ಪ್ರಕಟನೆ 12 : 1 (KNV)
ಪರಲೋಕದಲ್ಲಿ ಮಹಾ ಅದ್ಭುತವು ಕಾಣಿಸಿತು; ಅಲ್ಲಿ ಸೂರ್ಯನನ್ನು ಧರಿಸಿ ಕೊಂಡಿದ್ದ ಒಬ್ಬ ಸ್ತ್ರೀಯಿದ್ದಳು; ಆಕೆಯ ಕಾಲುಗಳ ಕೆಳಗೆ ಚಂದ್ರನಿದ್ದನು. ಆಕೆಯ ತಲೆಯ ಮೇಲೆ ಹನ್ನೆರಡು ನಕ್ಷತ್ರಗಳುಳ್ಳ ಒಂದು ಕಿರೀಟವಿತ್ತು.
ಪ್ರಕಟನೆ 12 : 2 (KNV)
ಆಕೆಯು ಗರ್ಭಿಣಿಯಾಗಿದ್ದು ಪ್ರಸವವೇದನೆಯಿಂದ ಹೆರುವದಕ್ಕೆ ಸಂಕಟಪಡುತ್ತಾ ಕೂಗುತ್ತಿದ್ದಳು.
ಪ್ರಕಟನೆ 12 : 3 (KNV)
ಪರಲೋಕದಲ್ಲಿ ಮತ್ತೊಂದು ಅದ್ಭುತವು ಕಾಣಿಸಿತು; ಆಗ ಇಗೋ, ಕೆಂಪಾದ ಮಹಾ ಘಟಸರ್ಪವಿತ್ತು. ಅದಕ್ಕೆ ಏಳು ತಲೆಗಳೂ ಹತ್ತು ಕೊಂಬುಗಳೂ ಇದ್ದವು; ಅದರ ತಲೆಗಳ ಮೇಲೆ ಏಳು ಕಿರೀಟಗಳಿದ್ದವು.
ಪ್ರಕಟನೆ 12 : 4 (KNV)
ಅದರ ಬಾಲವು ಆಕಾಶದಲ್ಲಿರುವ ನಕ್ಷತ್ರಗಳೊಳಗೆ ಮೂರರ ಲ್ಲೊಂದು ಭಾಗವನ್ನು ಎಳೆದು ಭೂಮಿಗೆ ಹಾಕಿತು. ಹೆರುವದಕ್ಕೆ ಸಿದ್ಧವಾಗಿದ್ದ ಆ ಸ್ತ್ರೀಯು ಹೆತ್ತಕೂಡಲೆ ಆಕೆಯ ಮಗುವನ್ನು ನುಂಗಿಬಿಡಬೇಕೆಂದು ಆ ಘಟ ಸರ್ಪವು ಅವಳ ಮುಂದೆ ನಿಂತುಕೊಂಡಿತ್ತು.
ಪ್ರಕಟನೆ 12 : 5 (KNV)
ಆಕೆ ಜನಾಂಗಗಳನ್ನೆಲ್ಲಾ ಕಬ್ಬಿಣದ ಕೋಲಿನಿಂದ ಆಳ ಬೇಕಾಗಿದ್ದ ಒಂದು ಗಂಡು ಮಗುವನ್ನು ಹೆತ್ತಳು; ಆ ಕೂಸು ದೇವರ ಬಳಿಗೂ ಆತನ ಸಿಂಹಾಸನದ ಬಳಿಗೂ ಎತ್ತಲ್ಪಟ್ಟಿತು.
ಪ್ರಕಟನೆ 12 : 6 (KNV)
ಆ ಸ್ತ್ರೀಯು ಅರಣ್ಯಕ್ಕೆ ಓಡಿ ಹೋದಳು; ಅಲ್ಲಿ ಆಕೆಗೆ ಸಾವಿರದ ಇನ್ನೂರ ಅರವತ್ತು ದಿನಗಳವರೆಗೆ ಪೋಷಣೆಯಾಗಬೇಕೆಂದು ದೇವರು ಸ್ಥಳವನ್ನು ಸಿದ್ಧಮಾಡಿದ್ದನು.
ಪ್ರಕಟನೆ 12 : 7 (KNV)
ಇದಲ್ಲದೆ ಪರಲೋಕದಲ್ಲಿ ಯುದ್ಧ ನಡೆಯಿತು. ವಿಾಕಾಯೇಲನೂ ಅವನ ದೂತರೂ ಘಟಸರ್ಪಕ್ಕೆ ವಿರೋಧವಾಗಿ ಯುದ್ಧಮಾಡಿದರು; ಘಟಸರ್ಪನೂ ಅವನ ದೂತರೂ ಯುದ್ದಮಾಡಿ ಸೋತು ಹೋದರು.
ಪ್ರಕಟನೆ 12 : 8 (KNV)
ಆಗ ಪರಲೋಕದಲ್ಲಿ ಅವರಿಗೆ ಸ್ಥಾನವು ಇನ್ನೆಂದಿಗೂ ಇಲ್ಲದೆ ಹೋಯಿತು.
ಪ್ರಕಟನೆ 12 : 9 (KNV)
ಭೂಲೋಕದವರನ್ನೆಲ್ಲಾ ಮೋಸಗೊಳಿಸುವ ಆ ಮಹಾ ಘಟಸರ್ಪನು ಅಂದರೆ ಪಿಶಾಚನೆಂತಲೂ ಸೈತಾನನೆಂತಲೂ ಹೆಸರುಳ್ಳ ಪುರಾ ತನ ಸರ್ಪವು ದೊಬ್ಬಲ್ಪಟ್ಟು ಭೂಮಿಗೆ ಬಿದ್ದನು; ಅವನ ದೂತರೂ ಅವನೊಂದಿಗೆ ದೊಬ್ಬಲ್ಪಟ್ಟರು.
ಪ್ರಕಟನೆ 12 : 10 (KNV)
ಆಗ ಪರಲೋಕದಲ್ಲಿ ಮಹಾಶಬ್ದವನ್ನು ನಾನು ಕೇಳಿದೆನು. ಅದು--ಈಗ ರಕ್ಷಣೆಯೂ ಶಕ್ತಿಯೂ ನಮ್ಮ ದೇವರ ರಾಜ್ಯವೂ ಆತನ ಕ್ರಿಸ್ತನ ಅಧಿಕಾರವೂ ಬಂದವು; ಯಾಕಂದರೆ ಹಗಲಿರುಳು ನಮ್ಮ ಸಹೋದರರ ಮೇಲೆ ನಮ್ಮ ದೇವರ ಮುಂದೆ ದೂರು ಹೇಳಿದ ದೂರು ಗಾರನು ದೊಬ್ಬಲ್ಪಟ್ಟಿದ್ದಾನೆ.
ಪ್ರಕಟನೆ 12 : 11 (KNV)
ಅವರು ಪ್ರಾಣದ ಮೇಲಣ ಪ್ರೀತಿಯನ್ನು ತೊರೆದು ಕುರಿಮರಿಯಾದಾತನ ರಕ್ತದಿಂದಲೂ ತಮ್ಮ ಸಾಕ್ಷಿಯ ವಾಕ್ಯದಿಂದಲೂ ಅವ ನನ್ನು ಜಯಿಸಿದರು.
ಪ್ರಕಟನೆ 12 : 12 (KNV)
ಆದದರಿಂದ ಪರಲೋಕಗಳೇ, ಅದರಲ್ಲಿ ವಾಸಮಾಡುವವರೇ, ಹರ್ಷಗೊಳ್ಳಿರಿ. ಭೂಮಿಯ ಮೇಲೆ ಮತ್ತು ಸಮುದ್ರದಲ್ಲಿ ಇರುವವರಿಗೆ ಅಯ್ಯೊ! ಯಾಕಂದರೆ ಸೈತಾನನು ತನಗಿರುವ ಕಾಲವು ಸ್ವಲ್ಪವೆಂದು ತಿಳಿದು ಮಹಾರೌದ್ರವುಳ್ಳವನಾಗಿ ನಿಮ್ಮ ಕಡೆಗೆ ಇಳಿದು ಬಂದಿದ್ದಾನೆ ಎಂಬದಾಗಿ ಹೇಳಿತು.
ಪ್ರಕಟನೆ 12 : 13 (KNV)
ಘಟಸರ್ಪವು ತಾನು ದೊಬ್ಬಲ್ಪಟ್ಟು ಭೂಮಿಗೆ ಬಿದ್ದಿರುವದನ್ನು ಕಂಡು ಗಂಡುಮಗುವನ್ನು ಹೆತ್ತಸ್ತ್ರೀ ಯನ್ನು ಹಿಂಸಿಸಿತು.
ಪ್ರಕಟನೆ 12 : 14 (KNV)
ಆ ಸ್ತ್ರೀಯು ಅರಣ್ಯದಲ್ಲಿದ್ದ ತನ್ನ ಸ್ಥಳಕ್ಕೆ ಹಾರಿಹೋಗುವದಕ್ಕಾಗಿ ಆಕೆಗೆ ದೊಡ್ಡ ಹದ್ದಿನ ಎರಡು ರೆಕ್ಕೆಗಳು ಕೊಡಲ್ಪಟ್ಟವು; ಅಲ್ಲಿ ಒಂದು ಕಾಲ, ಕಾಲಗಳು, ಅರ್ಧ ಕಾಲ ಸರ್ಪನ ಮುಖಕ್ಕೆ ಮರೆಯಾಗಿ ಪೋಷಣೆ ಹೊಂದುತ್ತಾಳೆ.
ಪ್ರಕಟನೆ 12 : 15 (KNV)
ಆ ಸ್ತ್ರೀಯನ್ನು ಪ್ರವಾಹವು ಬಡಕೊಂಡು ಹೋಗ ಬೇಕೆಂದು ಆಕೆಯ ಹಿಂದೆ ಸರ್ಪವು ತನ್ನ ಬಾಯೊಳಗಿಂದ ನೀರನ್ನು ಪ್ರವಾಹದಂತೆ ಬಿಟ್ಟಿತು.
ಪ್ರಕಟನೆ 12 : 16 (KNV)
ಆದರೆ ಭೂಮಿಯು ಆ ಸ್ತ್ರೀಯ ಸಹಾಯಕ್ಕೆ ಬಂದು ತನ್ನ ಬಾಯಿ ತೆರೆದು ಘಟಸರ್ಪನು ತನ್ನ ಬಾಯೊಳಗಿಂದ ಬಿಟ್ಟ ಪ್ರವಾಹವನ್ನು ಕುಡಿದುಬಿಟ್ಟಿತು.
ಪ್ರಕಟನೆ 12 : 17 (KNV)
ಆಗ ಘಟಸರ್ಪನು ಸ್ತ್ರೀಯ ಮೇಲೆ ಕೋಪಿಸಿಕೊಂಡು ಆಕೆಯ ಸಂತಾನದವರಲ್ಲಿ ಉಳಿದವರ ಮೇಲೆ ಅಂದರೆ ದೇವರ ಆಜ್ಞೆಗಳನ್ನು ಕೈಕೊಂಡು ನಡೆದು ಯೇಸು ಕ್ರಿಸ್ತನ ವಿಷಯವಾದ ಸಾಕ್ಷಿಯನ್ನು ಹೇಳಿರುವವರ ಮೇಲೆ ಯುದ್ಧ ಮಾಡುವದಕ್ಕೆ ಹೊರಟನು.

1 2 3 4 5 6 7 8 9 10 11 12 13 14 15 16 17

BG:

Opacity:

Color:


Size:


Font: