ಪ್ರಕಟನೆ 6 : 1 (KNV)
ುರಿಮರಿಯಾದಾತನು ಆ ಮುದ್ರೆಗಳಲ್ಲಿ ಒಂದನ್ನು ತೆರೆದದ್ದನ್ನು ನಾನು ನೋಡಿ ದಾಗ ಆ ನಾಲ್ಕು ಜೀವಿಗಳಲ್ಲಿ ಒಂದು--ಬಂದು ನೋಡು ಎಂದು ಗುಡುಗಿನಂತಿದ್ದ ಒಂದು ಶಬ್ದವನ್ನು ಕೇಳಿದೆನು.
ಪ್ರಕಟನೆ 6 : 2 (KNV)
ಆಗ ಇಗೋ, ಒಂದು ಬಿಳೀ ಕುದುರೆ ಯನ್ನು ನಾನು ನೋಡಿದೆನು; ಅದರ ಮೇಲೆ ಕೂತಿದ್ದವನ ಕೈಯಲ್ಲಿ ಒಂದು ಬಿಲ್ಲು ಇತ್ತು; ಅವನಿಗೆ ಕಿರೀಟ ಕೊಡಲ್ಪಟ್ಟಿತ್ತು; ಅವನು ಜಯಿಸುತ್ತಿರುವವನಾಗಿ ಜಯಿಸುವದಕ್ಕೋಸ್ಕರ ಹೊರಟನು.
ಪ್ರಕಟನೆ 6 : 3 (KNV)
ಆತನು ಎರಡನೆಯ ಮುದ್ರೆಯನ್ನು ತೆರೆದಾಗ ಎರಡನೆಯ ಜೀವಿಯು--ಬಂದು ನೋಡು ಅನ್ನುವ ದನ್ನು ಕೇಳಿದೆನು.
ಪ್ರಕಟನೆ 6 : 4 (KNV)
ಆಗ ಮತ್ತೊಂದು ಕೆಂಪು ಕುದುರೆಯು ಹೊರಗೆ ಹೋಯಿತು; ಅದರ ಮೇಲೆ ಕೂತಿದ್ದವನಿಗೆ ಭೂಮಿಯಿಂದ ಸಮಾಧಾನವನ್ನು ತೆಗೆದುಬಿಡುವ ದಕ್ಕೂ ಮನುಷ್ಯರು ಒಬ್ಬರನ್ನೊಬ್ಬರು ಕೊಲ್ಲುವವರಾಗು ವಂತೆ ಮಾಡುವದಕ್ಕೂ ಅಧಿಕಾರವು ಕೊಡಲ್ಪಟ್ಟಿತು; ಇದಲ್ಲದೆ ಅವನಿಗೆ ದೊಡ್ಡ ಕತ್ತಿಯು ಕೊ
ಪ್ರಕಟನೆ 6 : 5 (KNV)
ಆತನು ಮೂರನೆಯ ಮುದ್ರೆಯನ್ನು ತೆರೆದಾಗ ಮೂರನೆಯ ಜೀವಿಯು--ಬಂದು ನೋಡು ಅನ್ನು ವದನ್ನು ನಾನು ಕೇಳಿದೆನು. ಆಗ ಇಗೋ, ನಾನು ಕಪ್ಪು ಕುದುರೆಯನ್ನು ನೋಡಿದೆನು. ಅದರ ಮೇಲೆ ಕೂತಿದ್ದವನ ಕೈಯಲ್ಲಿ ತ್ರಾಸು ಇತ್ತು.
ಪ್ರಕಟನೆ 6 : 6 (KNV)
ಆಮೇಲೆ ನಾಲ್ಕು ಜೀವಿಗಳ ಮಧ್ಯದಿಂದ--ರೂಪಾಯಿಗೆ ಒಂದು ಸೇರು ಗೋಧಿ; ರೂಪಾಯಿಗೆ ಮೂರು ಸೇರು ಜವೆಗೋಧಿ; ಎಣ್ಣೆಯನ್ನೂ ದ್ರಾಕ್ಷಾರಸವನ್ನೂ ನೀನು ಕೆಡಿಸಬೇಡ ಎಂದು ಹೇಳುವ ಧ್ವನಿಯನ್ನು ನಾನು ಕೇಳಿದೆನು.
ಪ್ರಕಟನೆ 6 : 7 (KNV)
ಆತನು ನಾಲ್ಕನೆಯ ಮುದ್ರೆಯನ್ನು ತೆರೆ ದಾಗ--ಬಂದು ನೋಡು ಎಂದು ನಾಲ್ಕನೆಯ ಜೀವಿಯು ಹೇಳುವ ಧ್ವನಿಯನ್ನು ನಾನು ಕೇಳಿದೆನು.
ಪ್ರಕಟನೆ 6 : 8 (KNV)
ನಾನು ನೋಡಲಾಗಿ ಒಂದು ಬೂದಿ ಬಣ್ಣದ ಕುದುರೆ ಯನ್ನು ಕಂಡೆನು. ಅದರ ಮೇಲೆ ಕೂತಿದ್ದವನ ಹೆಸರು ಮೃತ್ಯುವು; ನರಕವು ಅವನನ್ನು ಹಿಂಬಾಲಿಸಿತು. ಅವ ರಿಗೆ ಭೂಮಿಯ ಕಾಲುಭಾಗದ ಮೇಲೆ ಕತ್ತಿಯಿಂದಲೂ ಹಸಿವೆಯಿಂದಲೂ ಸಾವಿನಿಂದಲೂ ಭೂಮಿಯ ಮೃಗ ಗಳಿಂದಲೂ ಕೊಲ್ಲುವದಕ್ಕೆ ಅಧಿಕಾರವು ಕೊ
ಪ್ರಕಟನೆ 6 : 9 (KNV)
ಆತನು ಐದನೆಯ ಮುದ್ರೆಯನ್ನು ತೆರೆದಾಗ ದೇವರವಾಕ್ಯದ ನಿಮಿತ್ತವಾಗಿಯೂ ತಾವು ಹೊಂದಿದ್ದ ಸಾಕ್ಷಿಯ ನಿಮಿತ್ತವಾಗಿಯೂ ಹತವಾದವರ ಆತ್ಮಗಳು ಯಜ್ಞವೇದಿಯ ಕೆಳಗಿರುವದನ್ನು ನಾನು ಕಂಡೆನು.
ಪ್ರಕಟನೆ 6 : 10 (KNV)
ಅವರು--ಓ ಕರ್ತನೇ, ಪರಿಶುದ್ಧನೂ ಸತ್ಯವಂತನೂ ಆಗಿರುವಾತನೇ, ಭೂಮಿಯ ಮೇಲೆ ವಾಸಿಸುವವರು ನಮ್ಮ ರಕ್ತವನ್ನು ಸುರಿಸಿದ್ದಕ್ಕಾಗಿ ನೀನು ಎಷ್ಟು ಕಾಲದವರೆಗೆ ನ್ಯಾಯವಿಚಾರಿಸದೆಯೂ ಪ್ರತಿದಂಡನೆ ಮಾಡದೆಯೂ ಇರುವಿ ಎಂದು ಮಹಾಶಬ್ದದಿಂದ ಕೂಗುತ್ತಾ ಹೇಳಿದರು.
ಪ್ರಕಟನೆ 6 : 11 (KNV)
ಅವರಲ್ಲಿ ಒಬ್ಬೊಬ್ಬನಿಗೆ ಬಿಳೀ ನಿಲುವಂಗಿಗಳು ಕೊಡಲ್ಪಟ್ಟಿದ್ದವು. ಇದಲ್ಲದೆ ಅವರ ಹಾಗೆ ಅವರ ಜೊತೆ ಸೇವಕರ ಮತ್ತು ಅವರ ಸಹೋದರರ ಕೊಲೆಯು ಪೂರೈಸುವ ತನಕ ಇನೂ ಸ್ವಲ್ಪ ಕಾಲ ವಿಶ್ರಮಿಸಿಕೊಂಡಿರಬೇಕೆಂದು ಅವರಿಗೆ ಹೇಳಲ್ಪಟ್ಟಿತು.
ಪ್ರಕಟನೆ 6 : 12 (KNV)
ಆತನು ಆರನೆಯ ಮುದ್ರೆ ತೆರೆಯುವದನ್ನು ನಾನು ಕಂಡೆನು. ಆಗ ಇಗೋ, ಮಹಾಭೂಕಂಪ ಉಂಟಾಯಿತು; ಸೂರ್ಯನು ಕೂದಲಿನ ಗೋಣಿ ಯಂತೆ ಕಪ್ಪಾದನು. ಚಂದ್ರನು ರಕ್ತದಂತಾದನು.
ಪ್ರಕಟನೆ 6 : 13 (KNV)
ಅಂಜೂರದ ಮರವು ಬಿರುಗಾಳಿಯಿಂದ ಅಲ್ಲಾಡಿಸ ಲ್ಪಟ್ಟು ಅಕಾಲದಲ್ಲಿ ತನ್ನ ಕಾಯಿಗಳನ್ನು ಉದುರಿಸುವ ಪ್ರಕಾರ ಆಕಾಶದ ನಕ್ಷತ್ರಗಳು ಭೂಮಿಗೆ ಬಿದ್ದವು.
ಪ್ರಕಟನೆ 6 : 14 (KNV)
ಆಕಾಶವು ಸುರುಳಿಯ ಹಾಗೆ ಸುತ್ತಲ್ಪಟ್ಟು ಹೋಗಿ ಬಿಟ್ಟಿತು; ಎಲ್ಲಾ ಬೆಟ್ಟಗಳೂ ದ್ವೀಪಗಳೂ ತಮ್ಮ ತಮ್ಮ ಸ್ಥಳಗಳಿಂದ ಚದರಿದವು.
ಪ್ರಕಟನೆ 6 : 15 (KNV)
ಭೂರಾಜರೂ ದೊಡ್ಡ ವರೂ ಐಶ್ವರ್ಯವಂತರೂ ಮುಖ್ಯಾಧಿಪತಿಗಳೂ ಪರಾ ಕ್ರಮಶಾಲಿಗಳೂ ಎಲ್ಲಾ ದಾಸರೂ ಸ್ವತಂತ್ರರೂ ಗವಿ ಗಳಲ್ಲಿಯೂ ಬೆಟ್ಟಗಳ ಬಂಡೆಗಳಲ್ಲಿಯೂ ಅಡಗಿ ಕೊಂಡು
ಪ್ರಕಟನೆ 6 : 16 (KNV)
ಪರ್ವತಗಳಿಗೂ ಬಂಡೆಗಳಿಗೂ--ನಮ್ಮ ಮೇಲೆ ಬೀಳಿರಿ, ಸಿಂಹಾಸನದ ಮೇಲೆ ಕೂತಿದ್ದಾತನ ಮುಖಕ್ಕೂ ಕುರಿಮರಿಯಾದಾತನ ಕೋಪಕ್ಕೂ ನಮ್ಮನ್ನು ಮರೆಮಾಡಿರಿ;ಆತನ ಕೋಪದ ಮಹಾದಿನ ಬಂದದೆ; ಅದರ ಮುಂದೆ ನಿಲ್ಲುವದಕ್ಕೆ ಯಾರು ಶಕ್ತರು ಎಂದು ಹೇಳಿದರು.
ಪ್ರಕಟನೆ 6 : 17 (KNV)
ಆತನ ಕೋಪದ ಮಹಾದಿನ ಬಂದದೆ; ಅದರ ಮುಂದೆ ನಿಲ್ಲುವದಕ್ಕೆ ಯಾರು ಶಕ್ತರು ಎಂದು ಹೇಳಿದರು.

1 2 3 4 5 6 7 8 9 10 11 12 13 14 15 16 17

BG:

Opacity:

Color:


Size:


Font: