ ಮುಂದೆಯೂ
ಪ್ರಕಟನೆ 7 : 10 (KNV)
ಅವರು--ರಕ್ಷಣೆಯು ಸಿಂಹಾಸನದ ಮೇಲೆ ಕೂತಿರುವ ನಮ್ಮ ದೇವರಿಗೂ ಕುರಿಮರಿಯಾದಾತನಿಗೂ ಸೇರಿದ್ದು ಎಂದು ಮಹಾ ಶಬ್ದದಿಂದ ಕೂಗಿದರು.
ಪ್ರಕಟನೆ 7 : 11 (KNV)
ಸಿಂಹಾಸನದ, ಹಿರಿಯರ ಮತ್ತು ನಾಲ್ಕು ಜೀವಿಗಳ ಸುತ್ತಲೂ ನಿಂತುಕೊಂಡಿದ್ದ ದೂತರೆಲ್ಲರೂ ಸಿಂಹಾಸನದ ಮುಂದೆ ಬೋರಲ ಬಿದ್ದು ದೇವರನ್ನು ಆರಾಧಿಸುತ್ತಾ.--
ಪ್ರಕಟನೆ 7 : 12 (KNV)
ಆಮೆನ್. ನಮ್ಮ ದೇವರಿಗೆ ಸ್ತೋತ್ರವೂ ಪ್ರಭಾವವೂ ಜ್ಞಾನವೂ ಕೃತಜ್ಞತಾಸ್ತುತಿಯೂ ಮಾನವೂ ಬಲವೂ ಸಾಮ ರ್ಥ್ಯವೂ ಯುಗಯುಗಾಂತರಗಳಲ್ಲಿ ಇರಲಿ ಎಂದು ಹೇಳಿದರು. ಆಮೆನ್.
ಪ್ರಕಟನೆ 7 : 13 (KNV)
ಆಗ ಹಿರಿಯರಲ್ಲಿ ಒಬ್ಬನು ಬಿಳೀ ನಿಲುವಂಗಿಗಳನ್ನು ತೊಟ್ಟುಕೊಂಡಿರುವವರಾದ ಇವರು ಯಾರು? ಇವರು ಎಲ್ಲಿಂದ ಬಂದವರು ಎಂದು ನನ್ನನ್ನು ಕೇಳಿದನು.
ಪ್ರಕಟನೆ 7 : 14 (KNV)
ಅದಕ್ಕೆ ನಾನು ಅಯ್ಯಾ, ನೀನೇ ಬಲ್ಲೆ ಅಂದೆನು. ಅವನು ನನಗೆ--ಇವರು ಮಹಾಸಂಕಟದೊಳಗಿಂದ ಬಂದವರು; ಕುರಿಮರಿಯಾ ದಾತನ ರಕ್ತದಲ್ಲಿ ತಮ್ಮ ನಿಲುವಂಗಿಗಳನ್ನು ತೊಳೆದು ಬೆಳ್ಳಗೆ ಮಾಡಿದ್ದಾರೆ.
ಪ್ರಕಟನೆ 7 : 15 (KNV)
ಈ ಕಾರಣದಿಂದ ಇವರು ದೇವರ ಸಿಂಹಾಸನದ ಮುಂದೆ ಇದ್ದುಕೊಂಡು ಆತನ ಆಲಯದಲ್ಲಿ ಹಗಲಿರುಳು ಆತನ ಸೇವೆ ಮಾಡುವವರಾ ಗಿದ್ದಾರೆ; ಸಿಂಹಾಸನದ ಮೇಲೆ ಕೂತಿರುವಾತನು ಅವರ ಮಧ್ಯದಲ್ಲಿ ವಾಸಿಸುವನು.
ಪ್ರಕಟನೆ 7 : 16 (KNV)
ಇನ್ನು ಮೇಲೆ ಅವರಿಗೆ ಹಸಿವೆಯಾಗಲಿ ಬಾಯಾರಿಕೆಯಾಗಲಿ ಆಗುವದೇ ಇಲ್ಲ; ಇದಲ್ಲದೆ ಅವರಿಗೆ ಬಿಸಿಲಾದರೂ ಯಾವ ಝಳವಾದರೂ ಬಡಿಯುವದಿಲ್ಲ.
ಪ್ರಕಟನೆ 7 : 17 (KNV)
ಸಿಂಹಾಸನದ ಮಧ್ಯದಲ್ಲಿರುವ ಕುರಿಮರಿಯಾದಾತನು ಅವರನ್ನು ಮೇಯಿಸಿ ಜೀವ ಜಲದ ಒರತೆಗಳ ಬಳಿಗೆ ನಡಿಸುತ್ತಾನೆ; ಮತ್ತು ದೇವರು ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು ಎಂದು ಹೇಳಿದನು.

1 2 3 4 5 6 7 8 9 10 11 12 13 14 15 16 17